schema:text
| - Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact checks doneFOLLOW US
Fact Check
Claim
ಕೇರಳ ಪೊಲೀಸರು ಅಬಕಾರಿ ಮಂತ್ರಿಯನ್ನು ಬಲಾತ್ಕಾರವಾಗಿ ಬಂಧಿಸಿದ್ದಾರೆ
Fact
ಕೇರಳ ಪೊಲೀಸರು ಅಬಕಾರಿ ಮಂತ್ರಿಯನ್ನು ಬಂಧಿಸಿ ಎಳೆದೊಯ್ದಿಲ್ಲ, ಬಂಧನಕ್ಕೊಳಗಾದವರು ಎರ್ನಾಕುಳಂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಶಿಯಾಸ್ ಎಂಬವರಾಗಿದ್ದು, ಆನೆದಾಳಿಯ ವಿರುದ್ಧದ ಪ್ರತಿಭಟನೆ ಪ್ರಕರಣವೊಂದರಲ್ಲಿ ಅವರನ್ನು ಬಂಧಿಸಲಾಗಿತ್ತು
ಕೇರಳ ಪೊಲೀಸರು ಅಲ್ಲಿನ ಅಬಕಾರಿ ಮಂತ್ರಿಯನ್ನು ಬಲಾತ್ಕಾರವಾಗಿ ಬಂಧಿಸಿದ್ದಾರೆ ಎಂಬ ರೀತಿಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.
ವಾಟ್ಸ್ ಆಪ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ, “ಕೇರಳ ಪೊಲೀಸರು ಕೇರಳದ ಅಬಕಾರಿ ಮಂತ್ರಿಯನ್ನ ಎಳೆದುಕೊಂಡು ಹೋಗುವುದು ,ಪೊಲೀಸರಿಗೆ ಬೈದಿರುವುದಕ್ಕೆ ಈ ರೀತಿ ಪೊಲೀಸ್ ಮಾಡಿದ್ದು..ಕರ್ನಾಟಕದಲ್ಲಿ ಸಾಧ್ಯವೇ ?” ಎಂದಿದೆ.
ಈ ಬಗ್ಗೆ ಸತ್ಯಶೋಧನೆ ನಡೆಸುವಂತೆ ನ್ಯೂಸ್ ಚೆಕರ್ ವಾಟ್ಸಾಪ್ ಟಿಪ್ ಲೈನ್ (+91-9999499044) ಗೆ ಮನವಿ ಬಂದಿದ್ದು, ಅದನ್ನು ಅಂಗೀಕರಿಸಲಾಗಿದೆ.
Also Read: ಉಡುಪಿ ಗ್ಯಾಂಗ್ ವಾರ್ ನಲ್ಲಿ ವ್ಯಕ್ತಿಯ ಕೊಲೆಯಾಗಿದೆಯೇ?
ಈ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು, ವೈರಲ್ ವೀಡಿಯೋದಲ್ಲಿರುವ ವ್ಯಕ್ತಿ ಕೇರಳದ ಅಬಕಾರಿ ಮಂತ್ರಿಯಲ್ಲ, ಅವರು ಎರ್ನಾಕುಳಂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಶಿಯಾಸ್ ಅವರಾಗಿದ್ದಾರೆ ಎಂದು ಕಂಡುಬಂದಿದೆ.
ಸತ್ಯಶೋಧನೆಗಾಗಿ ನಾವು ಕೇರಳ ಅಬಕಾರಿ ಸಚಿವರ ಕುರಿತ ಬಂಧನದ ಸುದ್ದಿಯನ್ನು ಹುಡುಕಿದ್ದೇವೆ. ಈ ವೇಳೆ ಅಂತಹ ಯಾವುದೇ ವರದಿಗಳು ಕಂಡುಬಂದಿಲ್ಲ.
ಬಳಿಕ ನಾವು ಕೇರಳ ಅಬಕಾರಿ ಸಚಿವ ಎಂ.ಬಿ.ರಾಜೇಶ್ ಅವರ ಫೇಸ್ಬುಕ್ ಪ್ರೊಫೈಲ್ ಅನ್ನು ನೋಡಿದ್ದೇವೆ. ಈ ಪ್ರೊಫೈಲ್ ನಲ್ಲಿರುವ ವ್ಯಕ್ತಿ ಮತ್ತು ವೈರಲ್ ವೀಡಿಯೋದಲ್ಲಿರುವ ವ್ಯಕ್ತಿ ಬೇರೆ ಬೇರೆ ಎಂಬುದನ್ನು ಗಮನಿಸಿದ್ದೇವೆ.
ನಂತರ ನಾವು ಗೂಗಲ್ ಕೀವರ್ಡ್ ಸರ್ಚ್ ನಡೆಸಿದ್ದು, ಮಾರ್ಚ್ 4, 2024ರ ಮೀಡಿಯೋನ್ ಟಿವಿ ಲೈವ್ ಯೂಟ್ಯೂಬ್ ವೀಡಿಯೋ ಪತ್ತೆಯಾಗಿದೆ. ಇದರ ಶೀರ್ಷಿಕೆಯಲ್ಲಿ “ಎರ್ನಾಕುಲಂ ಡಿಸಿಸಿ ಅಧ್ಯಕ್ಷ ಮೊಹಮ್ಮದ್ ಶಿಯಾಸ್ ಪೊಲೀಸ್ ಅಧಿಕಾರಿಯನ್ನು ನಿಂದಿಸಿದ್ದಾರೆ.” (ಮಲಯಾಳದಿಂದ ಅನುವಾದಿಸಲಾಗಿದೆ)
ಈ ಯೂಟ್ಯೂಬ್ ವೀಡಿಯೋ ಮತ್ತು ವೈರಲ್ ಆಗಿರುವ ವೀಡಿಯೋದ ದೃಶ್ಯಗಳಿಗೆ ಸಾಮ್ಯತೆ ಇರುವುದನ್ನು, ಪೊಲೀಸರಿಗೆ ಬೈಯುವ ವ್ಯಕ್ತಿ ಒಬ್ಬರೇ ಆಗಿರುವುದನ್ನು ನಾವು ಗಮನಿಸಿದ್ದೇವೆ.
ಅದರಂತೆ ಈ ಪ್ರಕರಣದ ಬಗ್ಗೆ ನಾವು ಶೋಧ ನಡೆಸಿದ್ದು, ಪತ್ರಿಕಾ ವರದಿ ಕಂಡುಬಂದಿದೆ. ಮಾರ್ಚ್ 4, 2024ರ ಸಮಕಾಲಿಕಾ ಮಲಯಾಳಂ ವರದಿಯಲ್ಲಿ, “ನೆರಿಯಮಂಗಲಂನ ಕಂಜಿರವೇಲಿಯಲ್ಲಿ ಇಂದು ಬೆಳಿಗ್ಗೆ ಕಾಡಾನೆ ದಾಳಿಯಿಂದ ಇಂದಿರಾ ರಾಮಕೃಷ್ಣನ್ ಸಾವನ್ನಪ್ಪಿದ್ದಾರೆ. ಕಾಂಗ್ರೆಸ್ ಮುಖಂಡರಾದ ಡೀನ್ ಕುರಿಯಾಕೋಸ್ ಸಂಸದ, ಮ್ಯಾಥ್ಯೂ ಕುಝಲ್ನಾಡನ್ ಶಾಸಕ ಮತ್ತು ಕಾಂಗ್ರೆಸ್ ಎರ್ನಾಕುಲಂ ಜಿಲ್ಲಾಧ್ಯಕ್ಷ ಮೊಹಮ್ಮದ್ ಶಿಯಾಸ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಕೊತಮಂಗಲಂ ಪಟ್ಟಣದಲ್ಲಿ ಶವದೊಂದಿಗೆ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಕಾಡು ಪ್ರಾಣಿಗಳ ಹಾವಳಿಗೆ ಪರಿಹಾರ ಕಂಡುಕೊಂಡ ನಂತರವೇ ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ಇಂದಿರಾ ಅವರ ಕುಟುಂಬ ನಿಲುವು ತೆಗೆದುಕೊಂಡ ನಂತರ ಕಾಂಗ್ರೆಸ್ ಈ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಿತ್ತು., ಮೆರವಣಿಗೆಯ ಸಮಯದಲ್ಲಿ ಪೊಲೀಸರು ಮೃತ ದೇಹವನ್ನು ಅವಮಾನಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಮೆರವಣಿಗೆ ವೇಳೆ ಪೊಲೀಸರು ಶವವನ್ನು ತೆಗೆದುಕೊಂಡು ಹೋಗಲು ಯತ್ನಿಸಿದಾಗ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಮೊಹಮ್ಮದ್ ಶಿಯಾಸ್ ಡಿವೈಎಸ್ಪಿಯನ್ನು ತಡೆ ಹಿಡಿದರು. ಇದು ಘರ್ಷಣೆಗೆ ಕಾರಣವಾಯಿತು ಎಂದು ಮ್ಯಾಥ್ಯೂ ಕುಝಲ್ನಾಡನ್ ಆರೋಪಿಸಿದ್ದಾರೆ.” ಎಂದಿದೆ. (ಮಲಯಾಳದಿಂದ ಅನುವಾದಿಸಲಾಗಿದೆ)
ಮಾರ್ಚ್ 5, 2024ರ ಒನ್ ಮನೋರಮಾ ವರದಿ ಪ್ರಕಾರ “ ಶಾಸಕ ಮ್ಯಾಥ್ಯೂ ಕುಳನ್ನಾಡನ್, ಎರ್ನಾಕುಳಂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಶಿಯಾಸ್ ಸೇರಿದಂತೆ 30 ಮಂದಿ ಕಾಂಗ್ರೆಸ್ ಕಾರ್ಯಕರ್ತರನ್ನು ಸೋಮವಾರ ರಾತ್ರಿ ಕೊತ್ತಮಂಗಲದಲ್ಲಿ ಬಂಧಿಸಲಾಗಿದೆ. ಹಿರಿಯ ಮಹಿಳೆಯೊಬ್ಬರು ಆನೆದಾಳಿಯಲ್ಲಿ ಮೃತಪಟ್ಟ ಬಗ್ಗೆ ನಡೆಸಿದ ಪ್ರತಿಭಟನೆ ಸಲುವಾಗಿ ಈ ಬಂಧನ ನಡೆದಿದೆ ಎಂದು ತಿಳಿದು ಬಂದಿದೆ.” ಎಂದಿದೆ. (ಮಲಯಾಳದಿಂದ ಅನುವಾದಿಸಲಾಗಿದೆ)
Also Read: ಕಾಂಗ್ರೆಸ್ ಕಥೆ ಮುಗಿದಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ ಎನ್ನುವುದು ನಿಜವೇ?
ಇದೇ ರೀತಿಯ ವರದಿಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
ಈ ವರದಿಗಳ ಪ್ರಕಾರ ನಾವು ಇನ್ನಷ್ಟು ಶೋಧ ನಡೆಸಿದ್ದು, ಎರ್ನಾಕುಳಂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಪೊಲೀಸರು ಬಂಧಿಸುವ ವೀಡಿಯೋ ಲಭ್ಯವಾಗಿದೆ. ಮಾರ್ಚ್ 5, 2024ರಂದು ಮನೋರಮಾ ನ್ಯೂಸ್ ಟಿವಿ ಫೇಸ್ಬುಕ್ ನಲ್ಲಿ ಮಾಡಿದ ಪೋಸ್ಟ್ ನಲ್ಲಿ “ಎರ್ನಾಕುಲಂ ಡಿಸಿಸಿ ಅಧ್ಯಕ್ಷ ಮುಹಮ್ಮದ್ ಶಿಯಾಸ್ ಅವರನ್ನು ಕೋತಮಂಗಲಂನ ಟೀ ಅಂಗಡಿಯಿಂದ ಪೊಲೀಸರು ಬಲವಂತವಾಗಿ ಕರೆದೊಯ್ದಿದ್ದಾರೆ” ಎಂದಿದೆ. (ಮಲಯಾಳದಿಂದ ಅನುವಾದಿಸಲಾಗಿದೆ) ಈ ವೀಡಿಯೋ ಕೂಡ ವೈರಲ್ ವೀಡಿಯೋದ ಎರಡನೇ ಭಾಗಕ್ಕೆ ಸಾಮ್ಯತೆಯನ್ನು ಹೊಂದಿರುವುದನ್ನು ನಾವು ಗಮನಿಸಿದ್ದೇವೆ.
ಒಟ್ಟಾರೆಯಾಗಿ ಈ ಪ್ರಕರಣ, ಕೊತ್ತಮಂಗಲದಲ್ಲಿ ಆನೆದಾಳಿಯಿಂದ ಮಹಿಳೆಯೊಬ್ಬರು ಮೃತಪಟ್ಟ ಬಗ್ಗೆ ಕಾಂಗ್ರೆಸ್ ಪ್ರತಿಭಟನೆ ನಡೆಸಿದ್ದು, ಈ ವೇಳೆ ಪೊಲೀಸರು ಮೃತದೇಹವನ್ನು ಅಲ್ಲಿಂದ ಸಾಗಿಸಲು ಯತ್ನಿಸಿದ್ದಾರೆ ಈ ವೇಳೆ ಮಾತಿನ ಚಕಮಕಿ, ಘರ್ಷಣೆ ನಡೆದಿದ್ದು, ಎರ್ನಾಕುಳಂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಶಿಯಾಸ್ ಅವರು ಪೊಲೀಸರನ್ನು ಬೈಯ್ದಿದ್ದಾರೆ. ಆ ಬಳಿಕ ಘಟನೆಗೆ ಸಂಬಂಧಿಸಿದಂತೆ ಶಿಯಾಸ್ ಅವರೂ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಲಭ್ಯ ಸಾಕ್ಷ್ಯಾಧಾರಗಳ ಪ್ರಕಾರ, ಕೇರಳ ಪೊಲೀಸರು, ಅಬಕಾರಿ ಸಚಿವರನ್ನು ಬಲಾತ್ಕಾರವಾಗಿ ಎಳೆದುಕೊಂಡು ಹೋಗುತ್ತಿದ್ದಾರೆ ಎನ್ನುವುದು ಸುಳ್ಳಾಗಿದೆ. ಆನೆ ದಾಳಿ ಪ್ರಕರಣ ವಿರುದ್ಧ ಪ್ರತಿಭಟನೆಗೆ, ಮಾತಿನ ಚಕಮಕಿಗೆ ಸಂಬಂಧಿಸಿ ಎರ್ನಾಕುಳಂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಶಿಯಾಸ್ ಅವರನ್ನು ಬಂಧಿಸಿದ ಪ್ರಕರಣ ಇದಾಗಿದೆ.
Also Read: ವಯನಾಡಿನಲ್ಲಿ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಲಾಗಿದೆಯೇ, ಸತ್ಯ ಏನು?
Our Sources
YouTube Video by MediaoneTV Live, Dated: March 4, 2024
Report By samakalikamalayalam, Dated: March 4, 2024
Report By onmanorama, Dated: March 5, 2024
Facebook Post By Manorama News TV, Dated: March 5, 2024
Facebook Page of MB Rajesh, Minister of Kerala for LSGD and Excise
(Inputs By Sabloo Thomas, Newschecker Malayalam)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
November 30, 2024
Prasad Prabhu
November 29, 2024
Prasad Prabhu
November 27, 2024
|