About: http://data.cimple.eu/claim-review/6c0f2940f2fc10423ea54613b5133bd6da9665d1d0ad9040b34f0f95     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • Authors Claim ಮುಂಬೈನ ಸಿದ್ಧಿವಿನಾಯಕ ದೇವಸ್ಥಾನದ ಮೇಲೆ ವಕ್ಫ್ ಮಂಡಳಿ ಹಕ್ಕು ಸಾಧಿಸಿದೆ Fact ಮುಂಬೈನ ಪ್ರಭಾದೇವಿಯಲ್ಲಿರುವ ಶ್ರೀ ಸಿದ್ಧಿವಿನಾಯಕ ಗಣಪತಿ ದೇವಸ್ಥಾನವನ್ನು ವಕ್ಫ್ ಮಂಡಳಿ ತನ್ನದೆಂದು ಹೇಳಿಕೊಂಡಿದೆ ಎಂಬ ಹೇಳಿಕೆ ಸುಳ್ಳು. ದೇವಾಲಯದ ಮೇಲೆ ಯಾರೂ ಹಕ್ಕು ಸಾಧಿಸಿಲ್ಲ ಎಂದು ದೇಗುಲದ ಆಡಳಿತ ಮಂಡಳಿಯ ಖಚಾಂಚಿ ಹೇಳಿದ್ದಾರೆ. ಮುಂಬೈನ ಪ್ರಭಾದೇವಿಯಲ್ಲಿರುವ ಶ್ರೀ ಸಿದ್ಧಿವಿನಾಯಕ ಗಣಪತಿ ದೇವಸ್ಥಾನವನ್ನು ವಕ್ಫ್ ಮಂಡಳಿ ಈಗ ತನ್ನದೆಂದು ಹೇಳಿಕೊಂಡಿದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಆರೋಪಿಸುತ್ತಿದ್ದಾರೆ. ನವೆಂಬರ್ 20 ರಂದು ಮಹಾರಾಷ್ಟ್ರದ 288 ವಿಧಾನಸಭೆ ಸ್ಥಾನಗಳಿಗೆ ಮತದಾನ ನಡೆಯುವುದಕ್ಕಿಂತ ಮುಂಚಿತವಾಗಿ ಈ ಸಾಮಾಜಿಕ ಮಾಧ್ಯಮ ಪೋಸ್ಟ್ ಗಳು ಪೋಸ್ಟ್ಗಳು ವೈರಲ್ ಆಗಿವೆ. ಇನ್ನು ಚುನಾವಣೆ ಫಲಿತಾಂಶ, ನವೆಂಬರ್ 23 ರಂದು ಹೊರಬೀಳಲಿದೆ. “ಇತರ ರಾಜ್ಯಗಳಲ್ಲಿ ಮಾಡಿದಂತೆಯೇ ಖಾನ್ಗ್ರೆಸ್ ಮಹಾರಾಷ್ಟ್ರವನ್ನು ನಾಶಪಡಿಸುತ್ತದೆ. ಮರಾಠರು ಮೊಘಲರ ವಂಶಸ್ಥರನ್ನು ಆಳಲು ಬಿಡುವುದಿಲ್ಲ… ” ಎಂದು ಒಂದು ಪೋಸ್ಟ್ ನಲ್ಲಿದ್ದರೆ, ಇನ್ನೊಂದರಲ್ಲಿ, ಎಂವಿಎ (ಕಾಂಗ್ರೆಸ್, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಮತ್ತು ಶರದ್ ಪವಾರ್ ನೇತೃತ್ವದ ಎನ್ಸಿಪಿ (ಎಸ್ಪಿ)] ಉಲೇಮಾ ಮಂಡಳಿಯ ಎಲ್ಲಾ ಬೇಡಿಕೆಗಳನ್ನು ಒಪ್ಪಿಕೊಂಡಿವೆ… ಪ್ರಿಯ ಹಿಂದೂಗಳೇ, ಮಹಾಯುತಿ (ಬಿಜೆಪಿ, ಏಕನಾಥ್ ಶಿಂಧೆ ಅವರ ಶಿವಸೇನೆ ಮತ್ತು ಅಜಿತ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ)] ಈಗಿರುವ ಏಕೈಕ ಆಯ್ಕೆಯಾಗಿದೆ ಎಂದಿದೆ. Also Read: ಸ್ಪೀಕರ್ ಓಂ ಬಿರ್ಲಾ ಪುತ್ರಿ ಅಂಜಲಿ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದಾರಾ? ಇಲ್ಲ, ವೈರಲ್ ಹೇಳಿಕೆ ಸುಳ್ಳು ವಕ್ಫ್ ಆಸ್ತಿ ವಿವಾದಗಳ ಬಗ್ಗೆ ಅನೇಕ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಪೋಸ್ಟ್ಗಳು ಹೊರಹೊಮ್ಮಿವೆ, ಇದು ವಕ್ಫ್ (ತಿದ್ದುಪಡಿ) ಮಸೂದೆ ವಿಚಾರದಲ್ಲಿ ಬಿಜೆಪಿ ಹೇಳುವಂತೆ, ವಕ್ಫ್ ಮಂಡಳಿಗೆ ತನ್ನ ನಿಯಂತ್ರಣದಲ್ಲಿರುವ ಭೂಮಿಯ ಮೇಲೆ ಅನಗತ್ಯ ಅಧಿಕಾರಗಳಿವೆ ಎಂದು ಉಲ್ಲೇಖಿಸಿದೆ. ಪೋಸ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು. Fact Check/Verification ನ್ಯೂಸ್ ಚೆಕರ್ ” Waqf Shree Siddhivinayak Ganapati Temple” ಎಂಬ ಕೀವರ್ಡ್ ಗಳ ಮೂಲಕ ಸರ್ಚ್ ಮಾಡಿದೆ. ಆದರೆ ವಕ್ಫ್ ಮಂಡಳಿ ಹಕ್ಕು ಸಾಧಿಸಿದೆ ಎನ್ನುವ ಬಗ್ಗೆ ಯಾವುದೇ ಸುದ್ದಿಗಳು ಲಭ್ಯವಾಗಲಿಲ್ಲ. ಆದಾಗ್ಯೂ, ಶಿವಸೇನೆ ಯುಬಿಟಿ ನಾಯಕ ಆದಿತ್ಯ ಠಾಕ್ರೆ ಅವರು ನವೆಂಬರ್ 18, 2024 ರಂದು ಮಾಡಿದ ಈ ಎಕ್ಸ್ ಪೋಸ್ಟ್ ಅನ್ನು ನಾವು ನೋಡಿದ್ದೇವೆ. ಇದರಲ್ಲಿ ಅವರು ವೈರಲ್ ಹೇಳಿಕೆ ನಕಲಿ ಎಂದು ಹೇಳಿದ್ದಾರೆ ಮತ್ತು ಅದು “ಬಿಜೆಪಿಯ ಪರಿಸರ ವ್ಯವಸ್ಥೆಯ ಅಸಹ್ಯಕರ ಮನಸ್ಥಿತಿಯನ್ನು” ಪ್ರತಿಬಿಂಬಿಸುತ್ತದೆ ಮತ್ತು ಒಡೆದು ಆಳುತ್ತದೆ ಎಂದು ಹೇಳಿದ್ದಾರೆ. ಈ ಹೇಳಿಕೆ ಕುರಿತಂತೆ ಠಾಕ್ರೆ ಅವರು ಚುನಾವಣಾ ಆಯೋಗ ಮತ್ತು ಮುಂಬೈ ಪೊಲೀಸರನ್ನು ಟ್ಯಾಗ್ ಮಾಡಿ, ಪೋಸ್ಟ್ ಮಾಡಿದ ಬಳಕೆದಾರರು ಮತ್ತು ಮಹಾರಾಷ್ಟ್ರದಲ್ಲಿ ದ್ವೇಷವನ್ನು ಹರಡಲು ಪ್ರಯತ್ನಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಈ ವೈರಲ್ ಹೇಳಿಕೆಯನ್ನು ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಆಡಳಿತ ಮಂಡಳಿಯ ಖಜಾಂಚಿ ಆಚಾರ್ಯ ಪವನ್ ತ್ರಿಪಾಠಿ ಅವರು ತಳ್ಳಿಹಾಕಿದ್ದಾರೆ, ಸಿದ್ಧಿವಿನಾಯಕ ದೇವಾಲಯದ ಮೇಲೆ ಯಾವುದೇ ಹಕ್ಕು ಸಾಧಿಸುವ ಉದ್ದೇಶ ವಕ್ಫ್ ಮಂಡಳಿಗೆ ಇಲ್ಲ ಎಂದು ಅವರು ಹೇಳಿದ್ದಾರೆ ಮತ್ತು ದೇವಾಲಯದ ಮಾಲೀಕತ್ವವನ್ನು ಯಾರೂ ಪ್ರತಿಪಾದಿಸಲು ಸಾಧ್ಯವಿಲ್ಲ ಎಂದು ಹೇಳುವ 26 ಸೆಕೆಂಡುಗಳ ವೀಡಿಯೊವನ್ನು ನಾವು ಗಮನಿಸಿದ್ದೇವೆ. ಇದನ್ನು ಮುಂಬೈನ ತರುಣ್ ಭಾರತ್ ಮಾಧ್ಯಮ ಸಂಸ್ಥೆ ನವೆಂಬರ್ 18 ರಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ. “ಮುಂಬೈನ ಶ್ರೀ ಸಿದ್ಧಿವಿನಾಯಕ ದೇವಾಲಯದ ಮೇಲೆ ವಕ್ಫ್ ಮಂಡಳಿ ಹಕ್ಕು ಸಾಧಿಸಿದೆ ಎಂಬುದು ಸುಳ್ಳು ಎಂದು ಪವನ್ ತ್ರಿಪಾಠಿ ಈಗ ತಮ್ಮ ವೀಡಿಯೋದಲ್ಲಿ ಹೇಳಿದ್ದಾರೆ. ದಾದರ್ ನಲ್ಲಿರುವ ಶ್ರೀ ಸಿದ್ಧಿವಿನಾಯಕ ದೇವಸ್ಥಾನವು ದೇಶದಲ್ಲಿ ಮಾತ್ರವಲ್ಲದೆ ವಿಶ್ವದಲ್ಲೇ ನಂಬಿಕೆಯ ಸ್ಥಳವಾಗಿದೆ. ಶ್ರೀ ಸಿದ್ಧಿವಿನಾಯಕ ದೇವಸ್ಥಾನವು ಮುಂಬೈನ ಹೆಮ್ಮೆ ಮತ್ತು ಸಂತೋಷದ ಪ್ರತೀಕ. ಈ ಕಾರಣದಿಂದಾಗಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಮೇಲೆ ಯಾರೂ ಹಕ್ಕು ಸಾಧಿಸುವುದಿಲ್ಲ ಎಂದು ಪವನ್ ತ್ರಿಪಾಠಿ ತಮ್ಮ ವೀಡಿಯೊ ಮೂಲಕ ಹೇಳಿದ್ದಾರೆ” ಎಂದು ನವೆಂಬರ್ 18, 2024ರಂದು ಎಂಟಿಬಿ ವರದಿ ಹೇಳಿದೆ. ಇದನ್ನು ಮರಾಠಿಯಿಂದ ಭಾಷಾಂತರಿಸಲಾಗಿದೆ. ಇದೇ ರೀತಿಯ ವರದಿಯನ್ನು ಇಲ್ಲಿ ನೋಡಬಹುದು ಮತ್ತು ಇದೂ ವೈರಲ್ ಹೇಳಿಕೆ ಸುಳ್ಳು ಎಂದು ದೃಢಪಡಿಸುತ್ತದೆ. ವಕ್ಫ್ ವಿಚಾರದಲ್ಲಿ ನಾವು ದೇವಾಲಯದ ಟ್ರಸ್ಟ್ ಅನ್ನು ಸಂಪರ್ಕಿಸಿದ್ದೇವೆ. ಆ ಕುರಿತು ನಾವು ಪ್ರತಿಕ್ರಿಯೆಯನ್ನು ಸ್ವೀಕರಿಸಿದ ನಂತರ ಈ ವರದಿಯನ್ನು ಪರಿಷ್ಕರಿಸುತ್ತೇವೆ. Conclusion ಮುಂಬೈನ ಪ್ರಭಾದೇವಿಯಲ್ಲಿರುವ ಶ್ರೀ ಸಿದ್ಧಿವಿನಾಯಕ ಗಣಪತಿ ದೇವಸ್ಥಾನವನ್ನು ವಕ್ಫ್ ಮಂಡಳಿ ತನ್ನದೆಂದು ಹೇಳಿಕೊಂಡಿದೆ ಎಂಬ ಹೇಳಿಕೆ ಸುಳ್ಳಾಗಿದೆ. ದೇವಾಲಯದ ಮೇಲೆ ಯಾರೂ ಹಕ್ಕು ಸಾಧಿಸಿಲ್ಲ ಎಂದು ದೇಗುಲದ ಖಚಾಂಚಿ ಹೇಳಿದ್ದಾರೆ. Also Read: ಕೇರಳದ ಮುಸ್ಲಿಂ ವ್ಯಕ್ತಿ ಹಿಂದೂಗಳಿಗೆ ಮಾರಾಟ ಮಾಡುವ ಮುನ್ನ ಹಾಲಿನಲ್ಲಿ ಸ್ನಾನ ಮಾಡುತ್ತಾನೆ ಎಂದ ವೀಡಿಯೋ ನಿಜವೇ? Result: False Our Sources X post, MTB, Dated: November 18, 2024 X post, Aaditya Thackeray, Dated: November 18, 2024 MTB report, Dated: November 18, 2024 (ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ) ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
schema:mentions
schema:reviewRating
schema:author
schema:datePublished
schema:inLanguage
  • Hindi
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 11 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software