About: http://data.cimple.eu/claim-review/46b39eaf6a3f0377219b87fc63b193f63a36541056ba0b7dae2ba2f1     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ದಿನಕ್ಕೆ ಒಂದು ಲಕ್ಷ ಸಂಪಾದಿಸ ಬಹುದು ಎಂದು ಸುಧಾ ಮೂರ್ತಿಯವರು ಯಾವುದೇ ಪ್ರೋಗ್ರಾಂನ್ನು ಪ್ರಚಾರ ಮಾಡಿಲ್ಲ ದಿನಕ್ಕೆ ಒಂದು ಲಕ್ಷ ಸಂಪಾದಿಸ ಬಹುದು ಎಂದು ಸುಧಾ ಮೂರ್ತಿಯವರು ಯಾವುದೇ ಪ್ರೋಗ್ರಾಂನ್ನು ಪ್ರಚಾರ ಮಾಡಿಲ್ಲ Claim :ದಿನಕ್ಕೆ 1 ಲಕ್ಷ ಸಂಪಾದಿಸುವ ಕಾರ್ಯಕ್ರಮವನ್ನು ಸುಧಾ ಮೂರ್ತಿ ಪ್ರಚಾರ ಮಾಡಿದ್ದಾರೆ Fact :ವೈರಲ್ ಆದ ಸುಧಾ ಮೂರ್ತಿಯವರ ವೀಡಿಯೋವನ್ನು ಎಐ ಉಪಯೋಗಿಸಿ ಸೃಷ್ಟಿಸಲಾಗಿದೆ ಖ್ಯಾತ ಲೇಖಕಿ, ಸಮಾಜ ಸೇವಕಿ ಹಾಗೂ ಇನ್ಫೋಸಿಸ್ ಸಂಸ್ಥೆಯ ಅಧ್ಯಕ್ಷರಾಗಿರುವ ಸುಧಾಮೂರ್ತಿಯವರು ಸರಳತೆ ಮತ್ತು ಸಮಾಜ ಸೇವೆ ಮೂಲಕ ಬಹಳಷ್ಟು ಹೆಸರುವಾಸಿಯಾಗಿದ್ದಾರೆ. ಗ್ರಾಮೀಣ ಜನರಲ್ಲಿ ಶಿಕ್ಷಣ, ಸಾಮಾಜಿಕ ನೈರ್ಮಲ್ಯ, ಬಡತನ ನಿರ್ಮೂಲನೆ ಮತ್ತು ಇನ್ನೂ ಅನೇಕ ವಿಷಯಗಳ ಕುರಿತು ಅವರು ಜಾಗೃತಿ ಮೂಡಿಸಿ, ಸಮಾಜದ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿ ನಿಲ್ಲುತ್ತಾರೆ. ಇತ್ತೀಚಿಗೆ ಫೇಸ್ಬುಕ್ ಖಾತೆಯಲ್ಲಿ ಖಾತೆದಾರರರೊಬ್ಬರು 3.34 ಸೆಕೆಂಡ್ಗಳನ್ನು ಒಳಗೊಂಡಿರುವ ಸುಧಾಮೂರ್ತಿಯವರ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸುಧಾಮೂರ್ತಿಯವರು ಜನರಿಗೆ ದಿನಕ್ಕೆ 1,00,000 ರೂಪಾಯಿಗಳನ್ನು ಗಳಿಸುವ ಯೋಜನೆಯನ್ನು ಪ್ರಚಾರ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ವಿಡಿಯೋದಲ್ಲಿ ಹೇಳುತ್ತಿರುವುದೇನೆಂದರೆ, ಜನರು ಕನಿಷ್ಟ ಒಂದುಲಕ್ಷ ರೂಪಾಯಿ ಗಳಿಸಲು ʼಕ್ವಾಂಟ್ರಮ್ ಎಐʼ ಪ್ರೋಗ್ರಾಂನ್ನು ಅಭಿವೃದ್ಧಿ ಪಡೆಸಿದ್ದೇವೆ, ಈ ಯೋಜನೆಯನ್ನು ಸದುಪಾಯ ಪಡೆದುಕೊಳ್ಳಿ. ಇರದ ಪ್ರತಿಯಾಗಿ ನಾನು ಏನು ಆಶಿಸುತ್ತಿಲ್ಲ ಹಾಗೂ ನಾನು ಯಾವುದೇ ಮೋಸ ಪೂರಿತ ಭರವಸೆಯನ್ನು ನೀಡುತ್ತಿಲ್ಲ. ಹಾಗೆ ಸಾಫ್ಟ್ವೇರ್ ಬಗ್ಗೆ ಮಾತನಾಡಿದ ಸುಧಾಮೂರ್ತಿಯವರು, ಕ್ವಾಂಟ್ರಮ್ ಎಐ ಪ್ರೋಗ್ರಾಂನ್ನು ಫೋನ್ ಅಥವಾ ಕಂಪ್ಯೂಟರ್ನಿಂದ ಮಾಡಬಹುದು. ಏಐ ಆಧಾರಿತ ತಂತ್ರಜ್ಞಾನವನ್ನು ಒಳಗೊಂಡ ʼಕ್ವಾಂಟ್ರಮ್ ಎಐʼ ಪ್ರೋಗ್ರಾಂ ಹಣಕಾಸು ಮಾರುಕಟ್ಟೆಯಲ್ಲಿ, ಮಾರುಕಟ್ಟೆಯ ಪ್ರವೃತ್ತಿಗಳನ್ನು ವಿಶ್ಲೇಷಿಸಲು ಸಹಾಯ ಮಾಡುವುದಲ್ಲದೇ ನಿಮ್ಮ ಯಶಸ್ಸನ್ನು ಸಹ ಖಚಿತ ಪಡೆಸುತ್ತದೆ ಎಂದು ಹೇಳಿದ್ದಾರೆ. ಈ ಸೌಲಭ್ಯವನ್ನು ಪಡೆಯಲು ನೀವು ಮೊದಲು ʼಕ್ವಾಂಟ್ರಮ್ ಎಐʼ ವೆಬ್ಸೈಟ್ಗೆ ಹೋಗಿ ನಿಮ್ಮ ಅಗತ್ಯ ವಿವರಗಳನ್ನು ನಮೂದಿಸಬೇಕಾಗುತ್ತದೆ. ನಂತರ ಕಂಪನಿಯ ವೈಯಕ್ತಿಕ ವ್ಯವಸ್ಥಾಪಕರು ನಿಮ್ಮನ್ನು ಸಂಪರ್ಕಿಸಿ ನಿಮಗೆ ಬಂತಂತಹ ಎಲ್ಲಾ ಸಂದೇಹಗಳಿಗೆ ಉತ್ತರಿಸಿ ನಿಮಗೆ ಫ್ಲಾಟ್ಫಾಮ್ಗೆ ಆಕ್ಸಿಸ್ ನೀಡುತ್ತಾರೆ ಎಂದು ಹೇಳಿದ ವಿಡಿಯೋವನ್ನು ನಾವು ಕಾಣಬಹುದು. ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. ಫ್ಯಾಕ್ಟ್ಚೆಕ್ ವೈರಲ್ ಆದ ವಿಡಿಯೋ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ಸುಧಾಮೂರ್ತಿಯವರ ವಿಡಿಯೋವನ್ನು ಕೃತಕ ಬುದ್ದಿಮತ್ತೆ (ಎಐ) ಬಳಸಿ ಸೃಷ್ಟಿಸಲಾಗಿದೆ. ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ವಿಡಿಯೋವಿನ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಎರಡು ವರ್ಷದ ಹಿಂದೆ ಅಂದರೆ ನವಂಬರ್ 30, 2021ರಂದು ʼಮೊಹಮದ್ ಅಹ್ಸಾನ್ ಲೈಬರ್ರಿʼ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಸುಧಾಮೂರ್ತಿಯವರ ಮೂಲ ವಿಡಿಯೋವನ್ನು ನಾವು ಕಂಡುಕೊಂಡೆವು. ಈ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ, ವೈರಲ್ ಆದ ವಿಡಿಯೋದಲ್ಲಿ ಆಕೆ ಧರಿಸಿರುವ ಸೀರೆ ಹಾಗೂ ವಿಡಿಯೋದಲ್ಲಿರುವ ಬ್ಯಾಕ್ಗ್ರೌಂಡ್ ಎರಡನ್ನೂ ಹೋಲಿಸಿದೆವು. Bringing up children lavishly makes them unsatisfied in everything. By Sudha Murthy. ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನೋಡಬಹುದು. ಈ ವಿಡಿಯೋವಿನಲ್ಲಿ ಆಕೆ ಮಕ್ಕಳನ್ನು ಆಡಂಬರದಿಂದ ಬೆಳೆಸಿದರೆ ಅವರು ಎಲ್ಲದರಲ್ಲೂ ಅಸಂತೃಪ್ತಿಯನ್ನು ಕಂಡುಕೊಳ್ಳುತ್ತಾರೆ ಎಂದ ಸುದ್ದಿಯ ಬಗ್ಗೆ ಮಾತನಾಡಿದ್ದಾರೆ. ನಾವು ಮತ್ತಷ್ಟು ನಿಜಾಂಶವನ್ನು ತಿಳಿಯಲು ಕೆಲವು ಕೀವರ್ಡ್ಗಳ ಮೂಲಕವೂ ಹುಡುಕಾಟ ನಡೆಸಿದೆವು. ನಮಗೆ ಹುಡುಕಾಟದಲ್ಲಿ ಯಾವುದೇ ಮಾಹಿತಿ ಸಿಗಲಿಲ್ಲ. ನಮಗೆ ಸುಧಾಮೂರ್ತಿಯವರು ʼಕ್ವಾಂಟ್ರಮ್ ಎಐʼ ಪ್ರೋಗ್ರಾಮ್ ಬಗ್ಗೆ ಪ್ರಚಾರ ಮಾಡುತ್ತಿರುವ ಮೂರ್ತಿ ಅವರು ಈ ಟೀಕೆಗಳನ್ನು ಮಾಡಿದ್ದಾರೆ ಎಂದು ಸಾಬೀತುಪಡಿಸುವ ಯಾವುದೇ ಅಧಿಕೃತ ವೆಬ್ಸೈಟ್ ಅಥವಾ ವೀಡಿಯೊವನ್ನು ಅಪ್ಲೋಡ್ ಮಾಡಿದ ಯಾವುದೇ ಕಾನೂನುಬದ್ಧ ವೆಬ್ಸೈಟ್ ನಮಗೆ ಕಂಡುಬಂದಿಲ್ಲ. ಅಷ್ಟೇ ಅಲ್ಲ ನಾವು ವೈರಲ್ ಆದ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ, ವಿಡಿಯೋಗೂ ಆಡಿಯೋಗೂ ಹೊಂದಿಕೆಯಾಗುತ್ತಿರುವುದು ನಮಗೆ ಕಾಣಿಸಲಿಲ್ಲ. ನಾವು ವಿಡಿಯೋದಲ್ಲಿ ಬರುವ ಆಡಿಯೋವನ್ನು ಇನ್ವೇಡ್ನ ʼಹಿಯಾ ಆಡಿಯೋ ಡಿಟೆಕ್ಷನ್ ಟೂಲ್ʼನಿಂದ ಸತ್ಯಾಂಶವನ್ನು ತಿಳಿಯಲು ಪ್ರಯತ್ನಿಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್ ಆದ ಆಡಿಯೋ ನಕಲಿಯದ್ದು ಎಂದು ಈ ಆಡಿಯೋವನ್ನು ಎಐ ಮೂಲಕ ರಚಿಸಲಾಗಿದೆ ಎಂದು ಸ್ಪಷ್ಟವಾಯಿತು. ಸುಧಾ ಮೂರ್ತಿಯವರ ಧ್ವನಿಯನ್ನು ವಿಡಿಯೋಗೆ ಹೊಂದಿಸಲು ಎಐ ವಾಯ್ಸ್ ಕ್ಲೋನಿಂಗ್ ಅನ್ನು ಬಳಸಲಾಗಿದೆ ಎಂದು ಸಾಭೀತಾಗಿದೆ. ಹಿಯಾ ಆಡಿಯೋ ವರದಿಯ ಪ್ರಕಾರ ಎಡ ಬದಿಯಲ್ಲಿ ಕಾಣುವ ರೇಖಾ ಚಿತ್ರ ವೈರಲ್ ಆದ ವಿಡಿಯೋವಿನಲ್ಲಿರುವ ಧ್ವನಿ ಎಐ ಮೂಲಕ ರಚಿಸಲಾಗಿದೆ ಎಂಬುದನ್ನು ತೋರಿಸುತ್ತದೆ. ನಾಲ್ಕು ಸೆಕೆಂಡ್ಗಳಿಂದ ಪೂರ್ತಿ ಆಡಿಯೋವಿನಲ್ಲಿ ನೀವು ಎಐನ ಮೂಲಕ ರಚಿಸಿದ ಧ್ವನಿಯನ್ನು ಕಾಣಬಹುದು. ನೀವು ಬೇಕಾದರೆ ನಿಮಗೆ ಸಂದೇಹವಿರುವ ಆಡಿಯೋ ಭಾಗವನ್ನು ಟ್ರಿಮ್ ಮಾಡಿ ಮತ್ತೊಮ್ಮೆ ನಿಖರವಾಗಿ ಪರೀಕ್ಷೆ ಮಾಡಬಹುದುʼ ಎಂದು ವರದಿಯಾಗಿರುವುದನ್ನು ನಾವು ಈ ವರದಿಯಲ್ಲಿ ನೋಡಬಹುದು. ವೈರಲ್ ಆದ ಸುಧಾಮೂರ್ತಿಯವರ ವಿಡಿಯೋವಿನಲ್ಲಿ ನಾವು "https://inirliff.com/" ಎಂಬ ಲಿಂಕನ್ನು ಸಹ ನೋಡಬಹುದು. ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ನಾರಾಯಣ ಮೂರ್ತಿರವರ ಚಿತ್ರದೊಂದಿಗೆ ʼA project that guarantees ₹2,000,000 income to Indian citizens who invest ₹21,000. Registration for the project will close on November 24thʼ ಎಂಬ ಶೀರ್ಷಿಕೆಯೊಂದಿಗಿರುವ ʼದಿ ಟೈಮ್ಸ್ ಆಫ್ ಇಂಡಿಯಾʼ ವರದಿಯೊಂದು ಪ್ರಕಟಿಸಿರುವ ವರದಿಯೊಂದು ಕಂಡುಬಂದಿತು. ವಾಸ್ತವಾಗಿ ನೋಡುವುದಾದರೆ ʼದಿ ಟೈಮ್ಸ್ ಆಫ್ ಇಂಡಿಯಾʼ ಈ ಸುದ್ದಿಗೆ ಸಂಬಂಧಿಸಿ ಯಾವುದೇ ವರದಿಯನ್ನೂ ಹಂಚಿಕೊಂಡಿಲ್ಲ. ಅಷ್ಟೇ ಅಲ್ಲ ಈ ಪುಟದಲ್ಲಿ ಕಾಣುವ ಟ್ಯಾಬ್ ಮೇಲೆ ಕ್ಲಿಕ್ ಮಾಡಿದರೆ, ಈ ಪುಟದಲ್ಲಿ ಕೊನೆಯಲ್ಲಿರುವ ರಿಜಿಸ್ಟ್ರೇಷನ್ ಪೋರ್ಟ್ಲ್ಗೆ ಕರೆದೊಯ್ಯಿತು. ನಾವು ಈ ಸುದ್ದಿಯ ಬಗ್ಗೆ ಮತ್ತಷ್ಟು ಸತ್ಯಾಂಶವನ್ನು ತಿಳಿಯಲು ʼwww.whois.comʼ ಎಂಬ ವೆಬ್ಸೈಟ್ಗೆ ವೈರಲ್ ಆದ ಯೂಆರ್ಎಲ್ನ್ನು ಪರೀಕ್ಷಿಸಲು ಪ್ರಯತ್ನಸಿದೆವು. ನಾವು ʼwhoisʼ ವೆಬ್ಸೈಟ್ನಲ್ಲಿ ವೈರಲ್ ಆದ ʼhttps://inirliff.com/ʼ ವೆಬ್ಸೈಟ್ನ್ನು ಪರಿಶೀಲಿಸಿದೆವು. ಪರಿಶೀಲನೆಯಲ್ಲಿ ಈ ವೆಬ್ಸೈಟ್ ನವಂಬರ್ 08,2024ರಂದು ನೋಂದಾಯಿಸಲಾಗಿದೆ ಹಾಗೆ ರಿಜಿಸ್ಟಾರ್ ́Namecheap, Incʼ ಎಂದು ನಮಗೆ ತಿಳಿಯಿತು. ನಾವು ಮತ್ತಷ್ಟು ನಿಜಾಂಶವನ್ನು ತಿಳಿಯಲು ವೈರಲ್ ಆದ ನಾರಾಯಣ ಮೂರ್ತಿಯವರ ವಿಡಿಯೋವಿನ ಕೀ ಫ್ರೇಮ್ನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದಾಗ ನಮಗೆ CNBC-TV18 ಯೂಟ್ಯೂಬ್ ಚಾನೆಲ್ನಲ್ಲಿ ʼCNBC TV18 Exclusive | Narayana Murthy On His 70-Hour Work Week Advice | N18V | CNBC TV18ʼ ಎಂಬ ಶೀರ್ಷಿಕೆಯೊಂದಿಗಿರುವ ವಿಡಿಯೋವನ್ನು ನಾವು ಕಾಣಬಹುದು ನಾವು https://inirliff.com/ ವೆಬ್ಸೈಟ್ನಲ್ಲಿ ಕಾಣುವ ನಾರಾಯಣ ಮೂರ್ತಿಯವರ ವಿಡಿಯೋವಿನಲ್ಲೂ ಸಹ ವೈರಲ್ ಆದ ವಿಡಿಯೋದಲ್ಲಿ ಸುಧಾ ಮೂರ್ತಿಯವರು ಹೇಳಿರುವ ವಿಷಯವನ್ನೇ ಪ್ರಸ್ತಾಪಿಸಿರುವುದನ್ನು ನಾವು ನೋಬಹುದು. ಹಾಗೆ ವಿಡಿಯೋವಿವಿಗೂ ಧ್ವನಿಗೂ ಹೋಂದಾಣಿಕೆಯಾಗದಿರುವುದನ್ನು ನಾವು ನೋಡಬಹುದು. ಹೀಗಾಗಿ ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ವಿಡಿಯೋ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ಸುಧಾಮೂರ್ತಿಯವರ ವಿಡಿಯೋವನ್ನು ಕೃತಕ ಬುದ್ದಿಮತ್ತೆ (ಎಐ) ಬಳಸಿ ಸೃಷ್ಟಿಸಲಾಗಿದೆ.
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 11 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software