About: http://data.cimple.eu/claim-review/8d06135eec6e4c9220ada55b1dc995dc7084d0d90fc6bd40a4f934d7     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ಕರ್ನಾಟಕದಲ್ಲಿ ಹಿಂದೂ ಮಹಿಳೆಯೊಂದಿಗೆ ಬರುವ ಮುಸ್ಲಿಂ ಪುರುಷರಿಗೆ ರಿಯಾಯಿತಿ ನೀಡಲಾಗುವುದು ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ. ಕರ್ನಾಟಕದಲ್ಲಿ ಹಿಂದೂ ಮಹಿಳೆಯೊಂದಿಗೆ ಬರುವ ಮುಸ್ಲಿಂ ಪುರುಷರಿಗೆ ರಿಯಾಯಿತಿ ನೀಡಲಾಗುವುದು ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ. Claim :ಕರ್ನಾಟಕದಲ್ಲಿರುವ ಮಾಲ್ನಲ್ಲಿ ಹಿಂದೂ ಮಹಿಳೆಯೊಂದಿಗೆ ಬರುವ ಮುಸ್ಲಿಂ ಪುರುಷರಿಗೆ ರಿಯಾಯಿತಿ ನೀಡಲಾಗುವುದು Fact :ತೆಲಂಗಾಣದಲ್ಲಿರುವ ಸಿಎಂಆರ್ ಶಾಪಿಂಗ್ ಮಾಲ್ಗೆ ಸಂಬಂಧಿಸಿದ್ದು, ಕರ್ನಾಟಕದ ಮಾಲ್ಗೆ ಸಂಬಂಧಿಸಿದಲ್ಲ. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಸಿಎಂಆರ್ ಶಾಪಿಂಗ್ ಮಾಲ್ನ ಪೋಸ್ಟರ್ವೊಂದನ್ನು ಸಾಮಾಜಿಕ ಮಾಧ್ಯಮದ ಬಳಕೆದಾರರು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ವೈರಲ್ ಆಗುತ್ತಿರುವ ಬ್ಯಾನರ್ ಕರ್ನಾಟಕದ ಮಾಲ್ನದ್ದು ಎಂದು ಹೇಳಲಾಗುತ್ತಿದೆ. ಈ ಬ್ಯಾನರ್ನ್ನು ನಾವು ನೋಡುವುದಾದರೆ, ಸೀರಿಯನ್ನುಟ್ಟ ಮಹಿಳೆಯ ಜೊತೆಗೆ ಮುಸ್ಲಿಂ ವ್ಯಕ್ತಿಯೊಬ್ಬ ಇಸ್ಲಾಮಿಕ್ ಕ್ಯಾಪನ್ನು ಧರಿಸಿ ನಿಂತಿರುವುದನ್ನು ನಾವು ನೋಡಬಹುದು. ಹಾಗೆ ಬ್ಯಾನರ್ನಲ್ಲಿ ಹಿಂದೂ ಮಹಿಳೆಯೊಂದಿಗೆ ಶಾಪಿಂಗ್ ಮಾಡಲು ಬರುವ ಮುಸ್ಲಿಂ ಪುರುಷರಿಗೆ ಶೇ.10 ರಿಂದು 50%ರಷ್ಟು ರಿಯಾಯಿತಿ ಪಡೆಯಬಹುದು ಎಂಬುದನ್ನು ನಾವು ಬ್ಯಾನರ್ನಲ್ಲಿ ನೋಡಬಹುದು. ಅಕ್ಟೋಬರ್ 1,2024ರಂದು ʼಇಂಡಿಯಾ ಕ್ರಾಕ್ಸ್ʼ ಎಂಬ ಎಕ್ಸ್ ಖಾತೆಯಲ್ಲಿ ವೈರಲ್ ಆದ ಪೋಸ್ಟರ್ನ್ನು ಹಂಚಿಕೊಂಡು ʼHindus in #Karnataka voted @INCIndia by felling to its propaganda. Now all those Hindus are in hiding as Congress is propagating its Secularism a.k.a #MuslimAppeasement with full force since then. What has Hindus achieved by bringing this #AntiHindu govt in Hindu-Majority state?" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಹಾಗೆ ಫೋಟೋವಿನಲ್ಲಿ "Muslims come to the mall with any Hindu girl and get discount of 10% to 50%. I am not saying thi̧s it is written in the above poster where the congress government has been formed. #Karnataka" ಎಂದು ಪೋಸ್ಟ್ರ್ನಲ್ಲಿ ಇರುವುದನ್ನು ನಾವು ಕಾಣಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ "ಕರ್ನಾಟಕದಲ್ಲಿ ಹಿಂದೂಗಳು ಮತವನ್ನು ಚಲಾಯಿಸಿ ಕಾಂಗ್ರೆಸ್ನ್ನು ಗೆಲ್ಲಿಸಿದರು, ಆದರೆ ಕಾಂಗ್ರೆಸ್ ಸರ್ಕಾರ ಜಾತ್ಯತೀತತೆಗೆ ಮಣಿದು ಮುಸ್ಲಿಂರನ್ನು ಪ್ರಚಾರ ಮಾಡುತ್ತಿದೆ. ಹಿಂದೂ ವಿರೋಧಿ ಸರ್ಕಾರವನ್ನು ತಂದು ಹಿಂದೂಗಳು ಏನು ಸಾಧಿಸಿದ್ದೀರಿ? ಮತ ಹಾಕಿದವರೆಲ್ಲಾ ಈಗ ಎಲ್ಲಿ ತಲೆಮರೆಸಿಕೊಂಡಿದ್ದೀರಿ? ಎಂದು ಬರೆದಿರುವುದನ್ನು ನಾವಿಉ ನೋಡಬಹುದು. ಹಾಗೆ ಕ್ಯಾಪ್ಷನ್ನಲ್ಲಿ "ಹಿಂದೂ ಮಹಿಳೆಯೊಂದಿಗೆ ಶಾಪಿಂಗ್ಗೆ ಬರುವ ಮುಸ್ಲಿಂ ಪುರುಷರಿಗೆ ಶೇ.10 ರಿಂದು 50%ರಷ್ಟು ರಿಯಾಯಿತಿ ನೀಡಲಾಗುವುದು. ಇದು ನಾನು ಹೇಳಿದ್ದಲ್ಲ, ಕಾಂಗ್ರೆಸ್ ಸರ್ಕಾರ ರಚಿಸಿದ ಈ ಪೋಸ್ಟರ್ನಲ್ಲಿರುವುದು" ಎಂದಿರುವುದನ್ನು ನಾವು ನೋಡಬಹುದು. Hindus in #Karnataka voted @INCIndia by felling to its propaganda. Now all those Hindus are in hiding as Congress is propagating its Secularism a.k.a #MuslimAppeasement with full force since then. What has Hindus achieved by bringing this #AntiHindu govt in Hindu-Majority state? pic.twitter.com/1FWuOgx6n3— India Crooks (@IndiaCrooks) October 1, 2024 ʼಅನಿಲ್ ಸಿಂಗ್ʼ ಎಂಬ ಫೇಸ್ಬುಕ್ ಖಾತೆದಾರ "कन्नड़ में बोर्ड कहता है कि हिंदू लड़की/महिला के साथ आने वाले किसी भी मुस्लिम पुरुष को 10 से 50% की छूट मिलेगी। लवजिहाद का इससे अधिक खुला निमंत्रण कभी नहीं देखा" ಎಂಬ ಶೀರ್ಷಿಕೆಯೊಂದಿಗೆ ಪೋಸ್ಟರ್ನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ "ಕನ್ನಡದಲ್ಲಿರುವ ಈ ಬೋರ್ಡ್ನಲ್ಲಿ ಹಿಂದೂ ಮಹಿಳೆಯೊಂದಿಗೆ ಶಾಪಿಂಗ್ಗೆ ಬರುವ ಮುಸ್ಲಿಂ ಪುರುಷರಿಗೆ ಶೇ.10 ರಿಂದು 50%ರಷ್ಟು ರಿಯಾಯಿತಿ ನೀಡಲಾಗುವುದು, ಲವ್ಜಿಹಾದ್ಗೆ ಇದಕ್ಕಿಂತ ಮುಕ್ತ ಆಹ್ವಾನವನ್ನು ನಾವು ಇದು ಇದುವರೆಗೆ ನೋಡಿಲ್ಲ" ಎಂದು ಬರೆದು ಹಂಚಿಕೊಂಡಿದ್ದಾರೆ. CMR Shopping Mall, Telangana— 🇮🇳Jitendra pratap singh🇮🇳 (@jpsin1) October 10, 2024 50% discount for couples of Muslims Man - Hindu women... pic.twitter.com/WMPT3KfrF3 ಫ್ಯಾಕ್ಟ್ಚೆಕ್ ವೈರಲ್ ಆದ ಪೋಸ್ಟರ್ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಈ ಪೋಸ್ಟರ್ ಕರ್ನಾಟಕದಲ್ಲಿರುವ ಯಾವುದೇ ಮಾಲ್ಗೆ ಸಂಬಂಧಿಸಿದಲ್ಲ, ತೆಲಂಗಾಣದಲ್ಲಿರುವ ಸಿಎಂಆರ್ ಶಾಪಿಂಗ್ ಮಾಲ್ಗೆ ಸಂಬಂಧಿಸಿದ್ದು. ನಾವು ವೈರಲ್ ಆದ ಸುದ್ದಿಯಲ್ಲಿರುವ ಸತ್ಯಾಸತ್ಯತೆಯನ್ನು ತಿಳಿಯಲು ಪೋಸ್ಟ್ರನ್ನು ನಾವು ಗೂಗಲ್ ಲೆನ್ಸ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ವೈರಲ್ ಆದ ಪೋಸ್ಟ್ರ್ನಲ್ಲಿ ಕಾಣುವುದು ತೆಲುಗು ಭಾಷೆಯೆಂದು ನಮಗೆ ತಿಳಿಯಿತು. ತೆಲುಗು ಭಾಷೆಯನ್ನು ನಾವು ಗೂಗಲ್ ಲೆನ್ಸ್ನಲ್ಲಿ ಕಾಣುವ ಅನುವಾದದ ಕೀಯಿಂದ ಪೋಸ್ಟ್ರ್ನಲ್ಲಿ ಕಾಣುವ ಭಾಷೆಯನ್ನು ಅನುವಾದಿಸಿದೆವು. ಈ ಪೋಸ್ಟ್ರ್ನಲ್ಲಿ ಎಲ್ಲಿಯೂ ಸಹ ಹಿಂದೂ ಯುವತಿಯೊಂದಿಗೆ ಮುಸ್ಲಿಂ ಯುವಕರು ಬಂದರೆ ರಿಯಾಯಿತಿ ನೀಡಲಾಗುವುದು ಎಂದು ಬರೆದಿಲ್ಲ. ಈ ಬ್ಯಾನರ್ನಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಮೇ 20ರಿಂದ ಜೂನ್ 5ರವರಗೆ ಶೇ10ರಿಂದ 50% ರಿಯಾಯಿತಿ ನೀಡಲಾಗುವುದು ಎಂದು ಬರೆದಿರುವುದನ್ನು ನೋಡಬಹುದು. ಹಾಗೆ ನಾವು ಬ್ಯಾನರ್ನಲ್ಲಿ ತೆಲಂಗಾಣದಲ್ಲಿನ ಸಿಎಂಆರ್ ಶಾಪಿಂಗ್ ಮಾಲ್ನ ಹೆಸರನ್ನು ನೋಡಬಹುದು ಹಾಗೆ ಆ ಮಾಲ್ಗೆ ಸಂಬಂಧಿಸಿದ ವಿವಿದ ಶಾಖೆಗಳನ್ನೂ ಸಹ ನಾವು ಕಾಣಬಹುದು. ಪ್ಯಾಟ್ನಿ ಸೆಂಟರ್(ಸಿಕಿಂದ್ರಾಬಾದ್), ಮಲ್ಕಾಜಿಗಿರಿ(ಹೈದರಾಬಾದ್), ಮಂಜ್ನು ಥಿಯೇಟರ್ ಪಕ್ಕ(ಸಿಕಿಂದ್ರಾಬಾದ್), ಸಿದ್ದಿಪೇಟ, ಮಹಬೂಬ್ನಗರ್ನಲ್ಲಿ ಸಿಎಂಆರ್ ಮಾಲ್ನ ವಿವಿಡಧ ಶಾಖೆಗಳಿರುವುದನ್ನು ನಾವು ವೈರಲ್ ಆದ ಬ್ಯಾನರ್ನಲ್ಲಿ ನೋಡಬಹುದು. ಇಷ್ಟೇ ಬಿಟ್ಟು ಮಾಲ್ಗೆ ಹಿಂದೂ ಯುವತಿಯೊಂದಿಗೆ ಮುಸ್ಲಿಂ ಯುವಕರು ಬಂದರೆ ರಿಯಾಯಿತಿ ನೀಡಲಾಗುವುದು ಎಂದು ಎಲ್ಲಿಯೂ ಸಹ ಉಲ್ಲೇಖವಾಗಿಲ್ಲ. ಎಸ್ಜಿಎಸ್ ಟಿವಿ ನ್ಯೂಸ್ ವೆಬ್ಸೈಟ್ನಲ್ಲಿ "హిందూ-ముస్లిం జంటలకు 50 శాతం డిస్కౌంట్.. CMR లవ్ జిహాద్ రచ్చ!" ಎಂಬ ಶೀರ್ಷಿಕೆಯೊಂದಿಗೆ ವರದಿಯೊಂದನ್ನು ಹಂಚಿಕೊಳ್ಳಲಾಗಿದೆ. ವರದಿಯಲ್ಲಿ ಸಿಎಂಆರ್ ಶಾಪಿಂಗ್ ಮಾಲ್ನ ಆಡಳಿತ ಮಂಡಳಿ ಈ ಸುದ್ದಿಯನ್ನು ತಳ್ಳಿ ಹಾಕಿದೆ. ಇತ್ತೀಚಿಗೆ ಸಿಎಂಆರ್ ಶಾಪಿಂಗ್ ಮಾಲ್ ಲವ್ಜಿಹಾದ್ನ್ನು ಪ್ರೋತ್ಸಾಹಿಸುತ್ತಿದೆ ಎಂದು ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಈ ಬ್ಯಾನರ್ 2023ರದ್ದು ಹಾಗೆ ನಾವು ಯಾವುದೇ ಲವ್ಜಿಹಾದ್ನ್ನು ಪ್ರೋತ್ಸಾಹಿಸುತ್ತಿಲ್ಲ. ಬ್ಯಾನರ್ನ್ನು ಬಳಸಿಕೊಂಡು, ಲೋಗೋವನ್ನು ಮಾರ್ಫಿಂಗ್ ಮಾಡಿ ಕಿಡಿಗೇಡಿಗಳು ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಪ್ರಚಾರವನ್ನು ಮಾಡುತ್ತಿದ್ದಾರೆ ಎಂದು ಸಿಎಂಆರ್ನ ಅಧ್ಯಕ್ಷ ಚಂದನ ಮೋಹನ್ರಾವ್ ಸ್ಪಷ್ಟಪಡಿಸಿದ್ದಾರೆ ಎಂದು ವರದಿಯಾಗಿದೆ. ನಾವು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದಾಗ ನಮಗೆ ಜೂನ್3, 2019ರಂದು ಪ್ರಗತಿ ನ್ಯೂಸ್ ಫೇಸ್ಬುಕ್ನಲ್ಲಿ ಬ್ಯಾನರ್ನ್ನು ಹಂಚಿಕೊಂಡು "RSS & BJP MLA Raja Singh Warned CMR Shopping Mall over their Ramzan advertisement. They Asked to immediately remove this Banners from all over the City. They said "Are You Trying To Encourage LoveJihad.? Why Hindu Woman with Muslim Guy.? If You don't Remove this type of Banners we will Ban Your Mall"" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ "ಆರ್ಎಸ್ಎಸ್ ಮತ್ತು ಬಿಜೆಪಿ ಎಂಎಲ್ಎ ರಾಜ್ ಸಿಂಗ್ ಸಿಎಂಆರ್ ಶಾಪಿಂಗ್ ಮಾಲ್ನ ಜಾಹೀರಾತನ್ನು ಕುರಿತು ಎಚ್ಚರಿಕೆ ನೀಡಿದ್ದಾರೆ ಅಷ್ಟೇ ಅಲ್ಲ ಬ್ಯಾನರ್ನ್ನು ಸಹ ತೆಗೆಯಲು ಹೇಳಿದ್ದಾರೆ" ಎಂದು ಬರೆಯಲಾಗಿದೆ. ಮೇ 31, 2019ರಂದು ಸಿಎಂಆರ್ ಶಾಪಿಂಗ್ ಮಾಲ್ನ ಫೇಸ್ಬುಕ್ ಅಧಿಕೃತ ಪೇಜ್ನಲ್ಲಿ ಶಾಪ್ನಲ್ಲಿ ಬ್ಯಾನರ್ನ ಕುರಿತು ಕ್ಷಮೆಯಾಚಿಸಿದ ಪೋಸ್ಟ್ವೊಂದನ್ನು ನಾವು ಕಂಡುಕೊಂಡೆವು. Apologies for the blunder from the entire CMR Telangana Group. We have no intentions of hurting any religious sentiments or create any distinction. We support all religions and respect every community with no bias. All the hoardings have been removed and we assure to not repeat anything of this sort in future. CMR Shopping mall Andhra Pradesh is in no way associated or related with this" ಎಂದು ಬರೆದು ಪೋಸ್ಟ್ ಮಾಡಿದ್ದರು. ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಿದಾಗ "ನಾವು ಇಡೀ ಸಿಎಂಆರ್ ಪರವಾಗಿ ಕ್ಷಮೆಯಾಚಿಸುತ್ತೇವೆ, ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಲು ಅಥವಾ ಜನರಲ್ಲಿ ತಾರತಮ್ಯವನ್ನು ಸೃಷ್ಟಿಸುವ ಉದ್ದೇಶ ನಮ್ಮದಲ್ಲ. ನಾವು ಎಲ್ಲಾ ಧರ್ಮದವರನ್ನು ಗೌರವಿಸುತ್ತೇವೆ ಹಾಗೆ ಪ್ರೀತಿಸುತ್ತೇವೆ. ನಾವು ಎಲ್ಲಾ ಬ್ಯಾನರ್ನ್ನು ತೆಗೆಸುತ್ತೇವೆ ಮತ್ತೊಮ್ಮೆ ಇಂತಹ ತಪ್ಪು ಪುನರಾವರ್ತನೆಯಾಗುವುದಿಲ್ಲ ಎಂದು ನಾವು ಭರವಸೆ ನೀಡುತ್ತೇವೆ" ಎಂದು ಬರೆದು ಕ್ಷಮೆಯಾಚಿಸಿರುವುದನ್ನು ನಾವು ನೋಡಬಹುದು. ಹೀಗಾಗಿ ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಈ ಪೋಸ್ಟರ್ ಕರ್ನಾಟಕದಲ್ಲಿರುವ ಯಾವುದೇ ಮಾಲ್ಗೆ ಸಂಬಂಧಿಸಿದಲ್ಲ, ತೆಲಂಗಾಣದಲ್ಲಿರುವ ಸಿಎಂಆರ್ ಶಾಪಿಂಗ್ ಮಾಲ್ಗೆ ಸಂಬಂಧಿಸಿದ ಹಳೆಯ ಬ್ಯಾನರ್ ಅದು.
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 11 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software