About: http://data.cimple.eu/claim-review/0c7be5bb9e0b7e5f8b426b9bdd67b5ecc9cfdda71cb9d65e96037b33     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • Authors Claim ಎಡಭಾಗದಲ್ಲಿ ಮಲಗಿದರೆ ಯಕೃತ್ತಿನ ಕಾಯಿಲೆ ಬರುವುದಿಲ್ಲ Fact ಎಡಭಾಗದಲ್ಲಿ ಮಲಗುವುದರಿಂದ ಯಕೃತ್ತಿನ ಕಾಯಿಲೆ ಬರುವುದಿಲ್ಲ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರ ಇಲ್ಲ ರಾತ್ರಿ ವೇಳೆ ಎಡಭಾಗದಲ್ಲಿ ಮಲಗುಗುವುದು ಉತ್ತಮ. ಇದರಿಂದ ದೇಹದ ವಿಷಕಾರಿ ಅಂಶಗಳು ಹೊರಹೋಗಲು ಸಹಾಯವಾಗುತ್ತದೆ ಎಂದು ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಫೇಸ್ಬುಕ್ನಲ್ಲಿ ಕಂಡುಬಂದ ಈ ಕುರಿತ ಕ್ಲೇಮಿನಲ್ಲಿ, ಎಡಭಾಗದಲ್ಲಿ ಮಲಗುವುದರಿಂದ ದೇಹದ ವಿಷಕಾರಿ ಅಂಶಗಳು ಮೂತ್ರನಾಳದಲ್ಲಿ ಶೇಖರಣೆಗೊಂಡು ಬೆಳಿಗ್ಗೆ ಮೂತ್ರ ವಿಸರ್ಜನೆಯಾಗುತ್ತದೆ. ಇದು ಯಕೃತ್ತಿನ ರೋಗವನ್ನು ತಡೆಯುತ್ತದೆ ಎಂಬ ಕ್ಲೇಮ್ ಒಂದು ಹರಿದಾಡಿದೆ. Also Read: ಸಾರ್ಬಿಟ್ರೇಟ್ ಮಾತ್ರೆ ನಾಲಿಗೆ ಅಡಿ ಇಟ್ಟುಕೊಂಡರೆ ಹೃದಯಾಘಾತ ತಡೆಯುತ್ತದೆ ಎನ್ನುವುದು ಸತ್ಯವೇ? Fact Check/ Verification ರಾತ್ರಿಯಲ್ಲಿ ಎಡಭಾಗದಲ್ಲಿ ಮಲಗುವುದರಿಂದ ಮೂತ್ರನಾಳದಲ್ಲಿ ವಿಷಕಾರಿ ಅಂಶಗಳು ಸಂಗ್ರಹಗೊಳ್ಳುತ್ತವೆ ಮತ್ತು ಯಕೃತ್ತಿನ ರೋಗವನ್ನು ತಡೆಯುತ್ತದೆ ಎಂಬ ಹೇಳಿಕೆಯನ್ನು ಬೆಂಬಲಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಮಲಗುವ ರೀತಿ ದೈಹಿಕ ಕಾರ್ಯಗಳು ಮತ್ತು ಸೌಕರ್ಯಗಳ ಮೇಲೆ ಪ್ರಭಾವ ಬೀರುತ್ತವೆ. ಆದರೆ ನಿರ್ದಿಷ್ಟ ಭಾಗದಲ್ಲಿ ಮಲಗುವುದರಿಂದ ಜೀವಾಣುಗಳ ಶೇಖರಣೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಅಥವಾ ಯಕೃತ್ತಿನ ರೋಗವನ್ನು ತಡೆಯುತ್ತದೆ ಎಂದು ಸೂಚಿಸಲು ಯಾವುದೇ ವಿಶ್ವಾಸಾರ್ಹ ಸಂಶೋಧನೆ ಇಲ್ಲ. ಎಡಭಾಗದಲ್ಲಿ ಮಲಗುವುದು ದೇಹದಿಂದ ವಿಷವನ್ನು ತೆಗೆದುಹಾಕುವಲ್ಲಿ ನಿರ್ದಿಷ್ಟವಾಗಿ ಸಹಾಯ ಮಾಡುತ್ತದೆ ಎಂಬ ಸಮರ್ಥನೆಯನ್ನು ಬೆಂಬಲಿಸಲು ಗಣನೀಯ ವೈಜ್ಞಾನಿಕ ಪುರಾವೆಗಳು ಇಲ್ಲ. ಕಿಬ್ಬೊಟ್ಟೆಯ ಬಲಭಾಗದಲ್ಲಿ ಯಕೃತ್ತು ಇದೆ ಎಂಬುದು ನಿಜವಾದರೂ, ಎಡಭಾಗದಲ್ಲಿ ಮಲಗಿರುವಾಗ ವಿಷವನ್ನು ತೆಗೆದುಹಾಕುವಲ್ಲಿ ಗುರುತ್ವಾಕರ್ಷಣೆಯ ಪಾತ್ರವನ್ನು ದೃಢವಾಗಿಎಲ್ಲೂ ಹೇಳಿಲ್ಲ. ದೇಹವು ವಿಷವನ್ನು ತೆಗೆದು ಹಾಕುವ ಪ್ರಕ್ರಿಯೆಗೆ ಅದರದ್ದೇ ಆದ ಕಾರ್ಯವಿಧಾನಗಳನ್ನು ಹೊಂದಿದೆ. ಅದು ಪ್ರಾಥಮಿಕವಾಗಿ ಯಕೃತ್ತು ಮತ್ತು ಮೂತ್ರಪಿಂಡಗಳಂತಹ ಅಂಗಗಳಿಂದ ನಿರ್ವಹಿಸಲ್ಪಡುತ್ತದೆ, ಇದು ಮೂತ್ರ ವಿಸರ್ಜನೆ ಸೇರಿದಂತೆ ವಿವಿಧ ಪ್ರಕ್ರಿಯೆಗಳ ಮೂಲಕ ದೇಹದಿಂದ ವಿಷವನ್ನು ಫಿಲ್ಟರ್ ಮಾಡುತ್ತದೆ ಮತ್ತು ಹೊರಹಾಕುತ್ತದೆ. ಆದಾಗ್ಯೂ, ನೀವು ಮಲಗುವ ಸ್ಥಾನವು ಈ ವಿಷ ತೆಗೆದು ಹಾಕುವ ಪ್ರಕ್ರಿಯೆ ಮೇಲೆ ಗಮನಾರ್ಹ ಪರಿಣಾಮ ಬೀರುವ ಸಾಧ್ಯತೆ ಇಲ್ಲ. Also Read: ಹಸಿ ಈರುಳ್ಳಿ ಮಜ್ಜಿಗೆ ಅನ್ನದೊಂದಿಗೆ ತಿನ್ನುವುದರಿಂದ ಆರೋಗ್ಯವಂತರಾಗಬಹುದೇ? ಆರಾಮ ಎನ್ನುವ ಕಾರಣಕ್ಕೆ ಅಥವಾ ಹೊಟ್ಟೆಯ ಆಮ್ಲೀಯತೆ (ಆಸಿಡ್ ರಿಫ್ಲೆಕ್ಸ್) ಅಥವಾ ನಿದ್ದೆಯಲ್ಲಿ ಉಸಿರುಗಟ್ಟುವಿಕೆ (ಸ್ಲೀಪ್ ಅಪ್ನಿ)ಯಂತಹ ಕೆಲವು ಆರೋಗ್ಯ ಪರಿಸ್ಥಿತಿಗಳನ್ನು ನಿರ್ವಹಿಸಲು ಮಲಗುವ ರೀತಿಯ ಆದ್ಯತೆಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಇನ್ನು ವಿಷದ ಅಂಶಗಳನ್ನು ತೆಗೆಯುವುದದು ಎಡಭಾಗದ ಮಲಗುವ ರೀತಿಯಿಂದ ಎಂದು ಹೇಳುವುದು ದೃಢವಾದ ವೈಜ್ಞಾನಿಕ ಬೆಂಬಲವನ್ನು ಹೊಂದಿಲ್ಲ. ಆದಾಗ್ಯೂ ವಿಮರ್ಶಾ ಲೇಖನ ಮಾಹಿತಿ ಪ್ರಕಾರ ನಿದ್ರೆ ಮತ್ತು ಯಕೃತ್ತಿನ ಕಾಯಿಲೆಯ ನಡುವಿನ ಸಂಬಂಧವು ಎರಡೂ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ: ನಿದ್ರೆಗೆ ಅಡ್ಡಿಯಾದರೆ ಯಕೃತ್ತಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ಜೊತೆಗೆ ಯಕೃತ್ತಿನ ಸಮಸ್ಯೆಗಳು ನಿದ್ರೆಯ ಗುಣಮಟ್ಟವನ್ನು ದುರ್ಬಲಗೊಳಿಸಬಹುದು. ಅನಿಯಮಿತ ನಿದ್ರೆಯ ಮಾದರಿಗಳು NAFLD ನಂತಹ ಯಕೃತ್ತಿನ ಸಮಸ್ಯೆಗಳಿಗೆ ಕಾರಣವಾಗಬಹುದು. ಸಿರೋಸಿಸ್ನಂತಹ ಯಕೃತ್ತಿನ ರೋಗಗಳು ನಿದ್ರೆಯ ಚಕ್ರಗಳನ್ನು ತೊಂದರೆಗೊಳಿಸಬಹುದು. ಯಕೃತ್ತಿನ ಕಾಯಿಲೆ, ವಿಶೇಷವಾಗಿ ಸಿರೋಸಿಸ್ಗೆ ಕೆಲವು ನಿದ್ರೆಯ ಮಾದರಿಗಳು ಕಾರಣವಾಗುತ್ತದೆ. ದೇಹದ ಗಡಿಯಾರಕ್ಕೆ ತೊಂದರೆ, ಮೆದುಳಿನ ರಾಸಾಯನಿಕಗಳಲ್ಲಿನ ಬದಲಾವಣೆಗಳು, ಯಕೃತ್ತು-ಸಂಬಂಧಿತ ಮಿದುಳಿನ ಪರಿಣಾಮಗಳು ಮತ್ತು ಔಷಧಗಳ ಅಡ್ಡಪರಿಣಾಮಗಳಂತಹ ವಿವಿಧ ಅಂಶಗಳಿಂದ ಇದು ಸಂಭವಿಸುತ್ತದೆ.ಈ ಸಂದರ್ಭಗಳಲ್ಲಿ ಒಟ್ಟಾರೆ ಆರೋಗ್ಯಕ್ಕೆ ನಿದ್ರೆಯ ಅಡಚಣೆಗಳನ್ನು ಪರಿಹರಿಸುವುದು ಮತ್ತು ಯಕೃತ್ತಿನ ಸ್ಥಿತಿಯನ್ನು ನಿರ್ವಹಿಸುವುದು ಅತ್ಯಗತ್ಯ. ಅಲ್ಲದೆ, ಈ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು ಯಕೃತ್ತಿನ ಸಮಸ್ಯೆ ಇರುವವರು ನಿದ್ರೆಯನ್ನು ಸುಧಾರಿಸುವ ಮಾರ್ಗಗಳನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ. ಯಕೃತ್ತಿನ ಕಾಯಿಲೆ ವಿವಿಧ ಅಂಶಗಳಿಂದ ಉಂಟಾಗುತ್ತದೆ. ಅತಿಯಾದ ಮದ್ಯ ಸೇವನೆ, ವೈರಲ್ ಸೋಂಕುಗಳು (ಹೆಪಟೈಟಿಸ್ನಂತಹ), ಸ್ಥೂಲಕಾಯತೆ, ವಂಶವಾಹಿ ಅಂಶಗಳು, ಮತ್ತು ಕೆಲವು ಔಷಧಿಗಳು ಅಥವಾ ವಿಷಗಳು, ಇತರ ಕಾರಣಗಗಳೂ ಇರಬಹುದು. ಪಿತ್ತಜನಕಾಂಗದ ಆರೋಗ್ಯಕ್ಕೆಸಾಮಾನ್ಯವಾಗಿ ಸಮತೋಲಿತ ಆಹಾರವನ್ನು ಕಾಪಾಡಿಕೊಳ್ಳುವುದು, ಆಲ್ಕೋಹಾಲ್ ಸೇವನೆ ಕಡಿಮೆಗೊಳಿಸುವುದು, ನಿಯಮಿತ ವ್ಯಾಯಾಮ ಪ್ರಯೋಜನಕಾರಿ. ವೈದ್ಯ ಡಾ. ಕಶ್ಯಪ್ ದಕ್ಷಿಣಿ ಅವರು ಹೇಳುವ ಪ್ರಕಾರ, “ಆರೋಗ್ಯಕರ ಮಾನವ ದೇಹವು ಯಕೃತ್ತಿನ ಮೂಲಕ ಮತ್ತು ಮೂತ್ರಪಿಂಡಗಳು, ಜೀರ್ಣಾಂಗವ್ಯೂಹ, ಚರ್ಮ (ಬೆವರಿನ ಮೂಲಕ) ಮತ್ತು ಶ್ವಾಸಕೋಶಗಳು (ಕಾರ್ಬನ್ ಡೈಆಕ್ಸೈಡ್) ವಿಸರ್ಜನೆ ಮಾಡುವ ಮೂಲಕ ವಿಷವನ್ನು ಹೊರ ಹಾಕುತ್ತದೆ ಎಂದು ನಮಗೆ ತಿಳಿದಿದೆ. ಸಾಕಷ್ಟು ನೀರು ಮತ್ತು ದ್ರವ ಪದಾರ್ಥಗಳು, ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವುದು, ನಿಯಮಿತ ವ್ಯಾಯಾಮ, ಶುದ್ಧ ಕರುಳು ಮತ್ತು ಮೂತ್ರಕೋಶದ ಅಭ್ಯಾಸಗಳನ್ನು ನಿರ್ವಹಿಸುವುದು ಮತ್ತು ಅತಿಯಾದ ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರವನ್ನು ತಪ್ಪಿಸುವುದು ವಿಷವನ್ನು ತೆಗೆದುಹಾಕುವ ನೈಸರ್ಗಿಕ ವಿಧಾನವಾಗಿದ್ದು, ಜನರು ಇದನ್ನು ಅನುಸರಿಸಬಹುದಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ಆರೋಗ್ಯಕ್ಕೆ ನಿದ್ರೆ ಮುಖ್ಯವಾಗಿದ್ದರೂ, ಎಡಭಾಗದಲ್ಲಿ ಮಲಗುವುದು ಮೂತ್ರನಾಳದಲ್ಲಿ ವಿಷವನ್ನು ಸಂಗ್ರಹಿಸುವ ಮೂಲಕ ಯಕೃತ್ತಿನ ರೋಗವನ್ನು ತಡೆಗಟ್ಟುವಲ್ಲಿ ನಿರ್ದಿಷ್ಟವಾಗಿ ಸಹಾಯ ಮಾಡುತ್ತದೆ ಎಂಬ ಕಲ್ಪನೆಯು ವೈಜ್ಞಾನಿಕ ಪುರಾವೆಗಳಿಂದ ಬೆಂಬಲಿತವಾಗಿಲ್ಲ. ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಮತ್ತು ಮಾರ್ಗದರ್ಶನಕ್ಕಾಗಿ ಆರೋಗ್ಯ ವೃತ್ತಿಪರರೊಂದಿಗೆ ಸಮಾಲೋಚಿಸುವುದು ಯಾವಾಗಲೂ ಅತ್ಯಗತ್ಯ. Conclusion ಎಡಭಾಗದಲ್ಲಿ ಮಲಗುವುದರಿಂದ ಮೂತ್ರನಾಳದಲ್ಲಿ ವಿಷವನ್ನು ಸಂಗ್ರಹಿಸುವ ಮೂಲಕ ಯಕೃತ್ತಿನ ರೋಗವನ್ನು ತಡೆಗಟ್ಟುವಲ್ಲಿ ನಿರ್ದಿಷ್ಟವಾಗಿ ಸಹಾಯ ಮಾಡುತ್ತದೆ ಎಂಬ ಹೇಳಿಕೆಗೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. Also Read: ಗರ್ಭಿಣಿಯರಿಗೆ ಫೋಲಿಕ್ ಆಸಿಡ್ ಮಾತ್ರೆ ಬದಲಾಗಿ ಬೀಟ್ರೂಟ್, ಸಬ್ಬಸಿಗೆ ಸೊಪ್ಪು ಕೊಡಬಹುದೇ? Result: False Our Sources Sleep and liver disease: a bidirectional relationship – The Lancet Gastroenterology & Hepatology Sleep disturbances in patients with liver cirrhosis: prevalence, impact, and management challenges – PMC (nih.gov) Liver disease – NHS (www.nhs.uk) Conversation with Dr. Kashyap Dakshini (This article has been published in collaboration with THIP Media) ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
schema:mentions
schema:reviewRating
schema:author
schema:datePublished
schema:inLanguage
  • Hindi
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 11 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software