About: http://data.cimple.eu/claim-review/2a15ebbc6a00003ae353bf2dec9816acfdea9afb1e26e67758cb997e     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: 2024ರ ದುಬೈ ಪ್ರವಾಹದಲ್ಲಿ ಒಂಟೆಗಳು ಮುಳುಗುತ್ತಿರುವ ದೃಶ್ಯದ ಅಸಲಿಯತ್ತೇನು? 2024ರ ದುಬೈ ಪ್ರವಾಹದಲ್ಲಿ ಒಂಟೆಗಳು ಮುಳುಗುತ್ತಿರುವ ದೃಶ್ಯದ ಅಸಲಿಯತ್ತೇನು? Claim :2024ರಲ್ಲಿ ದುಬೈ ಮರುಭೂಮಿಯಲ್ಲಿ ಆದಂತಹ ಪ್ರವಾಹದಲ್ಲಿ ಒಂಟೆಗಳು ಮುಳುಗುತ್ತಿರು ವೀಡಿಯೊ ವೈರಲ್ Fact :ವೈರಲ್ ವಿಡಿಯೋದಲ್ಲಿ ಕಾಣಿಸುವುದು 2024ರಲ್ಲಿ ದುಬೈನಲ್ಲಿ ಆದಂತಹ ಪ್ರವಾಹದ ಚಿತ್ರಣವಲ್ಲ. ವೈರಲ್ ವಿಡಿಯೋದಲ್ಲಿ ಕಾಣಿಸುವುದು 2018ರಲಲ್ಲಿ ಸೌದಿ ಅರೇಬಿಯಾದ ತಬೂಕ್ನಲ್ಲಿ ಸಂಭವಿಸಿದ ಪ್ರವಾಹದ ವಿಡಿಯೋವದು. ದುಬೈನಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಪ್ರವಾಹದ ಭೀತಿ ಶುರುವಾಗಿದೆ. ಹೀಗಾಗಿ ಅಲ್ಲಿನ ಸರ್ಕಾರ ವಿದ್ಯಾರ್ಥಿಗಳು ಮತ್ತು ಕಾರ್ಮಿಕರು ಮನೆಯಲ್ಲೇ ಉಳಿಯುವಂತೆ ಆದೇಶವನ್ನು ಹೊರಡಿಸಿದೆ ಅಷ್ಟೇ ಅಲ್ಲ ವಿಮಾನಗಳ ಹಾರಾಟವನ್ನೂ ಸಹ ರದ್ದುಗೊಳಿಸಿದೆ. ದುಬೈ ಅಧಿಕಾರಿಗಳು ಮೊಬೈಲ್ ಫೋನ್ಗಳಲ್ಲಿ ನಾಗರಿಕರಿಗೆ ತುರ್ತು ಸೂಚನೆಗಳನ್ನು ಕಳುಹಿಸಿದ್ದು ಜನರನ್ನು ಮನೆಯಲ್ಲಿಯೇ ಉಳಿಯಲು ಸೂಚಿಸಿದ್ದಾರೆ. ದುಬೈನಲ್ಲಿ ಬಂದಂತಹ ಮಳೆ 12 ಗಂಟೆಗಳಲ್ಲಿ 20 ಮಿಲಿಮೀಟರ್ ಮಳೆ ದಾಖಲಾಗಿದೆ, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಗರವು ಸಾಮಾನ್ಯವಾಗಿ ಬರುವ ಮಳೆಗಿಂತ ಎರಡು ಪಟ್ಟು ಹೆಚ್ಚು ಈ ತಿಂಗಳಲ್ಲಿ ಬಂದಿದೆ. ಅಬುಧಾಬಿಯಲ್ಲಿ 24 ಗಂಟೆಗಳಲ್ಲೇ 34 ಮಿಮೀ ಮಳೆ ದಾಖಲಾಗಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬರುವುದಕ್ಕಿಂತ ನಾಲ್ಕು ಪಟ್ಟು ಹೆಚ್ಚು ಮಳೆಯಾಗಿದೆ. ವಾತಾವರಣದ ಸ್ಥಿರತೆಯಿಂದಾಗಿ ಯುಎಇಯ ಕೆಲವು ಭಾಗಗಳ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಳೆ ಮತ್ತು ಪ್ರವಾಹದಿಂದಾಗಿ ಮರುಭೂಮಿ ಪ್ರದೇಶದಲ್ಲಿರುವ ಒಂಟೆಗಳು ನೀರಿನಲ್ಲಿ ಕೊಚ್ಚಿ ಹೋಗುತ್ತುರುವ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಫೇಸ್ಬುಕ್ ಬಳಕೆದಾರನೊಬ್ಬ "ದುಬೈನ ನಗರ ಪ್ರದೇಶ ಮೊದಲು ಮುಳುಗಿದೆ ಇದೀಗ ಮರುಭೂಮಿಯೂ ಮುಳುಗಡೆಯಾಗುತ್ತಿದೆ, ಮರುಭೂಮಿ ಪ್ರದೇಶದಲ್ಲಿ ಸಂಭವಿಸಿದಂತಹ ಪ್ರವಾಹದ ವೀಡಿಯೊ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. “2 sides of Dubai flood – yesterday city and desert” ಎಂಬ ಶೀರ್ಷಿಕೆಯೊಂದಿಗೆ ಫೇಸ್ಬುಕ್ ಖಾತೆದಾರ ವೀಡಿಯೊವನ್ನು ಪೋಸ್ಟ್ ಮಾಡಿ ಕ್ಯಾಪ್ಷನ್ ನೀಡಿದ್ದಾರೆ. ನಗರದಲ್ಲಿ ಮಾತ್ರವಲ್ಲ, ಮರುಭೂಮಿಯಲ್ಲೂ ಪ್ರವಾಹ ಉಂಟಾಗಿದೆ ಎನ್ನುವ ದೃಶ್ಯವನ್ನು ನಾವು ಈ ವಿಡಿಯೋದಲ್ಲಿ ನೋಡಬಹುದು. ವಿಡಿಯೋವಿನಲ್ಲಿ ಕಾಣುವ ಪ್ರವಾಹದಲ್ಲಿ ಹಲವು ಪ್ರಾಣಿಗಳು ಕೊಚ್ಚಿ ಹೋಗಿವೆ ಎಂಬ ಪೋಸ್ಟ್ ಮಾಡಲಾಗಿದೆ. ಫ್ಯಾಕ್ಟ್ಚೆಕ್ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ವೀಡಿಯೊದಲ್ಲಿ ಕಾಣಿಸುವ ದೃಶ್ಯ ದುಬೈನ ಮರುಭೂಮಿಯಲ್ಲಿ ಆದಂತಹ ಪ್ರವಾಹವಲ್ಲ. ವೈರಲ್ ವಿಡಿಯೋದಲ್ಲಿ ಕಾಣಿಸುವುದು 2018ರಲಲ್ಲಿ ಸೌದಿ ಅರೇಬಿಯಾದ ತಬೂಕ್ನಲ್ಲಿ ಸಂಭವಿಸಿದ ಪ್ರವಾಹದ ವಿಡಿಯೋವದು ವಿಡಿಯೋವಿನಲ್ಲಿರುವ ಸತ್ಯಾಂಶವನ್ನು ತಿಳಿಯಲು ನಾವು ವಿಡಿಯೋದಲ್ಲಿರುವ ಕೆಲವು ಚಿತ್ರಗಳಿನ್ನು ಗೂಗಲ್ನ ಮೂಲಕ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಹುಡುಕಾಟದಲ್ಲಿ ನಮಗೆ 2018ರಲ್ಲಿ ಅರೇಬಿಕ್ ಭಾಷೆಯಲ್ಲಿ ಬರೆದಿರುವ ಫೇಸ್ಬುಕ್ ಪೋಸ್ಟ್ವೊಂದಿರುವುದನ್ನು ನಾವು ಕಂಡುಕೊಂಡೆವು. ಮಲಯಾಳಂ ವಾರಪತ್ರಿಕೆಯು ವರದಿಯಲ್ಲಿ 'ತಬೂಕ್-ನದಿಯಲ್ಲಿ ಕೊಚ್ಚಿಹೋಗುತ್ತಿರುವ ಒಂಟೆಗಳು" ಎಂಬ ಟೈಟಲ್ನೊಂದಿಗಿರುವ ಸುದ್ದಿಯನ್ನು ನಾವು ಕಂಡುಕೊಂಡೆವು. ಈ ವರದಿಯ ಪ್ರಕಾರ ಅಕ್ಟೋಬರ್ 26, 2018 ರಂದು ಪ್ರಕಟಿಸಲಾದ ವರದಿಯಲ್ಲಿ ʼಭಾರೀ ಮಳೆಯಿಂದಾಗಿ ಮರುಭೂಮಿಯಲ್ಲಿರುವ ಒಂಟೆಗಳು ಕೊಚ್ಚಿಹೋಗುತ್ತಿವೆʼ ಎಂಬ ಶೀರ್ಷಿಕೆಯೊಂದಿಗಿರುವ ಲೇಖನವನ್ನು ನಾವು ಕಂಡುಕೊಂಡೆವು. ಅದೇ ಶಿರ್ಷಿಕೆಯೊಂದಿಗಿರುವ ವಿಡಿಯೋವನ್ನು ಸಹ ನಾವು ಕಂಡುಕೊಂಡೆವು. Ada Monzon ಎಂಬ Instagram ಬಳಕೆದಾರರು ಅಕ್ಟೋಬರ್ 27,2018ರಲ್ಲಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿʼ“Lluvias fuertes en Tabouk, Arabia Saudita han ocasionado una crecida significativa de este río. Los camellos enfrentaron grandes retos. Via @dearmoonproject @wmo_ommy @climatewithoutborders without Borders”ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಶೇರ್ ಮಾಡಿದ್ದರು. ಆತನ ಇನ್ಸ್ಟಾಗ್ರಾಮ್ನ ಬಯೋ ಪ್ರಕಾರ, ಆಕೆ News personality,Chief Meteorologist ಎಂದು ಬರೆದಿದ್ದಾರೆ. ಅಂದರೆ, ಅಕೆ ನಿಖರವಾದ ಸುದ್ದಿಯನ್ನು ಜನರಿಗೆ ತಲುಪಿಸುತ್ತಾರೆ ಎಂದು ಮತ್ತು ಪ್ರಕೃತಿಯ ಕಾಳಜಿಯ ಬಗ್ಗೆ ಸುದ್ದಿಗಳನ್ನು ನೀಡುತ್ತೇನೆ ಇದು ನನ್ನ ವೃತ್ತಿಯೆಂದು ತನ್ನ ಬಯೋವಿನಲ್ಲಿ ಬರೆದಿದ್ದಾರೆ. ಹೀಗಾಗಿ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸಾಭೀತಾಗಿದೆ. ವೈರಲ್ ವೀಡಿಯೊದಲ್ಲಿ ಕಾಣಿಸುವ ದೃಶ್ಯ ದುಬೈನ ಮರುಭೂಮಿಯಲ್ಲಿ ಆದಂತಹ ಪ್ರವಾಹವಲ್ಲ. ವೈರಲ್ ವಿಡಿಯೋದಲ್ಲಿ ಕಾಣಿಸುವುದು 2018ರಲಲ್ಲಿ ಸೌದಿ ಅರೇಬಿಯಾದ ತಬೂಕ್ನಲ್ಲಿ ಸಂಭವಿಸಿದ ಪ್ರವಾಹದ ವಿಡಿಯೋವದು.
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 11 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software