About: http://data.cimple.eu/claim-review/4bdf0db5657d228d99ed0f29a951a0721950b2db265b03515f6eed83     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ಭಾರತೀಯ ಪುರಾತತ್ವಜ್ಞರು ಪುರಾತನ ಅಂತರಿಕ್ಷಾ ನೌಕೆಯನ್ನು ಕಂಡುಹಿಡಿದಿದ್ದಾರೆಂದು ಎಐ ಚಿತ್ರ ಹಂಚಿಕೆ ಭಾರತೀಯ ಪುರಾತತ್ವಜ್ಞರು ಪುರಾತನ ಅಂತರಿಕ್ಷಾ ನೌಕೆಯನ್ನು ಕಂಡುಹಿಡಿದಿದ್ದಾರೆಂದು ಎಐ ಚಿತ್ರ ಹಂಚಿಕೆ Claim : ಪುರಾತತ್ವಜ್ಞರು ಭಾರತದ ಪುರಾತನ ಅಂತರಿಕ್ಷ ನೌಕೆಗಳನ್ನು ಕಂಡು ಹಿಡಿದಿದ್ದಾರೆFact : ಎಐ ಬಳಸಿ ರಚಿಸಿದ ಚಿತ್ರವದುಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರತೀಯ ಪುರಾತತ್ವಜ್ಞರು ಅಂತರಿಕ್ಷಾ ನೌಕೆಯೊಂದನ್ನು ಕಂಡುಹಿಡಿದಿದ್ದಾರೆ ಎಂಬ ಸುದ್ದಿಯೊಂದು ಇಂಟರ್ನೆಟ್ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಫೋಟೋವಿಗೆ ಶೀರ್ಷಿಕೆಯಾಗಿ, ಭಾರತೀಯ ಪುರಾತತ್ವಜ್ಞರು ಪ್ರಾಚೀನ ಕಾಲದ ನೌಕೆಯೊಂದನ್ನು ಭಾರತದಲ್ಲಿ ಕಂಡುಹಿಡಿದಿದ್ದಾರೆ. ಇದೀಗ ಈ ಸುದ್ದಿಯನ್ನು ಜಗತ್ತಿನಾದ್ಯಂತ ವ್ಯಾಪಕವಾಗಿ ಹಂಚಕೊಳ್ಳಲಾಗುತ್ತಿದೆ. ಇದು ಮಾನವ ಇತಿಹಾಸ ಮತ್ತು ಅದರ ಪ್ರಾಚೀನ ತಂತ್ರಜ್ಞಾನಗಳ ಕುರಿತು ಹೊಸದೊಂದು ಅಧ್ಯಯನಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ಆದ ಫೋಟೋದಲ್ಲಿ ಪುರಾತನ ಕಾಲದ ಅಂತರಿಕ್ಷಾ ನೌಕೆಯಂತೆ ಕಾಣುವ ಹಲವು ವಸ್ತುಗಳು ಕಾಣಿಸುತ್ತದೆ. ಭಾರತದ ಪುರಾತನ ನಾಗರಿಕತೆಯು ಉತ್ತುಂಗದ ಸ್ಥಿತಿಯಲ್ಲಿ ಇತ್ತು ಎಂಬುದಕ್ಕೆ ಮತ್ತು ಅಂದು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಭಾರತೀಯರು ಬಳಸುತ್ತಿದ್ದರು ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂಬ ಶೀರ್ಷಿಕೆಯೊಂದಿಗೆ ಚಿತ್ರಗಳನ್ನು ಹಂಚಿಕೊಳ್ಳಲಾಗುತ್ತಿದೆ. ʼಭರತ್ ದʼ ಎಂಬ ಎಕ್ಸ್ ಖಾತೆದಾರ ತನ್ನ ಖಾತೆಯಲ್ಲಿ Breaking News! Monumental Discovery in Antarctica Reveals Ancient Mysteries That Leave Us Speechless!!! Indian archaeologists have unearthed something incredible: ancient spaceships on Earth. Recently, a piece of information appeared on the Internet ಎಂಬ ಶೀರ್ಷಿಕೆಯೊಂದಿಗೆ ನೌಕೆಯ ಚಿತ್ರಗಳನ್ನು ಹಂಚಿಕೊಂಡಿರುವುದನನ್ನು ನಾವಿಲ್ಲಿ ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಬ್ರೇಕಿಂಗ್ ನ್ಯೂಸ್! ಅಂಟಾರ್ಕ್ಟಿಕಾದಲ್ಲಿ ಸ್ಮಾರಕ ಆವಿಷ್ಕಾರವು ನಮ್ಮನ್ನು ಮೂಕರನ್ನಾಗಿಸುವ ಪ್ರಾಚೀನ ರಹಸ್ಯಗಳನ್ನು ಬಹಿರಂಗಪಡಿಸುತ್ತದೆ!!! ಭಾರತೀಯ ಪುರಾತತ್ತ್ವಜ್ಞರು ಭೂಮಿಯ ಮೇಲಿನ ಪ್ರಾಚೀನ ಬಾಹ್ಯಾಕಾಶ ನೌಕೆಗಳನ್ನು ಕಂಡು ಹಿಡಿದಿದ್ದಾರೆ. ಇತ್ತೀಚೆಗೆ, ಇದೀಗ ಇಂಟರ್ನೆಟ್ನಲ್ಲಿ ಒಂದು ಮಾಹಿತಿಯನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆʼ ಎಂಬ ಶೀರ್ಷಿಕೆಯೊಂದಿಗೆ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ ವೈರಲ್ ಆದ ಪೋಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು ʼಚೆನ್ನೈ ಡ್ರೀಮ್ಸ್ʼ ಎಂಬ ಯೂಟ್ಯೂಬ್ ಖಾತೆಯಲ್ಲಿ ʼAncient SpaceShip Discovered in Indiaʼ ಎಂಬ ಶಿರ್ಷಿಕೆಯೊಂದಿಗೆ ವಿಡಿಯೋವೊಂದನ್ನು ಹಂಚಿಕೊಂದಿದ್ದಾರೆ ರಾಜೇಶ್ ದಚ್ಚಪಲ್ಲಿ ಎಂಬ ಫೇಸ್ಬುಕ್ ಖಾತೆದಾರ ತನ್ನ ಖಾತೆಯಲ್ಲಿ ʼబ్రేకింగ్ న్యూస్! అంటార్కిటికాలోని మాన్యుమెంటల్ డిస్కవరీ మనల్ని మాట్లాడకుండా చేసే పురాతన రహస్యాలను వెల్లడించింది!!! భారతీయ పురావస్తు శాస్త్రవేత్తలు నమ్మశక్యం కానిదాన్ని కనుగొన్నారు: భూమిపై పురాతన అంతరిక్ష నౌకలు. ఇటీవల, ఇంటర్నెట్లో ఒక సమాచారం కనిపించింది, ఇది వినియోగదారులు మరియు నిపుణుల మధ్య తీవ్రమైన చర్చలు మరియు చర్చలకు దారితీసింది. ఇది భారతదేశంలోని ఒక ఉత్తేజకరమైన ఆవిష్కరణ యొక్క కథ, ఇది మానవ చరిత్ర మరియు దాని పురాతన సాంకేతికతలపై అవగాహనను విప్లవాత్మకంగా మార్చగలదని పేర్కొన్నారు. భారతీయ గ్రామంలో కనుగొనబడిన "పురాతనమైన భూలోక నౌకలు" చూపబడేటటువంటి మైకము కలిగించే దృష్టాంతాల శ్రేణితో పాటు కథనం ఉంది ಎಂಬ ತೆಲುಗಿನಲ್ಲಿ ಶೀರ್ಷಿಕೆಯೊಂದಿಗೆ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಮತ್ತಷ್ಟು ಕ್ಲೇಮ್ಗಳನ್ನು ನೀವಿಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು ಫ್ಯಾಕ್ಟ್ಚೆಕ್ ವೈರಲ್ ಆದ ಫೊಟೋಗಳು ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ವೈರಲ್ ಆದ ಚಿತ್ರವನ್ನು ಎಐ ಉಳಸಿ ರಚಿಸಲಾಗಿದೆ. ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಉಡಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಯಾವುದೇ ಫಲಿತಾಂಶ ಸಿಗಲಿಲ್ಲ. ನಂತರ ನಾವು ವೈರಲ್ ಸುದ್ದಿಗೆ ಸಂಬಂಧಿಸಿದ ಕೆಲವು ಪ್ರಮುಖ ಕೀವರ್ಡ್ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಅಲ್ಲಿಯೂ ನಮಗೆ ಯಾವುದೇ ಅಧಿಕೃತ ಮಾಹಿತಿ ಸಿಗಲಿಲ್ಲ. ಒಂದು ವೇಳೆ ನಿಜವಾಗಿ ಭಾರತೀಯ ಪುರಾತತ್ವಜ್ಞರಿಗೆ ಅಂತರಿಕ್ಷಾ ನೌಕೆ ಸಿಕ್ಕಿದ್ದರೆ ಆ ಸುದ್ದಿ ಖಂಡಿತಾಗಿ ಮಾಧ್ಯಮಗಳಲ್ಲಿ ವರದಿಯಾಗಿರುವುದು. ಆದರೆ ನಮಗೆ ಯಾವುದೇ ವರದಿಗಳು ಸಿಗಲಿಲ್ಲ. ಹೀಗಾಗಿ ನಮಗೆ ಈ ಚಿತ್ರವನ್ನು ಡಿಜಿಟಲ್ ಆಗಿ ಎಐ ಅನ್ನು ಬಳಸಿಕೊಂಡು ರಚಿಸಿರಬೇಕು ಎಂದು ಕೆಲವು ಪ್ರಮುಖ ಎಐ ಡಿಟೆಕ್ಟರ್ ಟೂಲ್ಗಳ ಸಹಾಯದಿಂದ ಹುಡುಕಾಟ ನಡೆಸಿದೆವು. ವೈರಲ್ ಫೋಟೋಗಳನ್ನು ಬಳಸಿಕೊಂಡು ಎಐ ಡಿಟೆಕ್ಟರ್ ಟೂಲ್ ಆದ ʼಸೈಟ್ ಇಂಜಿನ್ʼ ಇಮೇಜ್ ಡಿಟೆಕ್ಟರ್ನಲ್ಲಿ ಫೋಟೋವನ್ನು ಅಪ್ಲೋಡ್ ಮಾಡಿದೆವು. ಈ ವೇಳೆ ಫಲಿತಾಂಶದಲ್ಲಿ ವೈರಲ್ ಫೋಟೋ ಶೇಕಡ 99.00% ಈ ಚಿತ್ರವನ್ನು ಎಐನ್ನು ಬಳಸಿ ನಿರ್ಮಿಸಲಾಗಿದೆ ಎಂಬ ಸಾಭಿತಾಯಿತು. ನಾವು ಚಿತ್ರವನ್ನು ನಾವು ಚಿತ್ರವನ್ನು ಎಐ ಇಮೇಜ್ ಡಿಟೆಕ್ಷನ್ ಟೂಲ್ ʼಹೈವ್ ಮಾಡರೇಶನ್ʼ ನಲ್ಲಿ ಫೊಟೋವನ್ನು ಪರಿಶೀಲಿಸಿದೆವು. ಪರಿಶೀಲನೆಯಲ್ಲಿ ನಮಗೆ ಈ ಚಿತ್ರ 90.9 ಪ್ರತಿಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ತಿಳಿದುಬಂದಿತು. ಮತ್ತೋಂದು ಎಐ ಇಮೇಜ್ ಡಿಟೆಕ್ಷನ್ ಟೂಲ್ ಆದ ʼWasitai.comʼದಲ್ಲಿ ಪರಿಶೀಲಿಸಿದೆವು. ನಮಗೆ ಈ ಫೋಟೋವು 100 ಪ್ರತಿಶತ AI- ರಚಿತವಾಗಿದೆ ಎಂದು ಕಂಡುಬಂದಿದೆ ಹಾಗೆ ಮತ್ತಷ್ಟು ಹುಡುಕಾಟದಲ್ಲಿ ನಮಗೆ, ಆನ್ಲೈನ್ಪತಿ ಎಂಬ ವೆಬ್ಸೈಟ್ನಲ್ಲಿ Shocking Antarctic Discovery: Ancient Mysteries Unveiled, Shattering Our Understanding of Human History! ಎಂಬ ಹೆಡ್ಲೈನ್ನೊಂದಿಗೆ ವರದಿ ಮಾಡಿರುವುದನ್ನು ನಾವು ಕಾಣಬಹುದು. ಈ ವೆಬ್ಸೈಟ್ನಲ್ಲಿ ಪಿತೂರಿ ಸಿದ್ಧಾಂತ ಆಧಾರಿತ ಲೇಖನಗಳನ್ನು ಪ್ರಕಟಿಸುತ್ತದೆ. ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ವೈರಲ್ ಆದ ಚಿತ್ರವನ್ನು ಎಐ ಉಳಸಿ ರಚಿಸಲಾಗಿದೆ ಎಂದು AI ಫೋಟೋಗಳನ್ನು ಪತ್ತೆ ಹಚ್ಚುವ ವೆಬ್ಸೈಟ್ನಿಂದ ದೃಢಪಟ್ಟಿದೆ.
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 11 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software