About: http://data.cimple.eu/claim-review/0434cb11c7a5b6bc2188c1a73eaaa37946e5f257051dfe9a29f2999e     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ಕೇಂದ್ರ ಸರ್ಕಾರ ಹಿರಿಯ ನಾಗರಿಕರಿಗೆ ರೈಲು ಪ್ರಯಾಣಕ್ಕೆ ಟಿಕೆಟ್ಗಳಲ್ಲಿ ರಿಯಾಯಿತಿ ಘೋಷಿಸಿಲ್ಲ ಕೇಂದ್ರ ಸರ್ಕಾರ ಹಿರಿಯ ನಾಗರಿಕರಿಗೆ ರೈಲು ಪ್ರಯಾಣಕ್ಕೆ ಟಿಕೆಟ್ಗಳಲ್ಲಿ ರಿಯಾಯಿತಿ ಘೋಷಿಸಿಲ್ಲ ಸಾಮಾಜಿಕ ಜಾಲತಾಣದಲ್ಲಿ ರೈಲು ಪ್ರಯಾಣ ಮಾಡುವ ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರ ರಿಯಾಯಿತಿ ಘೋಷಿಸಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿಯನ್ನು ವಾಟ್ಸ್ಪ್ನ ಬಳಕೆದಾರರು ತಮ್ಮ ವಾಟ್ಸ್ಪ್ ಗ್ರೂಪ್ಗಳಲ್ಲಿ ಈ ಸಂದೇಶವನ್ನು ಹಂಚಿಕೊಳ್ಳುತ್ತಿದ್ದಾರೆ "ಕೇಂದ್ರಸರ್ಕಾರ ಹಿರಿಯ ನಾಗರಿಕರಿಗೆ ರೈಲು ಪ್ರಯಾಣಕ್ಕೆ ರಿಯಾಯಿತಿ ಸೌಲಭ್ಯಗಳನ್ನು ಘೋಷಿಸಿದೆ 1. ಪುರುಷ ಹಿರಿಯ ನಾಗರಿಕ ವಿನಾಯಿತಿ ವಯಸ್ಸು 60 ವರ್ಷ ಅಥವಾ ಮೇಲ್ಪಟ್ಟವರು 2. ಮಹಿಳಾ ಹಿರಿಯ ನಾಗರಿಕರ ರಿಯಾಯಿತಿ ವಯಸ್ಸು 58 ವರ್ಷಗಳು ಅಥವಾ ಮೇಲ್ಪಟ್ಟವರು 3. ಪುರುಷರಿಗೆ ರೈಲ್ವೇ ಪ್ರಯಾಣ ದರದಲ್ಲಿ 40% ರಿಯಾಯಿತಿ 4. ಮಹಿಳೆಯರಿಗೆ ರೈಲ್ವೆ ಪ್ರಯಾಣ ದರದಲ್ಲಿ 50% ರಿಯಾಯಿತಿ" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ ಫ್ಯಾಕ್ಟ್ಚೆಕ್ ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರ ಹಿರಿಯ ನಾಗರಿಕರಿಗೆ ರೈಲ್ವೇ ಟಿಕೆಟ್ ದರದಲ್ಲಿ ಯಾವುದೇ ರಿಯಾಯಿತಿ ನೀಡುತ್ತಿಲ್ಲ. ನಾವು ವೈರಲ್ ಆದ ಸುದ್ದಿಯಲ್ಲಿ ಸತ್ಯಾಂಶವನ್ನು ತಿಳಿಯಲು ವಾಟ್ಸ್ಪ್ನಲ್ಲಿ ಹಂಚಿಕೊಂಡಿದ್ದ ಪೊಸ್ಟ್ನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಯಾವುದೇ ವರದಿಗಳು ಕಂಡಿಬಂದಿಲ್ಲ. ನಂತರ ಸುದ್ದಿಯಲ್ಲಿರುವ ಕೆಲವು ಕೀವರ್ಡ್ಗಳನ್ನು ಬಳಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಕೆಲವು ವೆಬ್ಸೈಟ್ಗಲಲ್ಲಿ ಹಂಚಿಕೊಂಡಿದ್ದ ವರದಿಗಳು ಕಂಡುಬಂದಿತು. ಏಪ್ರಿಲ್ 01, 2024ರಂದು ʼಡೆಕ್ಕನ್ ಹೆರಾಲ್ಡ್ʼ ವೆಬ್ಸೈಟ್ನಲ್ಲಿ "Withdrawal of concession for senior citizens earns Indian Railways over Rs 5,800 cr in four years: RTI" ಎಂಬ ಶೀರ್ಷಿಕೆಯೊಂದಿಗಿರುವ ವರದಿಯೊಂದು ಕಂಡುಬಂದಿತು. ವರದಿಯಲ್ಲಿ "ಮಾರ್ಚ್ 20, 2020ರಂದು ಕೋವಿಡ್-19 ಕಾರಣದಿಂದಾಗಿ ದೇಶಾದ್ಯಂತ ಲಾಕ್ಡೌನ್ ಘೋಷಿಸಿದ ನಂತರ ರೈಲ್ವೆ ಸಚಿವಾಲಯವು ಹಿರಿಯ ನಾಗರಿಕರಿಗೆ ನೀಡಲಾದ ರೈಲು ದರಗಳಲ್ಲಿನ ರಿಯಾಯಿತಿಗಳನ್ನು ವಾಪಾಸ್ ತೆಗೆದುಕೊಂಡಿತು. ಜೊತೆಗೆ, ನಾಲ್ಕು ವರ್ಷಗಳ ಹಿಂದೆ ರೈಲು ಪ್ರಯಾಣ ದರದಲ್ಲಿ ರಿಯಾಯಿತಿಯನ್ನು ಹಿಂಪಡೆದ ನಂತರ ಭಾರತೀಯ ರೈಲ್ವೇಯು ಹಿರಿಯ ನಾಗರಿಕರಿಂದ 5,800 ಕೋಟಿ ರೂಪಾಯಿ ಹೆಚ್ಚುವರಿ ಆದಾಯವನ್ನು ಗಳಿಸಿದೆ ಎಂದು ಮಾಹಿತಿ ಹಕ್ಕು ಕಾಯಿದೆಯಡಿ ಬಹಿರಂಗಪಡಿಸಿವೆ. ಹಿರಿಯ ನಾಗರಿಕರಿಗೆ ರೈಲ್ವೇ ಟಿಕೆಟ್ ದರದಲ್ಲಿ ಯಾವುದೇ ರಿಯಾಯಿತಿ ಇಲ್ಲ, ಉಳಿದಂತೆ ಅಂಗವಿಕಲರು, ಹಿರಿಯ ನಾಗರಿಕರಿಗೆ ಸ್ಟೇಷನ್ಗಳಲ್ಲಿ ಸೌಕರ್ಯ ಮತ್ತು ಹಿರಿಯ ನಾಗರಿಕರಿಗೆ ಲೋವರ್ ಬರ್ತ್ ನೀಡುವ ಸೌಕರ್ಯ ಇದೆ" ಎಂದು ವರದಿ ಮಾಡಿದೆ ಜನವರಿ 03, 2023ರಂದು ́ಫೈನಾನಿಯಲ್ ಎಕ್ಸ್ಪ್ರೆಸ್́ ವರದಿಯಲ್ಲಿ "ರೈಲ್ವೇ ವೆಚ್ಚಗಳು ಈಗಾಗಲೇ ಹೆಚ್ಚಾಗಿರುವುದರಿಂದ ಹಿರಿಯ ನಾಗರಿಕರಿಗೆ ಟಿಕೆಟ್ನಲ್ಲಿ ಯಾವುದೇ ರಿಯಾಯಿತಿಯನ್ನು ಕೊಡಲಾಗುವುದಿಲ್ಲ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿರುವುದಾಗಿ ವರದಿಯಾಗಿದೆ. ವರದಿಯಲ್ಲಿ "ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಿರಿಯ ನಾಗರಿಕರಿಗೆ ಭಾರತೀಯ ರೈಲ್ವೇ ರಿಯಾಯಿತಿಗಳ ಕುರಿತ ಪ್ರಶ್ನೆಗೆ ಉತ್ತರಿಸಿದ್ದಾರೆ. ಕೋವಿಡ್-19 ಶುರುವಾದಾಗಿನಿಂದ ಈ ಯೋಜನೆಯು ಕಾರ್ಯನಿರ್ವಹಿಸುತ್ತಿಲ್ಲ. ರಿಯಾಯಿತಿಯನ್ನು ಯಾವಾಗ ಮರುಸ್ಥಾಪಿಸಲಾಗುತ್ತದೆ ಎಂಬ ಮಹಾರಾಷ್ಟ್ರದ ಸ್ವತಂತ್ರ ಸಂಸದ ನವನೀತ್ ರಾನಾವ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಅಶ್ವಿನಿ ವೈಷ್ಣವ್, ಕಳೆದ ವರ್ಷ ಪ್ರಯಾಣಿಕರ ಸೇವೆಗಳಿಗೆ 59,000 ಕೋಟಿ ರೂಪಾಯಿಗಳ ಸಬ್ಸಿಡಿಯನ್ನು ನೀಡಲಾಗಿರುವುದರಿಂದ ಅದನ್ನು ಸದ್ಯಕ್ಕೆ ಮರುಸ್ಥಾಪಿಸಲಾಗುವುದಿಲ್ಲ, ಭಾರತೀಯ ರೈಲ್ವೆಯ ಪಿಂಚಣಿ ಮತ್ತು ಸಂಬಳದ ಬಿಲ್ಗಳು ತುಂಬ ಇವೆ ಎಂದು ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ" ಎಂದು ವರದಿಯಾಗಿದೆ ನವಂಬರ್ 3.2024ರಂದು "ಝೀ ನ್ಯೂಸ್"ವೆಬ್ಸೈಟ್ನಲ್ಲಿ "ಹಿರಿಯ ನಾಗರಿಕರ ಪ್ರಯಾಣ ದರದಲ್ಲಿ ರಿಯಾಯಿತಿ : ಭಾರತೀಯ ರೈಲ್ವೇ ನೀಡಿದ ಮಾಹಿತಿ" ಎಂಬ ಶೀರ್ಷಿಕೆಯೊಂದಿಗೆ ವರದಿಯನ್ನು ಹಂಚಿಕೊಂಡಿದ್ದಾರೆ, ವರದಿಯಲ್ಲಿ ಹಿರಿಯ ನಾಗರಿಕರಿಗೆ ನೀಡಲಾಗಿದ್ದ ಪ್ರಯಾಣ ದರದ ರಿಯಾಯಿತಿಯನ್ನು ರೈಲ್ವೆ ಇಲಾಖೆ ಕರೋನಾ ಅವಧಿಯಲ್ಲಿ ನಿಲ್ಲಿಸಿತ್ತು. ನಂತರ ಕೆಲವು ಸಂಘಟನೆಗಳು ಪ್ರಯಾಣ ದರದ ರಿಯಾಯಿತಿಯನ್ನು ಮತ್ತೆ ಆರಂಭಿಸುವಂತೆ ಒತ್ತಾಯಿಸಿದ್ದವು. ಜೊತೆಗೆ ಸಂಸತ್ತಿನಲ್ಲಿ ವಿರೋಧ ಪಕ್ಷದ ಸಂಸದರು ರೈಲು ಪ್ರಯಾಣ ದರದಲ್ಲಿ ರಿಯಾಯಿತಿ ವಿಚಾರವನ್ನೂ ಪ್ರಸ್ತಾಪಿಸಿದ್ದರು. ಆದರೆ, ಈಗ ಕೇಂದ್ರ ಸರ್ಕಾರ ರಿಯಾಯಿತಿಯ ಬಗ್ಗೆ ನಿರ್ಧಾರ ಕೈಗೊಂಡಿದೆ. ಮೂಲಗಳ ಪ್ರಕಾರ, ರೈಲು ಪ್ರಯಾಣ ದರದಲ್ಲಿ ಪ್ರಯಾಣಿಕರಿಗೆ ನೀಡಲಾದ ರಿಯಾಯಿತಿಯನ್ನು ಮತ್ತೆ ಆರಂಭಿಸುವುದಿಲ್ಲ ಎನ್ನಲಾಗಿದೆ. ಆದರೆ, ಕ್ಯಾನ್ಸರ್ ಮೊದಲಾದ ಕೆಲವು ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಪ್ರಯಾಣಿಕರಿಗೆ ಪ್ರಯಾಣ ದರದಲ್ಲಿ ರಿಯಾಯಿತಿಯನ್ನು ಮುಂದುವರಿಸಲು ರೈಲ್ವೆ ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ಸೌಲಭ್ಯಗಳನ್ನು ಹೆಚ್ಚಿಸಲಾಗುವುದು ಎಂದು ರೈಲ್ವೆ ಹೇಳಿದೆ. ಆಗಸ್ಟ್ 03, 2024ರಂದು ಸಂಸದೆ ಪ್ರಿಯಾಂಕ ಚತುರ್ವೇದಿಯವರ ಎಕ್ಸ್ ಖಾತೆಯಲ್ಲಿ ಹಿರಿಯ ನಾಗರಿಕರಿಗೆ ರೈಲ್ವೇ ಟಿಕೆಟ್ನ ರಿಯಾಯಿತಿಗೆ ಸಂಬಂಧಿಸಿದ ಪೋಸ್ಟ್ವೊಂದನ್ನು ಕಂಡುಕೊಂಡೆವು. "So Railways has categorically decided to not restart senior citizens and sports citizens concession which was stopped during covid. Chaliye bajao taali" ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ಜೂನ್ 11, 2022ರಂದು ಕನ್ವಾಲ್ ಸಿಂಗ್ ಎಂಬ ಎಕ್ಸ್ ಖಾತೆದಾರ ತನ್ನ ಖಾತೆಯಲ್ಲಿ "@RailMinIndia @AshwiniVaishnaw @PMOIndia sir plz help me to know whether senior citizen quota for ticket bookings on our trains will restart or its out of policy. More than concession a guaranteed lower berth for such citizens is of help.. Thank u" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ "ರೈಲುಗಳಲ್ಲಿ ಟಿಕೆಟ್ ಬುಕಿಂಗ್ಗಾಗಿ ಹಿರಿಯ ನಾಗರಿಕರ ಕೋಟಾ ಪುನರಾರಂಭಗೊಳ್ಳುತ್ತದೆಯೇ ಅಥವಾ ಇಲ್ಲವಾ ಎಂದು ತಿಳಿಯಲು ದಯವಿಟ್ಟು ನನಗೆ ಸಹಾಯ ಮಾಡಿ. ರಿಯಾಯಿತಿಗಿಂತ ಹೆಚ್ಚಾಗಿ ಹಿರಿಯ ನಾಗರಿಕರಿಗೆ ಲೋವರ್ ಬರ್ತ್ ಖಾತರಿ ಮಾಡಿದರೆ ತುಂಬಾ ಸಹಾಯವಾಗುತ್ತದೆ" ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ಗೆ ರೈಲ್ವೇ ಸೇವಾ " ನಾವು ಪ್ರಸ್ತುತ ನಾಲ್ಕು ವರ್ಗದ ದಿವ್ಯಾಂಗರಿಗೆ, ಹನ್ನೊಂದು ವರ್ಗದ ರೋಗಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ರಿಯಾಯಿತಿಯನ್ನು ನೀಡುತ್ತಿದ್ದೇವೆ" ಪ್ರತಿಕ್ರಿಯೆಯನ್ನು ನೀಡಿದೆ. ಜೊತೆಗೆ ನಾವು ವೈರಲ್ ಆದ ಪೋಸ್ಟ್ನಲ್ಲಿ ಕಾಣುವ ಇತರ ಅಂಶಗಳ ಬಗ್ಗೆ ಗಮನಿಸಿದ್ದೇವೆ. ಇದರಲ್ಲಿ ʼಐಆರ್ಸಿಟಿಸಿ ಯಾತ್ರಿ ಮಿತ್ರಾ ಸೇವಾʼ ಹೇಳಲಾಗಿರುವುದನ್ನು ನಾವು ಕಂಡುಕೊಂಡೆವು. ರೈಲ್ವೇ ನಿಲ್ದಾಣಗಳಲ್ಲಿ ವೀಲ್ಚೇರ್ ಸೇವೆ ಮತ್ತು ಪೋರ್ಟರ್ ಸೇವೆಗಳನ್ನು ಬುಕ್ ಮಾಡಲು ಯಾತ್ರಿ ಮಿತ್ರ ಸೇವೆಯನ್ನು ಒದಗಿಸುತ್ತದೆ. ಇದರ ಬಗ್ಗೆ ಸೆಪ್ಟೆಂಬರ್ 19, 2016ರಂದು ಪಿಐಬಿಗೆ ನೀಡಿದ ಪತ್ರಿಕಾ ಹೇಳಿಕೆಯಲ್ಲಿ ರೈಲ್ವೇ ಸಚಿವಾಲಯ ಹೇಳಿದ ವರದಿಯೊಂದು ಲಭ್ಯವಾಗಿದೆ. ́ಮಿಂಟ್ ವೆಬ್ಸೈಟ್́ ನಲ್ಲಿ "How to book confirmed lower berth for senior citizens. IRCTC explains" ಎಂಬ ಶೀರ್ಷಿಕೆಯೊಂದಿಗೆ ವರದಿಯೊಂದನ್ನು ಕಂಡುಕೊಂಡೆವು. ವರದಿಯಲ್ಲಿ ʼಹಿರಿಯ ನಾಗರಿಕರಿಗೆ ನೀಡಲಾಗುವ ಲೋವರ್ ಬರ್ತ್ ಅವಕಾಶದ ಬಗ್ಗೆ ಹೇಳಿರುವುದನ್ನು ಹಾಗೆ ಅವಕಾಶವಿದ್ದಲ್ಲಿ ಸೌಲಭ್ಯವನ್ನು ನೀಡವುದಾಗಿ ಐಆರ್ಸಿಟಿಸಿ" ಹೇಳಿದ್ದಾಗಿ ವರದಿಯಾಗಿದೆ ಹೀಗಾಗಿ ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಟ್ಸ್ಪ್ನಲ್ಲಿ ಹರಿದಾಡುತ್ತಿರುವ ಸಂದೇಶದಲ್ಲಿ ಸತ್ಯಾಂಶವಿಲ್ಲ. ಕೇಂದ್ರ ಸರ್ಕಾರ ಹಿರಿಯ ನಾಗರಿಕರಿಗೆ ರೈಲು ಪ್ರಯಾಣಕ್ಕೆ ಟಿಕೆಟ್ ಗಳಲ್ಲಿ ರಿಯಾಯಿತಿ ಸೌಲಭ್ಯ ಘೋಷಿಸಿದೆ ಎಂಬ ಸುದ್ದಿಯಲ್ಲಿ ನಿಜಾಂಶವಿಲ್ಲ. ಯಾತ್ರಿ ಮಿತ್ರ ಸೇವಾ ಮತ್ತು ಅವಕಾಶವಿದ್ದಲ್ಲಿ ಲೋವರ್ ಬರ್ತ್ ಗಳನ್ನು ಹಿರಿಯ ನಾಗರಿಕರಿಗೆ, ಗರ್ಭಿಣಿಯರು ಮತ್ತು ಅಂಗವಿಕಲರಿಗೆ ನೀಡುಲಾಗುವುದು ಎಂಬ ಸುದ್ದಿ ಮಾತ್ರ ನಿಜವಾಗಿದೆ.
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 2 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software