schema:text
| - Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact checks doneFOLLOW US
Fact Check
Claim
ಕಾಶ್ಮೀರದಲ್ಲಿ ಕಾಂಗ್ರೆಸ್ ಗೆದ್ದರೆ ಜೈಲಿನಿಂದ ಉಗ್ರರ ಬಿಡುಗಡೆ ಮಾಡುವುದಾಗಿ ಹೇಳಿದೆ
Fact
2018ರಲ್ಲಿ ಕಾಂಗ್ರೆಸ್ ನಾಯಕ ಸಗೀರ್ ಸಯೀದ್ ಖಾನ್ ನೀಡಿರುವ ವಿವಾದಿತ ಹೇಳಿಕೆಯನ್ನು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ
ಕಾಶ್ಮೀರದಲ್ಲಿ ಕಾಂಗ್ರೆಸ್ ಗೆದ್ದರೆ ಜೈಲಿನಿಂದ ಉಗ್ರರ ಬಿಡುಗಡೆ ಮಾಡುವುದಾಗಿ ಹೇಳಿದೆ ಎಂದು ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ.
ವಾಟ್ಸಾಪ್ನಲ್ಲಿ ಕಂಡುಬಂದ ಮೆಸೇಜ್ ನಲ್ಲಿ “ಕಾಂಗ್ರೆಸ್ಸಿಗರನ್ನ ನಾವೇಕೆ ಅಷ್ಟೊಂದು ದ್ವೇಷಿಸುವುದು ಗೊತ್ತಾ..?” ಎಂದು ಪತ್ರಿಕೆಯೊಂದರ ಸುದ್ದಿಯನ್ನು ಲಗತ್ತಿಸಲಾಗಿದೆ. ಈ ಬಗ್ಗೆ ಸತ್ಯಶೋಧನೆ ನಡೆಸುವಂತೆ ನ್ಯೂಸ್ಚೆಕರ್ ವಾಟ್ಸಾಪ್ ಟಿಪ್ ಲೈನ್ (+91-9999499044) ಗೆ ಬಳಕೆದಾರರೊಬ್ಬರು ಮನವಿ ಮಾಡಿಕೊಂಡಿದ್ದು ಅದನ್ನು ನಾವು ತನಿಖೆಗಾಗಿ ಸ್ವೀಕರಿಸಿದ್ದೇವೆ.
ತನಿಖೆಯಲ್ಲಿ ಇದು ಒಂದು ಹಳೆಯ ಸುದ್ದಿಯಾಗಿದ್ದು, 2018ರ ಹೊತ್ತಿನದ್ದು, ಆಗ ಕಾಂಗ್ರೆಸ್ ನಾಯಕ ಸಗೀರ್ ಸಯೀದ್ ಖಾನ್ ವಿವಾದಿತ ಹೇಳಿಕೆ ನೀಡಿದ್ದಾರೆ ಎಂದು ಕಂಡುಬಂದಿದೆ.
Also Read: ಬೆಂಗಳೂರು-ಮೈಸೂರು ಹೈವೇಯಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದ ವೀಡಿಯೋ ಗದಗಿನದ್ದು!
ಸತ್ಯಶೋಧನೆಗಾಗಿ ನಾವು ವೈರಲ್ ಆಗುತ್ತಿರುವ ಪತ್ರಿಕೆಯೊಂದರ ಸುದ್ದಿಯ ಕ್ಲಿಪ್ಪಿಂಗ್ ಅನ್ನು ಕೂಲಂಕಷವಾಗಿ ಗಮನಿಸಿದ್ದೇವೆ. ಇದರಲ್ಲಿ ಕಾಂಗ್ರೆಸ್ ನಾಯಕ ಸಗೀರ್ ಸಯೀದ್ ಖಾನ್ ಹೆಸರನ್ನು ಉಲ್ಲೇಖಿಸಲಾಗಿದೆ.
ಅದರಂತೆ ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದು, ವಿವಿಧ ಮಾಧ್ಯಮ ವರದಿಗಳು ಲಭ್ಯವಾಗಿವೆ. ಇವುಗಳು 2018ರದ್ದು ಎಂದು ನಾವು ಗಮನಿಸಿದ್ದೇವೆ.
ಡಿಸೆಂಬರ್ 27, 2018ರ ಇಂಡಿಯಾ ಟುಡೇ ವರದಿಯಲ್ಲಿ, ಕಾಂಗ್ರೆಸ್ ನಾಯಕ ಸಗೀರ್ ಸಯೀದ್ ಖಾನ್ ತನ್ನ ವಿವಾದಿತ ಹೇಳಿಕೆಗಳ ಮೂಲಕ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದರು ಎಂದಿದೆ. ಜಮ್ಮುವಿನ ಸ್ಥಳೀಯ ಪತ್ರಕರ್ತರೊಂದಿಗೆ ಮಾತನಾಡುತ್ತ ಸಯೀದ್, ಬಿಜೆಪಿ ಸ್ಥಳೀಯ ಜನರ ವಿರುದ್ಧ ದೌರ್ಜನ್ಯ ಎಸಗುತ್ತಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಕಾಶ್ಮೀರ ಕಣಿವೆಯಲ್ಲಿ ಮೃತರಾದವರ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ಮತ್ತು ಸರ್ಕಾರಿ ಕೆಲಸ, ಶಂಕಿತ ಭಯೋತ್ಪಾದಕರನ್ನು ಜೈಲಿನಿಂದ ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ ಎಂದಿದೆ.
Also Read: ಬೆಂಗಳೂರು ಕುಡಿಯುವ ನೀರಿನ ಕುರಿತ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಚಿಪ್ಸ್ ತಿನ್ನುತ್ತಿದ್ದರೇ?
ಡಿಸೆಂಬರ್ 27, 2018ರ ಎಬಿಪಿ ಲೈವ್ ವರದಿಯಲ್ಲಿ ”ಬಿಜೆಪಿ ನಾಯಕರನ್ನು ನೇಣಿಗೆ ಹಾಕುತ್ತೇವೆಂದು ಹೇಳಿದ ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ನಾಯಕ ಸಯೀದ್ ಖಾನ್” ಎಂಬ ಶೀರ್ಷಿಕೆಯ ವರದಿಯಲ್ಲಿ ಸಯೀದ್ ಖಾನ್, ಕಣಿವೆಯಲ್ಲಿ ಮೃತರಾದವರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ, ಸರ್ಕಾರಿ ಕೆಲಸ ಕೊಡುವುದಾಗಿ ಹೇಳಿದ್ದಾರೆ ಎಂದಿದೆ.
ವೈರಲ್ ಆದ ಸುದ್ದಿಯ ಮೂಲವನ್ನು ಪತ್ತೆ ಮಾಡಲು ನಾವು ಕನ್ನಡದಲ್ಲಿ ಅದೇ ಕೀವರ್ಡ್ ಗಳೊಂದಿಗೆ ಸರ್ಚ್ ನಡೆಸಿದ್ದು, ಈ ವೇಳೆ ಸುವರ್ಣ ನ್ಯೂಸ್ನಲ್ಲಿ ಯಥಾವತ್ ವರದಿ ಲಭ್ಯವಾಗಿದೆ. ಕಾಶ್ಮೀರದಲ್ಲಿ ಕಾಂಗ್ರೆಸ್ ಗೆದ್ದರೆ ಭಯೋತ್ಪಾದಕರಿಗೆ 1 ಕೋಟಿ ಪರಿಹಾರ ಎಂದು ಡಿಸೆಂಬರ್ 27, 2018ರ ವರದಿಯಲ್ಲಿದೆ.
ಈ ಸತ್ಯಶೋಧನೆಯ ಪ್ರಕಾರ, ಕಾಂಗ್ರೆಸ್ ಗೆದ್ದರೆ ಜೈಲಿನಿಂದ ಉಗ್ರರ ಬಿಡುಗಡೆ ಮಾಡುವುದಾಗಿ ಹೇಳಿದೆ ಎನ್ನುವ ವಿಚಾರದಲ್ಲಿ ಕಾಂಗ್ರೆಸ್ ನಾಯಕ ಸಗೀರ್ ಸಯೀದ್ ಖಾನ್ 2018ರಲ್ಲಿ ನೀಡಿದ ಹೇಳಿಕೆ ಇದಾಗಿದ್ದು ಈಗಿನದ್ದಲ್ಲ, ಚುನಾವಣೆ ಹಿನ್ನೆಲೆಯಲ್ಲಿ ಇದನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ಗೊತ್ತಾಗಿದೆ.
Also Read: ಮುಂದಿನ ಜನ್ಮದಲ್ಲಿ ಹುಟ್ಟುವುದಾದರೆ ಮುಸ್ಲಿಂ ಆಗಿಯೇ ಹುಟ್ಟುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆಯೇ?
Our Sources
Report By India Today, Dated: December 27, 2018
Report By ABP Live, Dated: December 27, 2018
Report By Suvarna News, Dated: December 27, 2018
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
November 30, 2024
Prasad Prabhu
November 29, 2024
Prasad Prabhu
November 27, 2024
|