About: http://data.cimple.eu/claim-review/bbf27d423831c8b7ff0c89408c7da418be1d66778d3e6707524113ab     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ಹಸುವಿನ ಬಾಲವನ್ನು ಕತ್ತರಿಸಿ ಎಸೆದಿದ್ದಕ್ಕೆ ಪೊಲೀಸರು ಮುಸ್ಲಿಂ ಯುವಕರನ್ನು ಥಳಿಸಿದ್ದಾರೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ ಮುಸ್ಲಿಂ ಯುವಕರು ಹಸುವಿನ ಬಾಲ ಕತ್ತರಿಸಿ ದೇವಸ್ಥಾನ ಮುಂದೆ ಎಸೆದ್ದಿದ್ದಕ್ಕೆ ಪೋಲೀಸರು ಥಳಿಸಿದ್ದಾರೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ Claim :ಮುಸ್ಲಿಂ ಯುವಕರು ಹಸುವಿನ ಬಾಲ ಕತ್ತರಿಸಿ ದೇವಸ್ಥಾನ ಮುಂದೆ ಎಸೆದ್ದಿದ್ದಕ್ಕೆ ಪೋಲೀಸರು ಥಳಿಸಿದ್ದಾರೆ Fact :ವೈರಲ್ ಆದ ವಿಡಿಯೋ ಇತ್ತೀಚಿನದಲ್ಲ. 2022ರಲ್ಲಿ ನೂಪೂರ್ ಶರ್ಮಾ ಹೇಳಿಕೆಯ ವಿರುದ್ದ ಪ್ರತಿಭಟಿಸಿದ್ದ ಯುವಕರನ್ನು ಪೊಲೀಸರು ಥಳಿಸಿದ್ದ ಹಳೆಯ ವಿಡಿಯೋವಿದು ಆಗಸ್ಟ್ 25, 2024ರಂದು ರಾಜಸ್ಥಾನದ ಭಿಲ್ವಾರಾದ ದೇವಸ್ಥಾನದ ಹೊರಗೆ ಹಸುವಿನ ಬಾಲವೊಂದು ತುಂಡಾಗಿ ಪತ್ತೆಯಾಗಿರುವುದನ್ನು ನೋಡಿ ನಗರದಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಇದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಹಸುವಿನ ಬಾಲ ಕತ್ತರಿಸಿ ದೇವಸ್ಥಾನ ಬಾಗಿಲೆಗೆ ಎಸೆದ ಎಂಟು ಮಂದಿ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆಗಸ್ಟ್ 25,2024ರಂದು ಮಲ್ಲಿಕಾರ್ಜುನ ಎಂಬ ಎಕ್ಸ್ ಖಾತೆದಾರ ತನ್ನ ಖಾತೆಯ"ರಾಜಸ್ಥಾನದ ಭಿಲ್ವಾರಾದಲ್ಲಿ 25 ಆಗಸ್ಟ್ 24 ರಂದು ಹಸುವಿನ ಬಾಲವನ್ನು ಕತ್ತರಿಸಿ ದೇವಸ್ಥಾನದ ಬಾಗಿಲಿಗೆ ಎಸೆದ ಮುಸ್ಲಿಂ ಸಮುದಾಯದ ಎಂಟು ದಾರಿತಪ್ಪಿದ ಯುವಕರಿಗೆ ರಾಜಸ್ಥಾನ ಪೊಲೀಸರು ಆತಿಥ್ಯವನ್ನು ನೀಡಿದರು" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದೇ ವಿಡಿಯೋವನ್ನು ಗ್ಯಾನ್ ಪ್ರಕಾಶ್ ಓಜ್ಹಾ ಎಂಬ ಎಕ್ಸ್ ಖಾತೆದಾರ ತನ್ನ ಖಾತೆಯಲ್ಲಿ "In Bhilwara, Rajasthan, on August 25, 2024, the Rajasthan Police extended a special 'hospitality' to 8 Jihadi youths from the 'Shantidut' Community who had cut off a cow's tail and thrown it at a temple door. The treatment was proper, wasn't it?" ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿರುವುದನ್ನು ನಾವು ಕಂಡುಕೊಂಡೆವು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ "ರಾಜಸ್ಥಾನದ ಭಿಲ್ವಾರಾದಲ್ಲಿ, ಆಗಸ್ಟ್ 25, 2024 ರಂದು, ರಾಜಸ್ಥಾನ ಪೊಲೀಸರು ಹಸುವಿನ ಬಾಲವನ್ನು ಕತ್ತರಿಸಿ ದೇವಾಲಯದ ಬಾಗಿಲಿಗೆ ಎಸೆದ ʼಶಾಂತಿದೂತ್ʼ ಸಮುದಾಯದ 8 ಜಿಹಾದಿ ಯುವಕರಿಗೆ ವಿಶೇಷ 'ಆತಿಥ್ಯ'ವನ್ನು ನೀಡಿದ್ದಾರೆ. ಇವರಿಗೆ ಸರಿಯಾಗಿ ಆಯ್ತು. , ಅಲ್ಲವೇ?" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆಗಸ್ಟ್ 31, 2024ರಂದು ವೈದಿಕ್ ಸನಾತನ್ ಗ್ಯಾನ್ ಎಂಬ ಯೂಟ್ಯೂಬ್ ಖಾತೆಯಲ್ಲಿ "भीलवाड़ा में गाय की पूंछ काटने वाले अप्रादि पकड़ लिए हैं जय गो माता 🚩 #gaumat" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದೇ ಸುದ್ದಿಯನ್ನು ಸನಾತನ ಪ್ರಭಾತ್ ವೆಬ್ಸೈಟ್ನಲ್ಲಿ "A chopped cow tail thrown outside a temple In Bhilwada" ಎಂಬ ಶೀರ್ಷಿಕೆಯೊಂದಿಗೆ ವರದಿಯಾಗಿರುವುದನ್ನು ನಾವು ಕಂಡುಕೊಂಡೆವು. ಮತ್ತು ರಿಪಬ್ಲಿಕ್ ವರ್ಡ್ ಎಂಬ ವೆಬ್ಸೈಟ್ನಲ್ಲಿ "Rajasthan: Residents in Bhilwara Stage Massive Protest After Chopped Cow Tail Found Outside Temple" ಎಂಬ ಶೀರ್ಷಿಕೆಯೊಂದಿಗೆ ವರದಿಯಾಗಿರುವುದನ್ನು ಕಂಡುಕೊಂಡೆವು. ಫ್ಯಾಕ್ಟ್ಚೆಕ್ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋ ಇತ್ತೀಚಿನದಲ್ಲ, ಜೂನ್ 12, 2022ರಲ್ಲಿ ನೂಪೂರ್ ಶರ್ಮಾ ಹೇಳಿಕೆಯ ವಿರುದ್ದ ಪ್ರತಿಭಟಿಸಿದ್ದ ಯುವಕರನ್ನು ಪೊಲೀಸರು ಥಳಿಸಿದ್ದ ಹಳೆಯ ವಿಡಿಯೋವದು. ವೈರಲ್ ಆದ ಸುದ್ದಿಯಲ್ಲಿನ ಸತ್ಯಾಂಶವನ್ನು ತಿಳಿಯಲು ನಾವು ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಫ್ರೇಮ್ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಹುಡುಕಾಟದಲ್ಲಿ ನಮಗೆ ಜುಲೈ, 5 2022ರಂದು ಎನ್ಡಿಟಿವಿ ಯೂಟ್ಯೂಬ್ ಚಾನೆಲ್ನಲ್ಲಿ "Tortured By Cops, Freed By Court: Will UP Cops Pay For Brutality?" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಅಪ್ಲೋಡ್ ಮಾಡಿದ್ದರು. ವಿಡಿಯೋವಿಗೆ ಕ್ಯಾಪ್ಷನ್ ಆಗಿ "ಕಳೆದ ತಿಂಗಳು ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ನಡೆದ ಪ್ರತಿಭಟನೆಯ ನಂತರ, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಎಂಟು ಜನರ ವಿರುದ್ದ ಯಾವುದೇ ಸಾಕ್ಷಾಧಾರಗಳು ಸಿಗದ ಕಾರಣ ಪೊಲೀಸರ ಕಸ್ಟಡಿಯಲ್ಲಿದ್ದ ಎಂಟು ಮಂದಿಯನ್ನು ಆರೋಪಗಳಿಂದ ಮುಕ್ತಗೊಳಿಸಿದ್ದಾರೆ ಎಂದು ಶೀರ್ಷಿಕೆಯನ್ನೀಡಿ ಪೋಸ್ಟ್ ಮಾಡಿರುವುದನ್ನು ನೋಡಬಹುದು. ಇಂಡಿಯಾ ಟುಡೇ ವರದಿಯ ಪ್ರಕಾರ "ಉತ್ತರ ಪ್ರದೇಶದಲ್ಲಿ ನೂಪುರ್ ಶರ್ಮಾ ನೀಡಿದ ಪ್ರವಾದಿ ಹೇಳಿಕೆಗಳ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದ ಅಲ್ಪಸಂಖ್ಯಾತ ಸಮುದಾಯದ ಸದಸ್ಯರ ಮೇಲೆ ಪೊಲೀಸರು ದೌರ್ಜನ್ಯ, ಅಮಾನವೀಯ ವರ್ತನೆಯ ಆರೋಪದ ಮೇಲೆ ಎನ್ಎಚ್ಆರ್ಸಿ (ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ) ಎಸ್ಎಸ್ಪಿ ಸಹರಾನ್ಪುರದಿಂದ ಪ್ರತಿಕ್ರಿಯೆ ಕೇಳಿದೆ, ಅಷ್ಟೇ ಅಲ್ಲ ವರದಿಯಲ್ಲಿ ವಕೀಲ ಮಹ್ರೂಫ್ ಅನ್ಸಾರಿ ನೀಡಿರುವ ದೂರಿನ ಪ್ರಕಾರ ಜೂನ್ 10,2022ರಂದು ಕೊತ್ವಾಲಿ ನಗರದ ಪೊಲೀಸ್ ಅಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಕೆಲವು ಪ್ರತಿಭಟನಾಕಾರರನ್ನು ಬಂಧಿಸಿತ್ತು. ಬಂಧಿಸಿದಲ್ಲದೇ ಪೊಲೀಸರು ಕಸ್ಟಡಿಯಲ್ಲಿದ್ದ ಎಂಟು ಜನ ಯುವಕರನ್ನು ಥಳಿಸಿದ್ದಾರೆ" ಎಂದು ವರದಿ ಮಾಡಲಾಗಿದೆ. ವಾಸ್ತವವಾಗಿ ಹಸುವಿನ ಬಾಲವನ್ನು ಕತ್ತರಿಸಿ ದೇವಸ್ಥಾನದ ಬಾಗಿಲೆಗೆ ಎಸೆದ ಘಟನೆ ಆಗಸ್ಟ್ 25,2024ರಂದು ರಾಜಸ್ಥಾನದ ಬಿಲ್ವಾರದಲ್ಲಿ ನಡೆದಿದೆ ಎಂದು ಎಬಿಪಿ ಲೈವ್ ವರದಿ ಮಾಡಿರುವುದನ್ನು ನಾವು ನೋಡಬಹುದು. ಬಿಲ್ವಾರದ ಗಾಂಧಿ ಸಾಗರದ ಬಳಿ ಇರುವ ವೀರ್ ಹನುಮಾನ್ ದೇವಸ್ಥಾನದ ಮುಂಭಾಗ ಹಸುವಿನ ಬಾಲವನ್ನು ಕತ್ತರಿಸಿ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊತ್ವಾಲಿ ಪೊಲೀಸರು ಹುಸೇನ್ ಕಾಲೋನಿ ಶಾಸ್ತ್ರೀನಗರ ನಿವಾಸಿಯಾದ ನಿಸಾರ್ ಮೊಹಮ್ಮದ್ ಮಗ ಬಬ್ಲು ಶಾ ಎಂಬಾತನನ್ನು ಜೊತೆಗೆ ಇನ್ನೂ ನಾಲ್ವರು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿರುವುದನ್ನು ನಾವು ನೋಡಬಹುದು. ಹೀಗಾಗಿ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲವೆಂದು ಸಾಭೀತಾಗಿದೆ. ವೈರಲ್ ಆದ ವಿಡಿಯೋ ರಾಜಸ್ಥಾನಕ್ಕೆ ಸಂಬಂಧಿಸಿದ್ದಲ್ಲ, ಉತ್ತರ ಪ್ರದೇಶಕ್ಕೆ ಸಂಬಂಧಿಸಿದ್ದು. ಅಷ್ಟೇ ಅಲ್ಲ ಈ ಘಟನೆ ಇತ್ತೀಚಿಗೆ ನಡೆದಿದ್ದಲ್ಲ, 2022ರಲ್ಲಿ ನಡೆದ ಘಟನೆಯಿದು. ವೈರಲ್ ವಿಡಿಯೋದಲ್ಲಿ ಹೇಳಿದ ಹಾಗೆ ಪೊಲೀಸರು ಎಂಟು ಮಂದಿ ಯುವಕರನ್ನು ಹಸುವಿನ ಬಾಲವನ್ನು ಕತ್ತರಿಸಿ ದೇವಸ್ಥಾನದ ಮುಂದೆ ಎಸೆದಿದ್ದಕ್ಕೆ ಥಳಿಸಿಲ್ಲ ಬದಲಿಗೆ ಉತ್ತರ ಪ್ರದೇಶದಲ್ಲಿ ನೂಪುರ್ ಶರ್ಮಾ ಹೇಳಿಕೆ ವಿರುದ್ದವಾಗಿ ಪ್ರತಿಭಟಿಸಿದ್ದ ಯುವಕರನ್ನು ಪೊಲೀಸರು ಹೊಡೆದ ದೃಶ್ಯವದು.
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 2 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software