About: http://data.cimple.eu/claim-review/5bf8422bbd31c43d7e4a4e250cae8f2421a8aa439b62e7eef5c461ec     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • Authors Claim UPI ವಹಿವಾಟಿಗೂ ಸುಂಕ ವಿಧಿಸಲಾಗಿದೆ Fact ಏಪ್ರಿಲ್ 1 ರಿಂದ, ಜನಸಾಮಾನ್ಯರು 2000 ರೂ.ಗಿಂತ ಹೆಚ್ಚು ಮೊತ್ತದ ಯುಪಿಐ ವಹಿವಾಟಿಗೆ ಮಾಡಲು ಶೇಕಡಾ 1.1 ರಷ್ಟು ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಹೊಸದಾಗಿ ವಿಧಿಸಿದ್ದು ಇಂಟರ್ ಚೇಂಜ್ ಶುಲ್ಕವಾಗಿದ್ದು ಪಾವತಿ ಸೇವಾ ಪೂರೈಕೆದಾರರು ಬ್ಯಾಂಕ್ಗಳಂತಹ ವ್ಯಾಲೆಟ್ ವಿತರಕರಿಗೆ ಪಾವತಿಸುವ ಶುಲ್ಕವಾಗಿದೆ. ಯುಪಿಐ ವಹಿವಾಟಿಗೂ ಸುಂಕ ವಿಧಿಸಲಾಗುತ್ತಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಕುರಿತಂತೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಕರ್ನಾಟಕದ ಕ್ಲೇಮ್ ಹೀಗಿದೆ. “ಡಿಜಿಟಲ್ ಇಂಡಿಯಾ, ಕ್ಯಾಶ್ ಲೆಸ್ ಇಂಡಿಯಾ ಎಂಬ ಘೋಷವಾಕ್ಯಗಳ ಹಿಂದೆ ಜನರನ್ನು ದೋಚುವ ಹುನ್ನಾರವಿರುವುದು ಈಗ ಬೆಳಕಿಗೆ ಬರುತ್ತಿದೆ. UPI ವಹಿವಾಟಿಗೂ ಸುಂಕ ವಿಧಿಸಿ ಜನಸಾಮಾನ್ಯರನ್ನು ಪ್ರತಿ ಹಂತದಲ್ಲೂ ಸುಲಿಗೆ ಮಾಡುವ ಬಿಜೆಪಿ ಚಂಬಲ್ ಕಣಿವೆಯ ಡಕಾಯಿತರಿಗಿಂತ ಕ್ರೂರಿ. ಮೋದಿ ಹಾಕಿಕೊಂಡಿರುವ ಗುರಿ – “ಕ್ಯಾಶ್ ಲೆಸ್ ಇಂಡಿಯನ್ಸ್” ಮಾಡುವುದು!” ಎಂದಿದೆ. ಇದೇ ರೀತಿ ಟ್ವಿಟರ್ನಲ್ಲೂ ಕ್ಲೇಮ್ ಕಂಡುಬಂದಿದ್ದು ಅದು ಇಲ್ಲಿದೆ . ಇಂದಿನ ಯುಗದಲ್ಲಿ, ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (UPI) ಸಾಮಾನ್ಯ ಜನರಿಗೆ ಪಾವತಿ ಮಾಡುವ ಸರಳ ಸಾಧನವಾಗಿದೆ. ಇದರ ಅಡಿಯಲ್ಲಿ, ಯಾವುದೇ ವ್ಯಕ್ತಿಯು ಹಣವನ್ನು ವರ್ಗಾಯಿಸುವ ಸೌಲಭ್ಯವನ್ನು ಪಡೆಯುತ್ತಾನೆ. ಇದಕ್ಕಾಗಿ, ನೀವು ಆ ವ್ಯಕ್ತಿಯ ಫೋನ್ ಸಂಖ್ಯೆಯನ್ನು ತಿಳಿದುಕೊಳ್ಳಬೇಕು. ಮಾಧ್ಯಮ ವರದಿಗಳ ಪ್ರಕಾರ, ಯುಪಿಐ ವಹಿವಾಟು ಕಳೆದ ಒಂದು ವರ್ಷದಲ್ಲಿ ಶೇಕಡಾ 50 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ ಮತ್ತು ಈಗ ಈ ಸಂಖ್ಯೆ ದಿನಕ್ಕೆ 36 ಕೋಟಿ ದಾಟಿದೆ. ಹೆಚ್ಚುತ್ತಿರುವ ಯುಪಿಐ ವಹಿವಾಟಿನ ಮಧ್ಯೆ, 2000 ಕ್ಕಿಂತ ಹೆಚ್ಚು ಯುಪಿಐ ಪಾವತಿಗಳನ್ನು ಮಾಡಲು ಜನ ಸಾಮಾನ್ಯರು ಶೇ.1.1 ರಷ್ಟು ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂಬ ಸುದ್ದಿ ಈಗ ಹೆಚ್ಚು ವೈರಲ್ ಆಗುತ್ತಿದೆ. Fact Check/ Verification ಯುಪಿಐ ವಹಿವಾಟು ನಡೆಸಲು ಶುಲ್ಕ ವಿಧಿಸಲಾಗುತ್ತದೆಯೇ? ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಪ್ರಕಾರ, ಯುಪಿಐ ವಹಿವಾಟಿಗೆ ಸಾರ್ವಜನಿಕರು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಎನ್ಪಿಸಿಐ ಮಾರ್ಚ್ 29 ರಂದು ಟ್ವೀಟ್ ಮಾಡಿದ್ದು, ಅದರಲ್ಲಿ ಅದು ಹೊರಡಿಸಿದ ಸುತ್ತೋಲೆ ಇದೆ. ಪೀರ್-ಟು-ಪೀರ್ ಮತ್ತು ಪೀರ್-ಟು-ಪೀರ್-ಮರ್ಚೆಂಟ್ನಲ್ಲಿ ಬ್ಯಾಂಕ್ ಖಾತೆ ಮತ್ತು ಪಿಪಿಐ ನಡುವಿನ ಯಾವುದೇ ರೀತಿಯ ವಹಿವಾಟಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಅದು ಹೇಳಿದೆ. ಇದಲ್ಲದೆ, ಮಾರ್ಚ್ 29 ರಂದು ಟ್ವೀಟ್ ಮೂಲಕ ಸಾಮಾನ್ಯ ಗ್ರಾಹಕರು ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎನ್ನವುದನ್ನು ಪೇಟಿಎಂ ನಿರಾಕರಿಸಿದೆ. “ಯುಪಿಐ ಮೂಲಕ ಬ್ಯಾಂಕ್ ಖಾತೆ ಅಥವಾ ಪಿಪಿಐ / ಪೇಟಿಎಂ ವ್ಯಾಲೆಟ್ನಿಂದ ಪಾವತಿಗೆ ಯಾವುದೇ ಗ್ರಾಹಕರು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ದಯವಿಟ್ಟು ತಪ್ಪು ಮಾಹಿತಿಯನ್ನು ಹರಡಬೇಡಿ.” ಎಂದಿದೆ. ಪಿಪಿಐ (ಪ್ರಿಪೇಯ್ಡ್ ಪೇಡ್ ಇನ್ಸ್ಟ್ರುಮೆಂಟ್) ಒಂದು ರೀತಿಯ ಡಿಜಿಟಲ್ ವ್ಯಾಲೆಟ್ ಆಗಿದ್ದು, ಇದು ಗ್ರಾಹಕರಿಗೆ ತಮ್ಮ ಹಣವನ್ನು ಸಂಗ್ರಹಿಸಲು ಅನುವು ಮಾಡಿಕೊಡುತ್ತದೆ. ‘ಪೇಟಿಎಂ’ ಮತ್ತು ‘ಫೋನ್ ಪೇ’ ನಂತಹ ಕಂಪನಿಗಳು ಪಿಪಿಐ ಆಯ್ಕೆಯನ್ನು ಒದಗಿಸುತ್ತವೆ. ಅಲ್ಲದೆ, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಬರುವ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (ಪಿಐಬಿ) ನಡೆಸುತ್ತಿರುವ ಪಿಐಬಿ ಫ್ಯಾಕ್ಟ್ ಚೆಕ್ ಮೂಲಕ ಮಾರ್ಚ್ 29 ರಂದು ಹಂಚಿಕೊಂಡ ಟ್ವೀಟ್ ಅನ್ನು ನಾವು ಸ್ವೀಕರಿಸಿದ್ದೇವೆ. ಈ ಟ್ವೀಟ್ ವೈರಲ್ ಹೇಳಿಕೆಯನ್ನು ನಿರಾಕರಿಸಿದೆ. ವ್ಯಾಲೆಟ್ ವಹಿವಾಟು ನಡೆಸಲು ಸಾರ್ವಜನಿಕರು ಶುಲ್ಕವನ್ನು ಪಾವತಿಸಬೇಕೇ? ಎನ್ ಪಿಸಿಐ ಸುತ್ತೋಲೆಯ ಪ್ರಕಾರ, ವ್ಯಾಲೆಟ್ ವಹಿವಾಟು ನಡೆಸುವಾಗಲೂ ಸಾರ್ವಜನಿಕರು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಒಂದು ಉದಾಹರಣೆಯನ್ನು ನೋಡೋಣ. ನೀವು ಪೆಟ್ರೋಪ್ ಪಂಪ್ಗೆ ಹೋಗುತ್ತೀರಿ, ಅಲ್ಲಿ 3 ಸಾವಿರ ರೂ. ಮೌಲ್ಯದ ಪೆಟ್ರೋಲ್ ಹಾಕಿದ್ದೀರಿ. ಮತ್ತು ಇನ್ನೊಂದು ಬ್ಯಾಂಕ್ ಅಥವಾ ವ್ಯಾಲೆಟ್ ಕಂಪೆನಿಗೆ ಪೇಟಿಂಎಂ ವ್ಯಾಲೆಟ್ನಿಂದ ಪಾವತಿ ಮಾಡಿದ್ದಿರಿ ಎಂದಿಟ್ಟುಕೊಳ್ಳಿ. ಈ ಸಂದರ್ಭದಲ್ಲಿ ವ್ಯಾಪಾರಿಯು 3 ಸಾವಿರ ರೂ. ಮೊತ್ತದ ಮೇಲೆ ಶೇ.5ರಷ್ಟನ್ನು ಪೇಟಿಎಂಗೆ ಇಂಟರ್ಚೇಂಜ್ ಶುಲ್ಕವಾಗಿ ಪಾವತಿಸಬೇಕಾಗುತ್ತದೆ. ಗ್ರಾಹಕ ಕೇವಲ 3 ಸಾವಿರ ರೂ.ಗಳನ್ನು ಮಾತ್ರ ಪಾವತಿಸುತ್ತಾನೆ. Also Read: ಕಾಶ್ಮೀರದಲ್ಲಿ ಶಾರದಾ ದೇವಿ ಪೀಠ ಮರು ನಿರ್ಮಾಣವಾಗಿದೆಯೇ, ಇದು ನಿಜವೇ? ಇಂಟರ್ ಚೇಂಜ್ ಶುಲ್ಕ ಎನ್ನವುದು ಯಾವ ಕಂಪೆನಿಯ ಸ್ಕ್ಯಾನರ್ ಮೇಲೆ ಪಾವತಿಯಾಗಿದೆ ಮತ್ತು ವ್ಯಾಲೆಟ್ಗಳು ಮತ್ತು ಬ್ಯಾಂಕ್ಗಳ ನಡುವಿನ ವಿಷಯವಾಗಿರುತ್ತದೆ. ಇದು ಹೊರತಾಗಿ ಗ್ರಾಹಕರ ಜೇಬಿಗೆ ಹೆಚ್ಚುವರಿ ಹೊರೆ ಇರುವುದಿಲ್ಲ. ಇಂಟರ್ಚೇಂಜ್ ಶುಲ್ಕ ಎಷ್ಟು ಮತ್ತು ಎಷ್ಟು ಪಾವತಿಸಬೇಕಾಗುತ್ತದೆ? ಇಂಟರ್ಚೇಂಜ್ ಶುಲ್ಕಗಳು ಎಂದರೆ (ಎರಡನೇ) ಪಾವತಿ ಸೇವಾ ಪೂರೈಕೆದಾರರು ಒದಗಿಸಿದ ಮೂಲಸೌಕರ್ಯ ಬಳಸಲು ಪಾವತಿ ಸೇವಾ ಪೂರೈಕೆದಾರರು (ಬ್ಯಾಂಕ್ಗಳು) ಇತರ ಪಾವತಿ ಫ್ಲ್ಯಾಟ್ಫಾರ್ಮ್ಗಳಿಗೆ (ಪೇಟಿಎಂ ಅಥವಾ ಅಮೆಜಾನ್ ಪೇಯಂತಹ ಡಿಜಿಟಲ್ ವ್ಯಾಲೆಟ್ಗಳಂತಹ) ಪಾವತಿಸುವ ಶುಲ್ಕಗಳಾಗಿವೆ. ಎನ್ಪಿಸಿಐ ಸುತ್ತೋಲೆಯ ಪ್ರಕಾರ, ವ್ಯಾಪಾರಿ ಪಿಪಿಐ ವಹಿವಾಟುಗಳಿಗೆ ವಿನಿಮಯ ದರವನ್ನು 0.5% ರಿಂದ 1.1% ಕ್ಕೆ ನಿಗದಿಪಡಿಸಲಾಗಿದೆ. ಇದು ನೀವು ಯುಪಿಐ ವ್ಯಾಲೆಟ್ ನಿಂದ ಎಷ್ಟು ಪಾವತಿಸುತ್ತಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಇಂಧನ, ಶಿಕ್ಷಣ, ಕೃಷಿ ಮುಂತಾದ ವಿಭಾಗಗಳಿಗೆ ಇಂಟರ್ಚೇಂಜ್ ಶುಲ್ಕವು ಶೇಕಡಾ 0.5-0.7 ರಷ್ಟಿದ್ದರೆ, ಆಹಾರ ಅಂಗಡಿಗಳು, ವಿಶೇಷ ಚಿಲ್ಲರೆ ಅಂಗಡಿಗಳಿಗೆ ಗರಿಷ್ಠ ಶೇಕಡಾ 1.1 ರಷ್ಟು ಶುಲ್ಕವಿದೆ. ಯಾರಿಗೆ ಲಾಭವಾಗುತ್ತದೆ? ಪಾವತಿ ವಿಧಾನದಲ್ಲಿ ಯುಪಿಐ ಬಳಕೆದಾರರಿಗೆ ಹೆಚ್ಚಿನ ನಮ್ಯತೆ ಇದೆ ಎಂದು ಹೇಳಲಾಗಿದೆ. ಸಿಎನ್ಬಿಸಿ ಟಿವಿ 18 ವರದಿಯ ಪ್ರಕಾರ ಬಳಕೆದಾರರು ಅಂಗಡಿಯಲ್ಲಿ ತಮ್ಮ ಪೇಟಿಎಂ ಅಥವಾ ಇನ್ನಾವುದೇ ವ್ಯಾಲೆಟ್ನಿಂದ ಪಾವತಿಸಲು ಸ್ಕ್ಯಾನ್ ಮಾಡುವ ಮೂಲಕ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಪಾವತಿಸಬಹುದು. ವ್ಯಾಪಾರಿಗಳ ದೃಷ್ಟಿಕೋನದಿಂದ ನೋಡಿದರೆ, ಇದು ಎಲ್ಲಾ ಯುಪಿಐ ವಹಿವಾಟುಗಳನ್ನು ಒಂದೇ ಕೇಂದ್ರದಡಿಗೆ ತರುತ್ತದೆ. ಇದು ಗ್ರಾಹಕರು ಬಳಸುವ ವಿಭಿನ್ನ ವ್ಯಾಲೆಟ್ ಪಾವತಿಗಳನ್ನು ಸ್ವೀಕರಿಸಲು ವ್ಯಾಪಾರಿಗಳಿಗೆ ಅನುವು ಮಾಡಿಕೊಡುತ್ತದೆ. Conclusion ಈ ಸತ್ಯಶೋಧನೆಯ ಪ್ರಕಾರ, ಏಪ್ರಿಲ್ 1 ರಿಂದ, ಜನಸಾಮಾನ್ಯರು 2000 ರೂ.ಗಿಂತ ಹೆಚ್ಚು ಮೊತ್ತದ ಯುಪಿಐ ವಹಿವಾಟಿಗೆ ಮಾಡಲು ಶೇಕಡಾ 1.1 ರಷ್ಟು ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂಬುದು ನಮ್ಮ ತನಿಖೆಯಲ್ಲಿ ಸ್ಪಷ್ಟವಾಗಿದೆ. Result: Missing Context Our Sources: Tweet by NPCI, Dated: March 29, 2023 Tweet by Paytm Payments Bank, Dated March 29, 2023 Tweet by PIB, Dated: March 29, 2023 Report Published by CNBC TV18, Dated: March 29, 2023 ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
schema:mentions
schema:reviewRating
schema:author
schema:datePublished
schema:inLanguage
  • Hindi
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 11 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software