About: http://data.cimple.eu/claim-review/beb666fa6d285b1a22d23beb33d18b990240a6d5f97233633f246fd7     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ಆನೆಗಳು ಓಡಿಹೋಗುತ್ತಿರುವ ದೃಶ್ಯಗಳು ವಯನಾಡ್ ಘಟನೆಗೆ ಸಂಬಂಧಿಸಿಲ್ಲ ಆನೆಗಳು ಓಡಿಹೋಗುತ್ತಿರುವ ದೃಶ್ಯಗಳು ವಯನಾಡ್ ಘಟನೆಗೆ ಸಂಬಂಧಿಸಿಲ್ಲ Claim :ಕೇರಳದ ವಯನಾಡಿನಲ್ಲಿ ಭೂಕುಸಿತ ಸಂಭವಿಸುವ ಒಂದು ಗಂಟೆಯ ಮೊದಲು ಆನೆಗಳು ಸುರಕ್ಷಿತ ಸ್ಥಳಕ್ಕೆ ಓಡಿಹೋದವು. ಇಂತಹ ಪ್ರಾಕೃತಿಕ ವಿಕೋಪಗಳನ್ನು ಗ್ರಹಿಸುವ ಸಾಮರ್ಥ್ಯ ಪ್ರಾಣಿಗಳಿಗೆ ಇದೆ ಎನ್ನುತ್ತಾರೆ. Fact :ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ವೈರಲ್ ಆದ ವಿಡಿಯೋ ಹಳೆಯದ್ದು ವಯನಾಡು ಕಳೆದವಾರ ಸಂಭವಿಸಿದ ಭೀಕರ ಭೂಕುಸಿತ ಅಕ್ಷರಶಃ ಸ್ಮಶಾನವಾಗಿ ಮಾರ್ಪಟ್ಟಿದ್ದು, ಜುಲೈ 30 ರಂದು ಭಾರೀ ಮಳೆಯಿಂದ ಉಂಟಾದ ಭೂಕುಸಿದದಿಂದಾಗಿ 300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸಾವಿರಾರು ಜನರು ನಿರಾಶ್ರಿತರು ಕುಟುಂಬಸ್ಥರು, ಮನೆ, ಆಸ್ತಿ-ಪಾಸ್ತಿ ಎಲ್ಲವನ್ನೂ ಕಳೆದುಕೊಂಡು ಅನಾಥರಾಗಿದ್ದು, ಅವಶೇಷಗಳಡಿಯಲ್ಲಿ ನೂರಾರು ಮಂದಿ ಸಿಲುಕಿದ್ದರು. ಕೇರಳದ ವಯನಾಡಿನಲ್ಲಿ ಭೂಕುಸಿತದಿಂದ ನೂರಾರು ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. 4 ಆಗಸ್ಟ್ 2024 ರಂದು ಕೇಂದ್ರ ಸಚಿವ ಸುರೇಶ್ ಗೋಪಿ ಈ ಘಟನೆಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ವಿವಿಧ ವಲಯಗಳ ಬೇಡಿಕೆಯ ನ್ಯಾಯಸಮ್ಮತತೆಯನ್ನು ಕೇಂದ್ರವು ಪರಿಗಣಿಸಲಾಗುವುದು ಎಂದು ಹೇಳಿದರು. ವಯನಾಡ್ ಜಿಲ್ಲೆಯ ಮುಂಡಕ್ಕೈ ಮತ್ತು ಚುರಲ್ಮಲಾ ಪ್ರದೇಶಗಳಲ್ಲಿ ಭೂಕುಸಿತದಿಂದಾಗಿ ನೂರಾರು ಮನೆಗಳು ನೆಲಸಮಗೊಂಡಿವೆ. ಭೂಕುಸಿತ ಪೀಡಿತ ವಯನಾಡ್ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ, ಪರಿಹಾರ ಮತ್ತು ಪುನರ್ವಸತಿ ಕ್ರಮಗಳಲ್ಲಿ ಕೇಂದ್ರಗಳಲ್ಲಿ ಜನರಿಗೆ ಬೇಕಾದಂತಹ ಎಲ್ಲಾ ರೀತಿಯ ನೆರವನ್ನು ನೀಡಲಿದೆ ಎಂದು ಭರವಸೆಯನ್ನು ನೀಡಿದ್ದಾರೆ. ಈ ವಿಪತ್ತಿನಲ್ಲಿ ಸರ್ವಸ್ವವನ್ನೂ ಕಳೆದುಕೊಂಡವರಿಗೆ ಕೇಂದ್ರ ಸರ್ಕಾರ ನೆರವು ನೀಡಲಿದೆ ಎಂದು ಭರವಸೆ ನೀಡಿದರು. ಕೇರಳದಲ್ಲಿರುವ ಆನೆಗಳು ತಮ್ಮ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಆದಾಗ್ಯೂ, ಈ ಅಪಾಯಕಾರಿ ಸಂದರ್ಭದಲ್ಲಿ ಆನೆಗಳ ಹತ್ತಿರ ಹೋದಂತಹ ಅನೇಕ ಜನರು ಸಾವನ್ನಪ್ಪಿದ್ದಾರೆ. ಈ ಘಟನೆಗಳ ನಡುವೆ ವಯನಾಡಿನ ಮುಂಡಕೈನ ನಿವಾಸಿ ಟೀ ಎಸ್ಟೇಟ್ನ ಕೆಲಸಗಾರ್ತಿಯಾದ ಸುಜಾತ ಎಂಬ ವೃದ್ದೆ ತನ್ನ ಮೊಮ್ಮಗಳೊಂದಿಗೆ ಜುಲೈ 30ರಂದು ಮನೆಯಲ್ಲಿದ್ದಾಗ ರಾತ್ರಿ ಭಾರಿ ಮಳೆ ನಡುವೆ ದೊಡ್ಡ ಶಬ್ಧ ಕೇಳಿಬಂದಿದೆ. ಈ ವೇಳೆ ಎಚ್ಚೆತ್ತ ಅಜ್ಜಿ ಮನೆಯಿಂದ ಹೊರಗೆ ನೋಡಿದಾಗ ಪ್ರವಾಹದ ನೀರು ಇಡೀ ಊರನ್ನು ಕೊಚ್ಚಿಕೊಂಡು ಹೋಗುತ್ತಿದ್ದನ್ನು ನೋಡಿದ್ದಾರೆ. ಕೂಡಲೇ ಅಜ್ಜಿ ಉಟ್ಟ ಬಟ್ಟೆಯೊಡನೆ ತಮ್ಮ ಮೊಮ್ಮಗಳೊಂದಿಗೆ ಎತ್ತರದ ಕಾಡಿನ ಪ್ರದೇಶಕ್ಕೆ ಓಡಿದ್ದಾರೆ. ವಯನಾಡಿನಲ್ಲಿ ಪ್ರವಾಹದಿಂದ ಕಾಡಿಗೆ ಓಡಿ ಬಂದಿದ್ದ ಅಜ್ಜಿ ಮತ್ತು ಮೊಮ್ಮಗಳನ್ನು ಅಲ್ಲಿನ ಕುಖ್ಯಾತ ಕಾಡಾನೆ ''ಕೊಂಬನ್'' ಮತ್ತು ತಂಡ ರಕ್ಷಣೆ ಮಾಡಿತು ಎಂದು ಕೇರಳದ ಸ್ಥಳೀಯ ಮಾಧ್ಯಮದಲ್ಲಿ ವರದಿಯಾದ ಅಜ್ಜಿ, ಮೊಮ್ಮಗಳ ಈ ಕಥೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರ ನಡುವೆ, ಸಾಮಾಜಿಕ ಮಾಧ್ಯಗಳಲ್ಲಿ 26 ಸೆಕೆಂಡ್ಗಳ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ ಭಾರಿ ಮಳೆಯಿಂದಾಗಿ ಆನೆಗಳು ಹಿಂಡು ಹಿಂಡಾಗಿ ಹೋಗುತ್ತಿರುವುದನ್ನು ನಾವು ನೋಡಬಹುದು. ಎಕ್ಸ್ ಖಾತೆಯಲ್ಲಿ ಖಾತೆದಾರರೊಬ್ಬರು ಈ ವಿಡಿಯೋವನ್ನು ಶೇರ್ ಮಾಡಿ, Elephants running to safety 1 hour before the landslide in Wayanad, Kerala. Animals have subtle vision" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ "ಪ್ರಾಕೃತಿಕ ವಿಕೋಪಗಳನ್ನು ಗ್ರಹಿಸುವ ಸಾಮರ್ಥ್ಯ ಪ್ರಾಣಿಗಳಿಗೆ ಇದೆ, ಹೀಗಾಗಿ ಕೇರಳಾದ ವಯನಾಡಿನಲ್ಲಿ ಭೂಕುಸಿತಕ್ಕೂ ಒಂದು ಗಂಟೆ ಮೊದಲು ಆನೆಗಳು ಸುರಕ್ಷಿತ ಜಾಗಕ್ಕೆ ಹೋದವು" ಎಂದು ಬರೆದಿರುವುದನ್ನು ನಾವು ನೋಡಬಹುದು. Elephants running to safety 1 hour before the landslide in Wayanad, Kerala. Animals have subtle vision. pic.twitter.com/pPdZVr4ArK— Vishwa Updates (@vishwa_updates) August 5, 2024 Elephants running to safety 1 hour before the landslide in Wayanad, Kerala. Animals have subtle vision. pic.twitter.com/BSywnKRjtP— 🚩Mohan Gowda🇮🇳 (@MohanGowda_HJS) August 4, 2024 ಫ್ಯಾಕ್ಟ್ಚೆಕ್ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋಗೂ ವಯನಾಡಿಗೂ ಯಾವುದೇ ಸಂಬಂಧವಿಲ್ಲ. ವೈರಲ್ ಆದ ವಿಡಿಯೋವಿನಲ್ಲಿರುವ ಸತ್ಯಾಂಶವನ್ನು ತಿಳಿಯಲು ನಾವು ವಿಡಿಯೋವಿದ ಕಾಮೆಂಟ್ ವಿಭಾಗವನ್ನು ಪರಿಶೀಲಿಸಿದಾಗ ಅಲ್ಲಿ ಖಾತೆದಾರರೊಬ್ಬರು ಸ್ಕ್ರೀನ್ಶಾಟ್ ಒಂದನ್ನು ಹಂಚಿಕೊಂಡಿರುವುದನ್ನು ನಾವು ನೋಡಬಹುದು. That's video is from January. 💕 Day mohana Delete the post pic.twitter.com/5q5jgv3DP0— 👑Che_ಕೃಷ್ಣ🇮🇳💛❤️ (@ChekrishnaCk) August 5, 2024 ಈ ಸ್ಕ್ರೀನ್ಶಾಟ್ನಲ್ಲಿ ಕಾಣುವ weanadn ಹೆಸರಿನ ಪೇಜ್ಗಾಗಿ ನಾವು ಇನ್ಸ್ಟಾಗ್ರಾಮ್ನಲ್ಲಿ ಹುಡುಕಾಡಿದೆವು. ಇನ್ಸ್ಟಾಗ್ರಾಮ್ನಲ್ಲಿ weyanadn ಎಂದು ಹುಡುಕಾಟದಲ್ಲಿ ನಮಗೆ, ಜನವರಿ 12,2024ರಂದು ಹಂಚಿಕೊಂಡಿದ್ದ ವಿಡಿಯೋವೊಂದು ಕಂಡುಬಂದಿತು. ವೈರಲ್ ಆದ ವಿಡಿಯೋಗೆ ಹೋಲುವ ಮತ್ತೊಂದು ವಿಡಿಯೋವನ್ನು ಸಹ ನಾವು ಕಂಡುಕೊಂಡೆವು. ಟ್ರಾವೆಲ್ ವಿತ್ ಏಜೆ ಎಂಬ ಯೂಟ್ಯೂಬ್ ಖಾತೆಯಲ್ಲಿ ಏಪ್ರಿಲ್ 3,2024ರಂದು wayanad elephant ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ನೋಡಬಹುದು. ಇದರಿಂದ ಸಾಭೀತಾಗಿದ್ದೇನೆಂದರೆ, ವಯನಾಡಿನಲ್ಲಿ ಭೂ ಕುಸಿತಕ್ಕೂ ಮುನ್ನವೇ ವೈರಲ್ ವಿಡಿಯೋ ಇಂಟರ್ನೆಟ್ನಲ್ಲಿ ಇದೆ ಎಂದು ಸಾಭೀತಾಗಿದೆ. ರೆಡ್ ಎಫ್ಎಂ ಬೆಂಗಳೂರು ಹಂಚಿಕೊಂಡಿದ್ದ ಪೋಸ್ಟ್ನಲ್ಲೂ ಸಹ ಕಾಮೆಂಟ್ ವಿಭಾಗದಲ್ಲಿ ಈ ವಿಡಿಯೋ ಹಳೆಯದ್ದು ಎಂದು ಹಲವಾರು ಖಾತೆದಾರರು ಕಾಮೆಂಟ್ ಮಾಡಿರುವುದನ್ನು ನಾವು ನೋಡಬಹುದು. ಹಾಗಾಗಿ ವೈರಲ್ ಆದ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸಾಭೀತಾಗಿದೆ, ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ವೈರಲ್ ಆದ ವಿಡಿಯೋ ಹಳೆಯದ್ದು.
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 2 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software