About: http://data.cimple.eu/claim-review/e84bf53dd1a85f436af39c3cbc7c74e3eb0b6d804908dbe60c415e18     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ನಾಗರ ಪಂಚಮಿಯ ದಿನದಂದು ಪೊಲೀಸರು ಬೆತ್ತದಲ್ಲಿ ಮುಸ್ಲಿಮರಿಗೆ ಹೊಡೆದಿದ್ದಾರೆ ಎಂಬ ಸುದ್ದಿಯಲ್ಲಿ ನಿಜಾಂಶವಿಲ್ಲ ನಾಗರ ಪಂಚಮಿಯ ದಿನದಂದು ಪೊಲೀಸರು ಬೆತ್ತದಲ್ಲಿ ಮುಸ್ಲಿಮರಿಗೆ ಹೊಡೆದಿದ್ದಾರೆ ಎಂಬ ಸುದ್ದಿಯಲ್ಲಿ ನಿಜಾಂಶವಿಲ್ಲ Claim :ನಾಗರ ಪಂಚಮಿಯಂದು ಮುಸ್ಲಿಮರಿಗೆ ನಾಗರಬೆತ್ತದ ರುಚಿ ತೋರಿಸಿದ ಪೊಲೀಸರು ಹೊಡೆದಿದ್ದಾರೆ Fact :ವೈರಲ್ ಆದ ವಿಡಿಯೋ ನಾಗರ ಪಂಚಮಿಯ ದಿನದಂದು ಚಿತ್ರೀಕರಿಸಿದಲ್ಲ. 2020ರ ಕೋವಿಡ್-19 ಸಮಯದಲ್ಲಿ ಮುಸ್ಲಿಮರು ಲಾಕ್ಡೌನ್ ನಿಯಮವನ್ನು ಉಲ್ಲಂಘಿಸಿದ್ದಕ್ಕೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದ ವಿಡಿಯೋವದು ಶ್ರಾವಣ ಮಾಸದಲ್ಲಿ ನಾವು ಸ್ವಾಗತಿಸುವ ಮೊದಲ ಹಬ್ಬ ನಾಗರ ಪಂಚಮಿ. ನಾಗ ಪಂಚಮಿ, ಹೆಸರೇ ಸೂಚಿಸುವಂತೆ ಶ್ರಾವಣ ಶುಕ್ಲ ಪಂಚಮಿಯಂದು ಆಚರಿಸಲಾಗುತ್ತದೆ. ಭಿನ್ನ ಭಿನ್ನ ಸಂಸ್ಕೃತಿ, ಆಚರಣೆಗಳಿಗೆ ನೆಲೆಯಾಗಿರುವ ದೇಶ ನಮ್ಮ ಭಾರತ. ದೇಶಾದ್ಯಂತ ಭಿನ್ನ ರೀತಿಯಲ್ಲೇ ನಾಗರ ಪಂಚಮಿ ಹಬ್ಬ ಆಚರಣೆ ಮಾಡಲಾಗುತ್ತದೆ. ಮಧ್ಯ ಭಾರತ, ಉತ್ತರ ಮತ್ತು ವಾಯುವ್ಯ ಭಾರತ, ಪಶ್ಚಿಮ ಭಾರತ, ಪೂರ್ವ ಮತ್ತು ಈಶಾನ್ಯ ಭಾರತ, ದಕ್ಷಿಣ ಭಾರತದಲ್ಲಿ ವಿಶಿಷ್ಟ ಸಾಂಸ್ಕೃತಿಕ ಚೌಕಟ್ಟಿನಲ್ಲಿ ಹಬ್ಬ ಆಚರಿಸಲಾಗುತ್ತದೆ. ಹಿಂದೆ ಅಖಂಡ ಭಾರತದ ಭಾಗವೇ ಆಗಿದ್ದ ನೇಪಾಳ, ಪಾಕಿಸ್ತಾನದಲ್ಲಿ ಈಗಲೂ ನಾಗರ ಪಂಚಮಿ ಆಚರಿಸುತ್ತಾರೆ. ಈ ಭಾಗಗಳಲ್ಲಿ ವಿಶಿಷ್ಟ ರೀತಿಯಲ್ಲಿ ನಾಗಾರಾಧನೆ ಮಾಡುವ ಸಂಪ್ರದಾಯವಿದೆ. ಭಾರತ ದೇಶದಲ್ಲಿ ಆಗಸ್ಟ್ 9, 2024ರಂದು ನಾಗರಪಂಚಮಿ ಹಬ್ಬದ ದಿನವನ್ನು ಸಾಂಪ್ರದಾಯಿಕವಾಗಿ ಆಚರಣೆ ಮಮಾಡಲಾಗಿತ್ತು. ಈ ಹಬ್ಬಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ನಾಗರಪಂಚಮಿ ದಿನದಂದು ಪೊಲೀಸ್ ಅಧಿಕಾರಿಗಳು ಮುಸ್ಲಿಮರಿಗೆ ಲಾಠಿಯಿಂದ ಹೊಡೆಯುತ್ತಿರುವ ದೃಶ್ಯವನ್ನು ನೋಡಬಹುದು. ಮಸೀದಿಯಿಂದ ಮುಸ್ಲೀಮರು ಹೊರಬರುತ್ತಿರುವಾಗ ಪೊಲೀಸರು ಲಾಠಿಯಿಂದ ಬೀಸುತ್ತಿರುವುದನ್ನು ನೋಡಬಹುದು. ಸಾಮಾಜಿಕ ಮಾಧ್ಯಮವಾದ ಎಕ್ಸ್ ಖಾತೆಯಲ್ಲಿ ಹರಿ ಮೋದಿ ಕಾ ಪರಿವಾರ್ ಎಂಬ ಖಾತೆದಾರ ತನ್ನ ಖಾತೆಯಲ್ಲಿ "ನಾಗರ ಪಂಚಮಿ ಪ್ರಯುಕ್ತ ನಾಗರಬೆತ್ತದ ಪೂಜೆಯನ್ನು ಅತಿ ವಿಜೃಂಭಣೆಯಿಂದ ಆಚರಿಸಿದ ನಮ್ಮ ಪೊಲೀಸರು, ಅವರಿಗೆ ನನ್ನದೊಂದು ಜೈ!" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದೇ ವಿಡಿಯೋವನ್ನು ಗಣೇಶ್ ಎಂಬ ಖಾತೆದಾರ ಹರಿ ಹಂಚಿಕೊಂಡಿದ್ದ ವಿಡಿಯೋವನ್ನು ಪೋಸ್ಟ್ನ್ನು ರೀಪೋಸ್ಟ್ ಮಾಡಿರುವುದನ್ನು ಇಲ್ಲಿ ನಾವು ನೋಡಬಹುದು ಫ್ಯಾಕ್ಟ್ಚೆಕ್ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ನಾಗರಪಂಚಮಿ ದಿನದಂದು ವೈರಲ್ ಆದ ವಿಡಿಯೋದಲ್ಲಿ ಕಾಣುವ ಹಾಗೆ ಯಾವುದೇ ಘಟನೆ ನಡೆದಿಲ್ಲ. ವೈರಲ್ ಆದ ವಿಡಿಯೋ ಕೊರೋನಾ ಲಾಕ್ಡೌನ್ನಲ್ಲಿ ಸಮಯದಲ್ಲಿ ನಡೆದ ಘಟನೆಯದು. ನಾವು ವೈರಲ್ ಆದ ವಿಡಿಯೋವಿನಲ್ಲಿರುವ ಸತ್ಯಾಂಶವನ್ನು ತಿಳಿಯಲು ವೈರಲ್ ಆದ ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಉಪಯೋಗಿಸಿ ಗೂಗಲ್ ರಿವರ್ಸ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಮಾರ್ಚ್ 26, 2020ರಂದು ಈಟಿವಿ ಭಾರತ್ ಕನ್ನಡದಲ್ಲಿ ವರದಿಯೊಂದನ್ನು ನಾವು ಕಂಡುಕೊಂಡೆವು. ವರದಿಯಲ್ಲಿ "ಲಾಕ್ ಡೌನ್ ಆದೇಶ ಉಲ್ಲಂಘಿಸಿ ಮಸೀದಿಯಲ್ಲಿ ನಮಾಜ್ ಮಾಡುತ್ತಿದ್ದವರನ್ನು ಹೊರ ಕರೆ ತಂದ ಪೊಲೀಸರು ಅವರ ಮೇಲೆ ಲಾಠಿ ಚಾರ್ಜ್ ಮಾಡಿದ ಘಟನೆ ಜಿಲ್ಲೆಯ ಗೋಕಾಕ್ ನಗರದಲ್ಲಿ ನಡೆದಿದೆ. ಲಾಕ್ ಡೌನ್ ಆದೇಶ ಇದ್ದರೂ ನಗರದ ಎರಡು ಮಸೀದಿಗಳಿಗೆ ನೂರಾರು ಜನರು ನಮಾಜ್ ಮಾಡಲು ಆಗಮಿಸಿದ್ದರು. ಹೀಗಾಗಿ ಸ್ಥಳಕ್ಕಾಗಮಿಸಿದ ಗೋಕಾಕ್ ಶಹರ್ ಠಾಣೆಯ ಪೊಲೀಸರು ಎಲ್ಲರನ್ನೂ ಹೊರಕರೆದು ಲಾಠಿ ರುಚಿ ತೋರಿಸಿದರು. ಬಳಿಕ ಮಸೀದಿಯ ಕೆಲ ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿ ಮಾಡಿರುವುದನ್ನು ನಾವು ನೋಡಬಹುದು. ಇದೇ ವಿಡಿಯೋವನ್ನು ಮಾರ್ಚ್ 26,2020ರಂದು ಕಹಳೆ ನ್ಯೂಸ್ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ "ಮಸೀದಿಯಲ್ಲಿ ಸಾಮೂಹಿಕ ನಮಾಜ್ ; ಸರ್ಕಾರದ ಆದೇಶಕ್ಕೆ ತಲೆಬಾಗದವರಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ಕಾಣಬಹುದು. ಮಾರ್ಚ್ 26, 2020ರಂದು ನ್ಯೂಸ್ 18 ವೆಬ್ಸೈಟ್ನಲ್ಲೂ ಈ ಬಗ್ಗೆ ವರದಿಯೊಂದು ಮಾಡಿದೆ. ಲಾಕ್ಡನ್ ಸಮಯದಲ್ಲಿ ಮಸೀದಿಯಿಂದ ಹೊರಬರುತ್ತಿದ್ದ ಜನರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ ಎಂಬ ಹೆಡ್ಲೈನ್ನೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ವರದಿಯಲ್ಲಿ ಕೊರೊನಾ ವೈರಸ್ ಸೋಂಕಿನ ಹರಡುವಿಕೆಯನ್ನು ತಡೆಯಲು, ಮೋದಿ ಸರ್ಕಾರವು ದೇಶದಲ್ಲಿ 21 ದಿನಗಳ ಲಾಕ್ಡೌನ್ನ್ನು ವಿಧಿಸಿತ್ತು. ಇಂತಹ ಪರಿಸ್ಥಿತಿಯಲ್ಲಿ, ಕರೋನಾ ಸೋಂಕು ಜನರಲ್ಲಿ ಹರಡದಂತೆ ಎಲ್ಲಾ ಧಾರ್ಮಿಕ ಸ್ಥಳಗಳು ಮತ್ತು ಕಾರ್ಯಕ್ರಮಗಳಿಗೆ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಇದರ ಹೊರತಾಗಿಯೂ ಕರ್ನಾಟಕದ ಬೆಳಗಾವಿಯ ಮಸೀದಿಯಲ್ಲಿ ನಮಾಜ್ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಮಸೀದಿಗೆ ಆಗಮಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮಸೀದಿಯ ಹೊರಗೆ ಜನರ ಮೇಲೆ ಲಾಠಿ ಚಾರ್ಜ್ ಮಾಡಿ ನೆರೆದಿದ್ದ ಜನರನ್ನು ಓಡಿಸಿದ್ದರು. ಲಾಕ್ಡೌನ್ ನಡುವೆಯೂ ಹೆಚ್ಚಿನ ಸಂಖ್ಯೆಯ ಜನರು ನಮಾಜ್ ಮಾಡಲು ಮಸೀದಿಗೆ ಹೋಗಿರುವುದನ್ನು ANI ವಿಡಿಯೋದೊಂದಿಗೆ ನ್ಯೂಸ್18 ವರದಿ ಮಾಡಿರುವುದನ್ನು ನೋಡಬಹುದು. ಮಾರ್ಚ್ 27, 2020ರಲ್ಲಿ ದಿ ಎಕನಾಮಿಕ್ಸ್ ಟೈಮ್ಸ್ ಫೇಸ್ಬುಕ್ ಖಾತೆಯಲ್ಲೂ ಸಹ ಈ ವಿಡಿಯೋವಿರುವುದನ್ನು ನಾವು ನೋಡಬಹುದು. ವಿಡಿಯೋವಿಗೆ ಶೀರ್ಷಿಕೆಯಾಗಿ ಇಂಗ್ಲೀಷ್ನಲ್ಲಿ "Police lathicharge people gathered at Mosque amid lockdown in Belgaum" ಎಂದು ಬರೆದು ಪೋಸ್ಟ್ ಮಾಡಿರುವುದನ್ನು ನಾವು ನೋಡಬಹುದು. ಹೀಗಾಗಿ ವೈರಲ್ ಆದ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ನಮಗೆ ದೊರೆತಂತಹ ವಿಡಿಯೋ ಮತ್ತು ಕೆಲವು ಮಾಧ್ಯಮ ವರದಿಗಳಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ವಿಡಿಯೋ 2024ರ ನಾಗರ ಪಂಚಮಿಯ ದಿನದಂದು ಚಿತ್ರೀಕರಿಸಿದಲ್ಲ . ವೈರಲ್ ಆದ ವಿಡಿಯೋ ಮಾರ್ಚ್ 2020ರದ್ದು.
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 11 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software