schema:text
| - Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact checks doneFOLLOW US
Fact Check
Claim
ಹಮಾಸ್ ದಾಳಿಕೋರರು ಇಸ್ರೇಲ್ ವ್ಯಕ್ತಿಯ ಎದೆ ಸೀಳಿ ಹೃದಯ ಹೊರತೆಗೆದಿದ್ದಾರೆ
Fact
ವ್ಯಕ್ತಿಯೊಬ್ಬನ ಎದೆ ಸೀಳಿ ದೇಹದ ಭಾಗವನ್ನು ತೆಗೆದು ತಿನ್ನುತ್ತಿರುವ ರೀತಿಯ ಈ ವೀಡಿಯೋ ಮೆಕ್ಸಿಕೋದ್ದು. ಮೆಕ್ಸಿಕೋದ ಡ್ರಗ್ ದಂಧೆಕೋರ ಗ್ಯಾಂಗ್ ಒಂದು ಹೀಗೆ ಮಾಡಿದ್ದರ ಕುರಿತು ಪತ್ರಿಕಾ ವರದಿಗಳಿವೆ
ಇಸ್ರೇಲ್ಗೆ ದಾಳಿ ಮಾಡಿದ ಹಮಾಸ್ ದಾಳಿಕೋರರು, ಇಸ್ರೇಲ್ ನಾಗರಿಕನೊಬ್ಬ ಜೀವಂತ ಇರುವಾಗಲೇ ಎದೆ ಸೀಳಿ ಹೃದಯವನ್ನು ಹೊರತೆಗೆದಿದ್ದಾರೆ ಎಂದು ಕ್ಲೇಮ್ ಒಂದು ಹರಿದಾಡಿದೆ.
ಈ ಕುರಿತು ವಾಟ್ಸಾಪ್ನಲ್ಲಿ ಕಂಡುಬಂದ ಕ್ಲೇಮ್ ನಲ್ಲಿ “ದೇಶಪ್ರೇಮಿ ಇಸ್ರೇಲ್ ಜೀವಂತ ನಾಗರೀಕನ ಎದೆ ಸೀಳಿ ಹೃದಯವನ್ನು ಹೊರತೆಗೆಯುತ್ತಿರುವ ಪ್ಯಾಲಸ್ತೀನ್ ನ ನಿರ್ದಯೀ ಹಮಾಸ್ ಉಗ್ರ. ಇಂತಹಾ ಉಗ್ರರಿಗೆ ಸಪೋರ್ಟ್ ಮಾಡುವ ನಿರ್ಣಯ ಮಾಡಿದ ಭಾರತ ದೇಶದ ದೇಶದ್ರೋಹಿ ಪಕ್ಷ, ಉಗ್ರ ಪ್ರೇಮಿ, ಮತಾಂಧ , ಬ್ರದರ್ಸ್ ನ ಅಚ್ಚುಮೆಚ್ಚಿನ ಕಾಂಗ್ರೆಸ್ಸ್ ಪಕ್ಷ” ಎಂದಿದೆ.
ಈ ಬಗ್ಗೆ ಸತ್ಯಶೋಧನೆ ನಡೆಸುವಂತೆ ವಾಟ್ಸಪ್ ಬಳಕೆದಾರರೊಬ್ಬರು ನಮಗೆ ಕೋರಿಕೆಯನ್ನು ಸಲ್ಲಿಸಿದ್ದು, ಇದನ್ನು ಅಂಗೀಕರಿಸಲಾಗಿದೆ.
Also Read: ಮಾರುಕಟ್ಟೆಗೆ ನಕಲಿ ಗೋಧಿ ಬಂದಿದೆ ಎನ್ನುವ ವೀಡಿಯೋ ಸತ್ಯವೇ?
ಸತ್ಯಶೋಧನೆಗಾಗಿ ನಾವು ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಹಲವು ಬಳಕೆದಾರರು ಇದನ್ನು ಎಕ್ಸ್ ನಲ್ಲಿ ಹಮಾಸ್-ಇಸ್ರೇಲ್ ಕಾದಾಟಕ್ಕೆ ಸಂಬಂಧ ಕಲ್ಪಿಸಿ ಹಂಚಿಕೊಂಡಿವುದನ್ನುಗಮನಿಸಿದ್ದೇವೆ.
ಆ ಬಳಿಕ ನಾವು ಗೂಗಲ್ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಫಲಿತಾಂಶಗಳು ಲಭ್ಯವಾಗಿವೆ.
ದಿ ಡೈಲಿ ಬೀಸ್ಟ್ ಫೆಬ್ರವರಿ 12, 2022ರಂದು ಪ್ರಕಟಿಸಿದ “Mexican Cartel ‘Cannibal Schools’ Force Recruits to Eat Human Flesh” ವರದಿಯಲ್ಲಿ ಮೆಕ್ಸಿಕೋದ ಡ್ರಗ್ ದಂಧೆ ಮತ್ತು ಅಪರಾಧ ಕೃತ್ಯಗಳನ್ನು ನಡೆಸುವ ಗ್ಯಾಂಗ್ ಜಲಿಸ್ಕೋ ನ್ಯೂ ಜನರೇಶನ್ ಕಾರ್ಟೆಲ್ ತನ್ನ ವೈರಿ ಗ್ಯಾಂಗ್ ಸದಸ್ಯರ ದೇಹದ ಭಾಗವನ್ನು ತಿನ್ನುವಂತೆ ಒತ್ತಾಯಿಸುತ್ತದೆ ಎಂದಿದೆ.
ಈ ಕುರಿತು ನಾವು ಇನ್ನಷ್ಟು ಶೋಧ ನಡೆಸಿದ್ದು, ವಿವಿಧ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿರುವುದನ್ನು ಗಮನಿಸಿದ್ದೇವೆ. ಅವುಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
ವರದಿಗಳ ಆಧಾರದಲ್ಲಿ ನಾವು ಹೆಚ್ಚಿನ ಶೋಧದ ಭಾಗವಾಗಿ ಮೆಕ್ಸಿಕನ್ ಮಾಧ್ಯಮಗಳ ವರದಿಯನ್ನೂ ಗಮನಿಸಿದ್ದೇವೆ.
Also Read: 26 ಮಂದಿ ಹಮಾಸ್ ದಾಳಿಕೋರರನ್ನು ಕೊಂದ ಇಸ್ರೇಲಿ ಮಹಿಳೆ, ವೈರಲ್ ಫೋಟೋ ನಿಜವಾದ್ದೇ?
ಎಲ್ಸಿರೆ ಡಿಜಿಟಲ್ ಆಗಸ್ಟ್ 26, 2020ರಂದು ಪ್ರಕಟಿಸಿದ ವರದಿಯಲ್ಲಿ “ಮೆಕ್ಸಿಕನ್ ಡ್ರಗ್ ದಂಧೆಕೋರರ ಕ್ರೂರತೆ, ವಿರೋಧಿಗಳ ಹೃದಯವನ್ನು ಜೀವಂತ ಇರುವಾಗಲೇ ತಿನ್ನುವವರು” ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಿದೆ (ಇದನ್ನು ಭಾಷಾಂತರಿಸಲಾಗಿದೆ) ಈ ವರದಿಯಲ್ಲಿ ನಾವು ವೈರಲ್ ವೀಡಿಯೋಕ್ಕೆ ಹೋಲುವ ಫೋಟೋಗಳನ್ನು ಇರುವುದನ್ನು ಗಮನಿಸಿದ್ದೇವೆ.
ಎಲ್ಸೆ ಸೊಲೆ ದೆ ಲಲಗೂನ ಆಗಸ್ಟ್ 24, 2020ರಂದು ಪ್ರಕಟಿಸಿದ ವರದಿಯಲ್ಲಿ, ನ್ಯೂಜನರೇಶನ್ ಕಾರ್ಟೆಲ್ (ಸಿಜೆಎನ್ ಜಿ) ಗ್ಯಾಂಗ್ ಗೆ ಸೇರಿದ ಶೂಟರ್ ಒಬ್ಬ ಡ್ರಗ್ ಟ್ರಾಫಿಕರ್ ಒಬ್ಬನ ದೇಹದಿದ ಭಾಗವನ್ನು ತಿನ್ನುತ್ತಿರುವುದಾಗಿ ಹೇಳಲಾಗಿದೆ. ಇದನ್ನು ಗ್ಯಾಂಗ್ನ ಇತರ ಸದಸ್ಯರು ಚಿತ್ರೀಕರಿಸಿದ್ದು, ಮೆಕ್ಸಿಕೋದ ಮಿಚೋಕನ್ ಭಾಗದಲ್ಲಿನಡೆದಿದೆ ಎಂದು ಹೇಳಲಾಗಿದೆ. (ವರದಿ ಭಾಷಾಂತರಿಸಲಾಗಿದೆ)
ನಾವು ಈ ವರದಿಯನ್ನು ಪರಿಶೀಲಿಸಿದ್ದು, ಇಲ್ಲಿ ವೈರಲ್ ವೀಡಿಯೋದ ಕೀಫ್ರೇಂಗಳನ್ನು ಹೋಲುವ ಅನೇಕ ಫೋಟೋಗಳನ್ನು ನಾವು ಗಮನಿಸಿದ್ದೇವೆ.
Also Read: ಸನ್ಮಾನ ತಿರಸ್ಕರಿಸಿ ಅಹಂಕಾರ ತೋರಿಸಿದ ಸಿಎಂ ಸಿದ್ದರಾಮಯ್ಯ ಎಂಬುದು ನಿಜವೇ?
ಈ ಸತ್ಯಶೋಧನೆಯ ಪ್ರಕಾರ ಹಮಾಸ್ ದಾಳಿಕೋರರು ಇಸ್ರೇಲ್ ವ್ಯಕ್ತಿಯ ದೇಹವನ್ನು ಕೊಯ್ದು, ಹೃದಯ ಹೊರತೆಗೆದಿದ್ದಾರೆ ಎನ್ನುವುದು ತಪ್ಪಾದ ಸಂದರ್ಭವಾಗಿದೆ ಮತ್ತು ಈ ವೀಡಿಯೋ ಹಳೆಯದ್ದು ಎಂದು ಕಂಡುಬಂದಿದೆ.
Our Sources
Report By The Daily Beast, Dated: February 12, 2022
Report By Elcierredigital, Dated: August 26, 2022
Report By Elsoldelalaguna, Dated: August 24, 2022
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
October 5, 2024
Ishwarachandra B G
September 30, 2024
Ishwarachandra B G
September 7, 2024
|