schema:text
| - ಫ್ಯಾಕ್ಟ್ಚೆಕ್: ಅಖಿಲೇಶ್ ಯಾದವ್ ಮಹಾ ಕುಂಭಮೇಳದಲ್ಲಿ ಸ್ನಾನ ಮಾಡಿಲ್ಲ ವೈರಲ್ ಆದ ಚಿತ್ರ ಹರಿದ್ವಾರದ್ದು
ಅಖಿಲೇಶ್ ಯಾದವ್ ಮಹಾ ಕುಂಭಮೇಳದಲ್ಲಿ ಸ್ನಾನ ಮಾಡಿಲ್ಲ ವೈರಲ್ ಆದ ಚಿತ್ರ ಹರಿದ್ವಾರದ್ದು
Claim :ಕಳ್ಳನ ಹಾಗೆ ಕುಂಭಮೇಳದಲ್ಲಿ ಅಖಿಲೇಶ್ ಯಾದವ್ ಸ್ನಾನ ಮಾಡಿದ್ದಾರೆ
Fact :ಜನವರಿ 14, 2025ರಂದು ಹರಿದ್ವಾರದ ಗಂಗಾ ನದಿಯಲ್ಲಿ ಸ್ನಾನ ಮಾಡಿದ ದೃಶ್ಯವದು
ಭಾರತದಲ್ಲಿ ಅತಿ ದೊಡ್ಡ ಧಾರ್ಮಿಕ ಉತ್ಸವದ ಸಂಭ್ರಮ ಮನೆ ಮಾಡಿದೆ. ಹಿಂದೂ ಧರ್ಮದಲ್ಲಿ ಅತ್ಯಂತ ದೊಡ್ಡ ಹಾಗೂ ಅತ್ಯಂತ ಪವಿತ್ರವಾದ ಉತ್ಸವಗಳಲ್ಲಿ ಪ್ರಮುಖವಾದ ಮಹಾ ಕುಂಭಮೇಳಕ್ಕೆ ಜನವರಿ 13ರಿಂದ ಚಾಲನೆ ಸಿಕ್ಕಿತು. ಮಹಾಕುಂಭದಲ್ಲಿ ಪವಿತ್ರ ನದಿಯಲ್ಲಿ ಸ್ನಾನ ಮಾಡಿದಂತೆ ನಿಮಗೆ ಕನಸಿನಲ್ಲಿ ಅನಿಸಿದರೆ ಅದು ಬಹಳ ಶುಭ ಕನಸು ಎಂದು ಪರಿಗಣಿಸಲಾಗಿದೆ. ಸಹಸ್ರಮಾನದ ಕುಂಭಮೇಳವು 40 ಕೋಟಿಗೂ ಹೆಚ್ಚು ಜನರನ್ನು ಪ್ರಯಾಗರಾಜ್ಗೆ ಬರುವಂತೆ ಮಾಡಿದೆ. ನೂರಾ ನಲವತ್ತ ನಾಲ್ಕು ವರ್ಷಗಳ ನಂತರ ನಡೆಯುತ್ತಿರುವ ಮಹಾ ಕುಂಭಮೇಳ ಸುಮಾರು 4,000 ಹೆಕ್ಟೇರ್ಗಳಲ್ಲಿ ನಡೆಯುತ್ತಿದ್ದು, ಫೆಬ್ರವರಿ 26 ರವರೆಗೆ ನಡೆಯಲಿದೆ. ಮಹಾಕುಂಭದಲ್ಲಿ ಸ್ನಾನ ಮಾಡಲು ದೇಶದ ಮೂಲೆ ಮೂಲೆಯಿಂದ ಮತ್ತು ಪ್ರಪಂಚದಾದ್ಯಂತದ ಜನರು ಇಲ್ಲಿಗೆ ಬರುತ್ತಾರೆ. ಇನ್ನು ಪ್ರತಿಯೊಬ್ಬ ವ್ಯಕ್ತಿಯು ಮಹಾ ಕುಂಭದಲ್ಲಿ ಸ್ನಾನ ಮಾಡಬೇಕೆಂದು ಭಾವಿಸುತ್ತಾನೆ. ಆದರೆ ಎಲ್ಲರಿಗೂ ಈ ಅವಕಾಶ ಸಿಗುವುದಿಲ್ಲ. ಮಹಾಕುಂಭ ಸ್ನಾನವು ಎಲ್ಲಾ ರೀತಿಯ ತೊಂದರೆಗಳನ್ನು ತೊಡೆದುಹಾಕುತ್ತದೆ ಮತ್ತು ಪಾಪಗಳಿಂದ ಮುಕ್ತಿಯನ್ನು ನೀಡುತ್ತದೆ ಎಂದು ನಂಬಲಾಗಿದೆ.
ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಭಾರತದ ಮೂಲೆ ಮೂಲೆಯ ಭಕ್ತರು ಮಾತ್ರವಲ್ಲದೇ, ಬ್ರೆಜಿಲ್, ಜರ್ಮನಿ, ಜಪಾನ್, ಇಂಗ್ಲೆಂಡ್, ಅಮೇರಿಕಾ ಮತ್ತು ಸ್ಪೇನ್ನಂತಹ ದೇಶದ ನಿವಾಸಿಗಳು ಕೂಡ ಆಗಮಿಸುತ್ತಿದ್ದಾರೆ. ವಿದೇಶಿ ಗಣ್ಯರು ಕೂಡ ಮಹಾ ಕುಂಭಮೇಳದಲ್ಲಿ ಭಾಗಿಯಾಗುತ್ತಿದ್ದು, ಮಹಾ ಕುಂಭ ಮೇಳ ಪ್ರಪಂಚದಾದ್ಯಂತ ಸದ್ದು ಮಾಡುತ್ತಿದೆ. ಇದೀಗ ಇದರಲ್ಲೂ ರಾಜಕೀಯದ ಚರ್ಚೆ ಬಹಳ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ.
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ವೈರಲ್ ಆಗುತ್ತಿದೆ. ವೈರಲ್ ಆದ ಪೊಸ್ಟ್ನಲ್ಲಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ರಾತ್ರಿವೇಳೆ ಒಬ್ಬರೇ ಮಹಾ ಕುಂಭಮೇಳ ನಡೆಯುತ್ತಿರುವ ಪ್ರದೇಶದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ಗಳನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ.
ಜನವರಿ 15, 2025ರಂದು ಮಲ್ಲಿಕಾರ್ಜುನ ಎಂಬ ಎಕ್ಸ್ ಖಾತೆದಾರ ʼಪಾಪ ವಿಮೋಚನೆಗಾಗಿ ಕತ್ತಲಲ್ಲಿ ಕುಂಭಮೇಳಕ್ಕೆ ಬಂದಿರಬಹುದು. ಯಾರೂ ಇಲ್ಲದಿರುವಾಗ ಕಳ್ಳನ ತರ ಕುಂಭಮೇಳಕ್ಕೆ ಬಂದ್ರೆ ಗೊತ್ತಾಗಲ್ಲ ಅಂತ ಅನ್ಕೊಂಡಿದಿಯಾ ಅಖಿಲಂ" ಎಂಬ ಶೀರ್ಷಿಕೆಯೊಂದಿಗೆ ಚಿತ್ರಗಳನ್ನು ಪೊಸ್ಟ್ ಮಾಡಿರುವುದನ್ನು ನಾವಿಲ್ಲಿ ನೋಡಬಹುದು.
ವೈರಲ್ ಆದ ಪೋಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು.
ಜನವರಿ 15, 2025 ʼಜ್ಯೋತಿ ಸಿಂಹ ರಾಷ್ಟ್ರವಾದಿʼ ಎಂಬ ಎಕ್ಸ್ ಖಾತೆದಾರರು ತಮ್ಮ ಖಾತೆಯಲ್ಲಿ ʼदुर्योधन भी ऐसा ही रात के अंधेरे में नहाने गया थाʼ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿರುವುದನ್ನು ನೋಡಬಹುದು. ವೈರಲ್ ಆದ ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼದುರ್ಯೋಧನನೂ ರಾತ್ರಿಯ ಕತ್ತಲಲ್ಲಿ ಸ್ನಾನ ಮಾಡಲು ಹೋಗಿದ್ದಾನೆʼ ಎಂಬ ಶೀರ್ಷಿಕೆಯನ್ನೀಡಿರುವುದನ್ನು ನೋಡಬಹುದು.
ಜನವರಿ 15, 2025ರಂದು ʼಅನಂತ್ʼ ಎಂಬ ಫೇಸ್ಬುಕ್ ಖಾತೆರಾರ ತನ್ನ ಖಾತೆಯಲ್ಲಿ ʼಎಂಥ ಅವಸ್ಥೆ ಮಾರಾಯ ನಿನ್ನದು. ಚುಸ್ಲಿಮರು ಸಿಟ್ಟಾಗ್ತಾರೆ ಅಂತಾ ಯಾರೂ ಇಲ್ಲದಿರುವಾಗ ಈ ತರ ಕಳ್ಳನ ಹಾಗೆ ಕುಂಭಮೇಳದ ಶಾಹೀ ಸ್ನಾನಕ್ಕೆ ಬಂದ್ರೆ ಯಾರಿಗೂ ಗೊತ್ತಾಗಲ್ಲ ಅಂತ ಅನ್ಕೊಂಡಿದಿಯಾ ಅಖಿಲೇಶ್ ಯಾದವ್ʼ ಎಂಬ ಶೀರ್ಷಿಕೆಯೊಂದಿಗೆ ಅಖಿಲೇಶ್ ಯಾದವ್ ನೀರಲ್ಲಿ ಮುಳುಗುತ್ತಿರುವ ದೃಶ್ಯಗಳಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಜನವರಿ 16, 2025 ʼಸಚಿನ್ ಕೊಟ್ಟಿನ್ʼ ಎಂಬ ಫೇಸ್ಬುಕ್ ಖಾತೆದಾರರು ತಮ್ಮ ಖಾತೆಯಲ್ಲಿ ವೈರಲ್ ಆದ ಫೋಟೋವನ್ನು ಶೇರ್ ಮಾಡಿರುವುದನ್ನು ನಾವಿಲ್ಲಿ ನೋಡಬಹುದು.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವಾಗಿ ಅಖಿಲೇಶ್ ಯಾದವ್ ಜನವರಿ 14, 2025ರಂದು ಹರಿದ್ವಾರದಲ್ಲಿ ಗಂಗಾ ಸ್ನಾನ ಮಾಡಿದ ಫೊಟೋವನ್ನು ಮಹಾ ಕುಂಭಮೇಳದಲ್ಲಿ ಸ್ನಾನ ಮಾಡಿದ್ದಾರೆ ಎಂಬ ತಪ್ಪು ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಕೊಳ್ಳಲಾಗುತ್ತಿದೆ.
ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ನಾವು ವೈರಲ್ ಆದ ಚಿತ್ರವನ್ನು ಗೂಗಲ್ ಲೆನ್ಸ್ ಮೂಲಕ ಹುಡುಉಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಅಖಿಲೇಶ್ ಯಾದವ್ರವರ ಅಧಿಕೃತ ಎಕ್ಸ್ ಖಾತೆಯಲ್ಲಿ ಇದೇ ಚಿತ್ರಗಳನ್ನು ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು. ಫೋಟೋವಿಗೆ ʼमकर संक्रांति के पावन पर्व पर लिया माँ गंगा का आशीर्वाद।ʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಮಕರ ಸಂಕ್ರಾಂತಿಯ ಪವಿತ್ರ ಹಬ್ಬದಲ್ಲಿ ಗಂಗಾಮಾತೆಯ ಆಶೀರ್ವಾದವನ್ನು ಪಡೆದುಕೊಂಡೆʼ ಎಂಬ ಶೀರ್ಷಿಕೆನ್ನೀಡಿ ವೈರಲ್ ಆದ ಚಿತ್ರಗಳನ್ನು ಹಂಚಿಕೊಂಡಿರುವುದನ್ನು ನಾವುಲ್ಲಿ ನೋಡಬಹುದು.
ಮತ್ತಷ್ಟು ಮಾಹಿತಿಗಾಗಿ ನಾವು ಸಾಮಾಜಿಕ ಜಾಲತಾಣದಲ್ಲಿ ಹುಡುಕಾಟ ನಡೆಸಿದೆವು. ಹಿಂದೂಸ್ಥಾನ್ ಟೈಮ್ಸ್ನ ವರದಿಯೊಂದು ಕಂಡುಬಂದಿತು. ʼAkhilesh Yadav takes dip in Ganga in Haridwar on Makar Sankrantiʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿದ್ದಾರೆ. ವರದಿಯಲ್ಲಿ ʼಮಂಗಳವಾರ ಮಕರ ಸಂಕ್ರಾಂತಿಯ ಪ್ರಯುಕ್ತ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹರಿದ್ವಾರದಲ್ಲಿ ಗಂಗಾ ನದಿಯಲ್ಲಿ ಸ್ನಾನ ಮಾಡಿದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಪೋಸ್ಟ್ನಲ್ಲಿ ಸ್ಥಳವನ್ನು ಬಹಿರಂಗಪಡಿಸದಿದ್ದರೂ, ಅವರು ಹರಿದ್ವಾರದಲ್ಲಿ ಸ್ನಾನ ಮಾಡಿದರು ಎಂದು ಪಕ್ಷದ ಮೂಲಗಳು ತಿಳಿಸಿವೆʼ ಎಂದು ವರದಿಯಾಗಿದೆ.
ಎನ್ಡಿಟಿವಿ ವೆಬ್ಸೈಟ್ನಲ್ಲಿಯೂ ಸಹ ʼAkhilesh Yadav Takes Holy Dip In Ganga On Makar Sankrantiʼ ಎಂಬ ಹೆಡ್ಲೈನ್ನೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ಮಕರ ಸಂಕ್ರಾಂತಿಯಂದು ಅಖಿಲೇಶ್ ಯಾದವ್ ಅವರು ಗಂಗಾ ನದಿಯಲ್ಲಿ ಪವಿತ್ರ ಸ್ನಾನವನ್ನು ಮಾಡಿದ್ದಾರೆ ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ.
ಈ ಕುರಿತು ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ ನಮಗೆ ಟೈಮ್ಸ್ ಆಫ್ ಇಂಡಿಯಾ, ದೈನಿಕ್ ಭಾಸ್ಕರ್, ಅಮರ್ ಉಜಾಲಾ, ಲೇಟೆಸ್ಟ್ಲೀ ಎಂಬ ವೆಬ್ಸೈಟ್ನಲ್ಲಿ ವರದಿಯಾಗಿರುವುದನ್ನು ನೋಡಬಹುದು
ಜನವರಿ 14, 2025ರಂದು ಅಖಿಲೇಶ್ ಯಾದವ್ ಮಕರ ಸಂಕ್ರಾಂತಿಯ ಪ್ರಯುಕ್ತ ಹರಿದ್ವಾರದಲ್ಲಿ ಗಂಗಾ ನದಿಯಲ್ಲಿ ಸ್ನಾನ ಮಾಡಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಬಳಕೆದಾರರು ಈ ಚಿತ್ರವ್ನನು ಹಂಚಿಕೊಂಡಿರುವುದನ್ನು ನಾವಿಲ್ಲಿ, ಇಲ್ಲಿ. ಇಲ್ಲಿ, ಇಲ್ಲಿ ನೋಡಬಹುದು.
ಹೀಗಾಗಿ ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವಾಗಿ ಅಖಿಲೇಶ್ ಯಾದವ್ ಜನವರಿ 14, 2025ರಂದು ಹರಿದ್ವಾರದಲ್ಲಿ ಗಂಗಾ ಸ್ನಾನ ಮಾಡಿದ ಫೊಟೋವನ್ನು ಮಹಾ ಕುಂಭಮೇಳದಲ್ಲಿ ಸ್ನಾನ ಮಾಡಿದ್ದಾರೆ ಎಂಬ ತಪ್ಪು ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಕೊಳ್ಳಲಾಗುತ್ತಿದೆ.
|