schema:text
| - Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact checks doneFOLLOW US
Fact Check
Claim:
ಬೆಳಗಾವಿ ಮಹಿಳೆ ಬೆತ್ತಲೆ ಮೆರವಣಿಗೆ ಪ್ರಕರಣ, ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ, ಹೈಕೋರ್ಟ್ ಪ್ರಕರಣ ಗಮನಿಸಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು
Fact:
ಪ್ರಕರಣದ ಬಗ್ಗೆ ಹೈಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಮಾಧ್ಯಮಗಳಿಗೆ ನಿರ್ದೇಶನ ನೀಡಿದೆ. ಜೊತೆಗೆ ಪೊಲೀಸರು ತಡೆಯಲು ಯತ್ನಿಸಬೇಕಿತ್ತು ಎಂದಿದೆ.
ಬೆಳಗಾವಿಯಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ, ಮೆರವಣಿಗೆ ನಡೆಸಿದ ಪ್ರಕರಣ ಸುದ್ದಿ ಮಾಡಿರುವಂತೆಯೇ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಅವರು ಎಕ್ಸ್ ನಲ್ಲಿ ಮಾಡಿದ ಪೋಸ್ಟ್ ಸುದ್ದಿ ಮಾಡಿದೆ.
ಎಕ್ಸ್ ಪೋಸ್ಟ್ ನಲ್ಲಿ “ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ಮಹಿಳೆಯ ಮೇಲೆ ನಡೆದ ಅಮಾನುಷ ಕೃತ್ಯ ನಾಚಿಕೆಗೇಡಿನ ಘಟನೆಯಾದರೂ ಕಾಂಗ್ರೆಸ್ ಸರಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕರ್ನಾಟಕ ಹೈಕೋರ್ಟ್ ಈ ವಿಷಯವನ್ನು ಮತ್ತೊಮ್ಮೆ ಗಮನಿಸಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.” ಎಂದು ಹೇಳಿದ್ದಾರೆ.
ಈ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಭಾಗಶಃ ಸುಳ್ಳು ಎಂದು ಕಂಡುಕೊಂಡಿದೆ.
ಪ್ರಹ್ಲಾದ್ ಜೋಶಿ ಅವರ ಹೇಳಿಕೆಯ ಸತ್ಯಾಸತ್ಯತೆ ತಿಳಿಯಲು ನ್ಯೂಸ್ ಚೆಕರ್ ಮುಂದಾಗಿದೆ. ಇದಕ್ಕಾಗಿ ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಫಲಿತಾಂಶಗಳು ಲಭ್ಯವಾಗಿವೆ.
ಡಿಸೆಂಬರ್ 11, 2023ರ ಕನ್ನಡ ಪ್ರಭ ವರದಿಯ ಪ್ರಕಾರ, “ಬೆಳಗಾವಿ: ಪ್ರೀತಿಸಿದ ಯುವತಿ ಜೊತೆ ಓಡಿಹೋದ ಮಗ; ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ ಮೆರವಣಿಗೆ, 7 ಮಂದಿ ಬಂಧನ” ಎಂದಿದೆ. ಈ ವರದಿಯ ವಿವರಣೆಯಲ್ಲಿ “ತಡರಾತ್ರಿ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ಸಂಬಂಧ 7 ಜನ ಆರೋಪಿಗಳನ್ನು ಬಂಧಿಸಲಾಗಿದೆ.” ಎಂದಿದೆ.
ಡಿಸೆಂಬರ್ 11, 2023ರ ನ್ಯೂಸ್18 ಕನ್ನಡ ವರದಿಯಲ್ಲಿ “ಪ್ರೀತಿಸಿದ ಯುವತಿ ಜೊತೆ ಹೋದ ಮಗ; ತಾಯಿಯನ್ನ ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಲ್ಲೆ” ಎಂಬ ಶೀರ್ಷಿಕೆಯಲ್ಲಿ ಮಹಿಳೆಯೊಂದಿಗೆ ಅಮಾನವೀಯವಾಗಿ ನಡೆದುಕೊಂಡಿದ್ದು ಮತ್ತು ಬೆತ್ತಲೆ ಮೆರವಣಿಗೆ ನಡೆಸಿದ ಆರೋಪ ಕೇಳಿಬಂದಿದೆ ಎಂದಿದೆ. ಇದೇ ವರದಿಯಲ್ಲಿ ಪ್ರಕರಣ ಸಂಬಂಧ 7 ಮಂದಿಯ ಬಂಧನ ನಡೆದಿದೆ ಎಂಬ ವಿಚಾರವೂ ಇದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತ ನಾವು ಪೊಲೀಸ್ ಎಫ್ ಐಆರ್ ವರದಿಯನ್ನು ನೋಡಿದ್ದೇವೆ. ಇದರ ಪ್ರಕಾರ ಡಿಸೆಂಬರ್ 11ರಂದು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. 12 ಮಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಈ ಎಫ್ಐಆರ್ ವರದಿ ಇಲ್ಲಿದೆ.
ಇದರೊಂದಿಗೆ ಪ್ರಕರಣ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಎಕ್ಸ್ ಪೋಸ್ಟ್ ಅನ್ನು ಗಮನಿಸಿದ್ದೇವೆ. “ಬೆಳಗಾವಿಯಲ್ಲಿ ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿ, ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿರುವುದು ಅತ್ಯಂತ ಅಮಾನವೀಯ. ಇದರಿಂದ ಇಡೀ ಸಮಾಜವೇ ತಲೆತಗ್ಗಿಸುವಂತಾಗಿದೆ. ಇಂತಹ ಹೀನ ಕೃತ್ಯಗಳನ್ನು ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಪ್ರಕರಣದ ಸಂಬಂಧ ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮವಹಿಸುವ ಮೂಲಕ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸುವ ಸಂಪೂರ್ಣ ಹೊಣೆ ನಮ್ಮದು.” ಎಂದವರು ಹೇಳಿದ್ದಾರೆ. ಈ ಕುರಿತ ಪೋಸ್ಟ್ ಇಲ್ಲಿದೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆಯೇ? ಏನು ಹೇಳಿದೆ ಎಂಬುದನ್ನು ಶೋಧಿಸಿದ್ದೇವೆ.
ಡಿಸೆಂಬರ್ 13, 2023ರ ಟಿವಿ 9 ಕನ್ನಡ ವರದಿ ಪ್ರಕಾರ “ಬೆಳಗಾವಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ: ಸಂತ್ರಸ್ತೆಯ ಫೋಟೊ, ಸಂದರ್ಶನ ಪ್ರಸಾರ ಮಾಡದಂತೆ ಹೈಕೋರ್ಟ್ ನಿರ್ದೇಶನ” ಎಂಬ ಶೀರ್ಷಿಕೆಯಡಿ ಪ್ರಕಟಿಸಿದ ವರದಿಯಲ್ಲಿ, ಪ್ರಕರಣದ ಬಗ್ಗೆ ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಿದ ಕೋರ್ಟ್, ಯಾವುದೇ ರಾಷ್ಟ್ರೀಯ ಅಥವಾ ಪ್ರಾದೇಶಿಕ ಚಾನೆಲ್ಗಳಲ್ಲಿ ಸಂತ್ರಸ್ತೆಯ ಸಂದರ್ಶನಗಳನ್ನು, ಯಾವುದೇ ಸಂಸ್ಥೆ, ಮಾಧ್ಯಮ, ಸಚಿವರು ಸಂತ್ರಸ್ತೆಯ ಭೇಟಿ ಮಾಡಿದ್ದು ಅದರ ಫೋಟೋ, ವೀಡಿಯೋಗಳನ್ನೂ ಪ್ರಸಾರ ಮಾಡದಂತೆ ಸುದ್ದಿ ವಾಹಿನಿಗಳಿಗೆ ನಿರ್ದೇಶನ ನೀಡಿದೆ ಎಂದಿದೆ.
ಡಿಸೆಂಬರ್ 14, 2023ರ ಬಾರ್ ಆಂಡ್ ಬೆಂಚ್ ವರದಿಯ ಪ್ರಕಾರ, ಮಹಿಳೆಯನ್ನುಬೆತ್ತಲೆಗೊಳಿಸಿದ ಪ್ರಕರಣದ ಬಗ್ಗೆ ಸ್ವಯಂಪ್ರೇರಿತ ಕೇಸು ದಾಖಲಿಸಿ ತೀವ್ರ ಕಳವಳ ವ್ಯಕ್ತಪಡಿಸಿದೆ. “ಸಂತ್ರಸ್ತೆಯ ಪುತ್ರ ತನ್ನದೇ ಸಮುದಾಯದ ಯುವತಿಯೊಂದಿಗೆ ಪರಾರಿಯಾದ ಹಿನ್ನೆಲೆಯಲ್ಲಿ ಯುವತಿಯ ಕುಟುಂಬಸ್ಥರು ಹುಡುಗನ ತಾಯಿಯನ್ನು ವಿವಸ್ತ್ರಗೊಳಿಸಿ, ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ್ದರು. “ಈ ಸಂದರ್ಭದಲ್ಲಿ ತಕ್ಷಣ ಪೊಲೀಸರು ಸಂತ್ರಸ್ತೆಯ ನೆರವಿಗೆ ಏಕೆ ಧಾವಿಸಲಿಲ್ಲ. ಮೊದಲಿಗೆ ಇಂಥ ಘಟನೆ ನಡೆಯುವುದಕ್ಕೆ ಅವಕಾಶ ನೀಡಿದ್ದಾದರು ಹೇಗೆ?” ಎಂದು ಖಾರವಾಗಿ ಪೀಠವು ಸರ್ಕಾರವನ್ನು ಪ್ರಶ್ನಿಸಿತು.” ಎಂದಿದೆ. ಇದೇ ವರದಿಯಲ್ಲಿ ಇಂತಹ ಘಟನೆಗಳನ್ನು ತಡೆಯುವುದೂ ಪೊಲೀಸ್ ಕೆಲಸ ತಪ್ಪಿತಸ್ಥ ಪೊಲೀಸ್ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದೆ” ಎಂದಿದೆ.
ಪ್ರಕರಣದ ಕುರಿತಾಗಿ ನಾವು ಹೈಕೋರ್ಟ್ ಆದೇಶದ ಪ್ರತಿಗಳನ್ನೂ ಗಮನಿಸಿದ್ದೇವೆ. ಇದರಲ್ಲಿ ಮುಖ್ಯವಾಗಿ ಮಾಧ್ಯಮಗಳಿಗೆ ನಿರ್ದೇಶನಗಳನ್ನು ನೀಡಲಾಗಿದೆ. ಸಂತ್ರಸ್ತೆ ಫೋಟೋ, ವೀಡಿಯೋ ಪ್ರಸಾರ ಮಾಡದಂತೆ, ಸಚಿವರು, ಸಂಸ್ಥೆಗಳು ಭೇಟಿ ನೀಡಿದಾಗ ಸಂತ್ರಸ್ತೆ ಉಲ್ಲೇಖಿಸುವ ದೃಶ್ಯಗಳನ್ನು ಪ್ರಸಾರ ಮಾಡದಂತೆ, ಆಸ್ಪತ್ರೆಯಲ್ಲಿ ಆಕೆಯ ಭೇಟಿ ಮಾಡದಂತೆ ನಿರ್ದೇಶಿಸಿದೆ. ಹೆಚ್ಚವರಿಯಾಗಿ ಪ್ರಕರಣದ ಬಗ್ಗೆ ವರದಿ ಸಲ್ಲಿಸುವಂತೆ ಅಡ್ವೊಕೇಟ್ ಜನರಲ್ ಅವರಿಗೆ ಸೂಚನೆ ನೀಡಿರುವುದನ್ನು ಗಮನಿಸಿದ್ದೇವೆ. ಈ ಕುರಿತ ವಿವರಗಳನ್ನು ಇಲ್ಲಿ ನೋಡಬಹುದು.
ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ, ಪ್ರಕರಣದಲ್ಲಿ ಆರಂಭಿಕವಾಗಿ ಪೊಲೀಸರು ಕೇಸು ದಾಖಲಿಸಿ 7 ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದ ಬಗ್ಗೆ ಕಳವಳ ವ್ಯಕ್ತಪಡಿಸಿದ ಕೋರ್ಟ್, “ಪೊಲೀಸರು ಪ್ರಕರಣ ತಡೆಯಲು ಯತ್ನಿಸ ಬೇಕಿತ್ತು” ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ ಎಂದು ಗೊತ್ತಾಗಿದೆ. ಆದ್ದರಿಂದ ಕ್ಲೇಮ್ ಭಾಗಶಃ ತಪ್ಪಾಗಿದೆ.
Our Sources
Report By Kannada Prabha, Dated: December 11, 2023
Report By News18 Kannada, Dated: December 11, 2023
Report By TV9 Kannada, Dated: December 13, 2023
Report By Bar and Bench, Dated: December 14, 2023
Tweet By Sidaramaiah, Dated: December 11, 2023
FIR Report By Belagavi Kakati police station
High court of Karnataka Orders
(Inputs from Prasad Prabhu, Newschecker)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
March 9, 2024
Komal Singh
December 7, 2023
Ishwarachandra B G
April 20, 2023
|