About: http://data.cimple.eu/claim-review/849e9bf92d582b3539364027fbc0101787ccf9aebff5fcef45d83da2     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ನೆಹರುರವರು ಸುಭಾಶ್ ಚಂದ್ರ ಬೋಸ್ರ ಚಿತ್ರವಿರುವ ಹತ್ತು ರೂ. ನೋಟನ್ನು ರದ್ದುಗೊಳಿಸಿಲ್ಲ ನೆಹರುರವರು ಸುಭಾಶ್ ಚಂದ್ರ ಬೋಸ್ರ ಚಿತ್ರವಿರುವ ಹತ್ತು ರೂ. ನೋಟನ್ನು ರದ್ದುಗೊಳಿಸಿಲ್ಲ Claim : ನೆಹರೂ ಸರ್ಕಾರ ಸುಭಾಷ್ ಚಂದ್ರ ಬೋಸ್ ಚಿತ್ರವಿರುವ ಕರೆನ್ಸಿ ನೋಟುಗಳನ್ನು ರದ್ದುಗೊಳಿಸಿದೆFact : ಭಾರತದಲ್ಲಿ ಮಹಾತ್ಮ ಗಾಂಧಿ ಅವರ ಭಾವಚಿತ್ರವನ್ನು ಹೊರತು ಪಡಿಸಿ ಬೇರೆ ಯಾವುದೇ ರಾಷ್ಟ್ರೀಯ ನಾಯಕರ ಚಿತ್ರಗಳನ್ನು ಮುದ್ರಿಸಲಾಗಿಲ್ಲಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಚಿತ್ರವಿರುವ 10 ರೂಪಾಯಿ ನೋಟಿನ ಚಿತ್ರವನ್ನು ತಮ್ಮ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಶೀರ್ಷಿಕೆಯಾಗಿ ʼಇದು ಸುಭಾಷ್ ಚಂದ್ರ ಬೋಸ್ ಅವರ ಚಿತ್ರವಿರುವ ‘ಐತಿಹಾಸಿಕ’ 10 ರೂ. ನೋಟು. ಈ ನೋಟನ್ನು ಜವಾಹರಲಾಲ್ ನೆಹರು ಅವರು ಸ್ಥಗಿತ ಗೊಳಿಸುವ ಮೂಲಕ ನೆಹರೂ ಸುಭಾಶ್ ಚಂದ್ರ ಬೋಸ್ರವರಿಗೆ ಅವಮಾನ ಮಾಡಿದ್ದರುʼ ಎಂದು ಬರೆದು ಹಂಚಿಕೊಳ್ಳುತ್ತಿದ್ದಾರೆ. ಇನ್ನು ಕೆಲವು ವಾಟ್ಸಾಪ್ ಬಳಕೆದಾರರು ಗ್ರೂಪ್ಗಳಲ್ಲಿ ಸುಭಾಷ್ ಚಂದ್ರಬೋಸ್ರವರು ಇರುವ ಹತ್ತು ರೂ. ನೋಟನ್ನು ಹಂಚಿಕೊಂಡು ಶೀರ್ಷಿಕೆಯಾಗಿ ʼನೆಹರೂ ಜೀ ಅವರು ನಿಷೇಧಿಸಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಚಿತ್ರವಿರುವ 10 ರೂಪಾಯಿ ನೋಟು ಮತ್ತೆ ಬರುವಂತೆ ಶೇರ್ ಮಾಡುತ್ತೀರಾ?ʼ ಎಂದು ಬರೆದು ಹಂಚಿಕೊಳ್ಳುತ್ತಿದ್ದಾರೆ. ವಾಟ್ಸಾಪ್ನಲ್ಲಿ ವೈರಲ್ ಆದ ಸುದ್ದಿಯನ್ನು ನೀವಿಲ್ಲಿ ನೋಡಬಹುದು ಕೆಲವರು ನೆಹರೂ ಮತ್ತು ಬೋಸ್ರ ನಡುವೆ ರಾಜಕೀಯ ಭಿನ್ನಾಭಿಪ್ರಾಯಗಳು ಇದ್ದಿದ್ದು ನಿಜ, ಆದರೆ ನೆಹರು ಅವರು ಅದನ್ನು ತೀರ ವೈಯಕ್ತಿಕವಾಗಿ ತೆಗೆದುಕೊಂಡಿದ್ದರು. ಹೀಗಾಗಿ ಸುಭಾಶ್ ಚಂದ್ರ ಬೋಸ್ ಅವರಿಗೆ ಸಿಗಬೇಕಾದ ಯಾವುದೇ ರೀತಿಯಾದ ಗೌರವಗಳು ಸಿಗಲಿಲ್ಲ ಎಂದು ಬರೆದು ಹಂಚಿಕೊಳ್ಳುತ್ತಿದ್ದಾರೆ. ಇದನ್ನು ನೋಡಿದ ಕೆಲವು ಸಾಮಾಜಿಕ ಜಾಲತಾಣದ ಬಳಕೆದಾರರು ತಮ್ಮ ಖಾತೆಗಳಲ್ಲೂ ಹಂಚಿಕೊಂಡಿದ್ದಾರೆ. ವೈರಲ್ ಆದ ಸುದ್ದಿಯನ್ನು ನೀವಿಲ್ಲಿ, ಇಲ್ಲಿ ನೋಡಬಹುದು. ಫ್ಯಾಕ್ಟ್ಚೆಕ್ ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್ ನೋಟು ಸ್ವತಂತ್ರ ಪೂರ್ವ ಭಾರತದಲ್ಲಿ ಮುದ್ರಿಸಲಾಗಿದೆ. ಇದುವರೆಗೂ ಭಾರತದಲ್ಲಿ ಮಹಾತ್ಮ ಗಾಂಧಿ ಅವರ ಭಾವಚಿತ್ರವನ್ನು ಬಿಟ್ಟು ಬೇರೆ ಯಾವುದೇ ರಾಷ್ಟ್ರೀಯ ನಾಯಕರ ಚಿತ್ರಗಳನ್ನು ಮುದ್ರಿಸಲಾಗಿಲ್ಲ ಎಂಬುದು ಆರ್ಬಿಐ ವೆಬ್ಸೈಟ್ನಲ್ಲಿ ಉಲ್ಲೇಖಿಸಿದ್ದಾರೆ. ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ವೈರಲ್ ಆದ ಚಿತ್ರಕ್ಕೆ ಸಂಬಂಧಿಸಿದಂತೆ ಗೂಗಲ್ನಲ್ಲಿ ಕೆಲವು ಪ್ರಮುಖ ಕೀವರ್ಡ್ಗಳ ಮುಖಾಂತರ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಸಾತಂತ್ರ್ಯ ಪೂರ್ವ ಮತ್ತು ನಂತರ ಬಿಡುಗಡೆಯಾದ ನೋಟುಗಳು ಮತ್ತು ನಾಣ್ಯಗಳ ವಿವರವಾದ ಪಟ್ಟಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ವೆಬ್ಸೈಟ್ನಲ್ಲಿ ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು. ವೈಬ್ಸೈಟ್ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಸ್ವತಂತ್ರ ಭಾರತದ ಮೊದಲ ಬ್ಯಾಂಕ್ ನೋಟನ್ನು 1949ರಲ್ಲಿ ಒಂದು ರೂಪಾಯಿ ಬ್ಯಾಂಕ್ ನೋಟನ್ನು ಬಿಡುಗಡೆ ಮಾಡಲಾಯಿತು, ಇದಾದ ನಂತರ ಹಲವು ನೋಟಗಳನ್ನು ಆರ್ಬಿಐ ಬಿಡುಗಡೆ ಮಾಡಿದರೂ ಸ್ವತಂತ್ರ ಭಾರತದಲ್ಲಿ ವ್ಯಕ್ತಿಗತವಾಗಿ ಮಹಾತ್ಮ ಗಾಂಧಿರವರನ್ನು ಹೊರತು ಪಡಿಸಿ ಇನ್ಯಾವುದೇ ರಾಷ್ಟ್ರೀಯ ನಾಯಕರ ಫೋಟೋಗಳು ಭಾರತೀಯ ಕರೆನ್ಸಿ ನೋಟುಗಳಲ್ಲಿ ಮುದ್ರಣವಾಗಿರುವುದು ನಮಗೆ ಕಂಡು ಬಂದಿಲ್ಲ. ಮತ್ತಷ್ಟು ಮಾಹಿತಿಯನ್ನು ಕಲೆಹಾಕಲು ನಾವು ಗೂಗಲ್ನಲ್ಲಿ ಮತ್ತಷ್ಟು ಹಗುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ನವಂಬರ್ 17, 2021ರಂದು ʼದಿ ಹಿಂದೂʼ ವೆಬ್ಸೈಟ್ನಲ್ಲಿ ʼNetaji currency made publicʼ ಎಂಬ ಶೀರ್ಷಿಕೆಯೊಂದಿಗೆ ವರದಿಯೊಂದು ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು. ವರದಿಯಲ್ಲಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 113 ನೇ ಜನ್ಮ ದಿನಾಚರಣೆಯ ಮುನ್ನಾದಿನದಂದು ಅವರ ಬ್ಯಾಂಕ್ ಆಫ್ ಇಂಡಿಪೆಂಡೆನ್ಸ್ ಬಿಡುಗಡೆ ಮಾಡಿದ ಕರೆನ್ಸಿಯನ್ನು ಇಲ್ಲಿ ಸಾರ್ವಜನಿಕಗೊಳಿಸಲಾಗಿದ್ದು, ಅವರ ಬೆಂಬಲಿಗರಲ್ಲಿ ಈ ಸುದ್ದಿ ಸಂಭ್ರಮಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ. ಜನವರಿ 23, 2025ರಂದು ಎಕ್ಸ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼIn 1944, Netaji Subhas Chandra Bose established the Azad Hind Bank in Rangoon, Burma, to fund the war against the British, The aim was to print Indian currency notes to manage contributions from Indians worldwide. In the 1980s, Ram Kishore Dubey, a retired contractor, found one of these rare notes in his grandfather's Ramayana. His grandfather, Praagilal, a dedicated member of the Indian National Army (INA), received this note as a reward from Netaji for his covert work in the Bundelkhand region. The note, valued at one lakh, featured Bose's photograph, a pre-independence map of India, and the bold inscription 'Bank of Independence'. For those curious, the Netaji Subhas Chandra Bose Birthplace Museum in Cuttack, Odisha, houses a rare collection of coins and currency notes which were issued by the Azad Hind Bankʼ ಎಂಬ ಶೀರ್ಷಿಕೆಯೊಂದಿಗೆ ಸುಭಾಷ್ ಚಂದ್ರ ಬೋಸ್ರವರಿರುವ ಹತ್ತು ರೂ. ನೋಟನ್ನು ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼ1944 ರಲ್ಲಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಬ್ರಿಟಿಷರ ವಿರುದ್ಧದ ಯುದ್ಧಕ್ಕಾಗಿ ಹಣವನ್ನು ಸಂಗ್ರಹಿಸಲು ಬರ್ಮಾದ ರಂಗೂನ್ನಲ್ಲಿ ಆಜಾದ್ ಹಿಂದ್ ಬ್ಯಾಂಕ್ ಅನ್ನು ಸ್ಥಾಪಿಸಿದರು. ಪ್ರಪಂಚದಾದ್ಯಂತದ ಭಾರತೀಯರಿಂದ ಬಂದ ಕೊಡುಗೆಗಳನ್ನು ನಿರ್ವಹಿಸಲು ಭಾರತೀಯ ಕರೆನ್ಸಿ ನೋಟುಗಳನ್ನು ಮುದ್ರಿಸುವುದು ಇದರ ಉದ್ದೇಶವಾಗಿತ್ತು. 1980 ರ ದಶಕದಲ್ಲಿ, ನಿವೃತ್ತ ಗುತ್ತಿಗೆದಾರ ರಾಮ್ ಕಿಶೋರ್ ದುಬೆ ಅವರ ಅಜ್ಜ ರಾಮಾಯಣ ಪುಸ್ತಕದಲ್ಲಿ ಇಟ್ಟಿದ್ದ ಈ ಅಪರೂಪದ ನೋಟುಗಳಲ್ಲಿ ಒಂದನ್ನು ಕಂಡುಕೊಂಡರು. ಅವರ ಅಜ್ಜ ಪ್ರಗಿಲಾಲ್ ಅವರು ಭಾರತೀಯ ರಾಷ್ಟ್ರೀಯ ಸೇನೆಯ ಸದಸ್ಯರಾಗಿದ್ದರು ಮತ್ತು ಬುಂದೇಲ್ಖಂಡ್ ಪ್ರದೇಶದಲ್ಲಿ ಅವರ ರಹಸ್ಯ ಕೆಲಸಕ್ಕಾಗಿ ನೇತಾಜಿ ಅವರು ಈ ನೋಟನ್ನು ಬಹುಮಾನವಾಗಿ ನೀಡಿದರುʼ ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು. ದಿ ಹಿಂದೂ ವೆಬ್ಸೈಟ್ನಲ್ಲಿ ʼ1 ಲಕ್ಷ ರೂಪಾಯಿ ಮೌಲ್ಯದ ಆ ನೋಟಿನಲ್ಲಿ ಬೋಸ್ರವರ ಚಿತ್ರ, ಸ್ವಾತಂತ್ರ್ಯ ಪೂರ್ವದ ಭಾರತದ ನಕ್ಷೆ ಮತ್ತು ‘ಬ್ಯಾಂಕ್ ಆಫ್ ಇಂಡಿಪೆಂಡೆನ್ಸ್’ʼ ಎಂದು ಬರೆದಿರುವುದನ್ನು ನಾವು ಕಂಡುಕೊಂಡೆವು. ಒಡಿಶಾ ಕಟಕ್ನಲ್ಲಿ ನೇತಾಜಿರುವರಿಗೆ ಸಂಬಂಧಿಸಿದ ಮ್ಯೂಸಿಯಂನಲ್ಲಿ ಆಜಾದ್ ಹಿಂದ್ ಬ್ಯಾಂಕ್ ಹೊರಡಿಸಿದ ನಾಣ್ಯಗಳು ಮತ್ತು ಕರೆನ್ಸಿ ನೋಟುಗಳ ಅಪರೂಪದ ಸಂಗ್ರಹವನ್ನು ಮಾಡಿದ್ದಾರೆ. ಈ ಮ್ಯೂಸಿಯಂಗೆ ಸಂಬಂಧಿಸಿದ ಪೋರ್ತಿ ವಿವರಗಳು ಒಡಿಶಾ ಸರ್ಕಾರದ ವೆಬ್ಸೈಟ್ನಲ್ಲಿ ಲಭ್ಯವಿದೆ. ಕನಿಲಾಲ್ ಬಸು ರಚಿಸಿರುವ ‘ನೇತಾಜಿ: ರೀಡಿಸ್ಕವರ್ಡ್’ ಪುಸ್ತಕವು ದೇಬ್ನಾಥ್ ದಾಸ್ ಅಧ್ಯಕ್ಷರಾಗಿದ್ದ ಸುಭಾಷ್ ಚಂದ್ರ ಬೋಸ್ ಸ್ಥಾಪಿಸಿದ ಆಜಾದ್ ಹಿಂದ್ ಬ್ಯಾಂಕ್ ಬಗ್ಗೆಯೂ ಉಲ್ಲೇಖಿಸಿರುವುದನ್ನು ನಾವೀ ಪುಸ್ತಕದಲ್ಲಿ ನೋಡಬಹದು. ಈ ಪುಸ್ತಕವನ್ನು ಸೂಕ್ಷವಾಗಿ ಓದಿದ ನಂತರ ನಮಗೆ ತಿಳಿದಿದ್ದೇನೆಂದರೆ, ಸುಭಾಶ್ ಚಂದ್ರ ಬೋಸ್ ಅವರ ಫೋಟೋ ಹೊಂದಿರುವ ಕರೆನ್ಸಿಯನ್ನು ಸ್ವತಂತ್ರ ಭಾರತದಲ್ಲಿ ಮುದ್ರಿಸಿಲ್ಲ ಎಂಬುದು ಖಚಿತವಾಗಿದೆ. ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ನ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್ ನೋಟು ಸ್ವತಂತ್ರ ಪೂರ್ವ ಭಾರತದಲ್ಲಿ ಮುದ್ರಿಸಲಾಗಿದೆ. ಇದುವರೆಗೂ ಭಾರತದಲ್ಲಿ ಮಹಾತ್ಮ ಗಾಂಧಿ ಅವರ ಭಾವಚಿತ್ರವನ್ನು ಹೊರತು ಪಡಿಸಿ ಬೇರೆ ಯಾವುದೇ ರಾಷ್ಟ್ರೀಯ ನಾಯಕರ ಚಿತ್ರಗಳ ನೋಟನ್ನು ಮುದ್ರಿಸಲಾಗಿಲ್ಲ ಎಂಬುದು ಆರ್ಬಿಐ ವೆಬ್ಸೈಟ್ನಿಂದಲೂ ಖಚಿತವಾಗಿದೆ.
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 11 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software