About: http://data.cimple.eu/claim-review/20399cd0a18848edcc6471ab84c5740ed0fae840e61dd261b108ab35     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ವಾಟ್ಸ್ಪ್ನಲ್ಲಿ ಎಸ್ಬಿಐ ರಿವಾರ್ಡ್ ಆ್ಯಪ್ಗೆ ಸಂಬಂಧಿಸಿದ ನಕಲಿ ಸಂದೇಶ ಹಂಚಿಕೊಳ್ಳಲಾಗುತ್ತಿದೆ ವಾಟ್ಸ್ಪ್ನಲ್ಲಿ ಎಸ್ಬಿಐ ರಿವಾರ್ಡ್ ಆ್ಯಪ್ಗೆ ಸಂಬಂಧಿಸಿದ ನಕಲಿ ಸಂದೇಶ ಹಂಚಿಕೊಳ್ಳಲಾಗುತ್ತಿದೆ Claim :ಎಸ್ಬಿಐ ರಿವಾರ್ಡ್ ಪಾಯಿಂಟ್ಗಳನ್ನು ರಿಡೀಮ್ ಮಾಡಲು ಎಸ್ಬಿಐ ರಿವಾರ್ಡ್ ಆ್ಯಪ್ನ್ನು ಡೌನ್ಲೋಡ್ ಮಾಡಿಕೊಳ್ಳಿ Fact :ಎಸ್ಬಿಐ ಯಾವುದೇ ಸಂದೇಶ ಅಥವಾ ಎಪಿಕೆ ಫೈಲ್ಗಳನ್ನು ಹಂಚಿಕೊಂಡಿಲ್ಲ ಎಂದು ಅಧಿಕೃತವಾಗಿ ಹೇಳಿದೆ ಜಗತ್ತಿನಾದ್ಯಂತ ಹೆಚ್ಚಿನ ದೇಶಗಳು ಸೈಬರ್ ಕ್ರೈಮ್ ಅಪರಾಧದಿಂದ ತತ್ತರಿಸಿ ಹೋಗಿವೆ. ವ್ಯಕ್ತಿಯ ವೈಯಕ್ತಿಕ ಮಾಹಿತಿಯನ್ನು ಕದಿಯುವುದು, ಬ್ಯಾಂಕ್ ಖಾತೆಗೆ ಅಕ್ರಮವಾಗಿ ಪ್ರವೇಶಿಸಿ ಹಣ ಲಪಟಾಯಿಸುವುದು, ಪಾಸ್ವರ್ಡ್ ಮೊದಲಾದ ಅಧಿಕೃತ ಮಾಹಿತಿಯನ್ನು ಲೂಟುವುದು ಭದ್ರತಾ ಉಲ್ಲಂಘನೆಯಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುವುದನ್ನು ಸೈಬರ್ ಕ್ರೈಮ್ ಒಳಗೊಂಡಿದೆ. ಪ್ರತಿದಿನ ಯಾರೋ ಒಬ್ಬರು ಈ ಸೈಬರ್ ವಂಚನೆಗೆ ಒಳಗಾಗುತ್ತಿರುತ್ತಾರೆ. ಇತ್ತೀಚಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸಂಬಂಧಿಸಿದ ಸಂದೇಶವೊಂದು ಸಾಮಾಜಿಕ ಜಾಲತಾಣವಾದ ವಾಟ್ಸಾಪ್ನಲ್ಲಿ ವೈರಲ್ ಆದುತ್ತಿದೆ. ನೀವು ಎಸ್ಬಿಐ ರಿವಾರ್ಡ್ ಪಾಯಿಂಟ್ಗಳನ್ನು ರಿಡೀಮ್ ಮಾಡಬೇಕೆಂದರೆ ನಿಮಗೆ ಕಳಿಸಿರುವ ಎಸ್ಬಿಐ ರಿವಾರ್ಡ್ ಆ್ಯಪ್ನ ಎಪಿಕೆ ಫೈಲ್ನ್ನು ಡೌನ್ಲೋಡ್ ಮಾಡಿಕೊಳ್ಳಿ ಎಂಬ ಸಂದೇಶ ಹರಿದಾಡುತ್ತಿದೆ. ವೈರಲ್ ಆದ ಸಂದೇಶದಲ್ಲಿ ‘ಆತ್ಮೀಯ ಮೌಲ್ಯಯುತ ಗ್ರಾಹಕರೇ, ನಿಮ್ಮ ಎಸ್ಬಿಐ ನೆಟ್ಬ್ಯಾಂಕಿಂಗ್ ರಿವಾರ್ಡ್ ಪಾಯಿಂಟ್ಗಳು ರೂ. 9980.00 ಇಂದು ಮುಕ್ತಾಯಗೊಳ್ಳುತ್ತವೆ! ಈಗಲೇ ಎಸ್ಬಿಐ ರಿವಾರ್ಡ್ಸ್ ಆ್ಯಪ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ರಿಡೀಮ್ ಮಾಡಿಕೊಳ್ಳಿ. ನಿಮ್ಮ ಖಾತೆಗೆ ಹಣವನ್ನು ಕ್ರೆಡಿಟ್ ಮಾಡುವ ಮೂಲಕ ನೀವು ಬಹುಮಾನಗಳನ್ನು ಪಡೆಯಿರಿ. ಧನ್ಯವಾದಗಳು ತಂಡ ಎಸ್ಬಿಐ’’ ಎಂದು ಬರೆಯಲಾಗಿದೆ. ಫ್ಯಾಕ್ಟ್ಚೆಕ್ ವೈರಲ್ ಆದ ಸಂದೇಶ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಎಸ್ಬಿಐ ರಿವಾರ್ಡ್ ಆಪ್ ಬಗ್ಗೆ ವೈರಲ್ ಆದ ಸಂದೇಶಕ್ಕೂ ಎಸ್ಬಿಐಗೂ ಯಾವುದೇ ಸಂಬಂಧವಿಲ್ಲ ಎಂದು ಎಸ್ಬಿಐ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ವೈರಲ್ ಆದ ಸಂದೇಶದಲ್ಲಿರುವ ಸತ್ಯಾಂಶವನ್ನು ತಿಳಿಯಲು ನಾವು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಎಸ್ಬಿಐ ರಿವಾರ್ಡ್ ಪಾಯಿಂಟ್ಗೆ ಸಂಬಂಧಿಸದ ಯಾವುದೇ ಸಂದೇಶ ಅಥವಾ ಮಾಹಿತಿ ಕಾಣ ಸಿಗಲಿಲ್ಲ. ನಂತರ ನಾವು ಕೆಲವು ಪ್ರಮುಖ ಕೀವರ್ಡ್ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಎಸ್ಬಿಐನ ಎಕ್ಸ್ ಖಾತೆಯಲ್ಲಿ ವೈರಲ್ ಆದ ಸಂದೇಶಕ್ಕೆ ಸಂಬಂಧಿಸಿದ ಟ್ವಿಟ್ವೊಂದು ಲಭ್ಯವಾಗಿತು. ನವಂಬರ್ 05, 2024ರಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಅಧಿಕೃತ ಖಾತೆ ಎಕ್ಸ್ಯಲ್ಲಿ "Attention SBI Customers: Beware of fraudsters. It is observed that fraudsters are sending messages and APKs over SMS or WhatsApp for redeeming SBI reward points. Please note that SBI never shares such messages and APKs over SMS or WhatsApp. Do not click on any such links or download unknown files. Stay Safe and Secure" ಎಂಬ ಕ್ಯಾಪ್ಷನೊಂದಿಗಿ ವೈರಲ್ ಆದ ಎಸ್ಬಿಐ ರಿವಾರ್ಡ್ ಚಿತ್ರವನ್ನೂ ಹಂಚಿಕೊಂಡಿದ್ದರು. ನಾವು ಕ್ಯಾಪ್ಷನ್ನ್ನು ಕನ್ನಡಕ್ಕೆ ಅನುವಾದಿಸಿದೆವು. "ಎಸ್ಬಿಐ ಗ್ರಾಹಕರ ಗಮನಕ್ಕೆ: ವಂಚಕರ ಬಗ್ಗೆ ಎಚ್ಚರದಿಂದಿರಿ. ಎಸ್ಬಿಐ ರಿವಾರ್ಡ್ ಪಾಯಿಂಟ್ಗಳನ್ನು ರಿಡೀಮ್ ಮಾಡಲು ವಂಚಕರು ಎಸ್ಎಮ್ಎಸ್ ಅಥವಾ ವಾಟ್ಸ್ಆ್ಯಪ್ನಲ್ಲಿ ನಕಲಿ ಸಂದೇಶಗಳು ಮತ್ತು ಎಪಿಕೆ ಗಳನ್ನು ಕಳುಹಿಸುತ್ತಿದ್ದಾರೆ ಎಂದು ನಮ್ಮ ಗಮನಕ್ಕೆ ಬಂದಿದೆ. ಎಸ್ಬಿಐ ಎಂದಿಗೂ ಅಂತಹ ಸಂದೇಶಗಳು ಮತ್ತು ಎಪಿಕೆಗಳನ್ನು ಮೆಸೇಜ್ ಅಥವಾ ವಾಟ್ಸ್ಆ್ಯಪ್ನ ಮೂಲಕ ಹಂಚಿಕೊಳ್ಳುವುದಿಲ್ಲ ಎಂಬುದನ್ನು ದಯವಿಟ್ಟು ಗಮನದಲ್ಲಿಟ್ಟು ಕೊಳ್ಳಿ. ಅಂತಹ ಯಾವುದೇ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ ಮತ್ತು ಅಪರಿಚಿತ ಫೈಲ್ಗಳನ್ನು ಡೌನ್ಲೋಡ್ ಮಾಡಬೇಡಿ. ಸುರಕ್ಷಿತವಾಗಿರಿ’’ ಎಂದು ಹಂಚಿಕೊಂಡಿತರುವುದನ್ನು ನಾವು ಕಂಡುಕೊಂಡೆವು. ನವಂಬರ್ 02, 2024ರಂದು ಪಿಐಬಿ ತನ್ನ ಎಕ್ಸ್ ಖಾತೆಯಲ್ಲಿ "Beware. Did you also receive a message asking you to download & install an APK file to redeem SBI rewards. @TheOfficialSBI NEVER sends links or APK files over SMS/WhatsApp. Never download unknown files or click on such links" ಎಂಬ ಶೀರ್ಷಿಕೆಯೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ " ಜಾಗರೂಕರಾಗಿರಿ. ನಿಮಗೂ ಎಸ್ಬಿಐ ರಿವಾರ್ಡ್ಗೆ ಸಂಬಂಧಿಸಿದ ಎಪಿಕೆ ಫೈಲ್ ಅಥವಾ ವಾಟ್ಸ್ಪ್ನಲ್ಲಿ ಸಂದೇಶ ಬಂದಿದ್ದೇಯಾ? ಎಸ್ಬಿಐ ಇಂತಹ ಯಾವುದೇ ಸಂದೇಶವನ್ನು ಹಂಚಿಕೊಂಡಿಲ್ಲ. ಅನುಮಾನಸ್ಪದ ಲಿಂಕ್ ಅಥವಾ ಪYಲ್ಗಲನ್ನು ಡೌನ್ಲೋಡ್ ಮಾಡಿಕೊಳ್ಳಬೇಡಿ" ಎಂದು ಬರೆದಿರುವುದನ್ನು ನಾವು ನೋಡಬಹುದು. ಸಂದೇಶದ ಸ್ಕ್ರೀನ್ಶಾಟ್ ಪ್ರಕಾರ, ಈ ಹೊಸ ಹಗರಣವು ವಾಟ್ಸಾಪ್ಗಳಂತಹ ಚಾನೆಲ್ಳ ಮೂಲಕ ಕಳುಹಿಸಲಾದ ಪಠ್ಯ ಸಂದೇಶವನ್ನು ಒಳಗೊಂಡಿದೆ, ಇದು ಗ್ರಾಹಕರು “ಎಸ್ಬಿಐ ನೆಟ್ಬ್ಯಾಂಕಿಂಗ್ ರಿವಾರ್ಡ್ ಪಾಯಿಂಟ್ಗಳನ್ನು” ಸಂಗ್ರಹಿಸಿದ್ದಾರೆ ಎಂದು ಹೇಳುತ್ತದೆ. ಇದರಿಂದ ತಿಳಿದಿದ್ದೇನೆಂದರೆ, ಎಸ್ಬಿಐ ಗ್ರಾಹಕರಿಗೆ ಯಾವುದೇ ಮೆಸೆಜ್ ಅಥವಾ ಎಪಿಕೆ ಫೈಲ್ಗಳನ್ನು ಕಳುಹಿಸುತ್ತಿಲ್ಲ. ಈ ಸಂದೇಶಗಳನ್ನು ವಂಚಕರು ಗ್ರಾಹಕರ ಮೊಬೈಲ್ ಫೋನ್ಗಳಿಗೆ ನಕಲಿ ಸಂದೇಶಗಳು ಮತ್ತು ಎಪಿಕೆ ಲಿಂಕ್ಗಳನ್ನು ಕಳುಹಿಸುತ್ತಿದ್ದಾರೆ ಎಂದು ಸ್ಪಷ್ಟವಾಗಿದೆ. ಎಸ್ಬಿಐ ಗ್ರಾಹಕರಿಗೆ ಇಂತಹ ಯಾವುದೇ ಸಂದೇಶವನ್ನು ಕಳುಹಿಸಿರುವುದನ್ನು ಎಸ್ಬಿಐ ನಿರಾಕರಿಸಿದೆ. ನಿಮಗೆ ಇಂತಹ ಯಾವುದೇ ಸಂದೇಶಗಳು ಬಂದರೆ ಜಾಗರೂಕರಾಗಿದೆ ಹಾಗೂ ಬಂದಂತಹ ಲಿಂಕ್ ಮೇಕೆ ಲಿಂಕ್ ಕ್ಲಿಕ್ ಮಾಡಬೇಡಿ ಮತ್ತು ವಂಚಕರ ಬಗ್ಗೆ ಎಚ್ಚರದಿಂದಿರಿ ಎಂದು ಎಸ್ಬಿಐ ಸೂಚಿಸಿದೆ. ಜೊತೆಗೆ ನೀವು ಇಂತಹ ಅಪರಿಚಿತ ಫೈಲ್ಗಳನ್ನು ಡೌನ್ಲೋಡ್ ಮಾಡಿಕೊಳ್ಳುವುದು ಅಥವಾ ಬಂದಂತಹ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಸ್ಮಾರ್ಟ್ ಫೋನ್ಗೆ ವೈರಸ್ ಅಥವಾ ಮಾಲ್ವೇರ್ ಇನ್ಸ್ಟಾಲ್ ಆಗಿ ನಿಮ್ಮ ವೈಯುಕ್ತಿಕ ಖಾತೆಯ ಮಾಹಿತಿಗಳು, ನಿಮ್ಮ ಬ್ಯಾಂಕ್ ಖಾತೆಯ ವಿವರಗಳೂ, ಪಾಸ್ವರ್ಡ್ಗಳು ಅಥವಾ ಇನ್ನೇನಾದರೂ ನಿಮ್ಮ ವೈಯಕ್ತಿಕ ಸಮಾಚಾರಗಳನ್ನು ಕರಿಯುವ ಅವಕಾಶವಿರುತ್ತದೆ. ಹಾಗಾಗಿ ನೀವು ಅಪರಿಚ ಲಿಂಕ್ ಮೇಲೆ ಕ್ಲಿಕ್ ಮಾಡಲು ಹೋಗಬೇಡಿ. ನಿಜವಾಗಿ ನಿಮಗೆ ಎಸ್ಬಿಐ ರಿವಾರ್ಡ್ ಪಾಯಿಂಟ್ಗಳನ್ನು ರಿಡೀಮ್ ಮಾಡಲು, ಗ್ರಾಹಕರು ಅಧಿಕೃತ ಎಸ್ಬಿಐ ರಿವಾರ್ಡ್ಜ್ ವೆಬ್ಸೈಟ್ಗೆ (https://rewardz.sbi/) ಗೆ ಲಾಗ್ ಇನ್ ಮಾಡಬಹುದು ಅಥವಾ 1800-209-8500ನಲ್ಲಿ ಪರಿಶೀಲಿಸಿದ ಎಸ್ಬಿಐ ರಿವಾರ್ಡ್ಜ್ ಗ್ರಾಹಕ ಆರೈಕೆಗೆ ಕರೆ ಮಾಡಬಹುದು. ನಿಮಗೇನಾದರೂ ಅನುಮಾನಸ್ಪದ ಲಿಂಕ್ಗಳು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಮಾಡಿ. ನಿಮಗೆ ಬಂದಂತಹ ಲಿಂಕ್ ಅಥವಾ ಎಪಿಕೆ ಫೈಲ್ ವಿಶ್ವಾಸಾರ್ಹ ಮೂಲಗಳಿಂದ ಬಂದಲ್ಲಿ ಮಾತ್ರವೇ ಡೌನ್ ಲೋಡ್ ಮಾಡಿಕೊಳ್ಳಿ. ಇಂದುವೇಳೆ ನೀವು ಸೈಬರ್ ವಂಚಕರ ಬಲೆಗೆ ಬಿದ್ದರೆ, ಸೈಬರ್ ವಂಚಕರು ಹಾಗೂ ಸೈಬರ್ ಅಪರಾಧದ ಬಗ್ಗೆ ಯಾವುದೇ ದೂರು ದಾಖಲಿಸಲು ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ ಸಹಾಯ ಸಂಖ್ಯೆ -1930ನ್ನು ಸಂಪರ್ಕಿಸಬಹುದು. ಅಥವಾ ಸಮೀಪದ ಪೊಲೀಸ್ ಸ್ಟೇಶನ್ಗೆ ಹೋಗಿ ದೂರು ದಾಖಲಿಸಬಹುದು. ನೀವು cybercrime.gov.in ಮೂಲಕ ನಿಮ್ಮ ದೂರನ್ನು ಆನ್ಲೈನ್ನಲ್ಲಿ ಸಲ್ಲಿಸಬಹುದು. ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಎಸ್ಬಿಐ ವೈರಲ್ ಆದ ಸಂದೇಶದಲ್ಲಿ ಕಾಣುವ ಹಾಗೆ ಯಾವುದೇ ಸಂದೇಶವನ್ನು ಎಸ್ಎಮ್ಎಸ್ ಮೂಲಕ ಅಥವಾ ವಾಟ್ಸಾಪ್ನಲ್ಲಿ ಹಂಚಿಕೊಂಡಿಲ್ಲ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಅಧಿಕೃತ ಜಾಲತಾಣದಲ್ಲಿ ಸ್ಪಷ್ಟೀಪಡಿಸಿದೆ.
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 11 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software