About: http://data.cimple.eu/claim-review/bfecdffea76aefb8db64cf5238cc86912e4f2414a81023f6626d60cb     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • Authors Claim ಕಾಸ್ಮಿಕ್ ಕಿರಣಗಳು ಭೂಮಿಯ ಸನಿಹ ಹಾದುಹೋಗಲಿದ್ದು, ಇದರಿಂದ ರಕ್ಷಣೆಗೆ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ ಮತ್ತು ಅದನ್ನು ದೇಹದಿಂದ ದೂರವಿಡಿ Fact ಕಾಸ್ಮಿಕ್ ಕಿರಣಗಳಿಂದ ಹಾನಿಯಿದ್ದು, ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ, ಅವುಗಳಿಂದ ದೂರವಿರಿ ಎಂಬ ಸಂದೇಶವು ಸುಳ್ಳಾಗಿದೆ. ವಿಜ್ಞಾನಿಗಳ ಪ್ರಕಾರ ಕಾಸ್ಮಿಕ್ ಕಿರಣಗಳು ಭೂಮಿಯ ವಾತಾವರಣ ಪ್ರವೇಶಿಸುತ್ತಲೇ ದುರ್ಬಲವಾಗುತ್ತವೆ ಮತ್ತು ಅವುಗಳು ದೇಹದ ಮೇಲೆ ಪರಿಣಾಮ ಬೀರುವುದು ಸತ್ಯವಲ್ಲ ಕಾಸ್ಮಿಕ್ ಕಿರಣಗಳು ಭೂಮಿಯ ಸನಿಹ ಹಾದುಹೋಗಲಿದ್ದು, ಇದರಿಂದ ರಕ್ಷಣೆಗೆ ಫೋನ್ ಸ್ವಿಚ್ ಆಫ್ ಮಾಡಿ ಮತ್ತು ಅದನ್ನು ದೇಹದಿಂದ ದೂರವಿಡಿ ಎಂಬ “ಎಚ್ಚರಿಕೆ ಸಂದೇಶ” ವಾಟ್ಸಾಪ್ ನಲ್ಲಿ ಹರಿದಾಡುತ್ತಿದೆ. ಈ ಹೇಳಿಕೆಯ ಪ್ರಕಾರ, “ಎಚ್ಚರ ದಯವಿಟ್ಟು ಗಮನಿಸಿ ಮತ್ತು ಸುರಕ್ಷಿತವಾಗಿರಿಸಿಕೊಳ್ಳಿ. ಪ್ರಿಯರೇ, ಪ್ರಮುಖ ಮಾಹಿತಿ: ಇಂದು ರಾತ್ರಿ 12:30 ರಿಂದ 3:30 ರವರೆಗೆ, ನಿಮ್ಮ ಸೆಲ್ಯುಲಾರ್ ಫೋನ್ಗಳು, ಟ್ಯಾಬ್ಲೆಟ್ಗಳು ಇತ್ಯಾದಿಗಳನ್ನು ಆಫ್ ಮಾಡಿ ಮತ್ತು ಅವುಗಳನ್ನು ನಿಮ್ಮ ದೇಹದಿಂದ ದೂರವಿಡಿ. ಇದು ಸಿಎನ್ಎನ್ ದೂರದರ್ಶನದ ಪ್ರಕಾರ. ದಯವಿಟ್ಟು ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ತಿಳಿಸಿ. ಇಂದು ರಾತ್ರಿ 12:30 ರಿಂದ 3:30 ರವರೆಗೆ, ನಮ್ಮ ಗ್ರಹವು ಹೆಚ್ಚಿನ ವಿಕಿರಣವನ್ನು ಹೊರಸೂಸುತ್ತದೆ. ಕಾಸ್ಮಿಕ್ ಕಿರಣಗಳು ಭೂಮಿಯ ಹತ್ತಿರ ಹಾದು ಹೋಗುತ್ತವೆ. ಆದ್ದರಿಂದ ದಯವಿಟ್ಟು ನಿಮ್ಮ ಸೆಲ್ ಫೋನ್ಗಳನ್ನು ಆಫ್ ಮಾಡಿ. ನಿಮ್ಮ ಸಾಧನವನ್ನು ನಿಮ್ಮ ದೇಹಕ್ಕೆ ಹತ್ತಿರ ಇಡಬೇಡಿ, ಅದು ನಿಮಗೆ ಭಯಾನಕ ಹಾನಿಯನ್ನುಂಟುಮಾಡುತ್ತದೆ. Google, NASA ಮತ್ತು BBC ಸುದ್ದಿಗಳನ್ನು ಪರಿಶೀಲಿಸಿ. ನಿಮಗೆ ಮುಖ್ಯವಾದ ಎಲ್ಲ ಜನರಿಗೆ ಈ ಸಂದೇಶವನ್ನು ಕಳುಹಿಸಿ, ನೀವು ಲಕ್ಷಾಂತರ ಜೀವಗಳನ್ನು ಉಳಿಸುತ್ತೀರಿ.” ಎಂದಿದೆ. Also Read: ನೇತ್ರಾವತಿ ನದಿಯಲ್ಲಿ ಪ್ರವಾಹ ಎಂದು ಕೇರಳದ ಪಟ್ಟಾಂಬಿ ಸೇತುವೆ ವೀಡಿಯೋ ವೈರಲ್ ಈ ಎಚ್ಚರಿಕೆ ಸಂದೇಶ ನಿಜವೇ ಎಂಬ ಬಗ್ಗೆ ಸತ್ಯಶೋಧನೆ ನಡೆಸುವಂತೆ ಬಳಕೆದಾರರೊಬ್ಬರು ನ್ಯೂಸ್ಚೆಕರ್ ವಾಟ್ಸಾಪ್ ಟಿಪ್ ಲೈನ್ (+91-9999499044) ಮೂಲಕ ಮನವಿ ಮಾಡಿದ್ದಾರೆ. ಅದನ್ನು ಸತ್ಯಶೋಧನೆ ನಡೆಸಿದ್ದು ಇದು ಸುಳ್ಳು ಸಂದೇಶ ಎಂದು ಕಂಡುಬಂದಿದೆ. Fact Check/Verification ಕಾಸ್ಮಿಕ್ ಕಿರಣಗಳು ಯಾವುವು? ಇದು ಮಾನವ ದೇಹಕ್ಕೆ ಹಾನಿ ಮಾಡುತ್ತದೆಯೇ? US ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ (NASA) ಪ್ರಕಾರ, ಕಾಸ್ಮಿಕ್ ಕಿರಣಗಳು ಬಾಹ್ಯಾಕಾಶದಿಂದ ಹುಟ್ಟಿಕೊಂಡವು, ಅದು ಬ್ರಹ್ಮಾಂಡವನ್ನು ಹಾದುಹೋಗುತ್ತದೆ, ಸೂರ್ಯ, ಸೂಪರ್ನೋವಾ ಮತ್ತು ಕಪ್ಪು ಕುಳಿಗಳಂತಹ ಮೂಲಗಳಿಂದ ಬಿಡುಗಡೆಯಾಗುತ್ತದೆ. ಅವುಗಳ ಹೆಚ್ಚಿನ ವೇಗ ಹೊಂದಿದ್ದರೂ, ಭೂಮಿಯನ್ನು ಎದುರಿಸಿದಾಗ, ಅದರ ಕಣಗಳು ನಮ್ಮ ವಾತಾವರಣದಿಂದಾಗಿ ದುರ್ಬಲವಾಗುತ್ತದೆ. ಮತ್ತು ಅವುಗಳು ಸಾಮಾನ್ಯವಾಗಿ ಮನುಷ್ಯರಿಗೆ ಹಾನಿ ಉಂಟುಮಾಡುವುದಿಲ್ಲ. ಇಂಟರ್ನ್ಯಾಷನಲ್ ಅಟಾಮಿಕ್ ಎನರ್ಜಿ ಏಜೆನ್ಸಿಯ ವರದಿ ಹೇಳುವಂತೆ, ಕಾಸ್ಮಿಕ್ ಕಿರಣಗಳು ಅಸಾಧಾರಣವಾದ ಉನ್ನತ-ಶಕ್ತಿಯ ಉಪಪರಮಾಣು ಕಣಗಳಾಗಿವೆ, ಪ್ರಾಥಮಿಕವಾಗಿ ಪ್ರೋಟಾನ್ಗಳು ಮತ್ತು ಪರಮಾಣು ನ್ಯೂಕ್ಲಿಯಸ್ಗಳನ್ನು ಇದು ಒಳಗೊಂಡಿರುತ್ತದೆ, ಇದರಲ್ಲಿ ವಿದ್ಯುತ್ಕಾಂತೀಯ ಹೊರಸೂಸುವಿಕೆ ಇರುತ್ತದೆ. ಸಾಮಾನ್ಯವಾಗಿ ಕಾಸ್ಮಿಕ್ ವಿಕಿರಣಗಳು ಭೂಮಿಯ ವಾತಾವರಣಕ್ಕೆ ತೂರಿಕೊಳ್ಳುತ್ತದೆ. ಆದರೆ ಇದು ಹಾನಿಕಾರಕವಲ್ಲ. ಸರಾಸರಿ ಭೂಮಿಯ ಜನರು ವಾರ್ಷಿಕವಾಗಿ ಸುಮಾರು 3.5 ಮಿಲಿಸೀವರ್ಟ್ ವಿಕಿರಣಕ್ಕೆ ಒಡ್ಡಿಕೊಳ್ಳುತ್ತಾರೆ. ಈ ಒಡ್ಡುವಿಕೆಯ ಅರ್ಧದಷ್ಟು ಎಕ್ಸ್-ರೇಗಳು, ಮ್ಯಾಮೊಗ್ರಫಿ ಮತ್ತು CT ಸ್ಕ್ಯಾನ್ಗಳಂತಹ ಕೃತಕ ಮೂಲಗಳಿಂದ ಉಂಟಾಗುತ್ತದೆ, ಆದರೆ ಉಳಿದ ಅರ್ಧ ನೈಸರ್ಗಿಕ ಮೂಲಗಳಿಂದ ಹುಟ್ಟಿಕೊಂಡವು. ಈ ನೈಸರ್ಗಿಕ ವಿಕಿರಣಗಳಲ್ಲಿ, ಸುಮಾರು 10 ಪ್ರತಿಶತ ಕಾಸ್ಮಿಕ್ ವಿಕಿರಣದಿಂದ ಬರುತ್ತದೆ. ಸೂರ್ಯಗ್ರಹಣದಿಂದ ಕಾಸ್ಮಿಕ್ ಕಿರಣಗಳು ಬರುತ್ತವೆಯೇ? ಈ ವೈರಲ್ ಸಂದೇಶವನ್ನು ಸುಳ್ಳು ಎಂದು ಕೋಲ್ಕತ್ತಾದ ಬಿರ್ಲಾ ತಾರಾಲಯದ ಮಾಜಿ ನಿರ್ದೇಶಕ ಡಾ. ದೇಬಿಪ್ರೊಸಾದ್ ದುವಾರಿ ಅವರು ಹೇಳಿದ್ದಾರೆ. “ಸೌರಗ್ರಹಣವು ಆಗಾಗ್ಗೆ ಸಂಭವಿಸುವ ಕಾಸ್ಮಿಕ್ ವಿಚಾರ. ಇದು ನಿಯತಕಾಲಿಕವಾಗಿ ಸಂಭವಿಸುತ್ತದೆ ಮತ್ತು ಕಾಸ್ಮಿಕ್ ಕಿರಣಗಳು ಸ್ಥಿರವಾಗಿ ಭೂಮಿಯ ಮೇಲ್ಮೈಯನ್ನು ತಲುಪುತ್ತವೆ, ನಮ್ಮ ಸೌರವ್ಯೂಹದ ಆಚೆಗಿನ ವಿವಿಧ ಆಕಾಶ ಮೂಲಗಳಿಂದ ಹುಟ್ಟಿಕೊಂಡಿದೆ, ಕಾಸ್ಮಿಕ್ ಕಿರಣದ ವಿಕಿರಣವು ವಿದ್ಯುತ್ ಸಾಧನದೊಂದಿಗೆ ಸಂವಹನ ನಡೆಸಿ ಮಾನವ ದೇಹಕ್ಕೆ ಹಾನಿಯನ್ನುಂಟುಮಾಡುತ್ತದೆ ಎಂದು ಹೇಳುವುದು ತಪ್ಪಾಗುತ್ತದೆ” ಎಂದಿದ್ದಾರೆ. ಪಶ್ಚಿಮ ಬಂಗಾಳದ ಬೊಗುಲಾದ ಶ್ರೀ ಕೃಷ್ಣ ಕಾಲೇಜಿನ ಆಸ್ಟ್ರೋಫಿಸಿಕ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ ಸುಜೋಯ್ ಪಾಲ್ ಅವರ ಪ್ರಕಾರ, “ಕಾಸ್ಮಿಕ್ ಕಿರಣಗಳು ವಾಸ್ತವವಾಗಿ ನಮ್ಮ ಸೌರವ್ಯೂಹದ ಹೊರಗೆ ಹುಟ್ಟಿದ ಹೆಚ್ಚಿನ ಶಕ್ತಿ ಎಲೆಕ್ಟ್ರಾನ್ಗಳು ಅಥವಾ ಪ್ರೋಟಾನ್ಗಳಾಗಿವೆ. ಇದು ತನ್ನ ಕಾಂತೀಯ ಕ್ಷೇತ್ರವನ್ನು ಅನುಸರಿಸಿ ಭೂಮಿಯ ಕಡೆಗೆ ಬರುತ್ತದೆ ಮತ್ತು ಇದು ನಿರಂತರ ಪ್ರಕ್ರಿಯೆಯಾಗಿದೆ. ಈ ಕಾಸ್ಮಿಕ್ ಕಿರಣಗಳು ನಮ್ಮ ವಾತಾವರಣಕ್ಕೆ ಪ್ರವೇಶಿಸುತ್ತಲೇ ಅಲ್ಲೇ ಕೊನೆಗೊಳ್ಳುತ್ತವೆ. ಅವು ನೆಲಕ್ಕೆ ಅಥವಾ ಮಾನವ ದೇಹವನ್ನು ತಲುಪುವ ಸಾಧ್ಯತೆಯಿಲ್ಲ.” ಎಂದಿದ್ದಾರೆ. ಪೋಸ್ಟ್ಗಳಲ್ಲಿ ಸಿಎನ್ಎನ್, ನಾಸಾ, ಮತ್ತು ಬಿಬಿಸಿಯನ್ನು ಸಹ ಉಲ್ಲೇಖಿಸಲಾಗಿದೆ. ನಾವು ಅವರ ವೆಬ್ಸೈಟ್ಗಳು, ಸಾಮಾಜಿಕ ಮಾಧ್ಯಮಗಳನ್ನು ಪರಿಶೀಲಿಸಿದ್ದೇವೆ. ಈ ಕುರಿತು ಯಾವುದೇ ಸಂದೇಶಗಳು ಕಂಡುಬಂದಿಲ್ಲ. ಇದಲ್ಲದೆ, ಏಜೆನ್ಸ್ ಫ್ರಾನ್ಸ್-ಪ್ರೆಸ್ (AFP) ಮತ್ತು ಸ್ನೋಪ್ಸ್ನಂತಹ ಮಾಧ್ಯಮಗಳು ಈ ಸಂದೇಶವನ್ನು ಅನ್ನು ನಿರಾಕರಿಸುವ ವರದಿಗಳನ್ನು ಪ್ರಕಟಿಸಿವೆ. Conclusion ಕಾಸ್ಮಿಕ್ ಕಿರಣಗಳಿಂದ ರಕ್ಷಣೆಗಾಗಿ ಜನರು ತಮ್ಮ ಫೋನ್ ಅನ್ನು ಆಫ್ ಮಾಡುವಂತೆ ಶಿಫಾರಸು ಮಾಡುವ ವೈರಲ್ ಸಂದೇಶವು ಸುಳ್ಳು ಎಂದು ಸಾಬೀತಾಗಿದೆ. Also Read: ಗೋವಾ-ಮಂಗಳೂರು ರಸ್ತೆಯಲ್ಲಿ ಗ್ಯಾಸ್ ಟ್ಯಾಂಕರ್ ಸ್ಫೋಟ ಎಂದ ವೀಡಿಯೋ ಬ್ರೆಜಿಲ್ನದ್ದು! Result: False Our Sources Report By US National Aeronautics and Space Administration (NASA) Report By International Atomic Energy Agency Conversation with Dr. Debiprosad Duari, former director of M.P Birla Planetarium, Kolkata Conversation with Dr Sujoy Pal, Assistant Professor of Astro Physics Department, Sree Krishna College, Bogula, West Bengal (ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ) ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
schema:mentions
schema:reviewRating
schema:author
schema:datePublished
schema:inLanguage
  • Hindi
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 11 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software