schema:text
| - Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact checks doneFOLLOW US
Fact Check
Claim
ಭ್ರಷ್ಟಾಚಾರದಲ್ಲಿ ಕರ್ನಾಟಕವೇ ನಂ.1
Fact
ಭ್ರಷ್ಟಾಚಾರದಲ್ಲಿ ಕರ್ನಾಟಕವೇ ನಂ.1 ಎಂದು ಹೇಳಲಾದ ಈ ವರದಿ ಈಗಿನದ್ದಲ್ಲ, 2017ರದ್ದು
ಭ್ರಷ್ಟಾಚಾರ ಅಥವಾ ಲಂಚಗುಳಿತನದಲ್ಲಿ ಕರ್ನಾಟಕ ನಂ.1 ಆಗಿದೆ ಎಂಬ ಕುರಿತ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿದೆ.
ಈ ಕುರಿತು ಟ್ವಿಟರ್ನಲ್ಲಿ ಪೋಸ್ಟ್ ಮಾಡಲಾದ ಕ್ಲೇಮ್ ಒಂದರಲ್ಲಿ. “ಮತ್ತೆ ಪದೇ ಪದೇ ಮೋದಿ ಮತ್ತು ಶಾ ಅವರು #ಕರ್ನಾಟಕ ಕ್ಕೆ ಬಂದು ರಾಜ್ಯವನ್ನು ಸಂಪೂರ್ಣವಾಗಿ #ಭ್ರಷ್ಟಾಚಾರ ಮುಕ್ತ ರಾಜ್ಯವನ್ನಾಗಿ ಮಾಡುತ್ತೇವೆಂದು ಹೇಳುತ್ತಿದ್ದಾರಲ್ಲ. ಈಗಾಗಲೇ ಭ್ರಷ್ಟಾಚಾರದಲ್ಲಿ ನಮ್ಮನ್ನು ನಂ.1 ಮಾಡಿರುವ ರಾಜ್ಯ #ಬಿಜೆಪಿ ನಾಯಕರು ಈಗ ವಿರುದ್ಧ ದಿಕ್ಕಿನಲ್ಲಿ ಪಯಣಿಸಲು ಒಪ್ಪುವರೇ?” ಎಂದು ಬರೆಯಲಾಗಿದೆ. ಇದರ ಜೊತೆಗೆ ಲಂಚಗುಳಿತನ ರಾಜ್ಯಕ್ಕೆ ಅಗ್ರಸ್ಥಾನ ಎಂದು ಪೇಪರ್ ಕಟ್ಟಿಂಗ್ ಒಂದನ್ನು ಲಗತ್ತಿಸಲಾಗಿದೆ. ಈ ಪೋಸ್ಟ್ ಇಲ್ಲಿದೆ.
ಈ ಕುರಿತು ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ತಪ್ಪಾದ ಸಂದರ್ಭ ಎಂದು ಕಂಡುಬಂದಿದೆ.
ಕ್ಲೇಮಿನ ಸತ್ಯ ಶೋಧನೆಗಾಗಿ ನ್ಯೂಸ್ಚೆಕರ್ ಗೂಗಲ್ ಕೀವರ್ಡ್ ಸರ್ಚ್ ಅನ್ನು ನಡೆಸಿದೆ. ಆರಂಭದಲ್ಲಿ “ಲಂಚಗುಳಿತನ: ರಾಜ್ಯಕ್ಕೆ ಅಗ್ರಸ್ಥಾನ” ಎಂಬ ಪತ್ರಿಕೆಯ ಶೀರ್ಷಿಕೆಯನ್ನು ಹಾಕಿ ಸರ್ಚ್ ಮಾಡಲಾಗಿದ್ದು ಈ ವೇಳೆ ಇದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುದ್ದಿ ಎಂಬುದು ತಿಳಿದುಬಂದಿದೆ.
ಈ ವರದಿಯ ಬಗ್ಗೆ ಪರಿಶೀಲನೆ ನಡೆಸಿದಾಗ ಇದು ಏಪ್ರಿಲ್ 28, 2017ರಂದು ಪ್ರಕಟವಾಗಿರುವುದು ಗೊತ್ತಾಗಿದೆ. ದೆಹಲಿಯ ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ನ ಸಮೀಕ್ಷೆಯ ಕುರಿತ ವರದಿ ಇದಾಗಿದೆ. ಸಮೀಕ್ಷೆ ಕುರಿತ ವರದಿಯಲ್ಲಿ : ಸಣ್ಣ ಸರ್ಕಾರಿ ಸೇವೆಗಳನ್ನು ಪಡೆಯಲು ಕಳೆದ ವರ್ಷ ಅತಿ ಹೆಚ್ಚು ಲಂಚಗುಳಿತನ ಅನುಭವಕ್ಕೆ ಬಂದಿರುವ 20 ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ನೋಟು ರದ್ದತಿ ಕ್ರಮದಿಂದಾಗಿ ದೇಶದಲ್ಲಿ ಲಂಚಗುಳಿತನ ತಗ್ಗಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಹಾಗೆಂದು ಬಿಜೆಪಿ ಆಡಳಿತದ ಮಹಾರಾಷ್ಟ್ರ, ಜಾರ್ಖಂಡ್, ಛತ್ತೀಸ್ಗಢ, ಮತ್ತು ರಾಜಸ್ಥಾನ ಈ ಸಮೀಕ್ಷೆಯಲ್ಲಿ ಹಿಂದೇನೂ ಬಿದ್ದಿಲ್ಲ. ಸಾರ್ವಜನಿಕರ ಗ್ರಹಿಗೆ ಅನುಭವ ಹಾಗೂ ಅಂದಾಜು ಅಂಶಗಳನ್ನು ಆಧರಿಸಿ ದೆಹಲಿಯ ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ನಡೆಸಿರುವ 2017ರ ಸಿಎಂಎಸ್- ಇಂಡಿಯಾ ಲಂಚಗುಳಿತನ ಸಮೀಕ್ಷೆಯಲ್ಲಿ ಈ ಅಂಶ ಹೊರಬಿದ್ದಿದೆ.” ಎಂದಿದೆ.
ಇದರೊಂದಿಗೆ “ಕರ್ನಾಟಕದ ಶೇ.77ರಷ್ಟು ಕುಟುಂಬಗಳು ಲಂಚಗುಳಿತನದ ಬಾಧೆ ಅನುಭವಿಸಿದೆ. ಇಂತಹ ಕುಟುಂಬಗಳ ಪ್ರಮಾಣ ಆಂಧ್ರಪ್ದರದೇಶದಲ್ಲಿ ಶೇ.74, ತಮಿಳುನಾಡಿನಲ್ಲಿ ಶೇ.68, ಮಹಾರಾಷ್ಟ್ರದಲ್ಲಿ ಶೇ.57, ಜಮ್ಮು ಕಾಶ್ಮೀರದಲ್ಲಿ ಶೇ.44 ಹಾಗೂ ಗುಜರಾತಿನಲ್ಲಿ ಶೇ.37ರಷ್ಟಿದೆ” ಎಂದಿದೆ.
Also Read: ಬೇಸಗೆಯಲ್ಲಿ ವಾಹನದ ಇಂಧನ ಟ್ಯಾಂಕ್ ಪೂರ್ತಿ ತುಂಬಿಸುವುದು ಅಪಾಯಕಾರಿಯೇ?
ಈ ವರದಿಯನ್ನು ಆಧಾರವಾಗಿರಿಸಿ, ಇಂಗ್ಲಿಷ್ ನಲ್ಲೂ ಕೀವರ್ಡ್ ಸರ್ಚ್ ನಡೆಸಲಾಗಿದ್ದು ಈ ವೇಳೆ ವಿವಿಧ ಮಾಧ್ಯಮಗಳಲ್ಲೂ ಈ ಸಮೀಕ್ಷೆ ಫಲಿತಾಂಶಗಳು ಪ್ರಕಟಗೊಂಡಿರುವುದು ಗೊತ್ತಾಗಿದೆ.
ಏಪ್ರಿಲ್ 28, 2017ರ ಎಕನಾಮಿಕ್ಸ್ ಟೈಮ್ಸ್ ವರದಿಯೂ ಪ್ರಜಾವಾಣಿ ರೀತಿಯ ವರದಿಯನ್ನು ಮಾಡಿದೆ. ಇದರಲ್ಲೂ ಕರ್ನಾಟಕದ ಶೇ.77ರಷ್ಟು ಜನ ಸಾರ್ವಜನಿಕ ಸೇವೆಯಲ್ಲಿ ಅತಿ ಹೆಚ್ಚು ಭ್ರಷ್ಟಾಚಾರವನ್ನು ಎದುರಿಸಿದ್ದಾಗಿ ಹೇಳಿದ್ದಾರೆ ” ಎಂದು ವರದಿಯಲ್ಲಿದೆ.
ಏಪ್ರಿಲ್ 28, 2017ರ ಇಂಡಿಯಾ ಟುಡೇ ವರದಿಯಲ್ಲಿಇದೇ ಅಂಶಗಳಿವೆ. ಈ ವರದಿಯಲ್ಲೂ ಸಮೀಕ್ಷೆಯ ವಿವಿಧ ಅಂಶಗಳನ್ನು ಪ್ರಸ್ತಾವಿಸಲಾಗಿದೆ. ಇಂತಹುದೇ ವರದಿಯನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ವರದಿಯನ್ನು ಖಚಿತಪಡಿಸಿಕೊಳ್ಳಲು ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ನ ವೆಬ್ಸೈಟ್ನಲ್ಲಿ ಶೋಧನೆ ಮಾಡಲಾಗಿದ್ದು, 2017ರ ಸಮೀಕ್ಷೆ ಲಭ್ಯವಾಗಿದೆ. ಪತ್ರಿಕಾ ವರದಿಗಳಲ್ಲಿ ನೀಡಲಾದ ಅಂಶಗಳು ಇದರಲ್ಲೂ ಇರುವುದು ಗೊತ್ತಾಗಿದೆ.
ಇನ್ನು ಕರ್ನಾಟಕವೇ ಭ್ರಷ್ಟಾಚಾರದಲ್ಲಿ ನಂಬರ್ 1 ಆಗಿ ಮುಂದುವರಿದಿದೆಯೇ ಎಂಬ ಬಗ್ಗೆ ಶೋಧನೆ ಕೂಡ ನಡೆಸಲಾಗಿದ್ದು, ಸಿಎಂಎಸ್ನ 2018ರ ವರದಿಯಲ್ಲಿ 11 ರಾಜ್ಯಗಳ ಕುರಿತ ಸಮೀಕ್ಷೆ ನಡೆಸಲಾಗಿದ್ದು ತೆಲಂಗಾಣದ ಶೇ.73, ತಮಿಳುನಾಡಿನ ಶೇ.38, ಕರ್ನಾಟಕದ ಶೇ.35, ಬಿಹಾರದ ಶೇ.29, ದಿಲ್ಲಿಯ ಶೇ.23, ಮಧ್ಯಪ್ರದೇಶದ ಶೇ.22, ಪಂಜಾಬ್ನ ಶೇ.20ರಷ್ಟು ಜನರು ಸಾರ್ವಜನಿಕ ಸೇವೆಗಳಲ್ಲಿ ಭ್ರಷ್ಟಾಚಾರದ ಸಮಸ್ಯೆ ಎದುರಿಸುತ್ತಿರುವುದಾಗಿ ಹೇಳಿದ್ದಾರೆ. ಸಿಎಂಎಸ್ ಆ ನಂತರದ ವರ್ಷಗಳಲ್ಲಿ ವರದಿಯನ್ನು ಪ್ರಕಟಿಸಿಲ್ಲ. ವಿವಿಧ ಸಾರ್ವಜನಿಕ ಸೇವೆಗಳು, ವಿವಿಧ ರಾಜ್ಯಗಳ ವಿವಿಧ ಪ್ರದೇಶಗಳನ್ನು ಗಣನೆಯಲ್ಲಿಟ್ಟು ಈ ಸಮೀಕ್ಷೆಗಳನ್ನು ಮಾಡಲಾಗಿತ್ತು.
ಈ ಸತ್ಯಶೋಧನೆ ಪ್ರಕಾರ, ಕ್ಲೇಮಿನಲ್ಲಿ ಹೇಳಿರುವಂತೆ ಈಗ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್ 1 ಆಗಿರುವುದು ಕಂಡುಬಂದಿಲ್ಲ. ಕ್ಲೇಮಿನಲ್ಲಿ ಹಾಕಲಾದ ವರದಿಯು 2017ರದ್ದಾಗಿದ್ದು ಇದು ತಪ್ಪಾದ ಸಂದರ್ಭವಾಗಿದೆ.
Our Sources:
Report published by Prajavani, Dated: April 28, 2017
Report published by Economic Times, Dated: April 28, 2017
Report published by India Today, Dated: April 28, 2017
CMS India Corruption Study – 2017
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Sabloo Thomas
January 27, 2025
Ishwarachandra B G
November 8, 2024
Sabloo Thomas
October 10, 2024
|