About: http://data.cimple.eu/claim-review/d92981eab372dba8f46672bd14eb3d994bb279c99f517ac447baba11     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ಪೊಲೀಸರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳೆಯರಿಗಾಗಿ ಉಚಿತ ಪ್ರಯಾಣ ಯೋಜನೆಯನ್ನು ಪ್ರಾರಂಭಿಸಿದ್ದಾರೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ ಪೊಲೀಸರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳೆಯರಿಗಾಗಿ ಉಚಿತ ಪ್ರಯಾಣ ಯೋಜನೆಯನ್ನು ಪ್ರಾರಂಭಿಸಿದ್ದಾರೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ Claim :ಮಹಿಳೆಯರು ರಾತ್ರಿ ಸಮಯದಲ್ಲಿ ಸಹಾಯವಾಣಿ ಸಂಖ್ಯೆ 7837018555 ಗೆ ಕರೆ ಮಾಡಿದರೆ ಭಾರತದಲ್ಲಿ ಎಲ್ಲಿಯಾದರೂ ಉಚಿತ ಮತ್ತು ಸುರಕ್ಷಿತ ಪ್ರಯಾಣವನ್ನು ಪಡೆಯಬಹುದು Fact :ಭಾರತದಾದ್ಯಂತ ಈ ಸಹಾಯವಾಣಿ ಕೆಲಸ ಮಾಡುವುದಲ್ಲ. ಈ ಸಹಾಯವಾಣಿ ಸಂಖ್ಯೆ 7837018555 ಅನ್ನು ಲುಧಿಯಾನ ಪೊಲೀಸರು ಪ್ರಾರಂಭಿಸಿದ್ದಾರೆ. ಮಹಿಳೆಯರ ಮೇಲಿನ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಕೊಲ್ಕತ್ತಾದಲ್ಲಿ ವೈದ್ಯೆಯ ಅಮಾನುಷ ಅತ್ಯಾಚಾರ ಮತ್ತು ಹತ್ಯೆಯು ದೇಶದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಮತ್ತಷ್ಟು ಕಳವಳ ಮೂಡಿಸಿದೆ. ಆರ್ಜಿ ಕರ್ ಆಸ್ಪತ್ರೆಯಲ್ಲಿ ವೈದ್ಯರೊಬ್ಬರ ಮೇಲೆ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಿ ಕೋಲ್ಕತ್ತಾ ನಗರದಲ್ಲಿ ಸಾವಿರಾರು ಜನರು, 100ಕ್ಕೂ ಹೆಚ್ಚು ಸ್ಥಳಗಳಲ್ಲಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಇದೆಲ್ಲದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಇಂಗ್ಲೀಷ್ನಲ್ಲಿ ಸಂದೇಶವೊಂದು ಹರಿದಾಡುತ್ತಿದೆ. 'ರಾತ್ರಿ ಮಹಿಳೆಯರ ಸುರಕ್ಷತೆಗಾಗಿ, ಪೊಲೀಸರು ಉಚಿತ, ಸುರಕ್ಷಿತಪ್ರಯಾಣ ಕಲ್ಪಸುತ್ತಿದ್ದಾರೆ. ಈ ಸೌಲಭ್ಯಕ್ಕಾಗಿ 7837018555 ಗೆ ಸಹಾಯವಾಣಿಗೆ ಕರೆ ಮಾಡಿ ಎಂಬ ಸುದ್ದಿ ಸಾಮಾಜಿಕ ಮಾಧ್ಯಗಳಲ್ಲಿ ವೈರಲ್ ಆಗಿದೆ. "The police have launched a free travel scheme where any woman who is alone and cannot find a vehicle to go home between 10 pm and 6 am can contact the police helpline numbers (1091 and 7837018555) and request a vehicle. They will work 24x7 hours. The control room vehicle or the nearest PCR vehicle/SHO vehicle will take her safely to her destination. This will be done free of cost. Spread this message to everyone you know. Send the number to your wife, daughters, sisters, mothers, friends and all the women you know.. Ask them to save it.. All men please share with all the women you know.... "ಎಂಬ ಸುದ್ದಿ ಸಾಮಾಜಿಕ ಮಾಧ್ಯಗಳಲ್ಲಿ ವೈರಲ್ ಆಗಿದೆ. ಈ ಸುದ್ದಿಯನ್ನು ಕನ್ನಡಕ್ಕೆ ಅನುವಾದಿಸಿದಾಗ "ಪೊಲೀಸರು ಉಚಿತ ಪ್ರಯಾಣ ಯೋಜನೆಯನ್ನು ಪ್ರಾರಂಭಿಸಿದ್ದಾರೆ, ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಒಂಟಿಯಾಗಿರುವ ಮಹಿಳೆಯರು ಮನೆಗೆ ತೆರಳಲು ವಾಹನ ಸಿಗದಿದ್ದರೆ ಪೊಲೀಸ್ ಸಹಾಯವಾಣಿ ಸಂಖ್ಯೆಗಳನ್ನು (1091 ಮತ್ತು 7837018555) ಸಂಪರ್ಕಿಸಬಹುದು. ಪೊಲೀಸ್ ಸಹಾಯವಾಣಿ 24x7 ಗಂಟೆಗಳ ಕಾಲ ಕೆಲಸ ಮಾಡುತ್ತದೆ. ನಿಯಂತ್ರಣ ಕೊಠಡಿಯ ವಾಹನ ಅಥವಾ ಹತ್ತಿರದ ಪಿಸಿಆರ್ ವಾಹನ/ಎಸ್ಎಚ್ಒ ವಾಹನವು ಆಕೆಯನ್ನು ಸುರಕ್ಷಿತವಾಗಿ ಆಕೆಯ ಗಮ್ಯಸ್ಥಾನಕ್ಕೆ ಕರೆದುಕೊಂಡು ಹೋಗುತ್ತದೆ. ಈ ಸೌಲಭ್ಯವನ್ನು ಉಚಿತವಾಗಿ ಪಡೆದುಕೊಳ್ಳಬಹುದು. ಈ ಸುದ್ದಿಯನ್ನು ನಿಮಗೆ ತಿಳಿದಿರುವ ಎಲ್ಲರಿಗೂ ಶೇರ್ ಮಾಡಿ. ಎಲ್ಲಾ ಪುರುಷರು ದಯವಿಟ್ಟು ನಿಮಗೆ ತಿಳಿದಿರುವ ಎಲ್ಲಾ ಮಹಿಳೆಯರೊಂದಿಗೆ ಹಂಚಿಕೊಳ್ಳಿ. ನಿಮ್ಮ ಹೆಂಡತಿ, ಹೆಣ್ಣುಮಕ್ಕಳು, ಸಹೋದರಿಯರು, ತಾಯಂದಿರು, ಸ್ನೇಹಿತರು ಮತ್ತು ನಿಮಗೆ ತಿಳಿದಿರುವ ಎಲ್ಲಾ ಮಹಿಳೆಯರಿಗೆ ಸಂಖ್ಯೆಯನ್ನು ಕಳುಹಿಸಿ. ತುರ್ತು ಸಂದರ್ಭಗಳಲ್ಲಿ ಮಹಿಳೆಯರು ಬ್ಲಾಂಕ್ ಮೆಸೇಜ್ ಅಥವಾ ಮಿಸ್ಡ್ ಕಾಲ್ ಮಾಡಿಬಹುದು. ಇದರಿಂದ ಪೊಲೀಸರು ನಿಮ್ಮ ಸಹಾಯವಾಣಿಯ ಮೂಲಕ ನಿಮ್ಮ ಸ್ಥಳವನ್ನು ಹುಡುಕುತ್ತಾರೆ. ಈ ಸೌಲಭ್ಯವನ್ನು ನೀವು ಭಾರತದಾದ್ಯಂತ ಪಡೆಯಬಹುದು ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. The police has launched a free travel scheme where those who cannot find a vehicle to take a lonely woman home between 10 pm and 6 am can contact the police helpline numbers (1091 and 7837018555) and request for a vehicle. They work 24x7 hours. Control room vehicle or nearest PCR pic.twitter.com/nRQz1qq9sL— Yusuf Bhandarkar (@BhandarkarYusuf) August 21, 2024 The Police have Launched a Free Travel Scheme where any Woman who is alone and cannot find a Vehicle to Go Home Between 10 PM and 6 AM can contact the Police helpline Numbers (1091 and 7837018555) and request a vehicle.— Shrivant Beria (@shrivantberia2) August 22, 2024 ಫ್ಯಾಕ್ಟ್ಚೆಕ್ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಭಾರತದಾದ್ಯಂತ ಈ ಸಹಾಯವಾಣಿ ಕೆಲಸ ಮಾಡುವುದಲ್ಲ. ಈ ಸಹಾಯವಾಣಿ ಸಂಖ್ಯೆ 7837018555 ಅನ್ನು ಲುಧಿಯಾನ ಪೊಲೀಸರು ಪ್ರಾರಂಭಿಸಿದ್ದಾರೆ. ನಾವು ವೈರಲ್ ಆದ ಸುದ್ದಿಯಲ್ಲಿ ಸತ್ಯಾಂಶವನ್ನು ತಿಳಿಯಲು ನಾವು ಸಹಾಯವಾಣಿ ನಂಬರ್ನ್ನು ಟ್ರೂಕಾಲರ್ನಲ್ಲಿ 7837018555ನ್ನು ಹಾಕಿ ಹುಡುಕಿದಾಗ ನಮಗೆ ಈ ನಂಬರ್ ಲುಧಿಯಾನ ಪೊಲೀಸರಿಗೆ ಸೇರದ್ದು ಎಂದು ಕಂಡುಕೊಂಡೆವು. ಡಿಸೆಂಬರ್ 2019ರಲ್ಲಿ ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಲುಧಿಯಾನ ಪೊಲೀಸರು ಮಹಿಳಾ ಸಹಾಯವಾಣಿ ಸಂಖ್ಯೆಯು ಪಂಜಾಬ್ನ ಹೊರಗಿನ ಅನೇಕ ಸೇರಿದಂತೆ ರಾತ್ರಿಯ ಹೋಮ್ ಡ್ರಾಪ್ ಸೌಲಭ್ಯಗಳ ಕುರಿತು ನಗರದ ನಿವಾಸಿಗಳಿಂದ 3000 ಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸಿದೆ. ದೂರದ ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ, ಕೇರಳದಿಂದಲೂ ಕೆಲವರು ಕರೆ ಮಾಡಿದ್ದಾರೆ. ಲುಧಿಯಾನ ಪೊಲೀಸರ ಎರಡು ಸಹಾಯವಾಣಿ ಸಂಖ್ಯೆಗಳು - 1091, 7832018555 ಟ್ವಿಟರ್ ಮತ್ತು ಫೇಸ್ಬುಕ್ನಲ್ಲಿ ವೈರಲ್ ಆಗಿವೆ. ಅನೇಕ ಕುಟುಂಬಗಳು ಸಹಾಯವಾಣಿಗೆ ಕರೆ ಮಾಡಿ ತಮ್ಮ ಮನೆಯ ಮಹಿಳೆಯರು ಸಂಜೆಯವರೆಗೆ ಕೆಲಸ ಮಾಡುತ್ತಿದ್ದಾರೆ ಮತ್ತು ಅವರಿಗೆ ಸೂಕ್ತ ರಕ್ಷಣೆ ನೀಡುವಂತೆ ಹೇಳುತ್ತಿದ್ದಾರೆ. ಆದರೆ ಈ ಸಂಖ್ಯೆ ಲುಧಿಯಾನದಲ್ಲಿ ಮಹಿಳೆಯರಿಗೆ ಮಾತ್ರ ಎಂದು ಪೊಲೀಸರು ಕರೆ ಮಾಡಿದವರಿಗೆ ತಿಳಿಸಿದ್ದಾರೆ. ಹಿಂದೂಸ್ತಾನ್ ಟೈಮ್ಸ್ನಲ್ಲಿ ಪ್ರಕಟವಾದ ವರದಿಯ ಪ್ರಕಾರ ನಾವು ಇನ್ನೊಂದು ಲೇಖನವನ್ನೂ ನಾವು ಕಂಡುಕೊಂಡಿದ್ದೇವೆ . ಈ ಸಹಾಯವಾಣಿ ಸಂಖ್ಯೆಯು ಲುಧಿಯಾನಕ್ಕೆ ಸಂಬಂಧಿಸಿದೆ ಮತ್ತು ಪಂಜಾಬ್ನ ಲೂಧಿಯಾನದಲ್ಲಿರುವ ಮಹಿಳೆಯರ ಸಹಾಯಕ್ಕಾಗಿ ತರಲಾಗಿದೆ ಎಂದು ವರದಿಯಲ್ಲಿದೆ. ವೈರಲ್ ಸಂಖ್ಯೆ ಲುಧಿಯಾನ ಪೊಲೀಸರಿಗೆ ಸೇರಿದ್ದರೂ, ಹಲವು ರಾಜ್ಯಗಳಲ್ಲಿ ರಾಜ್ಯ ಪೊಲೀಸರು ವರ್ಷಗಳಿಂದ ಮಹಿಳೆಯರಿಗಾಗಿ ಭದ್ರತಾ ವಿಭಾಗವನ್ನು ಪ್ರಾರಂಭಿಸಿದ್ದಾರೆ. ಉದಾಹರಣೆಗೆ, ಕರ್ನಾಟಕ ಪೊಲೀಸರು ಮಹಿಳಾ ಭದ್ರತಾ ಘಟಕವನ್ನು ಪ್ರಾರಂಭಿಸಿದ್ದಾರೆ, 112 ಸಂಖ್ಯೆಯ ಮೂಲಕ ಪೊಲೀಸರನ್ನು ಸಂಪರ್ಕಿಸಬಹುದು. ಇಂಡಿಯಾ ಟುಡೇ ವರದಿಯ ಪ್ರಕಾರ , ತಮಿಳುನಾಡು ಪೊಲೀಸರು ರಾತ್ರಿಯ ಹೊತ್ತು ಸಾರಿಗೆ ಅಗತ್ಯವಿರುವ ಮಹಿಳೆಯರಿಗಾಗಿ ಸಹಾಯವಾಣಿ ಸಂಖ್ಯೆಗಳನ್ನು ಸಹ ಪ್ರಾರಂಭಿಸಿದ್ದಾರೆ. 1091, 112, 044-23452365, 044-28447701 ಸಂಖ್ಯೆಗಳನ್ನು ಸಂಪರ್ಕಿಸಲು ಕೋರಲಾಗಿದೆ. MTNL ಮುಂಬೈ , ಮುಂಬೈ ಪೋಲೀಸ್ ಸಹಯೋಗದೊಂದಿಗೆ, "ಟ್ರಾವೆಲ್ ಸೇಫ್ ವೆನ್ ಅಲೋನ್" ಎಂಬ SMS ಆಧಾರಿತ ಸೇವೆಯನ್ನು ಪ್ರಾರಂಭಿಸಿದೆ. ಒಂಟಿಯಾಗಿ ಪ್ರಯಾಣಿಸುವಾಗ ಅಥವಾ ಮಧ್ಯರಾತ್ರಿಯ ಸಮಯದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಈ ಸೇವೆಯನ್ನು ಪ್ರಾರಂಭಿಸಲಾಗಿದೆ. ಮಹಿಳೆಯರ ಮೇಲಿನ ಅಪರಾಧ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ, ಈ ಎಸ್ಎಂಎಸ್ ಆಧಾರಿತ ಸೇವೆಯ ಮೂಲಕ ಯಾರಾದರೂ ಟ್ಯಾಕ್ಸಿ/ಆಟೋ ಸಂಖ್ಯೆಗಳು ಇತ್ಯಾದಿಗಳ ಮಾಹಿತಿಯನ್ನು ಎಸ್ಎಂಎಸ್ ಮೂಲಕ 9969777888 ಗೆ ಕಳುಹಿಸಬಹುದು. ರಾಷ್ಟ್ರೀಯ ಮಹಿಳಾ ಆಯೋಗದ ವೆಬ್ಸೈಟ್ನಲ್ಲಿ ದೇಶದಾದ್ಯಂತ ವಿವಿಧ ನಗರಗಳು ಮತ್ತು ಪ್ರದೇಶಗಳಿಗೆ ಕೆಲವು ಸಹಾಯವಾಣಿ ಸಂಖ್ಯೆಗಳನ್ನು ಇಲ್ಲಿ ನೋಡಬಹುದು ಎಂದು ಹರಿದಾಡುತ್ತಿರುವ ಸುದ್ದಿಯಲ್ಲಿ ಸತ್ಯಾಂಶವಿಲ್ಲವೆಂದು ಕರ್ನಾಟಕ ಪೊಲೀಸರು ಹೇಳಿದ್ದಾರೆ. ಗಮನಿಸಿ !!— ಕರ್ನಾಟಕ ರಾಜ್ಯ ಪೊಲೀಸ್ Karnataka State Police (@KarnatakaCops) August 22, 2024 ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ನಿಯಂತ್ರಣ ಕೊಠಡಿಗೆ ಕರೆ ಮಾಡಿದಲ್ಲಿ, ಮಹಿಳೆಯರಿಗೆ ಉಚಿತ ಪ್ರಯಾಣ ಎಂಬ ಮೆಸೇಜ್ ಹರಿದಾಡುತ್ತಿದ್ದು, ಈ ಮಾಹಿತಿಯು ಸುಳ್ಳಾಗಿದೆ. ತುರ್ತು ಸಹಾಯಕ್ಕಾಗಿ 112 ಗೆ ಕರೆಮಾಡಿ. pic.twitter.com/fEimJetDpB ಹೀಗಾಗಿ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲವೆಂದು ಸಾಭೀತಾಗಿದೆ. ಭಾರತದಾದ್ಯಂತ ಈ ಸಹಾಯವಾಣಿ ಕೆಲಸ ಮಾಡುವುದಲ್ಲ. ಈ ಸಹಾಯವಾಣಿ ಸಂಖ್ಯೆ 7837018555 ಅನ್ನು ಲುಧಿಯಾನ ಪೊಲೀಸರು ಪ್ರಾರಂಭಿಸಿದ್ದಾರೆ.
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 11 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software