schema:text
| - Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact checks doneFOLLOW US
Fact Check
Claim
ಬಿಜೆಪಿಯವರು ಎಸ್ಸಿ ಎಸ್ಟಿ ಸಮುದಾಯದ ವಿರುದ್ಧ ಮುರ್ದಾಬಾದ್ ಎಂದು ಕೂಗಿದ್ದಾರೆ
Fact
ಬಿಹಾರದ ಆಡಿಯೋಕ್ಕೆ ಬೇರೆಡೆಯ ವೀಡಿಯೋವನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗುತ್ತಿದೆ
ಬಿಜೆಪಿ ಮಂದಿ ಎಸ್ಸಿ ಎಸ್ಟಿ ಸಮುದಾಯಗಳ ವಿರುದ್ಧ ಮುರ್ದಾಬಾದ್ ಎಂದು ಕೂಗುತ್ತಿರುವ ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ.
ಎಕ್ಸ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಬಿಜೆಪಿ ಪಕ್ಷದ ನೈಜ ಮುಖ. ದಲಿತರಿಗೆ ದಿಕ್ಕಾರ ಕೂಗುತ್ತಿರುವ ಕುತಂತ್ರಿಗಳು” ಎಂದಿದೆ. ಹೇಳಿಕೆಯೊಂದಿಗೆ ಹಾಕಲಾದ ವೀಡಿಯೋದಲ್ಲಿ ಬಿಜೆಪಿ ಧ್ವಜ ಹಿಡಿದ ಮಂದಿ ಎಸ್ಸಿ ಎಸ್ಟಿ ಮುರ್ದಾಬಾದ್ ಎಂದು ಕೂಗುವುದು ಕೇಳುತ್ತದೆ.
Also Read: ತುಮಕೂರಿನ ಗುಬ್ಬಿ ಗೇಟ್ ಬಳಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಪಾಕಿಸ್ಥಾನ ಧ್ವಜವನ್ನು ಬೀಸಲಾಗಿದೆ ಎನ್ನುವುದು ನಿಜವೇ?
ಇದರ ಬಗ್ಗೆ ಸತ್ಯಶೋಧನೆಗೆ ನ್ಯೂಸ್ಚೆಕರ್ ಮುಂದಾಗಿದ್ದು, ಇದು ತಿರುಚಲಾದ ವೀಡಿಯೋ ಎಂದು ಪತ್ತೆ ಮಾಡಿದೆ.
ಸತ್ಯಶೋಧನೆ ಸಂದರ್ಭದಲ್ಲಿ ನಾವು ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಯಾವುದೇ ಸೂಕ್ತ ಫಲಿತಾಂಶಗಳು ಸಿಕ್ಕಿಲ್ಲ. ಆದರೆ ವಿವಿಧ ಭಾಷೆಗಳಲ್ಲಿ ಇದೇ ರೀತಿಯ ಕ್ಲೇಮ್ ಗಳನ್ನು ಹಂಚಿಕೊಂಡಿರುವುದನ್ನು ಗಮನಿಸಿದ್ದೇವೆ. ಆದರೆ ಈ ವೀಡಿಯೋ ಎಲ್ಲಿಂದ ಬಂದಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ.
ಇದೇ ವೇಳೆ ಎಕ್ಸ್ ಕ್ಲೇಮಿಗೆ ಬಳಕೆದಾರರೊಬ್ಬರು ನೀಡಿರುವ ಪ್ರತಿಕ್ರಿಯೆಯನ್ನು ಗಮನಿಸಿದ್ದೇವೆ. ಪ್ರತಿಕ್ರಿಯೆಯಲ್ಲಿ ಅವರು “ಇದು ಎಡಿಟೆಡ್, ನೀವು ಕೂಡಾ ಹೀಗೇನಾ, ಅದು ಬೇರೆ ವೀಡಿಯೋ ಇದೆ ಬೇರೆ ವೀಡಿಯೋ” ಎಂದು ಬರೆದಿರುವುದನ್ನು ನೋಡಿದ್ದೇವೆ.
ಆ ಬಳಿಕ ನಾವು ಗೂಗಲ್ನಲ್ಲಿ “sc st murdabad” ಎಂದು ಕೀವರ್ಡ್ ಸರ್ಚ್ ಮಾಡಿದ್ದೇವೆ. ಈವೇಳೆ ವಿವಿಧ ವೀಡಿಯೋ ಫಲಿತಾಂಶಗಳು ಲಭ್ಯವಾಗಿವೆ.
Also Read: ರಾಮಭಕ್ತರು ಚರ್ಚ್ ಗೆ ಹೋಗಿ ರಾಮನವಮಿ ಆಚರಿಸಿದ ರೀತಿ ಎಂದ ವೈರಲ್ ವೀಡಿಯೋ ಹಿಂದಿನ ಸತ್ಯ ಏನು?
ಜನವರಿ 9, 2020ರ ನಾಸೀರ್ ಟೈಮ್ಸ್ ಫೇಸ್ಬುಕ್ ಪೋಸ್ಟ್ ನಲ್ಲಿ “ಆರೆಸ್ಸೆಸ್ ನ ಹೊಸ ಸ್ಲೋಗನ್ ಎಸ್ಸಿ ಎಸ್ಟಿ ಮುರ್ದಾಬಾದ್” ಶೀರ್ಷಿಕೆಯಡಿಯಲ್ಲಿ ಗುಂಪೊಂದು ಎಸ್ಸಿ ಎಸ್ಟಿ ಮುರ್ದಾಬಾದ್ ಎಂದು ಘೋಷಣೆ ಕೂಗುತ್ತಿರುವುದನ್ನು ಗಮನಿಸಿದ್ದೇವೆ
ಏಪ್ರಿಲ್ 22, 2019ರ ನ್ಯಾಷನಲ್ ಇಂಡಿಯಾ ನ್ಯೂಸ್ ಯೂಟ್ಯೂಬ್ ಚಾನೆಲ್ “ಬಿಜೆಪಿಯವರು ಬಹಿರಂಗವಾಗಿ ಎಸ್ಸಿ/ಎಸ್ಟಿ ಮುರ್ದಾಬಾದ್, ಮೀಸಲಾತಿ ಹಾಯ್ ಎಂದು ಘೋಷಣೆಗಳನ್ನು ಎತ್ತುತ್ತಿದ್ದಾರೆ” ಎಂಬ ಶೀರ್ಷಿಕೆಯಡಿ ವೀಡಿಯೋ ಪ್ರಕಟಿಸಿದ್ದು ಇದರಲ್ಲೂ ಗುಂಪೊಂದು ಎಸ್ಸಿ ಎಸ್ಟಿ ಮುರ್ದಾಬಾದ್ ಎಂದು ಘೋಷಣೆ ಕೂಗುತ್ತಿರುವುದನ್ನು ಗಮನಿಸಿದ್ದೇವೆ.
ವಿಶೇಷವೆಂದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಕಂಡುಬಂದಿರುವ ಈ ವೀಡಿಯೋಗಳಲ್ಲಿರುವ ಆಡಿಯೋ, ಕ್ಲೇಮಿನಲ್ಲಿರುವ ಆಡಿಯೋಕ್ಕೂ ಸಾಮ್ಯತೆ ಹೊಂದಿರುವುದನ್ನು ಗಮನಿಸಿದ್ದೇವೆ.
ಈ ಬಗ್ಗೆ ನಾವು ಇನ್ನಷ್ಟು ಸರ್ಚ್ ಮಾಡಿದ ವೇಳೆ ಏಪ್ರಿಲ್ 18, 2024ರ ಹಿಂದಿ ಓನ್ಲಿ ಫ್ಯಾಕ್ಟ್ ವರದಿಯನ್ನು ಗಮನಿಸಿದ್ದೇವೆ. ಇದರಲ್ಲಿ ಏಪ್ರಿಲ್ 22, 2019ರಂದು ಪಬ್ಲಿಕ್ ಟಿವಿ ಬಿಹಾರ ಫೇಸ್ಬುಕ್ ನಲ್ಲಿ ಅಪ್ ಲೋಡ್ ಮಾಡಿರುವ ವೀಡಿಯ ಬಗ್ಗೆ ಹೇಳಲಾಗಿದೆ.
ಆ ಪ್ರಕಾರ, “ಬಿಜೆಪಿ ಬೆಂಬಲಿತ, ನಿತೀಶ್ ಕುಮಾರ್ ಅವರ ಬಿಹಾರದ ಸಿವಾನ್ನ ಜೆಡಿಯು ಅಭ್ಯರ್ಥಿ ಹಿಂದೂ ಯುವ ವಾಹಿನಿ ರಾಜ್ಯಾಧ್ಯಕ್ಷರ ಪತ್ನಿ ಕವಿತಾ ಸಿಂಗ್ ಅವರ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಎಸ್ಸಿ/ಎಸ್ಟಿ ಮುರ್ದಾಬಾದ್, ಮೀಸಲಾತಿ ಹಾಯ್ ಹಾಯ್ ಎಂಬ ಘೋಷಣೆಗಳು ಬಹಿರಂಗವಾಗಿ ಎದ್ದಿವೆ. ಈ ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ, ಮೀಸಲಾತಿ ವಿರೋಧಿ, ದಲಿತ ವಿರೋಧಿ ಶಕ್ತಿಗಳ ಬಗ್ಗೆ ಎಚ್ಚರದಿಂದಿರಿ. ಇದು ಬಿಜೆಪಿ ಮತ್ತು ನಿತೀಶ್ ಕುಮಾರ್ ಅವರ ನಿಜವಾದ ಮುಖ ಮತ್ತು ಸ್ವಭಾವ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು.” ಎಂದಿದೆ.
ಈ ಪುರಾವೆಗಳ ಪ್ರಕಾರ, ಕ್ಲೇಮಿನಲ್ಲಿ ಹಂಚಿಕೊಳ್ಳಲಾಗುತ್ತಿರುವ ವೀಡಿಯೋ ಬೇರೆ, ಆಡಿಯೋ ಬೇರೆಯಾಗಿದ್ದು, ಅದನ್ನು ಎಡಿಟ್ ಮಾಡಿ ಬಳಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
Also Read: ಬಿಯರ್ ಬಾಟಲಿ ಮೇಲೆ ಡಿ.ಕೆ. ಸುರೇಶ್ ಫೋಟೋ ಹಾಕಿ ಮತದಾರರಿಗೆ ಹಂಚಲಾಗುತ್ತಿದೆಯೇ?
Our Sources
Facebook Post By Naser Times, Dated: January 9, 2020
YouTube Video By National India News, Dated April 22, 2019
Report By Hindi only fact, Dated: April 18, 2024
Report By Public Tv Bihar, Dated: April 22, 2019
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
November 8, 2024
Prasad Prabhu
May 15, 2024
Ishwarachandra B G
March 13, 2024
|