About: http://data.cimple.eu/claim-review/a5ab289db791b9488c52eb4183299ab90a47cac52b71023cbbc7ac7d     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ಜಲಪಾತದ ಪ್ರವಾಹಕ್ಕೆ ಸಿಲುಕಿದ್ದ ತಾಯಿ ಮತ್ತು ಮಗುವನ್ನು ರಕ್ಷಿಸಿದ ದೃಶ್ಯ ಹೊಗೇನಕಲ್ ಜಲಪಾತಕ್ಕೆ ಸಂಬಂಧಿಸಿದ್ದಲ್ಲ ಜಲಪಾತದ ಪ್ರವಾಹಕ್ಕೆ ಸಿಲುಕಿದ್ದ ತಾಯಿ ಮತ್ತು ಮಗುವನ್ನು ರಕ್ಷಿಸಿದ ದೃಶ್ಯ ಹೊಗೇನಕಲ್ ಜಲಪಾತಕ್ಕೆ ಸಂಬಂಧಿಸಿದ್ದಲ್ಲ, ಅನೈವಾರಿ ಮುತ್ತಲ್ ಜಲಪಾತಕ್ಕೆ ಸಂಬಂಧಿಸಿದ್ದು. Claim :ಹೊಗೇನಕಲ್ ಜಲಪಾತದ ಪ್ರವಾಹದಲ್ಲಿ ಸಿಲುಕಿದ್ದ ತಾಯಿ ಮತ್ತು ಮಗುವನ್ನು ರಕ್ಷಣೆ ಮಾಡಲಾಗಿದೆ. Fact :ವೈರಲ್ ಆದ ವಿಡಿಯೋ ಹೊಗೇನಕಲ್ನಲ್ಲಿ ನಡೆದ ಘಟನೆಯಲ್ಲ. ಈ ವಿಡಿಯೋ ತಮಿಳುನಾಡಿನ ಸೇಲಂ ಜಿಲ್ಲೆಯ ಅನೈವಾರಿ ಮುತ್ತಲ್ ಜಲಪಾತಕ್ಕೆ ಸಂಬಂಧಿಸಿದ್ದು. ಕಾವೇರಿ ಹೊರಹರಿವು ಹೆಚ್ಚುತ್ತಿದ್ದಂತೆ ಕರ್ನಾಟಕ - ತಮಿಳುನಾಡು ಜಲಗಡಿಯಾಗಿರುವ ಹೊಗೇನಕಲ್ ಜಲಪಾತ ಮೈದುಂಬಿ ಹರಿಯುತ್ತಿದೆ. ಕಾವೇರಿ ಕೊಳ್ಳದಲ್ಲಿ ಹೆಚ್ಚು ಮಳೆ ಆಗುತ್ತಿರುವ ಹಿನ್ನೆಲೆ ನದಿಯ ಹೊರಹರಿವು ಹೆಚ್ಚಾಗಿದೆ. ಹೊಗೇನಕಲ್ ಜಲಪಾತಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಇದರ ನಡುವೆ, ಸಾಮಾಜಿಕ ಮಾಧ್ಯಮದಲ್ಲಿ ಹೊಗೇನಕಲ್ಲಿಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಮಾದ್ಯಮದಲ್ಲಿ ಹರಿದಾಡುತ್ತಿದೆ. ಫೇಸ್ ಖಾತೆದಾರರ ಜುಲೈ 19, 2024ರಂದು ತನ್ನ ಖಾತೆಯಲ್ಲಿ "ಮಳೆಗಾಲದಲ್ಲಿ ನದಿಗಳ ಪಕ್ಕ ಹೋಗಬೇಡಿ ಯಾವ ಸಮಯದಲ್ಲಾದರು ನದಿ ನೀರಿನ ಮಟ್ಟ ಶರವೇಗದಲ್ಲಿ ಹೆಚ್ಚಿ ನಿಮ್ಮ ಪ್ರಾಣವನ್ನು ಹಾರಿಸಿಬಿಡುತ್ತದೆ. ಇದು ಹೋಗೆನಕಲ್ಲಿನಲ್ಲಿ ನಡೆದ ಘಟನೆ" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ವೈರಲ್ ಆದ ವಿಡಿಯೋವಿನಲ್ಲಿ ನಾವು ನೋಡುವುದಾದದರೆ, ಜಲಪಾತದ ದಡದಲ್ಲಿ ತಾಯಿ ಮತ್ತು ಮಗು ನಿಂತಿದ್ದಾಗ ನೀರಿನ ರಭಸ ಹೆಚ್ಚಾಗುತ್ತದೆ. ಆ ನೀರಿನ ಪ್ರವಾಹಕ್ಕೆ ತಾಯಿ-ಮಗು ಸಿಕ್ಕಿಕೊಳ್ಳುತ್ತಾರೆ ಎನ್ನುವಷ್ಟರಲ್ಲಿ ಅಲ್ಲೇ ಇದ್ದ ವ್ಯಕ್ತಿಯೊಬ್ಬ ಇವರಿಬ್ಬರನ್ನ ರಕ್ಷಿಸುತ್ತಾನೆ. ಈ ದೃಶ್ಯವನ್ನು ಅಲ್ಲೇ ಇದ್ದ ಕೆಲವರು ಸೆರೆಹಿಡಿದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಫ್ಯಾಕ್ಟ್ಚೆಕ್ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋ ಹೊಗೇನಕಲ್ನಲ್ಲಿ ನಡೆದ ಘಟನೆಯಲ್ಲ. ಈ ವಿಡಿಯೋ ತಮಿಳುನಾಡಿನ ಸೇಲಂ ಜಿಲ್ಲೆಯ ಅನೈವಾರಿ ಮುತ್ತಲ್ ಜಲಪಾತಕ್ಕೆ ಸಂಬಂಧಿಸಿದ್ದು. ನಾವು ವೈರಲ್ ವಿಡಿಯೋವಿನಲ್ಲಿರುವ ಸತ್ಯಾಂಶವನ್ನು ತಿಳಿಯಲು, ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಉಪಯೋಗಿಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ನಲ್ಲಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಅಕ್ಟೋಬರ್,16 2021ರಂದು ಚೆನೈ ಎಕ್ಸ್ಪ್ರೆಸ್ ಎಂಬ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು. ವಿಡಿಯೋವಿಗೆ ಶೀರ್ಷಿಕೆಯಾಗಿ ಇಂಗ್ಲೀಷ್ನಲ್ಲಿ "In a dramatic scene, the Tamil Nadu Forest officials rescued a woman and her child who were trapped due to the flash flood at Anaivari waterfalls near Attur in Salem district. The place was reopened for public two months ago as part of #Covid19 relaxations" ಎಂದು ಬರೆದು ಪೋಸ್ಟ್ ಮಾಡಲಾಗಿತ್ತು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ "ನಾಟಕೀಯ ದೃಶ್ಯ, ತಮಿಳುನಾಡಿನ ಅರಣ್ಯ ಅಧಿಕಾರಿಗಳು ಸೇಲಂ ಜಿಲ್ಲೆಯ ಅತ್ತೂರ್ ಬಳಿಯ ಅನೈವಾರಿ ಜಲಪಾತದಲ್ಲಿ ಸಿಲುಕಿದ್ದ ಮಹಿಳೆ ಮತ್ತು ಮಗುವನ್ನು ರಕ್ಕಿಸಿದ್ದಾರೆ. ಈ ಸ್ಥಳವನ್ನು ಕೋವಿಡ್-19 ಮುಗಿದ ಎರಡು ತಿಂಗಳ ನಂತರ ಈ ಸ್ಥಳವನ್ನು ಸಾರ್ವಜನಿಕರಿಗಾಗಿ ಪುನಃ ತೆರೆಯಲಾಯಿತು" ಎಂದು ಬರೆದು ಪೋಸ್ಟ್ ಮಾಡಿದ್ದರು. ವೈರಲ್ ವಿಡಿಯೋ ಕುರಿತು ಮತ್ತಷ್ಟು ಸತ್ಯಾಂಶವನ್ನು ತಿಳಿಯಲು ನಾವು ಈ ವಿಡಿಯೋಗೆ ಸಂಬಂಧಿಸಿದ್ದ ಕೆಲವು ಪ್ರಮುಖ ಕೀವರ್ಡ್ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಅಕ್ಟೋಬರ್ 26,2021ರಂದು ಎನ್ಡಿಟಿವಿ ವರದಿಯಲ್ಲಿ "ತಮಿಳುನಾಡಿನಲ್ಲಿ ತಾಯಿ ಮತ್ತು ಮಗುವನ್ನು ಭೋರ್ಗರೆಯುತ್ತಿರುವ ಜಲಪಾತದಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ರಕ್ಷಿಸಲಾಗಿದೆ" ಎಂದು ವರದಿ ಮಾಡಿದ್ದಾರೆ. ಇದೇ ಸುದ್ದಿಯನ್ನು ಅಕ್ಟೋಬರ್ 26, 2021ರಂದು ತಮಿಳುನಾಡಿನ ಸಿಎಂ ಎಂಕೆ ಸ್ಟಾಲಿನ್ ಸಹ ಎಕ್ಸ್ ಖಾತೆಯಲ್ಲಿ "ತಾಯಿ ಮತ್ತು ಮಗುವನ್ನು ರಕ್ಷಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸುತ್ತಾ" ವಿಡಿಯೋವನ್ನು ಸೇರಿಸಿ ಪೋಸ್ಟ್ ಮಾಡಿದ್ದರು. ವೈರಲ್ ಆದ ವಿಡಿಯೋವನ್ನು ನ್ಯೂಸ್18 ತನ್ನ ಫೇಸ್ ಖಾತೆಯಲ್ಲಿ ಹಂಚಿಕೊಂಡಿರುವುದನ್ನು ನಾವು ಕಾಣಬಹುದು. ವಿಡಿಯೋವಿಗೆ ಶೀರ್ಷಿಕೆಯಾಗಿ "ಸೇಲಂ ಜಿಲ್ಲೆಯ ಅನೈವಾರಿ ಜಲಪಾತದಲ್ಲಿ ಧುಮ್ಮಿಕ್ಕುವ ನೀರಿನ ರಭಸಕ್ಕೆ ಸಿಲುಕಿದ್ದ ತಾಯಿ ಮತ್ತು ಮಗುವನ್ನು ರಕ್ಷಿಸುವ ನಾಟಕೀಯ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದೆ. ಭಾನುವಾರ ಅನೈವಾರಿ ಜಲಪಾತಕ್ಕೆ ಪ್ರವಾಸಿಗರು ಭೇಟಿ ನೀಡಿದ್ದಾಗ, ಏಕಾಏಕಿ ನೀರು ಹರಿದು ಬಂದಿತು. ಆಗ ಅಲ್ಲಿ ಸಿಲಿಕಿದ್ದ ತಾಯಿ ಮತ್ತು ಮಗುವನ್ನು ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದಾರೆ. ಇಡೀ ರಕ್ಷಣಾ ಯತ್ನವನ್ನು ಅಲ್ಲಿದ್ದ ಸ್ಥಳೀಯರು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಿನ ಆದೇಶದವರೆಗೆ ಅನೈವಾರಿ ಜಲಪಾತಕ್ಕೆ ಪ್ರವಾಸಿಗರನ್ನು ನಿಷೇಧಿಸಿದ್ದಾರೆ" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ನೋಡಬಹುದು. ದಿ ನ್ಯೂಸ್ ಮಿನಿಟ್ ವರದಿಯ ಪ್ರಕಾರ, ಭಾರಿ ಮಳೆಯಿಂದಾಗಿ ಸೇಲಂ ಜಿಲ್ಲೆಯ ಜನಪ್ರಿಯ ಪ್ರವಾಸಿ ತಾಣವಾದ ಅನೈವಾರಿ ಮುಟ್ಟಲ್ ಜಲಪಾತದಲ್ಲಿ ನೀರಿನ ರಭಸ ಹೆಚ್ಚಾಗಿ, ಅಲ್ಲೆ ಇದ್ದ ಬಂಡೆಯ ಹತ್ತಿರ ನಿಂತಿದ್ದ ತಾಯಿ ಮತ್ತು ಮಗುವನ್ನು ರಕ್ಷಿಸಿದ್ದಾರೆ. ಅಷ್ಟೇ ಅಲ್ಲ ಮತ್ತೊಂದು ಬದಿಯಲ್ಲಿದ್ದ ಕೆಲವು ಪ್ರವಾಸಿಗರನ್ನೂ ಸಹ ಅರಣ್ಯ ಅಧಿಕಾರಿಗಳು ರಕ್ಷಿಸಿದ್ದಾರೆ ಎಂದು ವರದಿ ಮಾಡಲಾಗಿದೆ. ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ವಿಡಿಯೋ ಹೊಗೇನಕಲ್ ಜಲಪಾತಕ್ಕೆಗೆ ಸಂಬಂಧಿಸಿದ್ದಲ್ಲ, ಈ ಘಟನೆ 2021ರಲ್ಲಿ ಸೇಲಂ ಜಿಲ್ಲೆಯ ಜನಪ್ರಿಯ ಪ್ರವಾಸಿ ತಾಣವಾದ ಅನೈವಾರಿ ಮುಟ್ಟಲ್ ಜಲಪಾತದಲ್ಲಿ ಸಂಭವಿಸಿದ ಘಟನೆ ಎಂದು ಸಾಭೀತಾಗಿದೆ.
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 11 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software