About: http://data.cimple.eu/claim-review/46bc53292f98f4ceda59d15488d2e631ca25a115ecf7a14f23da0332     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ಜಲಾವೃತವಾಗಿರುವ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಜಾರುತ್ತಿರುವ ವಿಡಿಯೋ ಚೈನ್ನೈಗೆ ಸಂಬಂಧಿಸಿದಲ್ಲ ಜಲಾವೃತವಾಗಿರುವ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಜಾರುತ್ತಿರುವ ವಿಡಿಯೋ ಚೈನ್ನೈಗೆ ಸಂಬಂಧಿಸಿದಲ್ಲ Claim :ಚೆನ್ನೈನ ಮರಿನಾ ಬೀಚ್ನಲ್ಲಿ ಸುರಿದ ಭಾರಿ ಮಳೆಯಲ್ಲಿ ಒಬ್ಬ ವ್ಯಕ್ತಿ ಜಾರುತ್ತಿರುವ ದೃಶ್ಯ ಕಂಡುಬಂದಿದೆ Fact :ವೈರಲ್ ಆದ ವಿಡಿಯೋ ಪುಣೆಗೆ ಸಂಬಂಧಿಸಿದ್ದು, ಚೆನ್ನೈದಲ್ಲ ಬಂಗಾಳಕೊಲ್ಲಿಯ ನೈರುತ್ಯ ಭಾಗದಲ್ಲಿ ತೀವ್ರ ವಾಯುಭಾರ ಕುಸಿತದಿಂದಾಗಿ ʼಫೆಂಗಲ್ʼ ಚಂಡಮಾರುತ ರೂಪುಗೊಂಡಿದೆ. ಇದರಿಂದಾಗಿ ನೆರೆ ರಾಜ್ಯ ತಮಿಳುನಾಡಿನ ಹಲವು ಭಾಗಗಳಲ್ಲಿ ಧಾರಾಕಾರ ಮಳೆ ಹಾಗೂ ವೇಗಗೊಂಡ ಗಾಳಿಗೆ ತಮಿಳುನಾಡಿನ ಕರಾವಳಿ ಭಾಗದ ಜನ ತತ್ತರಿಸಿ ಹೋಗಿದ್ದಾರೆ. ತಮಿಳುನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ತಮಿಳುನಾಡು ಸೇರಿದಂತೆ ಕೆಲ ರಾಜ್ಯಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿತ್ತು. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಮಳೆಯಿಂದಾಗಿ ಮರೀನಾ ಬೀಚ್ಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗಿದೆ. ವೈರಲ್ ಆದ ವಿಡಿಯೋದಲ್ಲಿ ಮಳೆಯಿಂದಾಗಿ ಜಲಾವೃತಗೊಂಡಿರುವ ರಸ್ತೆಯಲ್ಲಿ ಒಬ್ಬ ವ್ಯಕ್ತಿ ನೀರಿನಲ್ಲಿ ಜಾರುತ್ತಿರುವುದನ್ನು ನೋಡಬಹುದು. ಡಿಸಂಬರ್ 02, 2024ರಂದು ʼರಮಾಪ್ರಿಯಾ ಸಂಪತ್ಕುಮಾರನ್ʼ ಎಂಬ ಎಕ್ಸ್ ಖಾತೆದಾರರು ತಮ್ಮ ಖಾತೆಯಲ್ಲಿ "#CycloneFengal. Vote for Freebies & Enjoy Boat ride on Road" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ "ಈ ಉಚಿತ ಸವಾರಿಗಾಗಿ ಮತವನ್ನು ನೀಡಿ. ಮತ್ತು ಈ ದೋಣಿ ವಿಹಾರವನ್ನು ಆನಂದಿಸಿʼ ಎಂದು ಬರೆದಿರುವುದನ್ನು ನೋಡಬಹುದು. ವೈರಲ್ ಆದ ವಿಡಿಯೋವಿನ್ನು ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. ಡಿಸಂಬರ್ 01, 2024ರಂದು ʼಕೆ ಅಶೋಕʼ ಎಂಬ ಎಕ್ಸ್ ಖಾತೆದಾರರು ತನ್ನ ಖಾತೆಯಲ್ಲಿ ʼசென்னையில் மழைநீர் எங்கும் தேங்கவில்லை, உடனுக்குடன் வடிந்து வருகிறது - முதல்வர் ʼ @mkstalin" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡು ಎಂಕೆ ಸ್ಟಾಲಿನ್ರನ್ನು ಟ್ಯಾಗ್ ಮಾಡಿರುವುದನ್ನು ನಾವಿಲ್ಲಿ ಕಾಣಬಹುದು. ಮತ್ತಷ್ಟು ವಿಡಿಯೋಗಳನ್ನು ಇಲ್ಲಿ, ಇಲ್ಲಿ ನೋಡಬಹುದು ಫ್ಯಾಕ್ಟ್ಚೆಕ್ ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್ ಆದ ವಿಡಿಯೋ ಪುಣೆಗೆ ಸಂಬಂಧಿಸಿದ್ದು, ಚೆನ್ನೈದಲ್ಲ. ನಾವು ವೈರಲ್ ಆದ ವಿಡಿಯೋವಿನಲ್ಲಿರುವ ಸತ್ಯಾಂಶವನ್ನು ತಿಳಿಯಲು ನಾವು ವಿಡಿಯೋವಿನ ಕೆಲವು ಪ್ರಮುಖ ಫ್ರೇಮ್ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಹುಡುಕಾಟದಲ್ಲಿ ನಮಗೆ ಜೂನ್ 8, 2024ರಂದು ಇನ್ಸ್ಟಾಗ್ರಾಮ್ ಖಾತೆದಾರರರೊಬ್ಬರು ʼyarwadaʼ ಎಂಬ ಶೀರ್ಷಿಕೆಯನ್ನೀಡಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಯೆರವಾಡ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಒಂದು ಪ್ರದೇಶ. ಇರದಲ್ಲೇ ಸಾಭೀತಾಗಿದ್ದೇನೆಂದರೆ, ಫೆಂಗಲ್ ಚಂಡಮಾರುತ ಅಪ್ಪಳಿಸುವ ಮುನ್ನವೇ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಜೂನ್ 7, 2024ರಂದು ʼಉರ್ಮಿʼ ಎಂಬ ಎಕ್ಸ್ ಖಾತೆದಾರರು ವೈರಲ್ ಆಗಿರುವ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ನೋಡಬಹುದು. Pune people got no chill? Naah, they got all the chul. #PuneRainsʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು. ʼಪುನೆಕರ್ ನ್ಯೂಸ್ʼ ಎಂಬ ಎಕ್ಸ್ ಖಾತೆದಾರ ʼA video of a young man from Pune is going viral, showing him floating in rain-flooded water near Golf Club Chowk in Yerwadaʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದರು. ʼಟಿವಿ1 ಇಂಡಿಯಾʼ ಯೂಟ್ಯೂಬ್ ಖಾತೆಯಲ್ಲಿ ʼpune man surfs on flooded road after Heavy rainʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು. ನಾವು ಮತ್ತಷ್ಟು ಮಾಹಿತಿಯನ್ನು ಕಲೆಹಾಕಲು ನಾವು ವಿಡಿಯೋಗೆ ಸಂಬಂಧಿಸಿದ ಕೆಲವು ಕೀವರ್ಡ್ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಜೂನ್ 08, 2024ರಂದು ʼAladdin of Pune: Man floats on mattress along waterlogged road, video goes viralʼ ಎಂಬ ಶೀರ್ಷಿಕೆಯೊಂದಿಗಿರುವ ವರದಿಯೊಂದು ಕಂಡಬಂದಿತು. ವರದಿಯಲ್ಲಿ ʼ ಪುಣೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹ ಮತ್ತು ಅವ್ಯವಸ್ಥೆಯ ನಡುವೆ ವಿಡಿಯೋವೊಂದು ವೈರಲ್ ಆಗಿದೆ. ಎಕ್ಸ್ನಲ್ಲಿ ವೈರಲ್ ಆಗಿರುವ ವೀಡಿಯೊವಿನಲ್ಲಿ, ನಗರದ ಜಲಾವೃತ ರಸ್ತೆಯೊಂದರಲ್ಲಿ ವ್ಯಕ್ತಿಯೊಬ್ಬರು ಹಾಸಿಗೆಯ ಮೇಲೆ ತೇಲುತ್ತಿರುವುದನ್ನು ನೋಡಬಹುದು. ಹಸಿರು ಟೀ ಶರ್ಟ್ ಮತ್ತು ಶಾರ್ಟ್ಸ್ ಧರಿಸಿರುವ ವ್ಯಕ್ತಿಯೊಬ್ಬ, ಆರಾಮವಾಗಿ ಹಾಸಿಗೆಯ ಮೇಲೆ ಕಾಲು ಚಾಚಿಕೊಂಡು ತೇಲುತ್ತಾ ಹೋಗುವುದನ್ನು ನಾವು ನೋಡಬಹುದು ಎಂದು ವರದಿ ಮಾಡಿದ್ದಾರೆ. ವೈರಲ್ ಆದ ವಿಡಿಯೋ ಮತ್ತು ಜೂನ್ನಲ್ಲಿ ಹಂಚಿಕೊಂಡಿರುವ ವಿಡಿಯೋವನ್ನು ನಾವು ಸೂಕ್ಷ್ಮವಾಗಿ ಗಮನಿಸಿದರೆ, ಎರಡೂ ವಿಡಿಯೋದಲ್ಲಿ ನಾವು ʼDeutsche Bank Groupʼ ಎಂಬ ಕಟ್ಟಡವನ್ನು ನಾವು ನೋಡಬಹುದು. ನಾವು ಗೂಗಲ್ ಮ್ಯಾಪ್ನಲ್ಲಿ ಪೂಣೆಯಲ್ಲಿರು ʼDeutsche Bank Groupʼನ್ನು ಹುಡುಕಿದೆವು. ನಮಗೆ ಗೂಗಲ್ನಲ್ಲಿ ಕಾಣುವ 360 ಡಿಗ್ರಿ ವ್ಯೂನಲ್ಲಿ ವೈರಲ್ ಆದ ವಿಡಿಯೋದಲ್ಲಿ ಕಾಣುವ ರಸ್ತೆ ಮತ್ತು ಕಂಪನಿಯ ಸ್ಟ್ರೀಟ್ ವ್ಯೂನಲ್ಲಿ ನಾವು ನೋಡಬಹುದು. ವೈರಲ್ ಆದ ಈ ಸುದ್ದಿಗೆ ಸಂಬಂಧಿಸಿ ತಮಿಳುನಾಡಿನ ಫ್ಯಾಕ್ಟ್ಚೆಕ್ ಟೀಂ ಸತ್ಯ ಪರಿಶೀಲನೆ ಮಾಡಿ ತನ್ನ ಎಕ್ಸ್ ಖಾತೆಯಲ್ಲಿ ವೈರಲ್ ಆದ ವಿಡಿಯೋ ಪುಣೆಗೆ ಸಂಬಂಧಿಸಿದ್ದು. ಈ ವಿಡಿಯೋವನ್ನು ಚೆನ್ನೈಗೆ ಸಂಬಂಧಿಸಿದ್ದು ಎಂದು ತಪ್ಪು ಸುದ್ದಿಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ ಎಂದು ಪೊಸ್ಟ್ ಮಾಡಿರುವುದನ್ನು ನಾವಿಲ್ಲಿ ನೋಡಬಹುದು. ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ವಿಡಿಯೋ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್ ಆದ ವಿಡಿಯೋ ಪುಣೆಗೆ ಸಂಬಂಧಿಸಿದ್ದು, ಚೆನ್ನೈದಲ್ಲ. ఇప్పుడు Desh Telugu Keyboard యాప్ సహాయంతో మీ ప్రియమైన వారికి తెలుగులో సులభంగా మెసేజ్ చెయ్యండి. Download The App Now
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 11 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software