About: http://data.cimple.eu/claim-review/2aa03410b870b91841a82992daadaf6207461a3e98fedb74ec9f62be     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ಭಾರತೀಯ ಸೇನೆಯ ಅಧಿಕಾರಿಗಳು ಮತದಾರರನ್ನು ಪ್ರಭಾವಿಸುತ್ತಿದ್ದಾರೆ ಭಾರತೀಯ ಸೇನೆಯ ಅಧಿಕಾರಿಗಳು ಮತದಾರರನ್ನು ಪ್ರಭಾವಿಸುತ್ತಿದ್ದಾರೆ Claim :ಭಾರತೀಯ ಸೇನೆಯ ಅಧಿಕಾರಿಗಳು ಮತಗಟ್ಟೆಯಲ್ಲಿ ನಕಲಿ ಮತದಾನ ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ Fact :ವೈರಲ್ ಆಗಿರುವ ವೀಡಿಯೋ ಹಳೆಯದ್ದು, ಸೇನಾ ಅಧಿಕಾರಿಗಳು ತಮ್ಮ ಕುಟುಂಬದವರನ್ನು ಮತಗಟ್ಟೆಗೆ ಕರೆತಂದು ಮತ ಚಲಾಯಿಸುತ್ತಿರುವ ದೃಶ್ಯವದು, ಸೇನಾಧಿಕಾರಿಳು ಮತದಾರರನ್ನು ಪ್ರಭಾವಿತರಾಗಿಸಲಿಲ್ಲ. 2024ರ ಲೋಕಸಭೆ ಚುನಾವಣೆ ಭಾರತದಲ್ಲಿ 7 ಹಂತಗಳಲ್ಲಿ ನಡೆಯಲಿದೆ. ಮೊದಲ ಎರಡು ಹಂತಗಳಲ್ಲಿ ಏಪ್ರಿಲ್ 19 ಮತ್ತು ಏಪ್ರಿಲ್ 26 ರಂದು 190 ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು. ಮೂರನೇ ಹಂತದ ಭಾಗವಾಗಿ ಕೆಲವು ರಾಜ್ಯಗಳಲ್ಲಿ ಮೇ 7 ರಂದು ಮತದಾನ ನಡೆದಿತ್ತು. ನಾಲ್ಕನೇ ಹಂತವು ಮೇ 13, 2024 ರಂದು ನಡೆಯಲಿದೆ. ಚುನಾವಣೆಗಳು ಮತ್ತು ಮತದಾನಕ್ಕೆ ಸಂಬಂಧಿಸಿದ ಸಾಕಷ್ಟು ಫೋಟೋಗಳು ಮತ್ತು ವೀಡಿಯೊಗಳು ತಪ್ಪು ಮಾಹಿತಿಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ವೈರಲ್ ವಿಡಿಯೋದಲ್ಲಿ ಸೇನಾ ಟ್ರಕ್ ಬಳಿ ಸೇನಾ ಸಿಬ್ಬಂದಿ ಇರುವುದನ್ನು ನೋಡಬಹುದು. ಸೇನಾ ಅಧಿಕಾರಿಗಳು ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದಾರೆ ಮತ್ತು ಮತದಾರರಿಗೆ ಉತ್ತೇಜಿಸಿ ಬಿಜೆಪಿಗೆ ನಕಲಿ ಮತ ಹಾಕಿಸುತ್ತಿದ್ದಾರೆ" ಎಂಬ ಶೀರ್ಷಿಕೆಯೊಳಗೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೋವಿಗೆ ಶೀರ್ಷಿಕೆಯಾಗಿ “BIG BREAKING. Army is being used by the BJP to cast fake votes. INDIAN ARMY has been assigned to do ILLEGAL & FRAUDULENT work for the BJP. Caught RED handed inside the Election Booths to influence voters for FAKE Votes to the BJP.. #ArvindKejriwal #LokSabhaElections2024” ಎಂದು ಬರೆದು ಪೋಸ್ಟ್ ಮಾಡಿದ್ದರು. ಬಿಜೆಪಿ ಫೇಕ್ ಮತಗಳನ್ನು ಹಾಕಿಸಲು ಸೇನೆಯ ಬಲಗವನ್ನು ಉಪಯೋಗಿಸುತ್ತಿರುವಾಗ ರೆಡ್ ಹ್ಯಾಂಡಡ್ ಆಗಿ ಸಿಕ್ಕೆಬಿದ್ದಿದ್ದಾರೆ ಎಂದು ಪೋಸ್ಟ್ನಲ್ಲಿ ಬರೆದು ಹಂಚಿಕೊಂಡಿದ್ದಾರೆ. BIG BREAKING 🚨— _Prashu_ (@PRASHU_PP) May 8, 2024 Army is being used by the BJP to cast fake votes. INDIAN ARMY🇮🇳 has been assigned to do ILLEGAL & FRAUDULENT work for the BJP. Caught RED handed inside the Election Booths to influence voters for FAKE Votes to the BJP.#LokSabhaElections2024 #NoVote4BJP pic.twitter.com/NY8G7BcMqG 🚨BIG BREAKING🚨— ÀMOCK (@PoliticsRG_2024) May 7, 2024 Army is being used by the BJP to cast fake votes. INDIAN ARMY🇮🇳has been assigned to do ILLEGAL & FRAUDULENT work for the BJP. Caught RED handed inside the Election Booths to influence voters for FAKE Votes to the BJP..#ArvindKejriwal #LokSabhaElections2024 pic.twitter.com/JShJRi5xJ2 एक और न्यू वीडियो सामने आई है इस पर विचार जरूर कीजिएगा आख़िर ये सरकार चाहती क्या है किस मोड़ पर ले आएं हैं आर्मी से फर्जी वोट डलवाया जा रहा है,,, रक्षक ही भक्षक बनाएं जा रहे है किस पर विश्वास करें,,,— Tabssum नाज़ تبسّم ناز (@fiza_khan786S) May 7, 2024 तोबा तोबा 😲😇👇 pic.twitter.com/0N4SnvqPAX ಫ್ಯಾಕ್ಟ್ಚೆಕ್: ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋ 2019ರದ್ದು, 2024ರಲ್ಲಿ ನಡೆದ ಸಾರ್ವರ್ತಿಕ ಚುನಾವಣೆಯದಲ್ಲ. ವಿಡಿಯೋವಿನಲ್ಲಿರುವ ಸತ್ಯಾಂಶವನ್ನು ತಿಳಿಯಲು ನಾವು ವೀಡಿಯೊದಿಂದ ಹೊರತೆಗೆಯಲಾದ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಉಪಯೋಗಿಸಿ ಗೂಗಲ್ನಲ್ಲಿ ರಿವರ್ಸ್ ಇಮೇಜ್ ಮೂಲಕ ಹುಡುಕಾಟವನ್ನು ನಡೆಸಿದೆವು. ಶೌರ್ಯ ಚಕ್ರ ಬ್ರಿಗೇಡಿಯರ್ ಹರ್ದೀಪ್ ಸಿಂಗ್ ಸೋಹಿ ಎಂಬ ಎಕ್ಸ್ ಖಾತೆದಾರ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ ಮಾಡಿದ್ದರು. ವಿಡಿಯೋವಿಗೆ “WRONG to use name of #IndianArmy to create sensationalism & spread misinfo. Indian Army has always been apolitical. This is an old clip of Grenadiers Regimental Centre veh in #Jabalpur apparently ferrying their folks to exercise #RightToVote" ಎಂಬ ಶೀರ್ಷಿಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. WRONG to use name of #IndianArmy to create sensationalism & spread misinfo. Indian Army has always been apolitical.— Brigadier Hardeep Singh Sohi,Shaurya Chakra (R) (@Hardisohi) May 8, 2024 This is an old clip of Grenadiers Regimental Centre veh in #Jabalpur apparently ferrying their folks to exercise #RightToVote. @ECISVEEP @adgpi pic.twitter.com/7uASZc4L0u ತಮ್ಮಷ್ಟು ವಿವಿರಗಳನ್ನು ಶೇಖರಿಸಲು ನಾವು ‘Grenadiers Regimental Centre, Jabalpur” ಎಂಬ ಕೀವರ್ಡ್ಗಳನ್ನು ಬಳಸಿಕೊಂಡು ಗೂಗಲ್ನಲ್ಲಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ 2019 ರಲ್ಲಿ ಕೆಲವು ಫ್ಯಾಕ್ಟ್ ಚೆಕ್ ಸಂಸ್ಥೆಗಳು ಈ ವೈರಲ್ ಪೋಸ್ಟ್ಗಳನ್ನು ಪರಿಶೀಲಿಸಿ ಲೇಖನಗಳನ್ನು ಬರೆದಿದ್ದನ್ನು ಕಂಡುಕೊಂಡೆವು. ಅಷ್ಟೇ ಅಲ್ಲ ಭಾರತೀಯ ಸೇನೆ ಕೂಡ ಈ ಹೇಳಿಕೆಯನ್ನು ತಿರಸ್ಕರಿಸಿತು. ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಹಾಗೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಹಾಗೂ ವಿಡಿಯೋ ಚಿತ್ರೀಕರಿಸಿದ ದುಷ್ಕ್ರರ್ಮಿಗಳ ವಿರುದ್ದ ದೂರು ದಾಖಲಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ ಸುದ್ದಿ ಲೇಖನವವೊಂದನ್ನನು ನಾವು ಕಂಡುಕೊಂಡೆವು. ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ನ ವರದಿಯ ಪ್ರಕಾರ, ಮಧ್ಯಪ್ರದೇಶದ ಜಬಲ್ಪುರದ ಸೇನಾ ಅಧಿಕಾರಿಗಳು ಸಾರ್ವಜನಿಕರ ಮತದಾರರ ಗುರುತಿನ ಚೀಟಿಗಳನ್ನು ಕಸಿದುಕೊಂಡಿದ್ದಾರೆ ಎಂದು ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಭಾರತೀಯ ಸೇನೆಯ ಅಧಿಕಾರಿಗಳು ದೂರು ನೀಡಿದ್ದಾರೆ. ವೈರಲ್ ಈ ಕುರಿತು ಏಪ್ರಿಲ್ 29, 2019 ರಂದು ಮತ್ತು ಮೇ 2, 2019 ರಂದು ವರದಿಯನ್ನು ಪ್ರಕಟಿಸಿದ್ದಾರೆ. 2019 video. It was a fakw video. Complaint was lodged by @adgpi back then too. i hope the police authorities pick him up for spreading fake news https://t.co/ce4yCOt2dd pic.twitter.com/WJMPRGMkzi— औरंगज़ेब 🇮🇳 (@__phoenix_fire_) May 8, 2024 ಹೀಗಾಗಿ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋ 2019ರದ್ದು, 2024ರಲ್ಲಿ ನಡೆದ ಸಾರ್ವರ್ತಿಕ ಚುನಾವಣೆಯದಲ್ಲ. ಸೇನಾ ಅಧಿಕಾರಿಗಳು ತಮ್ಮ ಕುಟುಂಬದವರನ್ನು ಮತಗಟ್ಟೆಗೆ ಕರೆತಂದು ಮತ ಚಲಾಯಿಸುತ್ತಿರುವ ದೃಶ್ಯವದು, ಸೇನಾಧಿಕಾರಿಳು ಮತದಾರರನ್ನು ಪ್ರಭಾವಿತರಾಗಿಸಲಿಲ್ಲ.
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 11 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software