About: http://data.cimple.eu/claim-review/26bf9f2aa11aa90f828688322d4988ad4597af7ea00bb145149341fb     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ಪ್ರಿಯಾಂಕಾ ಗಾಂಧಿ ನಾಮ ಪತ್ರ ಸಲ್ಲಿಸುವ ವೇಳೆ ಮಲ್ಲಿಕಾರ್ಜುನ ಖರ್ಗೆಯವರನ್ನು ಹೊರಗೆ ನಿಲ್ಲಿಸಿಲ್ಲ ಪ್ರಿಯಾಂಕಾ ಗಾಂಧಿ ನಾಮ ಪತ್ರ ಸಲ್ಲಿಸುವ ವೇಳೆ ಮಲ್ಲಿಕಾರ್ಜುನ ಖರ್ಗೆಯವರನ್ನು ಹೊರಗೆ ನಿಲ್ಲಿಸಿಲ್ಲ Claim :ಪ್ರಿಯಾಂಕಾ ಗಾಂಧಿ ನಾಮ ಪತ್ರ ಸಲ್ಲಿಸುವ ವೇಳೆ ಮಲ್ಲಿಕಾರ್ಜುನ ಖರ್ಗೆಯವರನ್ನು ಹೊರಗೆ ನಿಲ್ಲಿಸಿಲ್ಲ Fact :ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಸುವಾಗ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆಯಲ್ಲಿ ಇರುವುದನ್ನು ನೋಡಬಹುದು ಕೇರಳದ ವಯನಾಡು ಲೋಕಸಭಾ ಉಪಚುನಾವಣೆ 2024 ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಪ್ರಿಯಾಂಕಾ ಗಾಂಧಿ ವಾದ್ರಾ ನಾಮನಿರ್ದೇಶನದ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆರನ್ನು ಕಲೆಕ್ಟರೇಟ್ ಕೊಠಡಿಯಿಂದ ಹೊರಗೆ ನಿಲ್ಲಿಸಿದ್ದರು ಎಂಬ ಶೀರ್ಷಿಕೆಯೊಂದಿಗೆ 48 ಸೆಕೆಂಡುಗಳ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಖರ್ಗೆ ದಲಿತ ಎಂಬ ಕಾರಣಕ್ಕೆ ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ಅವರನ್ನು ಹೊರಗಿಟ್ಟಿದೆ ಎಂಬ ಶೀರ್ಷಿಕೆಯೊಂದಿಗೆ ಹಲವಾರು (ಬಿಜೆಪಿ) ಭಾರತೀಯ ಜನತಾ ಪಕ್ಷದ ನಾಯಕರು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಸಂತೋಷ್ ಕೊಟಿಯಾನ್ ಎಂಬ ಫೇಸ್ಬುಕ್ ಖಾತೆದಾರ ʼಪ್ರಿಯಾಂಕಾ ಗಾಂಧಿ ಅವರು ವಯನಾಡಿನಿಂದ ನಾಮಪತ್ರ ಸಲ್ಲಿಸುವ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೊಠಡಿಯ ಹೊರಗೆ ಇರಿಸಲಾಗಿತ್ತು ಮಲ್ಲಿಕಾರ್ಜುನ ಖರ್ಗೆ ದಲಿತ ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಅವರನ್ನು ಕೊಠಡಿಯಿಂದ ಹೊರಗಿಟ್ಟಿದೆʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ʼಪ್ರಬುದ್ದ ರೇಚ ಭಾರತೀಯʼ ಎಂಬ ಫೇಸ್ಬುಕ್ ಖಾತೆದಾರ ವಿಡಿಯೋವನ್ನು ಹಂಚಿಕೊಂಡು "ನಕಲಿ ಗಾಂಧಿ ಕುಟುಂಬದವರ ಮುಂದೆ ಕಾಂಗ್ರೆಸ್ ನ ಅಧ್ಯಕ್ಷರೂ ಕ್ಯೂ ನಿಲ್ಲಬೇಕು! ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಹಿರಿಯ ನಾಯಕರಾದ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಪ್ರವೇಶ ನಿರಾಕರಿಸಿ, ಹೊರಗಿಟ್ಟಿರುವುದು ನಿಜಕ್ಕೂ ಆಘಾತಕಾರಿ. ಮೀಸಲಾತಿ ವಿರೋಧಿಸುವುದು, ದಲಿತ ನಾಯಕರನ್ನು ಮೂಲೆಗೆ ಅಟ್ಟುವುದು, ಶೋಷಿತರನ್ನು ಸದಾ ಕಡೆಗಣಿಸುವುದು ಕಾಂಗ್ರೆಸ್ಗೆ ರಕ್ತಗತವಾಗಿ ಬಂದಿದೆ. ಕಾಂಗ್ರೆಸ್ ಪಕ್ಷದಲ್ಲಿ ದಲಿತರಿಗೆ ಹೆಸರಿಗಷ್ಟೇ ಹುದ್ದೆ, ಸೋನಿಯಾ, ರಾಹುಲ್, ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾಗಲು ಮೇರು ದಲಿತ ನಾಯಕರಿಗೂ ಕ್ಯೂ ನಿಲ್ಲುವ ಪರಿಸ್ಥಿತಿಯಿದೆ. ಕೇವಲ ಶೋಷಿತ ಸಮುದಾಯಗಳನ್ನು ವೋಟ್ ಬ್ಯಾಂಕ್ ರಾಜಕಾರಣಕ್ಕೆ ಮಾತ್ರವೇ ಬಳಸಿಕೊಂಡು ಬಿಸಾಡುವ ಕಾಂಗ್ರೆಸ್ ಪಕ್ಷದ ದಲಿತ ವಿರೋಧಿ ನಿಲುವು ಮತ್ತೊಮ್ಮೆ ಅನಾವರಣಗೊಂಡಿದೆ." ಎಂದು ಬರೆದು ಪೊಸ್ಟ್ ಮಾಡಿದ್ದಾರೆ. ಬಿಜೆಪಿ ನಾಯಕ ಬಿಜೆಪಿ ನಾಯಕರಾದ ರಾಜೀವ್ ಚಂದ್ರಶೇಖರ್, ಅಮಿತ್ ಮಾಳವೀಯ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾಸ್, ಗಜೇಂದ್ರ ಸಿಂಗ್ ಶಿಖಾವತ್ ಸೇರಿದಂತೆ ಹಲವರು ವೈರಲ್ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಅಕ್ಟೋಬರ್ 23,2024ರಂದು ರಾಜೀವ್ ಚಂದ್ರ ಶೇಖರ್ "Where were you @kharge Saheb ? when first family Priyanka Vadra ji was filing her nomination as Cong candidate for #Wayanad. Kept outside - bcoz hes not family. Self-respect & dignity sacrificed at the altar of arrogance & entitlement of the Sonia family. Just imagine if they treat senior Dalit leader & Party President like this, how they will treat people of Wayanad" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ "ನೀವು ಎಲ್ಲಿದ್ದಿರಿ ಖರ್ಗೆ ಸಾಹೇಬರೇ? ಪ್ರಿಯಾಂಕಾ ವಾದ್ರಾ ಜಿ #ವಯನಾಡ್ಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮನಿರ್ದೇಶನವನ್ನು ಸಲ್ಲಿಸುವಾಗ ನಿಮ್ಮನ್ನು ಹೊರಗೆ ನಿಲ್ಲಿಸಿದರು ಯಾಕೆಂದರೆ ನೀವು ಅವರ ಕುಟುಂಬವಲ್ಲ. ಸೋನಿಯಾ ಗಾಂಧಿ ಕುಟುಂಬದ ಅಹಂಕಾರ ಮತ್ತು ಅರ್ಹತೆಯ ಬಲಿಪೀಠದಲ್ಲಿ ಆತ್ಮಗೌರವ ಮತ್ತು ಘನತೆಯನ್ನು ಬಲಿಕೊಡಲಾಗಿದೆ. ಹಿರಿಯ ದಲಿತ ನಾಯಕ ಮತ್ತು ಪಕ್ಷದ ಅಧ್ಯಕ್ಷರನ್ನೇ ಈ ರೀತಿ ನಡೆಸಿಕೊಂಡರೆ, ಪ್ರಿಯಾಂಕಾ ವಾದ್ರಾ ವಯನಾಡಿನ ಜನರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದನ್ನು ನೀವೇ ಊಹಿಸಿ" ಎಂದು ಬರೆದು ಪೊಸ್ಟ್ ಮಾಡಿದ್ದಾರೆ. ಟೈಮ್ಸ್ ನೌ ಎಕ್ಸ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡು "Row erupts over a video of Priyanka Gandhi filing her nomination papers, BJP claims the Cong Chief Mallikarjun Kharge was 'shunted out' The Congress party is an anti-Dalit and anti-OBC party, and today we get another insight into that.." ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ ಫ್ಯಾಕ್ಟ್ಚೆಕ್ ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಪ್ರಿಯಾಂಕಾ ನಾಮಪತ್ರ ಸಲ್ಲಿಸುವ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆಯಲ್ಲಿ ಇರುವುದನ್ನು ನೋಡಬಹುದು. ನಾವು ವೈರಲ್ ಆದ ಸುದ್ದಿಯಲ್ಲಿರುವ ಸತ್ಯಾಂಶವನ್ನು ತಿಳಿಯಲು ಕೆಲವು ಕೀವರ್ಡ್ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ʼಎಎನ್ಐʼ ಎಕ್ಸ್ ಖಾತೆಯಲ್ಲಿ ಪ್ರಿಯಾಂಕಾ ಗಾಂಧಿಯ ಜೊತೆಗೆ ಸಹೋದರ ರಾಹುಲ್ ಗಾಂಧಿ ಮತ್ತು ಹಿರಿಯ ದಲಿತ ನಾಯಕ ಮತ್ತು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇರುವ ಚಿತ್ರವನ್ನು ನಾವು ನೊಡಬಹುದು. ಈ ಪೋಸ್ಟ್ಗೆ ""Priyanka has always been someone who would sacrifice anything for her family, friends...": LoP Rahul Gandhi" ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ ರಾಹುಲ್ ಗಾಂಧಿ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಮತ್ತು ತನ್ನ ಎಕ್ಸ್ ಖಾತೆಯಲ್ಲಿ ಚುನಾವಣೆಯ ನಾಮಪತ್ರವನ್ನು ಸಲ್ಲಿಸುವ ವಿಡಿಯೋವನ್ನು ಹಂಚಿಕೊಂಡು "Priyanka, I've always been proud of you, and today even more so. I am confident you will represent Wayanad with love, sincerity and fearlessness. Wayanad, I know Priyanka will be your strongest voice." ಎಂಬ ಶಿರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಎಕ್ಸ್ ಖಾತೆಯಲ್ಲಿನ ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ "ಪ್ರಿಯಾಂಕಾ ತನ್ನ ಕುಟುಂಬ ಅಥವಾ ತನ್ನ ಸ್ನೇಹಿತರಿಗಾಗಿ ಏನು ಬೇಕಾದರೂ ತ್ಯಾಗ ಮಾಡಲು ಸಿದ್ದಳಾಗಿರುತ್ತಾಳೆ. ಇದೇ ಗುಣ ಆಕೆಯನ್ನೀಗ ವಯನಾಡ್ಗೆ ಅಸಾಧಾರಣ ಸಂಸದನನ್ನಾಗಿ ಮಾಡುತ್ತದೆ" ಎಂಬ ಶೀರ್ಷಿಕೆಯೊಂದಿಗೆ ನಾಮಪತ್ರ ಸಲ್ಲಿಸುವ ವೇಳೆ ಕ್ಲಿಕ್ಕಿಸಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಹಲವು ಯೂಟ್ಯೂಬ್ ಚಾನೆಲ್ಗಳಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಚುನಾವಣೆಯ ನಾಮಪತ್ರ ಸಲ್ಲಿಸುವ ಸಮಯದಲ್ಲಿ ಚಿತ್ರಿಸಿರುವ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ವಿಡಿಯೋವನ್ನು ನೋಡಿದರೆ, ನಾಮಪತ್ರ ಸಲ್ಲಿಸುವ ವೇಳೆ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಇರುವುದನ್ನು ನಾವು ಕಾಣಬಹುದು. ಎಎನ್ಐ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಂಡಿದ್ದ 21.30 ನಿಮಿಷಗಳನ್ನು ಒಳಗೊಂಡಿದ್ದ ವಿಡಿಯೋವನ್ನು ಗಮನಿಸಿದರೆ ಪ್ರಿಯಾಂಕಾ ಗಾಂಧಿ ನಾಮಪತ್ರವನ್ನು ಸಲ್ಲಿಸುವ ಮುನ್ನ ಅಂದರೆ ಪತ್ರಗಳಿಗೆ ಸಹಿ ಹಾಕುವಾಗ ಪ್ರಿಯಾಂಕಾರೊಂದಿಗೆ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಇರುವುದನ್ನು ನೋಡಬಹುದು. ಹಿಂದಿನ ಸಾಲಿನಲ್ಲಿ ಸೋನಿಯಾ ಗಾಂಧಿ ಮತ್ತು ಕೆ.ಸಿ ವೇಣುಗೋಪಾಲ್ರವರು ಇರುವುದನ್ನು ಕಾಣಬಹುದು. ಮೊದಲ ಹಂತದಲ್ಲಿ, ಕಾಗದಪತ್ರಗಳ ಸಲ್ಲಿಕೆ ಸಮಯದಲ್ಲಿ ಕಾನೂನುಬದ್ಧವಾಗಿ ಹಾಜರಾಗಬಹುದಾದ ಜನರ ಸಂಖ್ಯೆಯ ಮೇಲೆ ಮಿತಿ ಇರುವುದರಿಂದ ಎಲ್ಲರೂ ಒಟ್ಟಿಗೆ ಚೇಂಬರ್ ಪ್ರವೇಶಿಸಲಿಲ್ಲ. ಹೀಗಾಗಿ ವೈರಲ್ ಆದ ಸುದ್ದಿಯಲ್ಲಿ ಸತ್ಯಾಂಶವಿಲ್ಲವೆಂದು ಸಾಭೀತಾಗಿದೆ. ಈ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪದಾರಿಗೆಳೆಯುವ ಕೆಲಸ ಮಾಡುತ್ತದೆ. ನಾಮಪತ್ರ ಸಲ್ಲಿಸುವ ವೇಳೆ ಮಲ್ಲಿಕಾರ್ಜುನ ಖರ್ಗೆರನ್ನು ಹೊರಗಡೆ ನಿಲ್ಲಿಸಲಿಲ್ಲ. ಚುನಾವಣಾ ನಾಮಪತ್ರ ಸಲ್ಲಿಸುವ ಸಮಯದಲ್ಲಿ ಅಭ್ಯರ್ಥಿಯ ಜೊತೆಗೆ ಐದು ಜನರಿಗೆ ಮಾತ್ರ ಪ್ರವೇಶವಿದ್ದ ಕಾರಣ ಮೊದಲ ಹಂತದಲ್ಲಿ ಪತಿ ಮತ್ತು ಮಗ ಪ್ರವೇಶಿಸಿದರು ನಂತರ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಒಳಗೆ ಬಂದಿರುವುದನ್ನು ನೋಡಬಹುದು.
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 2 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software