schema:text
| - Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact checks doneFOLLOW US
Fact Check
Claim
ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ
Fact
ವೈರಲ್ ವೀಡಿಯೋ ಅಯೋಧ್ಯೆಯ ರಾಮ ಮಂದಿರವಲ್ಲ, ಇದು ನವರಾತ್ರಿ ಸಂದರ್ಭ ಕೋಲ್ಕತಾದಲ್ಲಿ ಹಾಕಲಾದ ದುರ್ಗಾ ಪೂಜೆಯ ಪೆಂಡಾಲ್ ಆಗಿದೆ
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಸಂಪೂರ್ಣಗೊಂಡಿದೆ ಎಂದು ಕ್ಲೇಮ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಇದರಲ್ಲಿ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವ ಮಂದಿರದ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗಿದೆ.
Fact Check: ಸಂಸತ್ ದಾಳಿಯ ಆರೋಪಿಗೆ ಎಸ್ಎಫ್ಐ ಲಿಂಕ್ ಎಂದು ಮೈಸೂರು ಎಸ್ಎಫ್ಐ ಅಧ್ಯಕ್ಷರ ಪೋಟೋ ವೈರಲ್
ಈ ವೈರಲ್ ವೀಡಿಯೋ ಬಗ್ಗೆ ನಾವು ಸತ್ಯಶೋಧನೆ ನಡೆಸಿದ್ದು ಇದು ಸುಳ್ಳು ಎಂದು ಕಂಡುಕೊಂಡಿದ್ದೇವೆ.
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ವೇಳೆ ಹಲವು ಫಲಿತಾಂಶಗಳು ಲಭ್ಯವಾಗಿವೆ.
ಅಕ್ಟೋಬರ್ 23, 2023ರಂದು ಆಲ್ವೇಸ್ ಬ್ಯುಸಿ ಗೇಮಿಂಗ್ ಯೂಟ್ಯೂಬ್ ಚಾನೆಲ್ನಲ್ಲಿ “Santosh Mitra Square Ram Mandir Theme Durga Puja Pandal 2023- 360°VR Walking Tour” ಶೀರ್ಷಿಕೆಯಡಿ ವೀಡಿಯೋ ಹಾಕಲಾಗಿದ್ದು, ರಾಮ ಮಂದಿರವನ್ನು ಹೋಲುವ ದುರ್ಗಾ ಪೂಜೆ ಪೆಂಡಾಲನ್ನು ತೋರಿಸಿದೆ. ಕೋಲ್ಕತಾದ ಬೋವ್ ಬಝಾರ್ ಸಂತೋಷ್ ಪಾರ್ಕ್ನ ನಲ್ಲಿ ಈ ಪೆಂಡಾಲ್ ಹಾಕಲಾಗಿದೆ ಎಂದು ವೀಡಿಯೋದ ವಿವರಣೆಯಲ್ಲಿದೆ.
ಇದನ್ನು ಸಾಕ್ಷ್ಯವಾಗಿ ಪರಿಗಣಿಸಿ ನಾವು ಇನ್ನಷ್ಟು ಶೋಧ ನಡೆಸಿದ್ದೇವೆ. ಅಕ್ಟೋಬರ್ 18, 2023ರಂದು ಹಿಂದೂಸ್ತಾನ್ ಟೈಮ್ಸ್ ಪ್ರಕಟಿಸಿದ ವರದಿಯಲ್ಲಿ, “ಕೋಲ್ಕತಾದ ದುರ್ಗಾಪೂಜೆಯಲ್ಲಿ ರಾಮ ಮಂದಿರದ ನೋಟ” ಶೀರ್ಷಿಕೆಯಡಿ ರಾಮ ಮಂದಿರವನ್ನು ಹೋಲುವ ಬೃಹತ್ ಪೆಂಡಾಲ್ ಕುರಿತಾದ ವರದಿ, ಫೊಟೋಗಳನ್ನು ಕೊಡಲಾಗಿದೆ.
ಅಕ್ಟೋಬರ್ 24, 2023ರಂದು ಔಟ್ ಲುಕ್ ಪ್ರಕಟಿಸಿದ ವರದಿಯಲ್ಲೂ “ಭಾರೀ ಜನಸ್ತೋಮ ಕಂಡ ಕೋಲ್ಕತಾದ ದುರ್ಗಾಪೂಜೆಯ ರಾಮ ಮಂದಿರ ಪೆಂಡಾಲ್” ಶೀರ್ಷಿಕೆಯಲ್ಲಿ ಫೋಟೋಗಳನ್ನು ಕೊಡಲಾಗಿದೆ.
ಮೇಲಿನ ವರದಿಗಳಲ್ಲೆಲ್ಲವೂ ವೈರಲ್ ವೀಡಿಯೋವನ್ನು ಹೋಲುವ ದೃಶ್ಯಗಳನ್ನು ನಾವು ಗಮನಿಸಿದ್ದೇವೆ. ಇದರೊಂದಿಗೆ ಅಯೋಧ್ಯೆಯಲ್ಲಿ ರಾಮ ಮಂದಿರ ಕೆಲಸಗಳು ಇನ್ನೂ ಪೂರ್ಣಗೊಂಡಿಲ್ಲ. ಅದಿನ್ನೂ ನಡೆಯುತ್ತಿದೆ ಎನ್ನುವುದನ್ನೂ ಗಮನಿಸಿದ್ದೇವೆ.
Also Read: ಓಂ ನಮಃ ಶಿವಾಯ ಎಂದು ಹೇಳುವುದು ತಮಿಳಿನಾಡಿನಲ್ಲಿ ಅಪರಾಧವೇ, ವೀಡಿಯೋ ಹಿಂದಿನ ಸತ್ಯ ಏನು?
ಈ ಕುರಿತು ಸಿಎನ್ಎನ್ ನ್ಯೂಸ್ 18 ಯೂಟ್ಯೂಬ್ ಚಾನೆಲ್ ನವೆಂಬರ್ 24, 2023ರಂದು ಹಾಕಿದ ವೀಡಿಯೋ ದಲ್ಲಿ ರಾಮ ಮಂದಿರ ವೇದಿಕೆ ಮುಖ್ಯಸ್ಥ ನೃಪೇಂದ್ರ ಮಿಶ್ರಾ ಅವರನ್ನು ಮಾತನಾಡಿಸಿದ್ದು, ರಾಮ ಮಂದಿರದ ಇತ್ತೀಚಿನ ನಿರ್ಮಾಣ ಹಂತದ ದೃಶ್ಯ ತೋರಿಸಲಾಗಿದೆ.
ಇದೇ ರೀತಿಯ ವರದಿಯನ್ನು ಇಲ್ಲಿ ನೋಡಬಹುದು
ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ, ಅಯೋಧ್ಯೆಯಲ್ಲಿ ರಾಮ ಮಂದಿರದ ಕೆಲಸಗಳುಇನ್ನೂ ಪೂರ್ಣಗೊಂಡಿಲ್ಲ. ಈಗ ವೈರಲ್ ಆಗಿರುವುದು ನವರಾತ್ರಿ ಸಂದರ್ಭದಲ್ಲಿ ಕೋಲ್ಕತಾದಲ್ಲಿ ಮಾಡಿದ ದುರ್ಗಾ ಪೂಜೆಯ ಪೆಂಡಾಲ್ ಎನ್ನುವುದು ಖಾತ್ರಿಯಾಗಿದೆ.
Also Read: ಕಾಂಗ್ರೆಸ್ ಸಂಸದರ ಬಳಿ ಸಿಕ್ಕಿದ ಹಣ ಎಂದು ಕೋಲ್ಕತಾ ಇಡಿ ದಾಳಿ ಪ್ರಕರಣದ ವೀಡಿಯೋ ವೈರಲ್
Our Sources:
YouTube Video By Always Busy Gaming, Dated: October 23, 2023
Report By Hindustan Times, Dated: October 18, 2023
Report By Outlook, Dated: October 18, 2023
YouTube Video By CNN News 18, Dated: November 24, 2023
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
August 31, 2024
Runjay Kumar
August 29, 2024
Runjay Kumar
August 27, 2024
|