schema:text
| - Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact checks doneFOLLOW US
Fact Check
ಗರ್ಭಿಣಿಯರು ಪ್ರತಿ ದಿನ ಬಾದಾಮಿ ನೀರಿನಲ್ಲಿ ನೆನೆಸಿ ತಿನ್ನಬೇಕು ಇದರಿಂದ ಹುಟ್ಟುವ ಮಕ್ಕಳ ಬುದ್ಧಿ ಚುರುಕಾಗುತ್ತದೆ ಎಂಬ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಫೇಸ್ಬುಕ್ನಲ್ಲಿ ಕಂಡುಬಂದ ಫೇಸ್ಬುಕ್ ಪೋಸ್ಟ್ ಪ್ರಕಾರ “ಗರ್ಭಿಣಿಯರು ನಾಲ್ಕು ತಿಂಗಳ ನಂತರ ಪ್ರತಿದಿನ ಬಾದಾಮಿಯನ್ನು ನೀರಿನಲ್ಲಿ ನೆನೆಸಿ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು. 20 ನಿಮಿಷಗಳ ಕಾಲ ಬೇರೆ ಏನನ್ನೂ ತಿನ್ನಬೇಡಿ. ಹೀಗೆ ಮಾಡುವುದರಿಂದ ಹುಟ್ಟಿದ ಮಕ್ಕಳ ಬುದ್ದಿಶಕ್ತಿ ಚುರುಕಾಗಿ, ಜ್ಞಾಪಕಶಕ್ತಿ ಹೆಚ್ಚುತ್ತದೆ.” ಎಂದಿದೆ.
Also Read: ಕಲ್ಲು ಸಕ್ಕರೆಯೊಂದಿಗೆ ಕಾಮಕಸ್ತೂರಿ ಬೀಜ ಸೇರಿಸಿ ಕುಡಿದರೆ ಪೈಲ್ಸ್ ಗುಣವಾಗುತ್ತಾ?
ಈ ಬಗ್ಗೆ ನಾವು ಸತ್ಯಶೋಧನೆ ನಡೆಸಿದ್ದು ಇದು ಇದು ತಪ್ಪಾದ ಸಂದರ್ಭ ಎಂದು ಕಂಡುಬಂದಿದೆ.
ಗರ್ಭಧಾರಣೆಯ ನಾಲ್ಕು ತಿಂಗಳು ಕಳೆದು, ಬಾದಾಮಿಯನ್ನು ನೀರಿನಲ್ಲಿ ನೆನೆಸಿ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ನವಜಾತ ಶಿಶುವಿನ ಬುದ್ಧಿವಂತಿಕೆ ಅಥವಾ ಜ್ಞಾಪಕಶಕ್ತಿಯನ್ನು ಹೆಚ್ಚಿಸಬಹುದು ಎಂಬ ಹೇಳಿಕೆಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ.
ಬಾದಾಮಿ ಪೌಷ್ಟಿಕಾಂಶದ ಆಹಾರವಾಗಿದೆ ಮತ್ತು ಇದು ಗರ್ಭಧಾರಣೆಯ ಸಂದರ್ಭ ಆರೋಗ್ಯಕರ ಆಹಾರದ ಭಾಗವಾಗಿರಬಹುದು. ಆದರೆ ಅವುಗಳನ್ನು ತಿನ್ನುವುದರಿಂದ ಭ್ರೂಣದ ಬೆಳವಣಿಗೆ ಮೇಲೆ ಪ್ರಭಾವವಾಗುತ್ತದೆ ಎಂದು ಹೇಳುವುದಕ್ಕೆ ಯಾವುದೇ ವೈಜ್ಞಾನಿಕ ಬೆಂಬಲವಿಲ್ಲ ಮತ್ತು ಹೀಗೆ ಹೇಳುವುದು ಆಧಾರ ರಹಿತವಾಗಿದೆ.
ಗರ್ಭಿಣಿಯರು ಸಮತೋಲಿತ ಮತ್ತು ಪೌಷ್ಟಿಕ ಆಹಾರವನ್ನು ತಿನ್ನುವುದಕ್ಕೆ ಆದ್ಯತೆ ನೀಡಬೇಕು. ನಿಯಮಿತ ಪ್ರಸವಪೂರ್ವ ಆರೈಕೆಯೊಂದಿಗೆ ಆರೋಗ್ಯಕರ ಗರ್ಭಧಾರಣೆ ಅವಧಿಗೆ ನಿರ್ದಿಷ್ಟ ಶಿಫಾರಸುಗಳನ್ನು ಅನುಸರಿಸಬೇಕಾಗುತ್ತದೆ. ಗರ್ಭಾವಸ್ಥೆಯಲ್ಲಿ ಸಾಕಷ್ಟು ಪೌಷ್ಟಿಕಾಂಶವು ತಾಯಿ ಮತ್ತು ಬೆಳೆಯುತ್ತಿರುವ ಮಗುವಿನ ಆರೋಗ್ಯಕ್ಕೆ ಮುಖ್ಯವಾಗಿದೆ. ಆದಾಗ್ಯೂ, ಮಗುವಿನಲ್ಲಿ ಹೆಚ್ಚು ಬುದ್ಧಿವಂತಿಕೆ, ಅರಿವಿನ ಸಾಮರ್ಥ್ಯಗಳು ಅಥವಾ ನೆನಪಿನ ಶಕ್ತಿಯನ್ನು ಖಾತರಿಪಡಿಸುವ ಏಕೈಕ ಆಹಾರ ಅಥವಾ ಆಹಾರ ಪದ್ಧತಿ ಇಲ್ಲ.
ಗರ್ಭಾವಸ್ಥೆಯಲ್ಲಿ ವೈಯಕ್ತಿಕ ಮಾರ್ಗದರ್ಶನಕ್ಕಾಗಿ ಸಾಕ್ಷ್ಯಗಳ ಆಧಾರಿತ ಮಾರ್ಗಸೂಚಿಗಳನ್ನು ಅವಲಂಬಿಸುವುದು ಮತ್ತು ಆರೋಗ್ಯ ವೃತ್ತಿಪರರೊಂದಿಗೆ ಸಮಾಲೋಚಿಸುವುದು ಕಡ್ಡಾಯವಾಗಿದೆ.
ಬಾದಾಮಿ ನಿಜಕ್ಕೂ ಪೌಷ್ಟಿಕ ಆಹಾರ. ಪ್ರೋಟೀನ್, ನಾರಿನಂಶ, ಆರೋಗ್ಯಕರ ಕೊಬ್ಬುಗಳು, ವಿಟಮಿನ್ ಇ ಮತ್ತು ಮೆಗ್ನೀಸಿಯಮ್ ಇದರಲ್ಲಿ ಸಮೃದ್ಧವಾಗಿದೆ. ಅದೇನೇ ಇದ್ದರೂ, ಗರ್ಭಾವಸ್ಥೆಯಲ್ಲಿ ಬಾದಾಮಿ ಸೇವನೆಯು ಮಕ್ಕಳಲ್ಲಿ ಹೆಚ್ಚಿನ ನೆನಪಿನ ಶಕ್ತಿಯ ಬೆಳವಣಿಗೆಗೆ ನಿರ್ದಿಷ್ಟವಾಗಿ ಕೊಡುಗೆ ನೀಡುತ್ತದೆ ಎಂದು ಸೂಚಿಸಲು ಯಾವುದೇ ನಿರ್ದಿಷ್ಟ ಪುರಾವೆಗಳಿಲ್ಲ.
Also Read: ಹಗಲಿನಲ್ಲಿ ಹೆಚ್ಚು ನಿದ್ರೆ ಮಾಡುವವರು ಶೀಘ್ರದಲ್ಲಿ ಖಿನ್ನತೆಗೆ ಒಳಗಾಗುತ್ತಾರೆ ಎಂಬುದು ನಿಜವೇ?
ಕೆಲವು ಪುರಾವೆ ಗಳ ಪ್ರಕಾರ ಗರ್ಭಾವಸ್ಥೆಯಲ್ಲಿ ಅತಿಯಾದ ವಿಟಮಿನ್ ಇ ಸೇವನೆಯು ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಹೇಳುತ್ತದೆ. “Obstetrics & Gynecology” ನಿಯತಕಾಲಿಕೆಯಲ್ಲಿ ಪ್ರಕಟವಾದ ಅಧ್ಯಯನವು ಗರ್ಭಿಣಿ ಮಹಿಳೆಯರಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಇ ಗಳನ್ನು ತೆಗೆದುಕೊಳ್ಳುವುದು ಮತ್ತು ಶಿಶುಗಳಲ್ಲಿ ಉಸಿರಾಟದ ಸಮಸ್ಯೆಗಳುಂಟಾಗುವ ಅಪಾಯದ ಬಗ್ಗೆ ಸಂಭಾವ್ಯ ಸಂಪರ್ಕವಿದೆ ಎಂಬುದನ್ನು ಕಂಡುಹಿಡಿದಿದೆ.
ಆದ್ದರಿಂದ, ಗರ್ಭಾವಸ್ಥೆಯಲ್ಲಿ ನಿಮ್ಮ ಆಹಾರದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ಮೊದಲು, ವಿಶೇಷವಾಗಿ ಪೂರಕಗಳ ಬಳಕೆಯನ್ನು ಮಾಡುವುದಕ್ಕೆ ಆಲೋಚಿಸುತ್ತಿದ್ದರೆ, ನಿಮ್ಮ ವೈದ್ಯರೊಂದಿಗೆ ಚರ್ಚೆ ನಡೆಸುವುದು ಬಹಳ ಮುಖ್ಯವಾಗಿದೆ.
ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ, ಗರ್ಭಿಣಿಯರು ಬಾದಾಮಿ ತಿಂದರೆ ಮಕ್ಕಳ ಬುದ್ಧಿ ಚುರುಕಾಗುತ್ತದೆ ಎನ್ನುವುದು ತಪ್ಪಾದ ಸಂದರ್ಭವಾಗಿದೆ.
Our Sources
Appetitive, dietary and health effects of almonds consumed with meals or as snacks: a randomized, controlled trial – PMC (nih.gov)
Update on Vitamin E and Its Potential Role in Preventing or Treating Bronchopulmonary Dysplasia – PubMed (nih.gov)
(This article has been published in collaboration with THIP Media)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Newschecker and THIP Media
January 17, 2025
Newschecker and THIP Media
December 15, 2023
Newschecker and THIP Media
October 13, 2023
|