About: http://data.cimple.eu/claim-review/1d4a1e2ad7228f7f5cfbaff90f4c4d1ed57b516ea8ac92f8e660eb46     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check Contact Us: checkthis@newschecker.in Fact checks doneFOLLOW US Fact Check Claim ದಾಲ್ಚಿನ್ನಿ ತಿನ್ನುವುದರಿಂದ ಮಧುಮೇಹ ನಿಯಂತ್ರಿಸಬಹು, ಅದು ದೇಹಕ್ಕೆ ಇನ್ಸುಲಿನ್ ಒದಗಿಸುತ್ತದೆ Fact ಇನ್ಸುಲಿನ್ಗೆ ದಾಲ್ಚಿನ್ನಿ ಪರ್ಯಾಯವಲ್ಲ, ಇದು ದೇಹಕ್ಕೆ ಇನ್ಸಲಿನ್ ಒದಗಿಸುತ್ತದೆ ಎನ್ನುವುದಕ್ಕೆ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ ದಾಲ್ಚಿನ್ನಿ ಮಧುಮೇಹ ನಿಯಂತ್ರಣಕ್ಕೆ ಮತ್ತು ದೇಹಕ್ಕೆ ಇನ್ಸುಲಿನ್ ಒದಗಿಸುತ್ತದೆ ಎಂದು ಕ್ಲೇಮ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಇನ್ಸ್ಟಾಗ್ರಾಂ ನಲ್ಲಿ ಕಂಡು ಬಂದ ಹೇಳಿಕೆಯಲ್ಲಿ “ದಾಲ್ಚಿನ್ನಿಯು ಮಧುಮೇಹ ಖಾಯಿಲೆಯ ನಿಯಂತ್ರಣಕ್ಕೆ ಅತ್ಯಂತ ಉಪಯೋಗಕಾರಿಯಾಗಿದ್ದು ಇದು ದೇಹದಲ್ಲಿನ ಇನ್ಸುಲಿನ್ ಪ್ರಮಾಣವನ್ನು ದ್ವಿಗುಣಗೊಳಿಸಲು ಹಾಗೂ ದೇಹಕ್ಕೆ ಹೆಚ್ಚಿನ ಪ್ರಮಾಣದ ಇನ್ಸುಲಿನ್ ಒದಗಿಸಲು ಕಾರಣೀಭೂತವಾಗುತ್ತದೆ” ಎಂದಿದೆ. Also Read: ಕೊಬ್ಬರಿ ತಿನ್ನುವುದರಿಂದ ಹಲವು ಆರೋಗ್ಯ ಪ್ರಯೋಜನಗಳಿವೆಯೇ? ಈ ಬಗ್ಗೆ ನಾವು ಸತ್ಯಶೋಧನೆ ನಡೆಸಿದ್ದು ಇದು ತಪ್ಪಾದ ಸಂದರ್ಭವನ್ನು ಹೊಂದಿದೆ ಎಂದು ತಿಳಿದುಬಂದಿದೆ. ಮಧುಮೇಹ ಎನ್ನುವುದು ದೇಹದ ಚಯಾಪಚಯ ವ್ಯವಸ್ಥೆಯ ಅಸ್ವಸ್ಥತೆ. ಈ ಸ್ಥಿತಿಯು ರಕ್ತದಲ್ಲಿ ಹೆಚ್ಚಿನ ಪ್ರಮಾಣದ ಗ್ಲೂಕೋಸ್ ಮಟ್ಟವನ್ನು ತೋರಿಸುತ್ತದೆ. ಹೀಗೆ ಹೆಚ್ಚು ಗ್ಲೂಕೋಸ್ ಹೊಂದಿರುವುದರಿಂದ ರೋಗಿಗಳಿಗೆ ಸಾಮಾನ್ಯವಾಗಿ ಬಾಯಾರಿಕೆ, ಹಸಿವು ಮತ್ತು ಆಗಾಗ್ಗೆ ಮೂತ್ರ ವಿಸರ್ಜನೆ ಇರುತ್ತದೆ. ಈ ಸ್ಥಿತಿಯು ಇನ್ಸುಲಿನ್ ಅಥವಾ ಅಸಮರ್ಪಕ ಇನ್ಸುಲಿನ್ ಉತ್ಪಾದನೆಗೆ ನಿಷ್ಪರಿಣಾಮಕಾರಿ ಸೆಲ್ಯುಲಾರ್ ಪ್ರತಿಕ್ರಿಯೆ ಹೊಂದಿದೆ. ಇದನ್ನು ಟೈಪ್ 2 ಮತ್ತು ಇನ್ಸುಲಿನ್-ಅವಲಂಬಿತ ಮಧುಮೇಹ ಎಂದು ಉಲ್ಲೇಖಿಸಲಾಗಿದೆ, ದಾಲ್ಚಿನ್ನಿ ಮಧುಮೇಹವನ್ನು ತಡೆಗಟ್ಟುವ ಸುದೀರ್ಘ ಇತಿಹಾಸವನ್ನು ಹೊಂದಿರುವ ಒಂದು ಮಸಾಲೆ ಪದಾರ್ಥ. ಇನ್ಸುಲಿನ್ಗೆ ಹೋಲುವ ಗುಣಲಕ್ಷಣಗಳುಳ್ಳ ಶಾರೀರಿಕವಾಗಿ ಸಕ್ರಿಯವಾಗಿರುವ ಅಣುಗಳು ಇದಕ್ಕೆ ಪುರಾವೆಗಳನ್ನು ಒದಗಿಸುತ್ತವೆ. ಆದರೆ ದಾಲ್ಚಿನ್ನಿ ಕುರಿತ ಅಧ್ಯಯನಗಳು, ವಿರೋಧಾತ್ಮಕ ಸಂಶೋಧನೆಗಳನ್ನು ಹೊಂದಿವೆ. ದಾಲ್ಚಿನ್ನಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡುತ್ತದೆ ಎಂಬ ಅಂಶವನ್ನು ಹೊಂದಿದೆ. ಆದರೆ ಹೆಚ್ಚಿನ ಅಧ್ಯಯನಗಳಿಗೆ ಟೈಪ್ 2 ಡಯಾಬಿಟಿಸ್ ಮೆಲ್ಲಿಟಸ್ ಹೊಂದಿರುವ ಜನರಲ್ಲಿ ಗ್ಲೈಸೆಮಿಕ್ ನಿಯಂತ್ರಣ ಕುರಿತಂತೆ ಯಾವುದೇ ಸಂಭಾವ್ಯ ಚಿಕಿತ್ಸಕ ಪ್ರಯೋಜನಗಳನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ. Also Read: ಎಡಭಾಗದಲ್ಲಿ ಮಲಗಿದರೆ ಯಕೃತ್ತಿನ ಕಾಯಿಲೆ ಬರುವುದಿಲ್ಲ ಎಂಬುದು ನಿಜವೇ? ಟೈಪ್ 2 ಮಧುಮೇಹವನ್ನು ಹಿಮ್ಮೆಟ್ಟಿಸುವ ಯಾವುದೇ ದಾಖಲಿತ ಔಷಧಿಗಳಿಲ್ಲ. ಆದಾಗ್ಯೂ, ಆ ಸ್ಥಿತಿಯನ್ನು ಮಾತ್ರ ನಿರ್ವಹಿಸಬಹುದು. ನಿಯಮಿತ ರಕ್ತದಲ್ಲಿನ ಗ್ಲೂಕೋಸ್ ಪರೀಕ್ಷೆ, ಆಹಾರ ಮತ್ತು ಜೀವನಶೈಲಿ ಮಾರ್ಪಾಡುಗಳು ಮತ್ತು ಮೌಖಿಕ ಔಷಧಿ ಇತ್ಯಾದಿಗಳ ಮೂಲಕ ಈ ಸ್ಥಿತಿಯನ್ನು ನಿರ್ವಹಿಸಬಹುದಾಗಿದೆ. ಆದಾಗ್ಯೂ, 60 ದಿನಗಳವರೆಗೆ ನಿರ್ದಿಷ್ಟ ಪ್ರಮಾಣದ ದಾಲ್ಚಿನ್ನಿ ಸೇವಿಸುವುದರಿಂದ ಟೈಪ್ 2 ಮಧುಮೇಹಿಗಳಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸಂಶೋಧನೆಗಳು ತೋರಿಸಿವೆ. ಇದಲ್ಲದೆ, ದಾಲ್ಚಿನ್ನಿ ಮೌಖಿಕ ಹೈಪೊಗ್ಲಿಸಿಮಿಕ್ ಔಷಧಿಗಳನ್ನು ಬದಲಿಸಬಲ್ಲದು ಎಂಬ ಹೇಳಿಕೆಯನ್ನು ಬೆಂಬಲಿಸಲು ಸಾಕಷ್ಟು ಪುರಾವೆಗಳಿಲ್ಲ ಎಂಬ ತೀರ್ಮಾನಕ್ಕೆ ನಾವು ಬರಬೇಕಾಗುತ್ತದೆ. ಈ ಕುರಿತು ನಾವು ದಿಲ್ಲಿ ಮೂಲದ ಸರೋಜ್ ಮಧುಮೇಹ ಮತ್ತು ಸಂಶೋಧನಾ ಕೇಂದ್ರದ ಹಿರಿಯ ಮಧುಮೇಹಶಾಸ್ತ್ರಜ್ಞರಾದ ಡಾ.ರಿತೇಶ್ ಬನ್ಸಾಲ್ ಅವರನ್ನು ಸಂಪರ್ಕಿಸಿದ್ದೇವೆ. ಅವರು ಹೇಳುವ ಪ್ರಕಾರ, “ ಬಹುತೇಕ ಮಧುಮೇಹ ರೋಗಿಗಳು ತಮಗೆ ಸಹಾಯ ಸಹಾಯಕವಾಗಬಹುದಾದ ಪರ್ಯಾಯ ವೈದ್ಯಕೀಯ ಚಿಕಿತ್ಸೆಗಳನ್ನು ನಿರಂತರವಾಗಿ ಹುಡುಕುತ್ತಾರೆ. ಎಲ್ಲಾ ಮಧುಮೇಹ ರೋಗಿಗಳಿಗೆ ಆಹಾರ, ಜೀವನಶೈಲಿ ಬದಲಾವಣೆ ಮತ್ತು ಅಲೋಪತಿ ಔಷಧಿಗಳ ಮೂಲಕ ನಿರ್ದಿಷ್ಟ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸೂಚಿಸುವುದರಿಂದ ಹೀಗಾಗುತ್ತದೆ. ದಾಲ್ಚಿನ್ನಿ ವಿಚಾರದಲ್ಲಿ ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇವು ಪ್ರಬಲ ಆಂಟಿ ಆಕ್ಸಿಡೆಂಟ್ ಗಳು ಮತ್ತು ಉರಿಯೂತ ಶಮನಕಾರಿಯಾಗಿದ್ದು, ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ. ಇದು ಒಂದು ಪೋಷಕ ಪಾತ್ರವನ್ನು ನಿರ್ವಹಿಸುತ್ತದೆ. ಈ ನೈಸರ್ಗಿಕ ಚಿಕಿತ್ಸೆಗಳು ಜೀವನಶೈಲಿಯ ಸಮಸ್ಯೆಗಳನ್ನು ಹೊಂದಿರುವವರಿಗೆ ಪ್ರಯೋಜನವನ್ನು ನೀಡುತ್ತದೆ. ಆದಾಗ್ಯೂ, ಅಂತಹ ನೈಸರ್ಗಿಕ ಪರಿಹಾರಗಳನ್ನು ಬಳಸುವಾಗ ರೋಗಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಬೇಕಾಗುತ್ತದೆ ಮತ್ತು ಅವರಿಗೆ, ವೈದ್ಯರು ಸೂಚಿಸಿದ ಪ್ರಕಾರ ವೈದ್ಯಕೀಯ ಸಲಹೆ ಅನುಸರಿಸಲು ಸೂಚಿಸಲಾಗುತ್ತದೆ.” ಆಹಾರ ತಜ್ಞೆ ವೊಮಿಕಾ ಮುಖರ್ಜಿ ಅವರ ಪ್ರಕಾರ, “ ದಾಲ್ಚಿನ್ನಿ ಮಧುಮೇಹದ ಔಷಧಿಗೆ ಪರ್ಯಾಯವಲ್ಲ, ಔಷಧ ಬದಲಿಗೆ ಅದನ್ನು ಬಳಸಲು ಸಾಧ್ಯವಿಲ್ಲ ಎಂದವರು ಎಚ್ಚರಿಸಿದ್ದಾರೆ. ಆದಾಗ್ಯೂ ಇದನ್ನು ಆಹಾರದಲ್ಲಿ ಸೇರಿಸುವುದರಿಂದ ರೋಗಲಕ್ಷ್ಣ ಕಡಿಮೆ ಮಾಡಲು ಸಹಾಯ ಮಾಡುತ್ತದೆ” ಎಂದಿದ್ದಾರೆ. ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ಇನ್ಸುಲಿನ್ ಸೂಕ್ಷ್ಮತೆಯ ಮೇಲೆ ದಾಲ್ಚಿನ್ನಿ ಸಂಭಾವ್ಯ ಪರಿಣಾಮ ಎಷ್ಟು ಎಂದು ಅಧ್ಯಯನ ಮಾಡಲಾಗಿದೆ. ಕೆಲವು ಸಂಶೋಧನೆಗಳು ಪ್ರಯೋಜನಕಾರಿ ಪರಿಣಾಮ ಹೊಂದಿರಬಹುದು ಎಂದು ಹೇಳುತ್ತವೆ. ಆದರೆ ದಾಲ್ಚಿನ್ನಿ ದೇಹದಲ್ಲಿನ ಇನ್ಸುಲಿನ್ ಪ್ರಮಾಣವನ್ನು ದ್ವಿಗುಣಗೊಳಿಸುತ್ತದೆ ಎಂಬ ಹೇಳಿಕೆಯು ವೈಜ್ಞಾನಿಕ ಪುರಾವೆಗಳಿಂದ ಬೆಂಬಲಿತವಾಗಿಲ್ಲ. ದಾಲ್ಚಿನ್ನಿಯು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು, ಊಟದ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಮತ್ತು ಕಾರ್ಬೋಹೈಡ್ರೇಟ್ಗಳ ಜೀರ್ಣಕ್ರಿಯೆಯನ್ನು ನಿಧಾನಗೊಳಿಸಲು ಸಹಾಯ ಮಾಡುವ ಸಂಯುಕ್ತಗಳನ್ನು ಒಳಗೊಂಡಿದೆ. ಇದು ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಸಮರ್ಥವಾಗಿ ಕೊಡುಗೆ ನೀಡುತ್ತದೆ. ಮಧುಮೇಹ ಹೊಂದಿರುವ ವ್ಯಕ್ತಿಗಳಿಗೆ ಅಥವಾ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಗುರಿಯನ್ನು ಹೊಂದಿರುವವರಿಗೆ ದಾಲ್ಚಿನ್ನಿಯ ಸಂಭಾವ್ಯ ಪ್ರಯೋಜನಗಳು ವೈಜ್ಞಾನಿಕ ಸಂಶೋಧನೆಯಲ್ಲಿ ಆಸಕ್ತಿಯ ವಿಷಯವಾಗಿದೆ. ಇದಕ್ಕೆ ಹೆಚ್ಚಿನ ವಿವರಣೆಗಳು ಇಲ್ಲಿವೆ. Also Read: ಸಾರ್ಬಿಟ್ರೇಟ್ ಮಾತ್ರೆ ನಾಲಿಗೆ ಅಡಿ ಇಟ್ಟುಕೊಂಡರೆ ಹೃದಯಾಘಾತ ತಡೆಯುತ್ತದೆ ಎನ್ನುವುದು ಸತ್ಯವೇ? ಸತ್ಯಶೋಧನೆಯ ಪ್ರಕಾರ, ದಾಲ್ಚಿನ್ನಿಯು ಇನ್ಸುಲಿನ್ ಗೆ ಪರ್ಯಾಯವಲ್ಲ ಮತ್ತು ಅದು ದೇಹದಲ್ಲಿ ಇನ್ಸುಲಿನ್ ಉತ್ಪಾದಿಸುತ್ತದೆ ಎಂದು ಹೇಳಲು ವೈಜ್ಞಾನಿಕ ಸಾಕ್ಷ್ಯಗಳು, ಪುರಾವೆಗಳು ಇಲ್ಲ ಆದ್ದರಿಂದ ಇದು ತಪ್ಪಾದ ಸಂದರ್ಭವಾಗಿದೆ. Our Sources Diabetes Control: Is Vinegar a Promising Candidate to Help Achieve Targets? – PMC (nih.gov) Diabetes Control: Is Vinegar a Promising Candidate to Help Achieve Targets? – PMC (nih.gov) Cinnamon intake lowers fasting blood glucose: meta-analysis – PubMed (nih.gov) Cinnamomum zeylanicum (Ceylon cinnamon) as a potential pharmaceutical agent for type-2 diabetes mellitus: study protocol for a randomized controlled trial – PubMed (nih.gov) Do Cinnamon Supplements Have a Role in Glycemic Control in Type 2 Diabetes? A Narrative Review – PubMed (nih.gov) Update on the treatment of type 2 diabetes mellitus – PMC (nih.gov) (PDF) The Effect of Cinnamon on Glucose of Type II Diabetes Patients (researchgate.net) Cinnamon and Chronic Diseases – PubMed (nih.gov) Cinnamon: A Multifaceted Medicinal Plant – PMC (nih.gov) Frontiers | Cinnamomum Species: Bridging Phytochemistry Knowledge, Pharmacological Properties and Toxicological Safety for Health Benefits (frontiersin.org) Cinnamon improves insulin sensitivity and alters the body composition in an animal model of the metabolic syndrome – PubMed (nih.gov) Inhibitory activity of cinnamon bark species and their combination effect with acarbose against intestinal α-glucosidase and pancreatic α-amylase – PubMed (nih.gov) Medicinal properties of ‘true’ cinnamon (Cinnamomum zeylanicum): a systematic review – PMC (nih.gov) Assessment of Coumarin Levels in Ground Cinnamon Available in the Czech Retail Market – PMC (nih.gov) (This article has been published in collaboration with THIP Media) ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು. Newschecker and THIP Media September 27, 2024 Ishwarachandra B G April 13, 2024 Newschecker and THIP Media April 12, 2024
schema:mentions
schema:reviewRating
schema:author
schema:datePublished
schema:inLanguage
  • Hindi
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 5 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software