About: http://data.cimple.eu/claim-review/0a79baf79343739abf3f0b8eed6545d045c9e6deb7630cd87920f186     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ಎಪಿಯ ಸಿಇಒ ಜಾತಿ ಆಧಾರಿತ ಮತದಾರರ ಪಟ್ಟಿ ಬಿಡುಗಡೆ ಮಾಡಿದೆಯಾ? ಎಪಿಯ ಸಿಇಒ ಜಾತಿ ಆಧಾರಿತ ಮತದಾರರ ಪಟ್ಟಿ ಬಿಡುಗಡೆ ಮಾಡಿದೆಯಾ? Claim :ಚುನಾವಣಾ ಆಯೋಗ, ಆಂಧ್ರಪ್ರದೇಶ ರಾಜ್ಯದ ಮತದಾರರ ಜಾತಿವಾರು ಪಟ್ಟಿಯನ್ನು ಬಿಡುಗಡೆ ಮಾಡಿದೆ Fact :ಆಂಧ್ರಪ್ರದೇಶದ ಚುನಾವಣಾ ಆಯೋಗವು ಅಂತಹ ಯಾವುದೇ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ ಮೇ 13, 2024 ರಂದು ಆಂಧ್ರಪ್ರದೇಶದ ವಿವಿಧ ಕ್ಷೇತ್ರಗಳಲ್ಲಿ ರೆಡ್ಡಿ, ಕಮ್ಮ ಮತ್ತು ಕಾಪು ಸಮುದಾಯದ ಅಭ್ಯರ್ಥಿಗಳು ಎಂಎಲ್ಎ ಮತ್ತು ಎಂಪಿ ಸ್ಥಾನಗಳಿಗಾಗಿ ಸ್ಪರ್ಧಿಸಿದರು. ಚುನಾವಣೆಗೆ ಹಿಂದುಳಿದ ವರ್ಗಗಳ ಸದಸ್ಯರನ್ನು ಅಭ್ಯರ್ಥಿಗಳಾಗಿ ಆಯ್ಕೆ ಮಾಡುವ ಘೋಷಣೆಯ ಹೊರತಾಗಿಯೂ, ಆಡಳಿತ ಮತ್ತು ವಿರೋಧ ಪಕ್ಷಗಳು ಅವರವರ ಪಕ್ಷಗಳ ಹೆಚ್ಚಿನ ಸ್ಥಾನಗಳು ಕಮ್ಮ ಮತ್ತು ರೆಡ್ಡಿ ಸಮುದಾಯಗಳಿಗೆ ಹಂಚಿದ್ದರು. ಮೇ 13, 2024 ರಂದು ಆಂಧ್ರಪ್ರದೇಶದಲ್ಲಿ ಲೋಕಸಭೆ ಮತ್ತು ಅಸೆಂಬ್ಲಿ ಚುನಾವಣೆಗಳು ಪೂರ್ಣಗೊಂಡಿವೆ. ಈ ನಡುವೆ, ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಚುನಾವಣೆಗೆ ಸಂಬಂಧಿಸಿದ ತಪ್ಪು ಮಾಹಿತಿಗಳು ಖಾತೆದಾರರು ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ವೈರಲ್ ಆದ ಸುದ್ದಿಯೇನೆಂದರೆ, ಆಂಧ್ರಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ ತಮ್ಮ ಜಾತಿಯ ಆಧಾರದ ಮೇಲೆ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ಆದ ಪೋಸ್ಟ್ನಲ್ಲಿ ಆಂಧ್ರಪ್ರದೇಶದಲ್ಲಿ ಜಾತಿಯ ಆಧಾರದ ಮೇಲೆ ಚಲಾವಣೆಯಾದ ಮತಗಳ ಪಟ್ಟಿಬಿಡುಗಡೆ ಮಾಡಲಾಗಿದೆ. ಇದರಲ್ಲಿ ಕಾಪು, ಬಲಿಜ ಸಮುದಾಯಕ್ಕೆ ಸೇರಿದ 67 ಲಕ್ಷಕ್ಕೂ ಹೆಚ್ಚು ಮತಗಳು, ಎಸ್ಸಿ, ಎಸ್ಟಿ 35 ಲಕ್ಷ ಮತಗಳು, ರೆಡ್ಡಿ ಸುಮಾರು 27 ಲಕ್ಷ ಮತಗಳು ಉಳಿದೆಲ್ಲ ಜಾತಿಗಳಿಗೆ ಯಾದೃಚ್ಛಿಕ ಸಂಖ್ಯೆಗಳೊಂದಿಗೆ ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ. "ನಾವು ಜಾತಿಯ ಆಧಾರದ ಮೇಲೆ ಮತದಾರರನ್ನು ನೋಡಿದರೂ, ವೈಎಸ್ಆರ್ಸಿಪಿಗೆ ಈ ಬಾರಿ ಸುಲಭವಾಗಿ ಗೆಲ್ಲಬಹುದು' ಎಂಬ ಶೀರ್ಷಿಕೆಯೊಂದಿಗೆ ಪಟ್ಟಿಯನ್ನು ಎಕ್ಸ್ ಬಳಕೆದಾರರು ಹಂಚಿಕೊಂಡಿದ್ದಾರೆ. May 18, 2024 ಫ್ಯಾಕ್ಟ್ಚೆಕ್: ವೈರಲ್ ಆದ ಸುದ್ದಿಯಲ್ಲಿ ಯಾವುದೇ ವಾಸ್ತವವಿಲ್ಲ. ಆಂಧ್ರಪ್ರದೇಶದ ಮುಖ್ಯ ಚುನಾವಣಾಧಿಕಾರಿಗಳು ಜಾತಿವಾರು ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ನಾವು ಆಂಧ್ರಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿಯ ವೆಬ್ಸೈಟ್ ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲಿಸಿದಾಗ, ಅವರ ಖಾತೆಯಲ್ಲಿ ನಮಗೆ ಜಾತಿವಾರು ಪಟ್ಟಿಯ ಬಿಡುಗಡೆ ಮಾಡಿರುವ ಕುರಿತು ಯಾವುದೇ ಮಾಹಿತಿ ದೊರೆತಿಲ್ಲ. ಹೆಚ್ಚಿನ ಮಾಹಿತಿಯನ್ನು ಕಲೆಹಾಕಲು ನಾವು ತೆಲುಗು.ಸಮಯಂ ಪ್ರಕಟಿಸಿದ ಲೇಖನವನ್ನು ಪರಿಶೀಲಿಸಿದಾಗ ನಮಗೆ ಎಪಿ ಮುಖ್ಯ ಚುನಾವಣಾಧಿಕಾರಿ ಮುಖೇಶ್ ಕುಮಾರ್ ಮೀನಾ ವೈರಲ್ ಆದ ಸುದ್ದಿಯನ್ನು ನಿರಾಕರಿಸಿರುವುದನ್ನು ಕಂಡೆವು. ವರದಿಯಲ್ಲಿ ಆಂಧ್ರಪ್ರದೇಶದಲ್ಲಿ ಚುನಾವಣಾ ಆಯೋಗವು ಜಾತಿವಾರು ಮತಪಟ್ಟಿಯ ವಿವರಗಳನ್ನು ಪ್ರಕಟಿಸಿದೆ ಎಂಬ ಸುದ್ದಿ ಸುಳ್ಳು ಎಂದು ಅವರು ಸ್ಪಷ್ಟಪಡಿಸಿದ್ದರು. ಚುನಾವಣಾ ಆಯೋಗವು ಜಾತಿವಾರು ಮತದಾರರ ವಿವರಗಳನ್ನು ಬಿಡುಗಡೆ ಮಾಡಿಲ್ಲ ಎಂದು ಎಪಿ ಸಿಇಒ ಸಹ ತಮ್ಮ ಟ್ವೀಟ್ನಲ್ಲಿ ಸ್ಪಷ್ಟಪಡಿಸಿದೆ. Fact Check: కులాల వారీగా ఏపీ ఓటర్ల జాబితా విడుదల..ఇందులో నిజమెంత..?#APVoters #CasteVoting #FactCheck #ElectionCommission #Oneindiatelugu— oneindiatelugu (@oneindiatelugu) May 20, 2024 More Details:https://t.co/0WuGKg1DGK ಆಂಧ್ರಪ್ರದೇಶದ CEO ತನ್ನ X ಖಾತೆಯಲ್ಲಿ 'ಬಸ್ಟೆಡ್' ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ‘BUSTED! It's time to set the record straight! The following data circulating online is FALSE! After thorough fact-checking, it's clear that the information being shared is completely fabricated. Don't be fooled by misinformation! Let's keep our feeds filled with truth and accuracy. Spread the word, not the lies! #APElections2024 #SVEEP #ChunavKaParv #DeshKaGarv #ECI #generalelections2024 #Elections2024 #LS2024" ಎಂಬ ಕ್ಯಾಪ್ಷನ್ನೊಂಡಿಗೆ ಮಾಹಿತಿಯನ್ನು ಹಂಚಿಕೊಳ್ಳಲಾಗಿತ್ತು. 🚨 BUSTED! 🚨— Chief Electoral Officer, Andhra Pradesh (@CEOAndhra) May 20, 2024 It's time to set the record straight! The following data circulating online is FALSE! 🛑 🔍 After thorough fact-checking, it's clear that the information being shared is completely fabricated. Don't be fooled by misinformation! Let's keep our feeds filled with… pic.twitter.com/ORJHC9NxGk ಇದರಿಂದಾಗಿ ವೈರಲ್ ಪೋಸ್ಟ್ ಸುಳ್ಳು ಎಂದು ಸಾಭೀತಾಗಿದೆ, ಆಂಧ್ರಪ್ರದೇಶದ ಚುನಾವಣಾ ಆಯೋಗವು ಜಾತಿ ಆಧಾರಿತ ಯಾವುದೇ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ.
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 11 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software