schema:text
| - Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact checks doneFOLLOW US
Fact Check
ಮಾರ್ಚ್ 1 ರಿಂದ ಕರ್ನಾಟಕ ಬಂದ್ ಎಂಬ ರೀತಿಯ ಮೆಸೇಜ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಕುರಿತ ಕ್ಲೇಮ್ನಲ್ಲಿ “ರಾಜ್ಯದಲ್ಲಿ ಮಾ.1ರಿಂದ ಸಂಪೂರ್ಣ ಬಂದ್! ರಾಜ್ಯದಲ್ಲಿ ಮಾ.1ರಿಂದ ಆಸ್ಪತ್ರೆ, ಶಾಲೆ, ಕಚೇರಿ, ಸಾರಿಗೆ ಸೇರಿ ಎಲ್ಲ ಸರ್ಕಾರಿ ಸೇವೆಗಳು ಬಂದ್ ಆಗಲಿದೆ. 7ನೇ ವೇತನ ಆಯೋಗ ಜಾರಿ ಒತ್ತಾಯಿಸಿ ಸರ್ಕಾರಿ ನೌಕರರ ಸಂಘ ಹಮ್ಮಿಕೊಂಡಿರುವ ಮುಷ್ಕರಕ್ಕೆ ಶಿಕ್ಷಕರು, ಕೆಎಸ್ಆರ್ಟಿಸಿ-ಬಿಎಂಟಿಸಿ, ಆಸ್ಪತ್ರೆ & ಇತರೆ ಇಲಾಖೆ ಸಿಬ್ಬಂದಿ ಬೆಂಬಲ ನೀಡಿದ್ದು ಆ ದಿನ ಕರ್ತವ್ಯಕ್ಕೆ ಹಾಜರಾಗುವುದಿಲ್ಲ. ತುರ್ತುಸೇವೆ ಹೊರತುಪಡಿಸಿ ಉಳಿದೆಲ್ಲ ಸೇವೆಗಳು ಸ್ಥಗಿತಗೊಳ್ಳಲಿದ್ದು, ಯಾವುದೇ ಪರೀಕ್ಷೆಗಳೂ ನಡೆಯುವುದಿಲ್ಲ ಎಂದು ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ತಿಳಿಸಿದ್ದಾರೆ.” ಎಂದಿದೆ.
ಈ ಕ್ಲೇಮ್ ಅನ್ನು ಸತ್ಯಶೋಧನೆಗಾಗಿ ಬಳಕೆದಾರರೊಬ್ಬರು ನ್ಯೂಸ್ಚೆಕರ್ನ ವಾಟ್ಸಾಪ್ ಟಿಪ್ಲೈನ್ (+91-9999499044) ಮೂಲಕ ಕಳುಹಿಸಿದ್ದಾರೆ. ಅದರಂತೆ ಇದನ್ನು ಪರಿಶೀಲನೆಗೆ ಒಳಪಡಿಸಿದ ವೇಳೆ ಈ ಕ್ಲೇಮ್ ಭಾಗಶಃ ತಪ್ಪು ಎಂದು ಕಂಡುಬಂದಿದೆ.
ಸತ್ಯ ಶೋಧನೆಗಾಗಿ ನಾವು ಗೂಗಲ್ ಕೀವರ್ಡ್ ಸರ್ಚ್ ನಡೆಸಿದ್ದು, ಈ ವೇಳೆ ಸರ್ಕಾರಿ ನೌಕರರ ಪ್ರತಿಭಟನೆ ಕುರಿತಂತೆ ಹಲವು ಫಲಿತಾಂಶಗಳು ಲಭ್ಯವಾಗಿವೆ.
ಟಿವಿ 9 ಕನ್ನಡ ವರದಿ ಪ್ರಕಾರ, ಶಿವಮೊಗ್ಗದಲ್ಲಿ ಮಾತನಾಡಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್.ಷಡಕ್ಷರಿ ಅವರು,”ವಿವಿಧ ಬೇಡಿಕೆ ಆಗ್ರಹಿಸಿ ಮಾರ್ಚ್ 1ರಿಂದ ಸರ್ಕಾರಿ ನೌಕರರು ಅನಿರ್ದಿಷ್ಟಾವಧಿವರೆಗೆ ಮುಷ್ಕರ ಮಾಡಲು ನಿರ್ಧರಿಸಿದ್ದೇವೆ. ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಬಜೆಟ್ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದಾಸೀನತೆ ತೋರಿಸಿದ್ದಾರೆ. ಸಿಎಂ ಬೊಮ್ಮಾಯಿ ಅವರ ಧೋರಣೆಯಿಂದ ರಾಜ್ಯದ 9 ಲಕ್ಷ ನೌಕರರಿಗೆ ಬೇಸರ ಆಗಿದೆ. ಶಾಲೆ, ಕಾಲೇಜು, ಆಸ್ಪತ್ರೆ ಸೇರಿದಂತೆ ಎಲ್ಲ ನೌಕರರು ಕರ್ತವ್ಯಕ್ಕೆ ಗೈರಾಗುವ ಮೂಲಕ ಹೋರಾಟ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ” ಎಂದು ಹೇಳಲಾಗಿದೆ.
ನ್ಯೂಸ್ 18 ಕನ್ನಡ ಪ್ರಕಾರ, “ವಿಧನಸಭಾ ಚುನಾವಣೆ ಸಂದರ್ಭದಲ್ಲಿಯೇ ರಾಜ್ಯ ಸರ್ಕಾರದ ವಿರುದ್ಧ ಸರ್ಕಾರಿ ನೌಕರರು ಬಂಡಾಯ ಬಾವುಟ ಹಾರಿಸಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ನೌಕರರು ಇದೇ ಮಾರ್ಚ್ 1ರಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಮಾರ್ಚ್ 1 ರಿಂದ ಸರ್ಕಾರಿ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಗಳಿವೆ. ಕಳೆದ ಕೆಲವು ತಿಂಗಳಿನಿಂದ ಏಳನೇ ವೇತನ ಆಯೋಗ ಜಾರಿ ಹಾಗೂ ಎನ್ಪಿಎಸ್ ರದ್ದತಿಗೆ ಆಗ್ರಹಿಸಿ ಹೋರಾಟ ನಡೆಸಲಾಗುತ್ತಿದೆ. ಬುಧವಾರದಿಂದ ಕರ್ತವ್ಯಕ್ಕೆ ಹಾಜರಾಗದೇ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಸರ್ಕಾರಿ ನೌಕರರು ಮುಂದಾಗಿದ್ದಾರೆ.” ಎಂದು ವರದಿ ಹೇಳಿದೆ.
ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಇನ್ನೊಂದು ವರದಿಯಲ್ಲಿ “ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ವರದಿ ಜಾರಿ ಹಾಗೂ ಎನ್ ಪಿಎಸ್ ರದ್ದು ಮಾಡಿ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ತರಬೇಕು ಎಂಬ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮಾರ್ಚ್ 1ರಿಂದ ನಡೆಯಲಿರುವ ಮುಷ್ಕರವನ್ನು ಲಿಖಿತ ಭರವಸೆ ನೀಡುವವರೆಗೂ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಹೇಳಿದರು.” ಎಂದಿದೆ.
Also Read: ನಂದಿನಿ ಉತ್ಪನ್ನಗಳ ಮೇಲೆ ಹಿಂದಿ ಹೇರಿಕೆ? ಕ್ಲೇಮ್ ಹಿಂದಿನ ಸತ್ಯ ಏನು?
ಬ್ಯುಸಿನೆಸ್ ಸ್ಟ್ಯಾಂಡರ್ಡ್ ಪ್ರಕಟಿಸಿದ ವರದಿಯಲ್ಲಿ “ಸಂಘದ ಅಧ್ಯಕ್ಷರಾದ ಷಡಾಕ್ಷರಿಯವರು, ಸರ್ಕಾರಿ ನೌಕರರು ಕೆಲಸಕ್ಕೆ ಹಾಜರಾಗದೇ ಪ್ರತಿಭಟಿಸಲು ತೀರ್ಮಾನಿಸಿರುವುದಾಗಿ ಹೇಳಿದ್ದಾರೆ” ಎಂದಿದೆ.
ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಪ್ರಕಾರ, “ಮಾರ್ಚ್ 1ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವುದಾಗಿ ಸಂಘದ ಅಧ್ಯಕ್ಷ ಷಡಾಕ್ಷರಿಯವರು ಹೇಳಿದ್ದಾರೆ. ಈ ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲ ಸರ್ಕಾರಿ ನೌಕರರು ಮತ್ತು ಆಸ್ಪತ್ರೆಯ ನೌಕರರೂ ಭಾಗಿಯಾಗಲಿದ್ದಾರೆ. ತುರ್ತು ಚಿಕಿತ್ಸೆಯಲ್ಲಿ ಕೆಲಸ ಮಾಡುವವರು ಹೊರತು ಪಡಿಸಿ ಎಲ್ಲರೂ ಭಾಗಿಯಾಗಲಿದ್ದಾರೆ ಎಂದು ಹೇಳಿದ್ದಾಗಿ” ಹೇಳಲಾಗಿದೆ.
ಆದರೆ ಈ ಯಾವುದೇ ವರದಿಗಳಲ್ಲಿ ಕರ್ನಾಟಕ ಸರ್ಕಾರಿ ನೌಕರರನ್ನು ಹೊರತು ಪಡಿಸಿ, ಇಡೀ ರಾಜ್ಯ ಬಂದ್ ಆಗುವ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ. ರಾಜ್ಯದಲ್ಲಿ ಎಲ್ಲ ಸೇವೆಗಳು ಸ್ಥಗಿತಗೊಳ್ಳುವ ಬಗ್ಗೆಯೂ ಮಾಹಿತಿ ಇಲ್ಲ.
ಹೆಚ್ಚಿನ ಮಾಹಿತಿಗಳಿಗಾಗಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರಾದ ಮೋಹನ್ ಕುಮಾರ್ ಅವರನ್ನು ಸಂಪರ್ಕಿಸಲಾಗಿದ್ದು, ಅವರು ನ್ಯೂಸ್ಚೆಕರ್ನೊಂದಿಗೆ ಮಾತನಾಡಿ, “82 ವಿವಿಧ ಸಂಘಟನೆಗಳು ಸೇರಿ ಒಟ್ಟಾಗಿ ಈ ಪ್ರತಿಭಟನೆ ನಡೆಸುತ್ತಿದ್ದೇವೆ. ಸರ್ಕಾರಿ ನೌಕರರು ಮಾ.1ರಿಂದ ಅನಿರ್ದಿಷ್ಟಾವಧಿ ಯಾವುದೇ ಕೆಲಸದಲ್ಲಿ ಭಾಗಿಯಾಗುತ್ತಿಲ್ಲ. ಇದು ಬಂದ್ ಅಲ್ಲ, ನಮ್ಮ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ. ವೇತನ, ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಹೊಂದಿದ್ದೇವೆ.” ಎಂದು ಹೇಳಿದ್ದಾರೆ.
ಆದ್ದರಿಂದ ಕ್ಲೇಮಿನಲ್ಲಿ ಹೇಳಿದಂತೆ ರಾಜ್ಯದಲ್ಲಿ ಮಾ.1ರಿಂದ ಸಂಪೂರ್ಣ ಬಂದ್! ಎನ್ನುವುದು ಮತ್ತು ವಿವಿಧ ಸೇವೆಗಳು ಸಂಪೂರ್ಣ ಬಂದ್ ಆಗುತ್ತದೆ ಎನ್ನುವುದು ಭಾಗಶಃ ತಪ್ಪಾಗುತ್ತದೆ. ಸರ್ಕಾರಿ ನೌಕರರ ಬಂದ್ನಿಂದ ಸರ್ಕಾರಿ ನೌಕರರಿರುವ ಸೇವೆಗಳಲ್ಲಿ ಮಾತ್ರ ವ್ಯತ್ಯಯ ಆಗುವ ಸಾಧ್ಯತೆಗಳಿವೆ.
Our Sources:
Report by TV 9 Kannada, Dated: February 25, 2023
Report by News 18 Kannada Dated: February 27, 2023
Report by Prajavani, Dated: February 27, 2023
Report by Business Standard, Dated: February 25, 2023
Report by The new Indian Express, Dated: February 26, 2023
Conversation with Mohan Kumar, Vice President, Karnataka state Government employees Association
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
|