About: http://data.cimple.eu/claim-review/5e4423b02104e6ac450f2d21b30531d002b16c70659d085379df646d     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • Authors Claim ಪಾಕಿಸ್ತಾನದಲ್ಲಿ ಮೃತ ಬಾಲಕಿಯ ಪೋಷಕರು ಶವದ ಮೇಲೆ ಅತ್ಯಾಚಾರವಾಗುವುದನ್ನು ತಡೆಯಲು ಆಕೆಯ ಸಮಾಧಿಗೆ ಬೀಗ ಹಾಕಿದರು Fact ಜಿಯೋಲೊಕೇಶನ್ ಉಪಕರಣಗಳು ಮತ್ತು ಸ್ಥಳೀಯರೊಂದಿಗಿನ ಸಂಭಾಷಣೆಗಳ ಆಧಾರದಲ್ಲಿ, ಬಳಸಿದ ಛಾಯಾಚಿತ್ರವು ಹೈದ್ರಾಬಾದ್ ಸ್ಮಶಾನದ್ದಾಗಿದೆ. ಮತ್ತು ಶವಕಾಮದ ಹೆದರಿಕೆಯಿಂದ ಹೀಗೆ ಮಾಡಲಾಗಿದೆ ಎನ್ನುವ ನಿರೂಪಣೆ ತಪ್ಪಾಗಿದೆ. ಪಾಕಿಸ್ಥಾನದಲ್ಲಿ ಮೃತ ಬಾಲಕಿಯ ಪೋಷಕರು ಶವದ ಮೇಲೆ ಅತ್ಯಾಚಾರವಾಗುವುದನ್ನು ತಡೆಯಲು ಆಕೆಯ ಸಮಾಧಿಗೆ ಬೀಗ ಹಾಕಿದರು ಎನ್ನುವ ಸುದ್ದಿ ವ್ಯಾಪಕವಾಗಿ ಹರಿದಾಡಿದೆ. ಸಮಾಧಿಯೊಂದರ ಮೇಲೆ ಕಬ್ಬಿಣದ ಗೇಟ್ ಅಳವಡಿಸಿ, ಅದಕ್ಕೆ ಬೀಗ ಹಾಕಿದ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಬ್ಬಿಣದ ಗೇಟ್ನಿಂದ ಸಮಾಧಿಯನ್ನು ಮುಚ್ಚಿ ಬೀಗ ಹಾಕಿರುವ ಚಿತ್ರ ಮತ್ತು ಸುದ್ದಿಗಳನ್ನು ಅನೇಕ ಮಾಧ್ಯಮಗಳು ಹಂಚಿಕೊಂಡಿದ್ದು, ಪಾಕಿಸ್ಥಾನದಲ್ಲಿ ಅತ್ಯಾಚಾರಿಗಳು ಶವವನ್ನೂ ಬಿಟ್ಟಿಲ್ಲ ಎಂಬಂತೆ ಸುದ್ದಿಯಾಗಿತ್ತು. ಜೊತೆಗೆ ಮೃತರಾದವರ ಸಂಬಂಧಿಗಳು ಸಮಾಧಿಗೆ ಗೇಟ್, ಬೀಗ ಹಾಕಿ ಇಡಬೇಕಾದ ಪ್ರಮೇಯ ಬಂದಿದೆ ಎಂಬಂತೆ ಸುದ್ದಿಯಾಗಿತ್ತು. ವಿಯಾನ್, ಎಬಿಪಿ, ಒಪಿಇಂಡಿಯಾ ಹಿಂದಿ ಮತ್ತು ಸುದ್ದಿ ಸಂಸ್ಥೆ ಎಎನ್ಐ ಸೇರಿದಂತೆ ಅನೇಕ ಸುದ್ದಿ ಸಂಸ್ಥೆಗಳು ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ (ಶವಕಾಮ) ನೆಕ್ರೋಫಿಲಿಯಾ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ಟ್ವಿಟರ್ನಲ್ಲೂ ಈ ಕ್ಲೇಮ್ ಅನ್ನು ಹೋಲುವ ಟ್ವೀಟ್ಗಳು ಕಂಡುಬಂದಿವೆ. ಅವುಗಳು ಈ ಕೆಳಗೆ ಇವೆ. ಅಂತಹ ಪೋಸ್ಟ್ ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಆದರೆ ಸತ್ಯಶೋಧನೆಯಲ್ಲಿ ಈ ಕ್ಲೇಮ್ ಸುಳ್ಳು ಎಂಬುದನ್ನು ನ್ಯೂಸ್ಚೆಕರ್ ಕಂಡುಕೊಂಡಿದೆ. Fact Check/Verification ವೈರಲ್ ಚಿತ್ರವನ್ನು ಹೊಂದಿರುವ ವಿವಿಧ ಪೋಸ್ಟ್ಗಳ ಕಾಮೆಂಟ್ ವಿಭಾಗಗಳನ್ನು ನಾವು ಪರಿಶೀಲಿಸಿದ್ದು, ಈ ವೇಳೆ ಈ ಚಿತ್ರ ಭಾರತದ ಹೈದ್ರಾಬಾದ್ನ ಸಮಾಧಿಯೊಂದರ ಚಿತ್ರವೇ ಹೊರತು ಪಾಕಿಸ್ಥಾನದ್ದಲ್ಲ ಎಂದು ಹಲವು ಬಳಕೆದಾರರು ಹೇಳಿದ್ದಾರೆ. ಎಪ್ರಿಲ್ 30, 2023 ರಂದು @jaleel.ರಾಜಾ ಎಂಬವರ ಫೇಸ್ಬುಕ್ ಪೋಸ್ಟ್ ನಮಗೆ ಲಭ್ಯವಾಗಿದ್ದು, ಅದರಲ್ಲಿ ಮದ್ನಾಪೇಟ್ನ ದಾರಾಬ್ ಜಾನ್ ಕಾಲೋನಿಯಲ್ಲಿರುವ ಮಸೀದಿ ಸಲಾರ್-ಎ-ಮಲಿಕ್ ಬಳಿ ಈ ಚಿತ್ರಗಳನ್ನು ಸೆರೆಹಿಡಿಯಲಾಗಿದೆ ಎಂದು ಪೋಸ್ಟ್ನಲ್ಲಿ ತಿಳಿಸಲಾಗಿದೆ. ಆ ನಂತರ ನ್ಯೂಸ್ಚೆಕರ್ ಜಲೀಲ್ ಅವರನ್ನು ಸಂಪರ್ಕಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಸ್ಮಶಾನ-ಸಮಾಧಿಯ ಚಿತ್ರ ಪಾಕಿಸ್ಥಾನದ್ದೇ ಎಂದು ಖಚಿತಪಡಿಸಲು ಕೇಳಿಕೊಂಡಿದ್ದು, ಅವರು ಮುಂಜಾನೆ 2 ಗಂಟೆಗೆ ಭಾರತದ ಹೈದರಾಬಾದ್ ನ ಸ್ಮಶಾನವನ್ನು ತಲುಪಿದ್ದು, ಫೇಸ್ಬುಕ್ನಲ್ಲಿ ಹಂಚಿಕೊಂಡ ಚಿತ್ರಗಳನ್ನು ಕ್ಲಿಕ್ ಮಾಡಿ ಇಡೀ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ವೈರಲ್ ಚಿತ್ರ ತೆಗೆದ ಹೈದರಾಬಾದ್ನ ಸ್ಮಶಾನದ ನಿಖರವಾದ ಸ್ಥಳವನ್ನು ನಾವು ಗೂಗಲ್ ಅರ್ಥ್ ಮೂಲಕ ನೋಡಬಹುದಾಗಿದೆ. ಇದರ ನಂತರ, ನ್ಯೂಸ್ಚೆಕರ್ ತೆಲಂಗಾಣದ ಹೈದರಾಬಾದ್ನ ಸ್ಮಶಾನದ ಬಳಿ ಇರುವ ಜಹಾಂಗೀರ್ ಡೈರಿ ಎಂಬ ಅಂಗಡಿಯ ಮಾಲೀಕರನ್ನು ಸಂಪರ್ಕಿಸಿತು, ಅವರು ವೈರಲ್ ಚಿತ್ರವು ನಿಜವಾಗಿಯೂ ಅವರ ನೆರೆಹೊರೆಯ ಸ್ಮಶಾನದ್ದಾಗಿದೆ ಎಂದು ದೃಢೀಕರಿಸಿದ್ದಾರೆ. Also Read: ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ಎನ್ಡಿಟಿವಿ ಸಮೀಕ್ಷೆ ಹೇಳಿದೆಯೇ, ವೈರಲ್ ಗ್ರಾಫಿಕ್ನ ಅಸಲಿಯತ್ತು ಏನು? ವೈರಲ್ ಚಿತ್ರವು ವಾಸ್ತವವಾಗಿ ಭಾರತದ ಹೈದರಾಬಾದ್ನ ಸ್ಮಶಾನದಿಂದ ಬಂದಿದೆ ಎಂದು ದೃಢೀಕರಿಸಿದ ಪ್ರದೇಶದ ಹಲವಾರು ಜನರನ್ನು ನಾವು ಸಂಪರ್ಕಿಸಿದ್ದೇವೆ. ವೈರಲ್ ಚಿತ್ರದಲ್ಲಿ ಕಂಡುಬರುವ ಸಮಾಧಿ ಸ್ಮಶಾನದ ಪ್ರವೇಶದ್ವಾರದಲ್ಲಿದೆ ಎಂದು ಹೇಳಿದ್ದಾರೆ. ಯಾರೂ ಅದರ ಮೇಲೆ ಕಾಲಿಡದಂತೆ ಅಥವಾ ಅನುಮತಿಯಿಲ್ಲದೆ ಮೇಲ್ಭಾಗದಲ್ಲಿ ಮತ್ತೊಂದು ಸಮಾಧಿಯನ್ನು ನಿರ್ಮಿಸದಂತೆ ಅದನ್ನು ಲಾಕ್ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ಮೇ 1, 2024 ರಂದು @Deccan2023Hyderabad ಅವರ ಫೇಸ್ಬುಕ್ ಪೋಸ್ಟ್ನಲ್ಲಿ ಮೃತರ ಕುಟುಂಬ ಸದಸ್ಯರು ಪ್ಯಾಡ್ ಲಾಕ್ ಮಾಡಿದ ಸಮಾಧಿಯಲ್ಲಿ ಹೂಳಲ್ಪಟ್ಟಿರುವ ವೀಡಿಯೊವನ್ನು ಹೊಂದಿದ್ದು, ಕಬ್ಬಿಣದ ಗೇಟ್ ಮತ್ತು ಬೀಗ ಹಾಕಲು ಕಾರಣಗಳನ್ನು ವಿವರಿಸಿದ್ದಾರೆ. ಜನರು ಕಸ ಮತ್ತು ಇತರ ಕಸದಂತಹ ವಸ್ತುಗಳನ್ನು ಸಮಾಧಿಯ ಬಳಿ ಎಸೆಯುತ್ತಿದ್ದರಿಂದ ಬೀಗ ಹಾಕಲಾಗಿದೆ ಎಂದು ಮೃತರ ಕುಟುಂಬದ ಪುರುಷ ಸದಸ್ಯರೊಬ್ಬರು ಹೇಳುತ್ತಿರುವುದು ಇದರಲ್ಲಿ ಕೇಳಿಸುತ್ತದೆ. Conclusion ಪಾಕಿಸ್ಥಾನದಲ್ಲಿ ಹೆಣ್ಣು ಮಕ್ಕಳ ಶವಗಳ ಮೇಲೆ ಅತ್ಯಾಚಾರ ನಡೆಯದಂತೆ ಸಮಾಧಿಗೆ ಗೇಟ್ ಅಳವಡಿಸಿ ಬೀಗ ಹಾಕಲಾಗಿದೆ ಎಂದು ತೋರಿಸಿದ ಫೋಟೋ ಹೈದ್ರಾಬಾದ್ ನದ್ದಾಗಿದ್ದು, ಇದು ಸುಳ್ಳು ಎಂಬುದು ಪತ್ತೆಯಾಗಿದೆ. Result: False Sources Facebook Post By @jaleel.raja, Dated: April 30, 2023 Facebook Post By @Deccan24Hyderabad, Dated: May 1, 2023 Google Earth ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಇಂಗ್ಲಿಷ್ನಲ್ಲಿ ಪ್ರಕಟಿಸಲಾಗಿದ್ದು ಅದನ್ನು ಇಲ್ಲಿ ಓದಬಹುದು ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
schema:mentions
schema:reviewRating
schema:author
schema:datePublished
schema:inLanguage
  • Hindi
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 11 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software