About: http://data.cimple.eu/claim-review/ebcb49b30eb8d55976d5668a6d9f4fa3d492e880a6c659f71045e4e7     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ಅನಂತ್ ಅಂಬಾನಿ ಮದುವೆಯ ಸ್ಟ್ರೀಮಿಂಗ್ ಹಕ್ಕುಗಳನ್ನು ಹಾಟ್ಸ್ಟಾರ್ ಗೆಲ್ಲಲಿಲ್ಲ. ಅನಂತ್ ಅಂಬಾನಿ ಮದುವೆಯ ಸ್ಟ್ರೀಮಿಂಗ್ ಹಕ್ಕುಗಳನ್ನು ಹಾಟ್ಸ್ಟಾರ್ ಗೆಲ್ಲಲಿಲ್ಲ. Claim :ಹಾಟ್ಸ್ಟಾರ್ ಅನಂತ್ ಅಂಬಾನಿ ಮದುವೆಯ ಸ್ಟ್ರೀಮಿಂಗ್ ಹಕ್ಕುಗಳನ್ನು ಹರಾಜಿನಲ್ಲಿ ಮುಖೇಶ್ ಅಂಬಾನಿಯನ್ನು ಸೋಲಿಸಿದೆ. Fact :ಹಾಟ್ಸ್ಟಾರ್ ಯಾವುದೇ ಸ್ಟ್ರೀಮಿಂಗ್ ಹಕ್ಕನ್ನು ಗೆದ್ದಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ 'ದಿ ಫಾಕ್ಸಿ' ಪ್ರಕಟಿಸಿದ ಸುಳ್ಳು ಸುದ್ದಿಯದು. ಜುಲೈ 12, 2024 ರಂದು ಮುಂಬೈನಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹವು ಅದ್ದೂರಿಯಾಗಿ ನಡೆಯಿತು. ಜೂನ್ 5, 2024 ರಂದು, ಮದುವೆಯ ಪೂರ್ವ ಆಚರಣೆಗಳು ಪ್ರಾರಂಭವಾಗಿದ್ದವು. ದಂಪತಿಗಳು ಜಿಯೋ ವರ್ಲ್ಡ್ ಬಿಕೆಸಿಯಲ್ಲಿ ಭವ್ಯವಾದ ಸಂಗೀತವನ್ನು ಸಹ ಆಯೋಜಿಸಿದರು. ಈ ಸಮಾರಂಭದಲ್ಲಿ ಹಲವು ಗಣ್ಯರು ಹಾಗೂ ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ವಿಶೇಷ ಪ್ರದರ್ಶನಕ್ಕಾಗಿ ಪಾಪ್ ತಾರೆ ಜಸ್ಟಿನ್ ಬೈಬರ್ ಅವರನ್ನು ಕೂಡ ಆಹ್ವಾನಿಸಲಾಯಿತು. ಹೀಗಿರುವಾಗ ಹರಾಜಿನಲ್ಲಿ ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿ ಅನಂತ್ ಅಂಬಾನಿ ಮದುವೆಯ ಸ್ಟ್ರೀಮಿಂಗ್ ಹಕ್ಕುಗಳನ್ನು ಹಾಟ್ಸ್ಟಾರ್ ಪಡೆದುಕೊಂಡಿದೆ ಎಂಬ ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಮುಕೇಶ್ ಅಂಬಾನಿ ಒಬ್ಬ ಉದ್ಯಮಿಯಾಗಿ ಹರಾಜನ್ನು ನಡೆಸಿದ್ದು, ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸಿದ್ದಾರೆ ಎಂದು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿದ್ದಾರೆ. ಐಪಿಎಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಕಸಿದುಕೊಂಡಿದ್ದಕ್ಕಾಗಿ ಹಾಟ್ಸ್ಟಾರ್ ಸಿಇಒ ಮುಖೇಶ್ ಅಂಬಾನಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿ ಬಿಡ್ಡಿಂಗ್ನಲ್ಲಿ ಬಿಡ್ ಮಾಡಲು ನಿರ್ಧರಿಸಿದ್ದಾರೆ ಎಂಬ ಪೋಸ್ಟ್ಗಳು ವೈರಲ್ ಆಗಿವೆ. ಈ ಹಿಂದೆ ಹಾಟ್ಸ್ಟಾರ್ ಅನ್ನು ಸುಲಭವಾಗಿ ಹಿಂದಿಕ್ಕಿದ್ದ ಅಂಬಾನಿ, ಈ ಬಾರಿ ವಿವಾಹಪೂರ್ವ ಕಾರ್ಯಕ್ರಮಗಳಿಗೆ ಹೆಚ್ಚು ಖರ್ಚು ಮಾಡುವುದರಿಂದ ಹಣದ ಕೊರತೆಯಿಂದಿಗಿ ಸ್ಟ್ರೀಮಿಂಗ್ ಹಕ್ಕುಗಳನ್ನು ಹಾಟ್ಸ್ಟಾರ್ ಗೆದ್ದಿದೆ. ತನ್ನ ಸ್ವಂತ ಮಗನ ಮದುವೆಯ ಸ್ಟ್ರೀಮಿಂಗ್ನ್ನು ಹರಾಜಿನಲ್ಲಿ ಕಳೆದುಕೊಂಡು ಅವಮಾನವನ್ನು ಅಂಬಾನಿ ಎದುರಿಸುತ್ತಿದ್ದಾರೆ. ಜಿಯೋ ಹರಾಜಿನ ಮಧ್ಯದಲ್ಲಿ ಬೆಲೆಗಳನ್ನು ಹೆಚ್ಚಿಸುವ ಮೂಲಕ ಹಣವನ್ನು ಸಂಗ್ರಹಿಸಲು ಪ್ರಯತ್ನಿಸಿದೆ ಎಂಬ ಸುದ್ದಿಯೂ ವೈರಲ್ ಆಗಿದೆ. ಆದರೆ ಜಿಯೋ ಬಳಕೆದಾರರು ರೀಚಾರ್ಜ್ ಮಾಡಿಕೊಳ್ಳುವ ಬದಲು ಸಿಮ್ನ್ನು ಪೋರ್ಟ್ ಮಾಡಿಸಿಕೊಳ್ಳಲು ಪ್ರಾರಂಭಿಸಿದರು. Ummm…I have so many questions on this… pic.twitter.com/tEVVJVGRtW— Pushkar Ranade (@magicsilicon) July 5, 2024 Hotstar itna chaman niklega 😂😂 pic.twitter.com/xTxQ9wj9n5— An Indian (@banjara1991) July 5, 2024 ಫ್ಯಾಕ್ಟ್ಚೆಕ್ ವೈರಲ್ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಅನಂತ್ ಮದುವೆಯ ಸ್ಟ್ರೀಮಿಂಗ್ ಹಕ್ಕುಗಳನ್ನು ಹಾಟ್ಸ್ಟಾರ್ ಗೆದ್ದಿಲ್ಲ.ಮೊದಲಿಗೆ ಯಾವುದೇ ಹರಾಜು ನಡೆದಿಲ್ಲ. ವೈರಲ್ ಆದ ಸುದ್ದಿಯಲ್ಲಿ ಸತ್ಯಾಂಶವನ್ನು ತಿಳಿಯಲು ನಾವು ಕೆಲವು ಕೀವರ್ಡ್ಗಳನ್ನು ಬಳಸಿಕೊಂಡು ಹುಡುಕುತ್ತಿರುವಾಗ, ಈ ಹಕ್ಕುಗಳ ಮೂಲವು ದಿ ಫಾಕ್ಸಿ ಎಂಬ ವೆಬ್ಸೈಟ್ನಲ್ಲಿ ಪ್ರಕಟವಾದ ಲೇಖನವೆಂದು ನಾವು ಕಂಡುಕೊಂಡಿದ್ದೇವೆ. ವೈರಲ್ ಪೋಸ್ಟ್ಗಳನ್ನು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಲೇಖನದಲ್ಲಿ ಪ್ರಕಟವಾದ ಅದೇ ವಿಷಯವನ್ನು ಹಂಚಿಕೊಂಡಿದ್ದಾರೆ. ದಿ ಫಾಕ್ಸಿ 'ಬ್ರೇಕಿಂಗ್: ಹಾಟ್ಸ್ಟಾರ್ ಅನಂತ್ ಅಂಬಾನಿ ಮದುವೆಯ ಸ್ಟ್ರೀಮಿಂಗ್ ಹಕ್ಕುಗಳನ್ನು ಗೆದ್ದಿದೆ' ಎಂಬ ಶೀರ್ಷಿಕೆಯ ಲೇಖನವನ್ನು ಪ್ರಕಟಿಸಿದೆ. ಇನ್ನು ಕ್ಯಾಪ್ಷನ್ನಲ್ಲಿ , Hotstar ನ CEO ಸೇಡು ತೀರಿಸಿಕೊಂಡಿದ್ದಾರೆ. ಅಂಬಾನಿ ನಮ್ಮಿಂದ ಐಪಿಎಲ್ ಹಕ್ಕನ್ನು ಕಸಿದುಕೊಂಡಿದ್ದರು ಇದರಿಂದ ನಾವು ಲಕ್ಷಾಂತರ ಗ್ರಾಹಕರನ್ನು ಕಳೆದುಕೊಂಡಿದ್ದೇವೆ ಎಂದು ಹಾಟ್ಸ್ಟಾರ್ ಅಧಿಕಾರಿಗಳು ಹೇಳಿದ್ದಾರೆ. ಈಗ ನಾವು ಮದುವೆಯ ಸ್ಟ್ರೀಮಿಂಗ್ ಹಕ್ಕಿನಿಂದ ನಾವು ಲಾಭವನ್ನು ಪಡೆಯುತ್ತೇವೆ. ಮುಖೇಶ್ ಅಂಬಾನಿ ಮಾರ್ಕೆಟಿಂಗ್ಗೆ ಲಕ್ಷಾಂತರ ಖರ್ಚು ಮಾಡುತ್ತಾರೆ.. ಅವರು ತಮ್ಮ ಸ್ವಂತ ಮಗನ ಮದುವೆಯನ್ನು ನೋಡಲು ಪಾವತಿಸ ಬೇಕಾಗುತ್ತದೆ ಎಂದು ಪೋಸ್ಟ್ನಲ್ಲಿ ಉಲ್ಲೇಖಿಸಿದ್ದರು. Fauxy ಒಂದು ವಿಡಂಬನಾತ್ಮಕ ವೆಬ್ಸೈಟ್ , ವೆಬ್ಸೈಟ್ನಲ್ಲಿ ಪ್ರಕಟವಾದ ಯಾವುದೇ ಲೇಖನಗಳು ನಿಜವಲ್ಲ. ಅವರು ವಿಡಂಬನಾತ್ಮಕ ಲೇಖನಗಳನ್ನು ಪ್ರಕಟಿಸುತ್ತಾರೆ. ಅವು ಕಾಲ್ಪನಿಕ ಲೇಖನಗಳು. ಅವರ ಕಥೆಗಳಲ್ಲಿ ವಾಸ್ತವವಿರಲ್ಲ. ದಿ ಫಾಕ್ಸಿಯಲ್ಲಿ ಎಬೌಟ್ ಅಸ್ನ್ನು ಗಮನಿಸಿದಾಗ ಫಾಕ್ಸಿ ಎನ್ನುವುದು ನಮ್ಮ ಭವಿಷ್ಯವನ್ನು ರೂಪಿಸುವ ಯುವ, ಬುದ್ಧಿವಂತ ಮತ್ತು ವೈವಿಧ್ಯಮಯ ಪ್ರೇಕ್ಷಕರನ್ನು ಸಂಪರ್ಕಿಸುವ ಮಾಧ್ಯಮ ಕಂಪನಿ ನಮ್ಮದು. ನಿರ್ಭೀತ ಪತ್ರಿಕೋದ್ಯಮ, ಚಿಂತನ-ಪ್ರಚೋದಕ ಹಾಸ್ಯ ಮತ್ತು ಹೆಚ್ಚಿನ ಪ್ರಭಾವದ ಕಥೆ ಹೇಳುವ ಮೂಲಕ, ಇಂದಿನ ಯುವಕರಿಗೆ ಸಾಮಾನ್ಯವಾಗಿ ನಿಷೇಧಿತ ವಿಷಯಗಳ ಕುರಿತು ಸಂವಾದವನ್ನು ಪ್ರಾರಂಭಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಬರೆದುಕೊಂಡಿದೆ. Latestly.com ನಲ್ಲಿ ಪ್ರಕಟವಾದ ಲೇಖನದ ಪ್ರಕಾರ , "ದಿ ಫಾಕ್ಸಿ" ವಿಡಂಬನಾತ್ಮಕ ಲೇಖನಗಳನ್ನು ಹಂಚಿಕೊಳ್ಳುತ್ತದೆ. ಈ ವೆಬ್ಸೈಟ್ನಲ್ಲಿ ಪ್ರಕಟವಾದ ವಿಷಯವು ಕಾಲ್ಪನಿಕ ಕಥೆಯನ್ನು ಆಧರಿಸಿದೆ. ಫಾಕ್ಸಿಯಲ್ಲಿನ ಲೇಖನಗಳನ್ನು ವಾಸ್ತವಿಕ ಅಥವಾ ಸತ್ಯವೆಂದು ಪರಿಗಣಿಸದಂತೆ ಓದುಗರಿಗೆ ಸಲಹೆ ನೀಡಲಾಗುತ್ತದೆ. ಹೀಗಾಗಿ ವೈರಲ್ ಆದ ಸುದ್ದಿಯಲ್ಲಿ ಯಾಔಉದೇ ಸತ್ಯಾಂಶವಿಲ್ಲ ಎಂದು ಸಾಭೀತಾಗಿದೆ. ಮುಕೇಶ್ ಅಂಬಾನಿ ನಡೆಸಿದ ಹರಾಜಿನಲ್ಲಿ ಹಾಟ್ಸ್ಟಾರ್ ಅನಂತ್ ಅಂಬಾನಿ ಅವರ ಮದುವೆಯ ಸ್ಟ್ರೀಮಿಂಗ್ ಹಕ್ಕುಗಳನ್ನು ಗೆದ್ದಿದೆ ಎಂಬ ಹೇಳಿಕೆಯಲ್ಲಿ ಯಾವುದೇ ನಿಜವಿಲ್ಲ. ವಿಡಂಬನಾತ್ಮಕ ವೆಬ್ಸೈಟ್ 'ದಿ ಫಾಕ್ಸಿ' ಪ್ರಕಟಿಸಿದ ಸುಳ್ಳು ಸುದ್ದಿಯಿದು.
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 11 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software