About: http://data.cimple.eu/claim-review/54ffadb1b10995eb0e83d6ceaf76ec7e2c2f961b8cc359b006b00d8c     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ಫುಡ್ ಡೆಲಿವರಿ ಮಾಡುವ ಯುವತಿಯ ಮೇಲೆ ಅತ್ಯಾಚಾರ ಎಂಬ ಶೀರ್ಷಿಕೆಯೊಂದಿಗೆ ಸ್ಕ್ರಿಪ್ಟ್ಡ್ ವಿಡಿಯೋ ವೈರಲ್ ಫುಡ್ ಡೆಲಿವರಿ ಮಾಡುವ ಯುವತಿಯ ಮೇಲೆ ಅತ್ಯಾಚಾರ ಎಂಬ ಶೀರ್ಷಿಕೆಯೊಂದಿಗೆ ಸ್ಕ್ರಿಪ್ಟ್ಡ್ ವಿಡಿಯೋ ವೈರಲ್ Claim :ಫುಡ್ ಡೆಲಿವರಿ ಮಾಡುವ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾರೆ Fact :ವೀಡಿಯೋದಲ್ಲಿ ತೋರಿಸಿರುವ ದೃಶ್ಯ ವಾಸ್ತವದಲ್ಲಿ ನಡೆದಿರುವ ಘಟನೆಯಲ್ಲ. ಇದು ಒಂದು ಸ್ಕ್ರಿಪ್ಟ್ ಮಾಡಿರುವ ವೀಡಿಯೊ ಯಾವುದೇ ದೇಶವಾಗಲಿ ಅಥವಾ ಯಾವುದೇ ಜಾತಿ, ಧರ್ಮ, ಪಂಗಡಗಳಾಗಲಿ, ಅಲ್ಲಿ ಮೊದಲು ದೌರ್ಜನ್ಯ ಅನುಭವಿಸುವವರು ಹೆಣ್ಮಕ್ಕಳೇ ಆಗಿರುತ್ತಾರೆ ಅನ್ನೋದು ಕಟುಸತ್ಯ. ಸಮಾಜದಲ್ಲಿ ಮಹಿಳೆಯರ ಸುರಕ್ಷತೆ ಕೇಂದ್ರ ಹಾಗೂ ರಾಜ್ಯಮಟ್ಟದಲ್ಲಿ ಸಾಕಷ್ಟು ಕಾನೂನು, ಯೋಜನೆಗಳಿದ್ದರೂ ಸಹ ಭಾರತದಲ್ಲಿಯೂ ಸಹ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಕಡಿಮೆಯೇನಿಲ್ಲ. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲಿ ಯುವತಿಯೊಬ್ಬಳು ಫುಡ್ ಡೆಲಿವರಿ ಆರ್ಡರ್ ಕೊಡಲು ಹೋದಾಗ ಅಲ್ಲಿರುವ ಕೆಲವು ಪುರುಷರು ಅತ್ಯಾಚಾರವೆಸಗುತ್ತಿರುವುದನ್ನು ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಶೀರ್ಷಿಕೆಯೊಂದಿಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ವಿಡಿಯೋವನ್ನು ನೋಡುವುದಾದರೆ ಆನ್ಲೈನ್ನಲ್ಲಿ ಫುಡ್ ಡೆಲಿವರಿ ಮಾಡುವ ಯುವತಿಯು ಆರ್ಡರ್ನ್ನು ಕೊಡಲು ಬಂದಾಗ, ಬಿಯರ್ ಬಾಟಲಿಯನ್ನು ಹಿಡಿದಿರುವ ವ್ಯಕ್ತಿ ಬಾಗಿಲು ತೆರೆದು, ಆರ್ಡರ್ ತೆಗೆದುಕೊಂಡ ಹಣ ಕೊಡಲು ನಿರಾಕರಿಸುತ್ತಾನೆ, ನಂತರ ಯುವತಿ ಹಣ ಕೊಡುವಂತೆ ಬೇಡಿಕೊಳ್ಳುತ್ತಾರೆ. ಆಗ ಮತ್ತೊಬ್ಬ ವ್ಯಕ್ತಿ ಹೊರ ಬಂದು ಯುವತಿಯನ್ನು ಒಳಗೆ ಎಳೆದುಕೊಂಡು ಹೋಗಿ ಬಾಗಿಲು ಮುಚ್ಚಿಕೊಳ್ಳುತ್ತಾನೆ. ಸ್ವಲ್ಪ ಸಮಯದ ನಂತರ ಆ ಯುವತಿಯನ್ನು ಬಾಗಿಲು ತೆಗೆದು ಮನೆಯಿಂದ ಹೊರಗೆ ತಳ್ಳುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿರುವುದನ್ನು ನೋಡಬಹುದು. ಜನವರಿ 06, 2025ರಂದು ʼಸೀಮಾ ಲಿಂಕಾʼ ಎಂಬ ಫೇಸ್ಬುಕ್ ಖಾತೆದಾರರೊಬ್ಬರು ವೈರಲ್ ಆದ ವಿಡಿಯೋವನ್ನು ಹಂಚಿಕೊಂಡು ʼPlease Donʼt do thisʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. ಮತ್ತೊಬ್ಬ ಇನ್ಸ್ಟಾಗ್ರಾಮ್ ಖಾತೆದಾರರೊಬ್ಬರು ವಿಡಿಯೋವನ್ನು ಹಂಚಿಕೊಂಡು ವಿಡಿಯೋಗೆ ಕ್ಯಾಪ್ಷನ್ ಆಗಿ ʼDelivery girls ko rape kiya gaya on camera recording viral video Adivasi post 20/12/2024ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼ20/12/2024 ಡೆಲಿವರಿ ಹುಡುಗಿಯ ಮೇಲೆ ಅತ್ಯಾಚಾರವೆಸಗಿರುವುದು ಕ್ಯಾಮರಾದಲ್ಲಿ ವೈರಲ್ ಆಗಿದೆ. ಮತ್ತಷ್ಟು ವೈರಲ್ ಆದ ವಿಡಿಯೋವನ್ನು ನೀವಿಲ್ಲಿ, ಇಲ್ಲಿ ನೋಡಬಹುದು ಫ್ಯಾಕ್ಟ್ಚೆಕ್ ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ವೀಡಿಯೋದಲ್ಲಿ ತೋರಿಸಿರುವ ದೃಶ್ಯ ವಾಸ್ತವದಲ್ಲಿ ನಡೆದಿರುವ ಘಟನೆಯಲ್ಲ. ಇದು ಒಂದು ಸ್ಕ್ರಿಪ್ಟ್ ಮಾಡಿರುವ ವೀಡಿಯೊ. ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ನಾವು ವಿಡಿಯೋವಿನ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡಕಾಟದಲ್ಲಿ ನಮಗೆ, ಜನವರಿ 02, 2025ರಂದು ʼ3D Eyeʼ ಯೂಟ್ಯೂಬ್ ಚಾನೆಲ್ನಲ್ಲಿ ವೈರಲ್ ಆದ ವಿಡಿಯೋವಿರುವುದನ್ನು ನಾವು ಕಂಡುಕೊಂಡೆವು. ವಿಡಿಯೋವಿಗೆ ಶೀರ್ಷಿಕೆಯಾಗಿ ʼThis Was unexpected..! See What Happened When A Delivery Person Meet Wrong Addressʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು. ಈ ವಿಡಿಯೋವಿಗೆ ವಿವರಣೆಯಾಗಿ Disclaimer: Thank you for watching! Please note that this page features scripted dramas, parodies, and awareness videos. These short films are created for entertainment and educational purposes only. All characters and situations depicted in the videos are fictional and intended to raise awareness, entertain, and educateʼ ಎಂದು ಕ್ಯಾಪ್ಷನ್ನ್ನೀಡಿ ಪೋಸ್ಟ್ ಮಾಡಿರುವುದನ್ನು ನಾವು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼವಿಡಿಯೋವನ್ನು ನೋಡಿದ್ದಕ್ಕಾಗಿ ಧನ್ಯವಾದಗಳು! ದಯವಿಟ್ಟು ಗಮನಿಸಿ ಈ ಚಾನಲ್ನಲ್ಲಿ ಕಾಣುವ ದೃಶ್ಯಗಳು ಜನರಿಗೆ ಜಾಗೃತಿ ಮೂಡಿಸಲು ವಿಭಿನ್ನ ಸನ್ನಿವೇಶಗಳನ್ನು ಸ್ಕ್ರಿಪ್ಟ್ ಮಾಡಲಾಗಿದೆ. ಈ ಚಾನಲ್ ಸಾಮಾಜಿಕ ಜಾಗೃತಿ ವೀಡಿಯೊಗಳನ್ನು ಮತ್ತು ಕಿರುಚಿತ್ರಗಳನ್ನು ಕೇವಲ ಮನರಂಜನೆಯ ಉದ್ದೇಶಕ್ಕಾಗಿ ಮಾತ್ರ ಮಾಡಲಾಗುತ್ತಿದೆʼ ಎಂದು ಕ್ಯಾಪ್ಷನ್ನ್ನು ನೀಡಿಲ್ಲಿ ನೋಡಬಹುದು. ಇದಿಂದ ಸಾಭೀತಾಗಿರುವುದೇನೆಂದರೆ ವೈರಲ್ ಆದ ವಿಡಿಯೋ ಸ್ಕ್ರಿಪ್ಟ್ಡ್ ಎಂದು ಸ್ಪಷ್ಟವಾಗಿದೆ. ನಾವು ಈ ವಿಡಿಯೋವನ್ನು ಸುಳಿವಾಗಿ ತೆಗೆದುಕೊಂಡು ಈ ಚಾನೆಲ್ನ ಮುಖ ಪುಟದಲ್ಲಿ ಹಂಚಿಕೊಂಡಿರುವ ವಿಡಿಯೋಗಳನ್ನು ಗಮನಿಸಿದೆವು. ಹಾಗೆ ಚಾನೆಲ್ನ ಬಯೋವಿನಲ್ಲಿಯೂ ಸಹ ಕೇವಲ ಮನರಂಜನೆಯ ಉದ್ದೇಶಕ್ಕಾಗಿ ಮಾತ್ರ ಮಾಡಲಾಗುತ್ತಿದೆ ಎಂದು ಬರೆಯಲಾಗಿದೆ. ಹಾಗೆ ಈ ಚಾನೆಲ್ನಲ್ಲಿ 2.9 ಮಿಲಿಯನ್ಗಿಂತಲೂ ಹೆಚ್ಚು ಚಂದಾದಾರರಿದ್ದಾರೆ. ಈ ಚಾನೆಲ್ನಲ್ಲಿ ಇದೇ ರೀತಿಯ ಸಾಕಷ್ಟು ಸ್ಕ್ರಿಪ್ಟ್ ಮಾಡಲಾದ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವುದನ್ನು ನಾವು ನೋಡಬಹುದು. ವಿಡಿಯೋ ಕೊನೆಯಲ್ಲಿ ಡಿಸ್ಕೈಮರ್ನ್ನು ನಾವು ನೋಡಬಹುದು ಇದೇ ಚಾನೆಲ್ನಲ್ಲಿ ಹಂಚಿಕೊಂಡಿರುವ ಸಾಕಷ್ಟು ವಿಡಿಯೋಗಳನ್ನು ಫ್ಯಾಕ್ಟ್ಚೆಕ್ ವೆಬ್ಸೈಟ್ ಆದ ʼಫ್ಯಾಕ್ಟ್ಲೀʼ ಎಂಬ ವೆಬ್ಸೈಟ್ನಲ್ಲಿ ಇಲ್ಲಿ, ಇಲ್ಲಿ ಇಲ್ಲಿ ನೋಡಬಹುದು. ತಪ್ಪು ಮಾಹಿತಿಯಿಂದ ಪ್ರಚಾರ ಮಾಡಲಾಗಿರುವ ವಿಡಿಯೋಗಳ ಫ್ಯಾಕ್ಟ್ಚೆಕ್ನನ್ನು ನೋಡಬಹುದು ಇದರಿಂದ ಸಾಭೀತಾಗಿರುವುದೇನೆಂದರೆ, ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ವೀಡಿಯೋದಲ್ಲಿ ತೋರಿಸಿರುವ ದೃಶ್ಯ ವಾಸ್ತವದಲ್ಲಿ ನಡೆದಿರುವ ಘಟನೆಯಲ್ಲ. ಇದು ಒಂದು ಸ್ಕ್ರಿಪ್ಟ್ ಮಾಡಿರುವ ವೀಡಿಯೊ.
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 11 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software