schema:text
| - Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact checks doneFOLLOW US
Fact Check
Claim
ರಾಹುಲ್ ಗಾಂಧಿಯನ್ನು ನೋಡಲು ನೆರೆದ ಜನ ಸಾಗರ
Fact
ರಾಹುಲ್ ಗಾಂಧಿ ಅವರನ್ನು ನೋಡಲು ನೆರೆದ ಜನರಲ್ಲ, ಬದಲಾಗಿ ವಿಧಾನಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಅವರ ಜನ್ಮದಿನದ ಅಂಗವಾಗಿ ಚಿಕ್ಕೋಡಿಯಲ್ಲಿ ನಡೆದ ಅಂತಾರಾಜ್ಯ ಮಟ್ಟದ ಎತ್ತಿನಗಾಡಿ ಓಡಿಸುವ ಸ್ಪರ್ಧೆಯ ವೀಡಿಯೋ ಆಗಿದೆ
ರಾಹುಲ್ ಗಾಂಧಿಯವರನ್ನು ನೋಡಲು ಜನಸಾಗರ ನೆರೆದಿದೆ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ವಾಟ್ಸಾಪ್ ನಲ್ಲಿ ಕಂಡುಬಂದ ಕ್ಲೇಮಿನಲ್ಲಿ “ಇದು ರಾಹುಲ್ ಗಾಂಧಿಯನ್ನು ನೋಡಲು ನೆರೆದ ಜನ ಸಾಗರ! ಮೋದಿಯ ಸಭೆಗೆ ಬಿಜೆಪಿಯವರು 500 ರೂಪಾಯಿ ಕೊಟ್ಟು ಕೂಲಿ ಕೆಲಸಗಾರರನ್ನು ತುಂಬಿಸಿ ತಂದ ಜನರು ಕೂಟವಲ್ಲ, ಬದಲಾವಣೆಯ ಶುಭ ಸೂಚನೆ” ಎಂದಿದೆ.
ಈ ವೀಡಿಯೋ ಬಗ್ಗೆ ಸತ್ಯ ಶೋಧನೆ ನಡೆಸುವಂತೆ ಬಳಕೆದಾರರೊಬ್ಬರು ನ್ಯೂಸ್ಚೆಕರ್ ವಾಟ್ಸಾಪ್ ಟಿಪ್ಲೈನ್ (+91-9999499044) ಮೂಲಕ ವಿನಂತಿಸಿಕೊಂಡಿದ್ದು, ಅದನ್ನು ತನಿಖೆಗಾಗಿ ಅಂಗೀಕರಿಸಿದ್ದೇವೆ.
ಅದೇ ರೀತಿಯ ಹೇಳಿಕೆಯೊಂದಿಗೆ ಈ ವೀಡಿಯೋವನ್ನುಎಕ್ಸ್ ನಲ್ಲೂ ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡಿದ್ದೇವೆ.
Also Read: ಚಿತ್ರದುರ್ಗದಲ್ಲಿ ಪ್ರಧಾನಿ ಹೆಲಿಕಾಪ್ಟರ್ ನಿಂದ ನಿಗೂಢ ಪೆಟ್ಟಿಗೆ ಇಳಿಸಲಾಯಿತು ಎನ್ನುವ ಪೋಸ್ಟ್ ನಿಜವೇ?
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋವನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇವೆ. ಈ ವೇಳೆ ಇದು abhijeet__kalage__33 ಎಂಬ ವಾಟರ್ ಮಾರ್ಕ್ ಹೊಂದಿರುವುದನ್ನು ಗಮನಿಸಿದ್ದೇವೆ.
ಆ ಪ್ರಕಾರ ನಾವು ಇನ್ಸ್ಟಾ ಗ್ರಾಂನಲ್ಲಿ ಆ ಖಾತೆಯನ್ನು ಶೋಧಿಸಿದ್ದೇವೆ. ಮತ್ತು ವೈರಲ್ ಆಗಿರುವ ವೀಡಿಯೋವನ್ನು ಗಮನಿಸಿದ್ದೇವೆ.
ಮಾರ್ಚ್ 5, 2024ರಂದು ಅಭಿಜೀತ್ ಅವರು ಈ ವೀಡಿಯೋವನ್ನು ಶೇರ್ ಮಾಡಿದ್ದು, “कोल्हापूरचा ढाण्या वाघं हारण्या” ಎಂದು ಬರೆದಿರುವುದನ್ನು ಗಮನಿಸಿದ್ದೇವೆ. ಆ ಪ್ರಕಾರ ನಾವು ಶೋಧ ಮಾಡಿದ್ದು, ಇದು ಎತ್ತಿನಗಾಡಿ ಸ್ಪರ್ಧೆಗೆ ಸಂಬಂಧಿಸಿದ್ದು ಎಂದು ಗಮನಿಸಿದ್ದೇವೆ.
ಕೊಲ್ಹಾಪುರದ ಹೆಸರನ್ನು ಇನ್ಸ್ಟಾಗ್ರಾಂ ಬಳಕೆದಾರರು ಬರೆದಿರುವುದರಿಂದ ನಾವು ಬೆಳಗಾವಿ-ಮಹಾರಾಷ್ಟ್ರ ಗಡಿ ಪ್ರದೇಶದ ಸ್ಥಳೀಯ ವರದಿಗಾರರಾದ ಕಾಶೀನಾಥ್ ಸುಲ್ಕುಡೆ ಅವರನ್ನು ನಾವು ಸಂಪರ್ಕಿಸಿದ್ದೇವೆ.
ವೀಡಿಯೋ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು “ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ತು ಸದಸ್ಯರಾದ ಪ್ರಕಾಶ ಹುಕ್ಕೇರಿ ಅವರ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಎತ್ತಿನ ಗಾಡಿ ಸ್ಪರ್ಧೆ”ಯಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.
Also Read: ಲೋಕಸಭೆ ಚುನಾವಣೆಯಲ್ಲಿ 10 ರಾಜ್ಯಗಳಲ್ಲಿ ಐ.ಎನ್.ಡಿ.ಐ. ಬಣ ಮುನ್ನಡೆ? ಇಲ್ಲ, ವೈರಲ್ ಸುದ್ದಿ ನಕಲಿ
ಬಳಿಕ ನಾವು ಈ ಬಗ್ಗೆ ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದು ಫಲಿತಾಂಶಗಳು ಲಭ್ಯವಾಗಿವೆ.
ಫೆಬ್ರವರಿ 27, 2024ರ ಬೆಳಗಾವಿ ಸುದ್ದಿಯಲ್ಲಿ “ಶರ್ಯತ್ತಿನಲ್ಲೂ ಅಪ್ಪ, ಮಗನ ರೆಕಾರ್ಡ್ ಬ್ರೇಕ್” ಎಂಬ ವರದಿಯಲ್ಲಿ ಅಂತರರಾಜ್ಯ ಭವ್ಯ ಎತ್ತಿನಗಾಡಿ ಓಡಿಸುವ ಈ ಸ್ಪರ್ಧೆ ಮಾರ್ಚ್ 5 ರಂದು ಮಧ್ಯಾಹ್ನ 3 ಗಂಟಗೆ ಚಿಕ್ಕೋಡಿಯ ಎಕ್ಸಂಬಾ ಪಟ್ಟಣದ ಮೈದಾನದಲ್ಲಿ ನಡೆಯಲಿದೆ ಈ ಸ್ಪರ್ಧೆಯ ಟೈಟಲ್ ಸಾಹುಕಾರ್ ಶರ್ಯತ್ತು. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಒಟ್ಟು ₹51 ಲಕ್ಷ ಬಹುಮಾನ ನೀಡುವ ಮೂಲಕ ಪ್ರಕಾಶ್ ಹುಕ್ಕೇರಿ ಮತ್ತು ಗಣೇಶ್ ಹುಕ್ಕೇರಿ ಅವರು ರೆಕಾರ್ಡ್ ಬ್ರೇಕ್ ಮಾಡಿದ್ದಾರೆ ಎಂದಿದೆ.
ಮಾರ್ಚ್ 3, 2024ರ ಪ್ರಜಾವಾಣಿ ವರದಿಯಲ್ಲೂ “ಚಿಕ್ಕೋಡಿ: ಪ್ರಕಾಶ್ ಹುಕ್ಕೇರಿ ಜನ್ಮದಿನ, ಎತ್ತಿನಗಾಡಿ ಓಡಿಸುವ ಸ್ಪರ್ಧೆ ಮಾರ್ಚ್ 5ಕ್ಕೆ” ಎಂದಿದೆ. ಇದರಲ್ಲಿ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಅವರ 77ನೇ ಜನ್ಮದಿನ ಅಂಗವಾಗಿ ಅವರ ಅಭಿಮಾನಿ ಬಳಗದವರು ತಾಲ್ಲೂಕಿನ ಮಲ್ಲಿಕವಾಡದ ಮೈದಾನದಲ್ಲಿ ಮಾ.5ರಂದು ಮಧ್ಯಾಹ್ನ 3.30ಕ್ಕೆ ಅಂತರರಾಜ್ಯ ಮಟ್ಟದ ಎತ್ತಿನಗಾಡಿ ಓಡಿಸುವ ಸ್ಪರ್ಧೆ ಹಮ್ಮಿಕೊಂಡಿದ್ದಾರೆ ಎಂದಿದೆ.
ಈ ಪುರಾವೆಗಳ ಪ್ರಕಾರ, ಇದು ರಾಹುಲ್ ಗಾಂಧಿ ಅವರು ಆಗಮಿಸಿದ ವೇಳೆ ಸೇರಿದ ಜನರಲ್ಲ, ಬದಲಾಗಿ ವಿಧಾನಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಅವರ ಜನ್ಮದಿನದ ಅಂಗವಾಗಿ ಚಿಕ್ಕೋಡಿಯಲ್ಲಿ ನಡೆದ ಅಂತಾರಾಜ್ಯ ಮಟ್ಟದ ಎತ್ತಿನಗಾಡಿ ಓಡಿಸುವ ಸ್ಪರ್ಧೆಯ ವೀಡಿಯೋ ಆಗಿದೆ ಎಂದು ತಿಳಿದುಬಂದಿದೆ.
Also Read: ‘ಜನಾರ್ದನ ಪೂಜಾರಿ ಎನ್ಕೌಂಟರ್ ಮಾಡಿ’ ಎಂಬ ಹಳೆಯ ವಿವಾದಿತ ಹೇಳಿಕೆ ಹಂಚಿಕೆ
Our Sources
Instagram Post By abhijeet__kalage__33, Dated: March 5, 2024
Report By Belagavi Suddi, Dated: February 27, 2024
Report By Prajavani, Dated: March 3, 2024
Conversation with Kashinath Sulkude Local reporter Chikkodi
(Inputs from Prasad Prabhu)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
November 16, 2024
Vasudha Beri
November 12, 2024
Ishwarachandra B G
August 24, 2024
|