About: http://data.cimple.eu/claim-review/a49f5a5e3ecb10da48072ec967fc5257a8515e9c9737e7b3052cfeee     Goto   Sponge   Distinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಮೂಲಕ: ಉಮ್ಮೆ ಕುಲ್ಸುಮ್ ಅಕ್ಟೋಬರ್ 29 2024 ಚಿತ್ರವು ೨೦೨೧ ರಲ್ಲಿ ಗ್ಯಾಸ್-ಲೈನ್ ಸೋರಿಕೆಯಿಂದಾಗಿ ಟೆಹ್ರಾನ್ನಲ್ಲಿ ತೈಲ ಸಂಸ್ಕರಣಾಗಾರದಲ್ಲಿ ಬೆಂಕಿಯನ್ನು ತೋರಿಸುತ್ತದೆ. ಹೇಳಿಕೆ ಏನು? ದಟ್ಟವಾದ, ಗಾಢವಾದ ಹೊಗೆಯು ಆಕಾಶದಲ್ಲಿ ಹೊರಹೊಮ್ಮುತ್ತಿರುವುದನ್ನು ತೋರಿಸುವ ಒಂದು ಚಿತ್ರವು, ಮುಂಭಾಗದಲ್ಲಿ ಕಟ್ಟಡಗಳೊಂದಿಗೆ ತೀವ್ರವಾದ ಬೆಂಕಿ ಅಥವಾ ಸ್ಫೋಟವನ್ನು ಸೂಚಿಸುತ್ತದೆ. ಆಪಾದಿತ ಇಸ್ರೇಲಿ ದಾಳಿಯ ನಂತರ ಟೆಹ್ರಾನ್ನ ಮಿಲಿಟರಿ ಸೈಟ್ನಲ್ಲಿ ಇದು ಸ್ಫೋಟವನ್ನು ತೋರಿಸುತ್ತದೆ ಎಂದು ಅನೇಕ ಬಳಕೆದಾರರು ಹೇಳಿಕೊಂಡಿದ್ದಾರೆ. ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಒಬ್ಬ ಬಳಕೆದಾರರು ಚಿತ್ರವನ್ನು ಹಂಚಿಕೊಂಡಿದ್ದು, ಅದರ ಶೀರ್ಷಿಕೆ ಹೀಗಿದೆ, "ಬ್ರೇಕಿಂಗ್: ಇರಾನ್ನ ಮೇಲೆ ಇಸ್ರೇಲ್ನ ದಾಳಿ ಪ್ರಾರಂಭವಾಯಿತು ಎಂದು ವರದಿ ಮಾಡಿದೆ. ಇರಾನ್ನಲ್ಲಿ ಸ್ಫೋಟಗಳು ವರದಿಯಾಗಿವೆ." ಈ ಫ್ಯಾಕ್ಟ್-ಚೆಕ್ ಅನ್ನು ಬರೆಯುವ ಹೊತ್ತಿಗೆ, ಪೋಷ್ಟ್ ೪,೦೦೦ ಕ್ಕೂ ಹೆಚ್ಚು ಲೈಕ್ ಗಳು, ೮೨೪ ಮರು ಪೋಷ್ಟ್ ಮತ್ತು ೪೫೯,೦೦೦ ವೀಕ್ಷಣೆಗಳನ್ನು ಗಳಿಸಿದೆ. ಅದೇ ರೀತಿಯ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಇದೇ ರೀತಿಯ ಹೇಳಿಕೆಗಳೊಂದಿಗೆ ಈ ಚಿತ್ರವನ್ನು ಫೇಸ್ಬುಕ್ನಲ್ಲಿಯೂ ಹಂಚಿಕೊಳ್ಳಲಾಗಿದೆ ಅದನ್ನುಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು. ಆನ್ಲೈನ್ನಲ್ಲಿ ಕಂಡ ಹೇಳಿಕೆಗಳ ಸ್ಕ್ರೀನ್ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್ನಿಂದ ಮಾರ್ಪಡಿಸಲಾಗಿದೆ) ಅಕ್ಟೋಬರ್ ೨೬, ೨೦೨೪ ರಂದು ಇರಾನ್ನಲ್ಲಿನ ಮಿಲಿಟರಿ ತಾಣಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಮುಂಜಾನೆ ವಾಯುದಾಳಿಗಳ ಸರಣಿಯನ್ನು ಪ್ರಾರಂಭಿಸಿದ ನಂತರ ಈ ಹೇಳಿಕೆಗಳು ಹೊರಹೊಮ್ಮಿದೆ. ವರದಿಗಳ ಪ್ರಕಾರ, ತಿಂಗಳ ಆರಂಭದಲ್ಲಿ ಇರಾನ್ನ ಬ್ಯಾಲಿಸ್ಟಿಕ್ ಕ್ಷಿಪಣಿಗಳ ದಾಳಿಯ ವಿರುದ್ಧ ಪ್ರತೀಕಾರ ಇದು ನಡೆದಿದೆ. ಸರಣಿ ದಾಳಿಗಳು ನಡೆಯುತ್ತಲೇ ಇವೆ. ಆದರೆ, ಈ ಚಿತ್ರವು ಟೆಹ್ರಾನ್ ಮೇಲೆ ಇಸ್ರೇಲಿ ನಡೆಸಿದ ಇತ್ತೀಚಿನ ದಾಳಿಯನ್ನು ತೋರಿಸುವುದಿಲ್ಲ. ಇದು ವಾಸ್ತವವಾಗಿ ೨೦೨೧ ರಲ್ಲಿ ತೈಲ ಸಂಸ್ಕರಣಾಗಾರದಲ್ಲಿ ಸ್ಫೋಟವನ್ನು ತೋರಿಸುತ್ತದೆ. ನಾವು ಕಂಡುಕೊಂಡದ್ದು ಏನು? ರಿವರ್ಸ್ ಇಮೇಜ್ ಸರ್ಚ್ ಅನ್ನು ಬಳಸಿಕೊಂಡು, ಜೂನ್ ೨, ೨೦೨೧ ರಂದು ಪ್ರಕಟವಾದ ಅಲ್ ಜಜೀರಾ ಮುಬಾಶರ್ ವರದಿಯಲ್ಲಿ ಈ ಚಿತ್ರ ಕಾಣಿಸಿಕೊಂಡಿದೆ ಎಂದು ಲಾಜಿಕಲಿ ಫ್ಯಾಕ್ಟ್ಸ್ ಕಂಡುಹಿಡಿದಿದೆ. ಅರೇಬಿಕ್ ವರದಿಯನ್ನು ಅನುವಾದಿಸಿದಾಗ, "ಟೆಹ್ರಾನ್ನ ದಕ್ಷಿಣದ ತೈಲ ಸಂಸ್ಕರಣಾಗಾರದಲ್ಲಿ ದೊಡ್ಡ ಬೆಂಕಿ ಕಾಣಿಸಿಕೊಂಡಿದೆ" ಎಂದು ಓಡುತ್ತದೆ. ಚಿತ್ರವನ್ನು ಏಜೆನ್ಸ್ ಫ್ರಾನ್ಸ್-ಪ್ರೆಸ್ (ಎ ಎಫ್ ಪಿ) ಗೆ ಸಲ್ಲಿಸಲಾಗಿದೆ. ಜೂನ್ ೨೦೨೧ ರಂದು ಕೆನಡಾದ ಸುದ್ದಿವಾಹಿನಿ ದಿ ಗ್ಲೋಬ್ ಅಂಡ್ ಮೇಲ್ ವರದಿಯಲ್ಲಿ ಅದೇ ಚಿತ್ರವನ್ನು ಬಳಸಲಾಗಿದೆ. ವರದಿಯು ಅದೇ ತೈಲ ಸಂಸ್ಕರಣಾಗಾರಕ್ಕೆ ಬೆಂಕಿ ಆವರಿಸಿದೆ ಎಂದು ಹೇಳಿದೆ, ಗೆಟ್ಟಿ ಇಮೇಜಸ್ ಮೂಲಕ ಎ ಎಫ್ ಪಿ ಛಾಯಾಗ್ರಾಹಕ ಅಟ್ಟಾ ಕೆನಾರೆಗೆ ಕ್ರೆಡಿಟ್ ಅನ್ನು ನೀಡಲಾಗಿದೆ. ಜೂನ್ ೨೦೨೧ ರಲ್ಲಿ ತೆಗೆದ ಚಿತ್ರದ ಸ್ಕ್ರೀನ್ಶಾಟ್. (ಮೂಲ: ಎ ಎಫ್ ಪಿ) ಈ ಸುಳಿವಿನೊಂದಿಗೆ, ನಾವು ಚಿತ್ರವನ್ನು ಗೆಟ್ಟಿ ಇಮೇಜಸ್ನಲ್ಲಿ (ಇಲ್ಲಿ ಆರ್ಕೈವ್ ಮಾಡಿ) ಪತ್ತೆ ಮಾಡಿದ್ದೇವೆ, ಅದನ್ನು ಜೂನ್ ೨, ೨೦೨೧ ರಂದು ತೆಗೆದುಕೊಳ್ಳಲಾಗಿದೆ ಎಂದು ದೃಢೀಕರಿಸಿದೆ. ವಿವರಣೆಯು ಹೀಗೆ ಹೇಳಿದೆ, “ಜೂನ್ ೨, ೨೦೨೧ ರಂದು ತೆಗೆದ ಚಿತ್ರವು ಸಂಸ್ಕರಣಾಗಾರದಲ್ಲಿ ಬೆಂಕಿ ಕಾಣಿಸಿಕೊಂಡ ಸ್ಥಳದಿಂದ ಹೊಗೆಯನ್ನು ತೋರಿಸುತ್ತದೆ ಇರಾನ್ ರಾಜಧಾನಿ ಟೆಹ್ರಾನ್ ನಲ್ಲಿ. ದ್ರವೀಕೃತ ಗ್ಯಾಸ್ ಲೈನ್ ಸೋರಿಕೆಯಾಗಿ ಸ್ಫೋಟಗೊಂಡ ನಂತರ ದಕ್ಷಿಣ ಟೆಹ್ರಾನ್ನಲ್ಲಿನ ಸಂಸ್ಕರಣಾಗಾರದಲ್ಲಿ ಭೀಕರವಾದ ಬೆಂಕಿ ಕಾಣಿಸಿಕೊಂಡಿದೆ ಎಂದು ರಾಜಧಾನಿಯ ಕ್ರೈಸಿಸ್ ತಂಡದ ಮುಖ್ಯಸ್ಥರು ರಾಜ್ಯ ದೂರದರ್ಶನದಲ್ಲಿ ಹೇಳಿದರು." ಇದೇ ರೀತಿಯ ವಿವರಣೆಯೊಂದಿಗೆ ಅದೇ ಚಿತ್ರವು ಎ ಎಫ್ ಪಿ (ಇಲ್ಲಿ ಆರ್ಕೈವ್) ನಲ್ಲಿ ಕಂಡುಬಂದಿದೆ. ಟೆಹ್ರಾನ್ನಲ್ಲಿ ೨೦೨೧ ರ ತೈಲ ಸಂಸ್ಕರಣಾಗಾರ ಘಟನೆಯನ್ನು ರಾಯಿಟರ್ಸ್ ಮತ್ತು ಅಸೋಸಿಯೇಟೆಡ್ ಪ್ರೆಸ್ ಸೇರಿದಂತೆ ಪ್ರಮುಖ ಮಾಧ್ಯಮಗಳು ವ್ಯಾಪಕವಾಗಿ ವರದಿ ಮಾಡಿದೆ. ವರದಿಗಳ ಪ್ರಕಾರ, ದಕ್ಷಿಣ ಟೆಹ್ರಾನ್ನಲ್ಲಿರುವ ಟೊಂಡ್ಗೂಯಾನ್ ಪೆಟ್ರೋಕೆಮಿಕಲ್.ಕೋ ಗೆ ಬೆಂಕಿ ತಗುಲಿತು. ದ್ರವೀಕೃತ ಅನಿಲ ಪೈಪ್ಲೈನ್ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಟೆಹ್ರಾನ್ನ ಕ್ರೈಸಿಸ್ ನಿರ್ವಹಣಾ ಸಂಸ್ಥೆಯ ಮುಖ್ಯಸ್ಥ ಮನ್ಸೂರ್ ದರಾಜತಿ ಹೇಳಿದ್ದರು ಎಂದು ವರದಿಯಾಗಿದೆ. ಬೆಂಕಿಯ ತೀವ್ರತೆ ಮತ್ತು ಉಂಟಾದ ಅಡ್ಡಿಗಳ ಹೊರತಾಗಿಯೂ, ಸಿಎನ್ಎನ್ ನ ವರದಿಯು ಘಟನೆಯಲ್ಲಿ ಯಾವುದೇ ಸಾವುನೋವುಗಳಿಲ್ಲ ಎಂದು ದೃಢಪಡಿಸಿದೆ. ತೀರ್ಪು ಇತ್ತೀಚೆಗೆ ಇರಾನ್ ಮೇಲೆ ಇಸ್ರೇಲಿ ನಡೆಸಿದ ದಾಳಿಯೊಂದಿಗೆ ಸಂಯೋಜಿಸಲು ವ್ಯಾಪಕವಾಗಿ ಹಂಚಿಕೊಳ್ಳಲಾದ ಚಿತ್ರವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ವಾಸ್ತವದಲ್ಲಿ, ಈ ಚಿತ್ರವು ೨೦೨೧ ರಲ್ಲಿ ದಕ್ಷಿಣ ಟೆಹ್ರಾನ್ನಲ್ಲಿರುವ ಟೊಂಡ್ಗುಯಾನ್ ತೈಲ ಸಂಸ್ಕರಣಾಗಾರದಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆಯಿಂದ ಬಂದಿದೆ. (ಅನುವಾದಿಸಿದವರು: ಅಂಕಿತಾ ಕುಲಕರ್ಣಿ) Read this fact-check in English here.
schema:mentions
schema:reviewRating
schema:author
schema:datePublished
schema:inLanguage
  • English
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 11 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software