About: http://data.cimple.eu/claim-review/08f0ef85f25e2af9efe06026178e8e127feb18e24a079085bc32dd7a     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ಪುಷ್ಪ-2 ಸಿನಿಮಾಗೆ ವಿದೇಶದಲ್ಲಿ ಉತ್ತಮ ಸ್ಪಂದನೆ ಎಂದು 2016ರ ಫುಟ್ಬಾಲ್ ಪಂದ್ಯದ ವಿಡಿಯೋವನ್ನು ಹಂಚಿಕೆ ಪುಷ್ಪ-2 ಸಿನಿಮಾಗೆ ವಿದೇಶದಲ್ಲಿ ಉತ್ತಮ ಸ್ಪಂದನೆ ಎಂದು 2016ರ ಫುಟ್ಬಾಲ್ ಪಂದ್ಯದ ವಿಡಿಯೋವನ್ನು ಹಂಚಿಕೆ Claim :ಪುಷ್ಪಾ-2ನಲ್ಲಿ ಅಲ್ಲು ಅರ್ಜುನ್ ಎಂಟ್ರಿ ದೃಶ್ಯವನ್ನು ಕಂಡು ವಿದೇಶಿಗರು ಸಿನಿಮಾ ಮಂದಿರದಲ್ಲಿ ಕುಣಿದಿದ್ದಾರೆ Fact :ಫುಟ್ಬಾಲ್ ಪಂದ್ಯದ ವಿಡಿಯೋವಿನ ಜಾಗದಲ್ಲಿ ಪುಷ್ಪ 2 ಸಿನಿಮಾದ ಕ್ಲಿಪ್ಪಿಂಗ್ನ್ನು ಬಳಸಿ ಎಡಿಟ್ ಮಾಡಲಾಗಿದೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ “ಪುಷ್ಪ 2: ದಿ ರೂಲ್” ಬಿಡುಗಡೆಯಾದ ಕೇವಲ 10 ದಿನಗಳಲ್ಲಿ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ್ದು, ಬರೋಬ್ಬರಿ 1,292 ಕೋಟಿ ರೂಪಾಯಿಗಳನ್ನು ಕಲೆ ಹಾಕಿದೆ ಎಂದು ಚಿತ್ರ ನಿರ್ಮಾಪಕರು ಡಿಸಂಬರ್ 15ರಂದು ತಿಳಿಸಿದ್ದಾರೆ. ಸುಕುಮಾರ್ ನಿರ್ದೇಶನದ ತೆಲುಗು ಮೂಲ ಭಾಷೆಯ ಚಿತ್ರ ಡಿಸೆಂಬರ್ 5 ರಂದು ಹಿಂದಿ, ತಮಿಳು, ಕನ್ನಡ, ಬೆಂಗಾಲಿ ಮತ್ತು ಮಲಯಾಳಂ ಭಾಷೆಗಳಲ್ಲಿ ಡಬ್ಬಿಂಗ್ ಆವೃತ್ತಿಗಳೊಂದಿಗೆ ವಿಶ್ವಾದ್ಯಂತ ಬಿಡುಗಡೆಯಾಗಿ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಈ ಚಿತ್ದ ವಿಶೇಷವೆಂದರೆ “ಪುಷ್ಪ 2” ನ ಹಿಂದಿ ಡಬ್ಬಿಂಗ್ ಗಳಿಕೆ 507.50 ಕೋಟಿ ರೂಪಾಯಿಯಾಗಿದ್ದು, 500 ಕೋಟಿ ರೂ.ಗಳ ಗಡಿಯನ್ನು ದಾಟಿದ ಹಿಂದಿಯ ಅತಿವೇಗದ ಚಿತ್ರ ಎಂಬ ದಾಖಲೆಗೆ ಭಾಜನವಾಗಿದೆ. ಚಿತ್ರದ ಭರ್ಜರಿ ಗಳಿಕೆಯ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ವೈರಲ್ ವಿಡಿಯೋದಲ್ಲಿ ಒಂದು ದೊಡ್ಡ ಸ್ಕ್ರೀನ್ನಲ್ಲಿ ಪುಷ್ಪ-2 ಸಿನಿಮಾದ ದೃಶ್ಯವನ್ನು ತೋರಿಸಲಾಗುತ್ತಿದೆ. ಆ ವಿಡಿಯೋವನ್ನು ನೋಡಿ ಅಲ್ಲಿ ನೆರೆದಿರುವಂತಹ ಜನರು ಖುಷಿಯಿಂದ ಕಿರುಚುತ್ತಿರುವುದನ್ನು ನೋಡಬಹುದು. ಈ ವಿಡಿಯೋವಿಗೆ ವಿದೇಶದ ಚಿತ್ರ ಮಂದಿರಗಳಲ್ಲಿ ಪುಷ್ಪ ಸಿನಿಮಾವನ್ನು ನೋಡಿ ವಿದೇಶಿಗರು ಕುಣಿದು ಕುಪ್ಪಳಿಸುತ್ತಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ʼಸಚಿನ್ ಮಿತಾಲ್ʼ ಎಂಬ ಇನ್ಸ್ಟಾಗ್ರಾಮ್ ಖಾತೆದಾರ ತಮ್ಮ ಖಾತೆಯಲ್ಲಿ ʼEditing kiya haiʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟನ್ನು ನೀವಿಲ್ಲಿ ನೋಡಬಹುದು ಡಿಸಂಬರ್ 11, 2024ರಂದು ʼಮುಖೇಶ್ ಮೀನಾʼ ಎಂಬ ಯೂಟ್ಯೂಬ್ ಖಾತೆದಾರರ ತನ್ನ ಖಾತೆಯಲ್ಲಿ ʼThe Unbelievable Impact of Pushpa 2ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಫ್ಯಾಕ್ಟ್ಚೆಕ್ ವೈರಲ್ ಆದ ವಿಡಿಯೋ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಫುಟ್ಬಾಲ್ ಪಂದ್ಯದ ವಿಡಿಯೋವಿನ ಜಾಗದಲ್ಲಿ ಪುಷ್ಪ 2 ಸಿನಿಮಾದ ಕ್ಲಿಪ್ಪಿಂಗ್ನ್ನು ಬಳಸಿ ಎಡಿಟ್ ಮಾಡಲಾಗಿದೆ. ನಾವು ವೈರಲ್ ಆದ ವಿಡಿಯೋವಿನ ಬಗ್ಗೆ ಸತ್ಯಾಂಶವನ್ನು ತಿಳಿಯಲು ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಫ್ರೇಮ್ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮತ್ತು ಕೆಲವು ಪ್ರಮುಖ ಕೀವರ್ಡ್ಗಳ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಎಂಟು ವರ್ಷದ ಹಿಂದೆ ಅಂದರೆ, 2016ರಲ್ಲಿ ʼಹಾರ್ಟ್ ನ್ಯೂಸ್ ವೆಸ್ಟ್ ಕಂಟ್ರಿʼ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ʼFans at Ashton Gate Stadium, Bristol, celebrate England winner against Wales at Euro 2016ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನೋಡಬಹುದು. ಈ ವಿಡಿಯೋವನ್ನು ಗಮನಿಸಿದರೆ, ದೊಡ್ಡ ಪರದೆಯಲ್ಲಿ ಫುಟ್ಬಾಲ್ ಪಂದ್ಯ ನಡೆಯುತ್ತಿರುವುದನ್ನು ನಾವು ನೋಡಬಹುದು. ಈ ವಿಡಿಯೋ ಸ್ಥಾನದಲ್ಲಿ ಪುಷ್ಟು-2 ಚಿತ್ರದ ಸನ್ನಿವೇಶವೊಂದನ್ನು ಎಡಿಟ್ ಮಾಡಿದ್ದಾರೆ ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ʼಬ್ರಿಸ್ಟೋಲ್ ಸಿಟಿʼ ಎಂಬ ವೆಬ್ಸೈಟ್ನಲ್ಲಿ ʼAshton Gate Erupts For Euro 2016 England Gameʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನಾವು ನೋಡಬಹುದು. ಇಂಗ್ಲೆಂಡ್ ಮತ್ತು ವೇಲ್ಸ್ ಪಂದ್ಯವನ್ನು ನೋಡಲು ಸಾವಿರಾರು ಫುಟ್ಬಾಲ್ ಅಭಿಮಾನಿಗಳು ಆಷ್ಟನ್ ಗೇಟ್ ಕ್ರೀಡಾಂಗಣಕ್ಕೆ ಬಂದಿರುವ ದೃಶ್ಯವಿದು. ಇಲ್ಲಿ ಪಂದ್ಯವನ್ನು ಲೈವ್ನಲ್ಲಿ ತೋರಿಸಲಾಯಿತು. ಈ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದಿತ್ತು. ಇಂಗ್ಲೆಂಡ್ ತಂಡ ಗೋಲು ಬಾರಿಸಿದಾಗ ಅಭಿಮಾನಿಗಳು ಖುಷಿಯಿಂದ ಕುಣಿದು ಕುಪ್ಪಳಿಸಿದರು. ಈ ವಿಡಿಯೋ ಆ ಸಮಯದ್ದಾಗಿದೆ. ಈ ವರದಿಯನ್ನು 17 ಜೂನ್ 2016 ರಂದು ಪ್ರಕಟಿಸಲಾಗಿದೆ. ಮೂಲ ವಿಡಿಯೋವನ್ನು ಸಹ ಇಲ್ಲಿ ನೋಡಬಹುದು ಎಂದು ವರದಿ ಮಾಡಿದ್ದಾರೆ. ʼಬಿಬಿಸಿ ಬ್ರಿಸ್ಟೊಲ್ʼ ಎಂಬ ಫೇಸ್ಬುಕ್ ಖಾತೆಯಲ್ಲಿ ʼEngland fans celebrate their win against Walesʼ , ʼAnd the best reaction to England Football Team's winning goal goes to...Bristol" ಎಂಬ ಕ್ಯಾಪ್ಷನ್ನ್ನು ನೀಡಿ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನೋಡಬಹುದು. ಜೂನ್ 16, 2024ರಂದು ʼಐಟಿವಿʼ ವೆಬ್ಸೈಟ್ನಲ್ಲಿ ʼBristol football fans erupt into cheers as England score winning goalʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಲಾಗಿದೆ. ವರದಿಯಲ್ಲಿ ಬ್ರಿಸ್ಟಲ್ನ ಆಷ್ಟನ್ ಗೇಟ್ ಸ್ಟೇಡಿಯಂನಲ್ಲಿ ನೂರಾರು ಫುಟ್ಬಾಲ್ ಅಭಿಮಾನಿಗಳು ಯುರೋ ಪಂದ್ಯಾವಳಿಯ ಎರಡನೇ ಪಂದ್ಯದಲ್ಲಿ ವೇಲ್ಸ್ ವಿರುದ್ಧ ಇಂಗ್ಲೆಂಡ್ ಆಡುವುದನ್ನು ವೀಕ್ಷಿಸಲು ಜಮಾಯಿಸಿದರು. ವೆಸ್ಟ್ನಾದ್ಯಂತದ ಅನೇಕ ಕಂಪನಿಗಳು ಪಂದ್ಯವನ್ನು ವೀಕ್ಷಿಸಲು ಸಿಬ್ಬಂದಿಯೊಂದಿಗೆ ಬಂದು ತಮ್ಮ ಅತ್ಯಮೂಲ್ಯವಾದ ಸಮಯವನ್ನು ಕಳೆದರು. ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ವಿಡಿಯೋ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಫುಟ್ಬಾಲ್ ಪಂದ್ಯದ ವಿಡಿಯೋವಿನ ಜಾಗದಲ್ಲಿ ಪುಷ್ಪ 2 ಸಿನಿಮಾದ ಕ್ಲಿಪ್ಪಿಂಗ್ನ್ನು ಬಳಸಿ ಎಡಿಟ್ ಮಾಡಿ ವೈರಲ್ ಮಾಡಲಾಗಿದೆ.
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 3 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software