About: http://data.cimple.eu/claim-review/2bdbc5e3b43292edd7e89d74ba6ad5bdf87a37e1574d5231537fbf48     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಮೂಲಕ: ರಾಹುಲ್ ಅಧಿಕಾರಿ ಆಗಸ್ಟ್ 22 2024 ಕೋಲ್ಕತ್ತಾ ಹತ್ಯೆ ಪ್ರಕರಣವನ್ನು 'ಮುಖ್ಯವಲ್ಲ' ಎಂದು ಗಾಂಧಿ ತಳ್ಳಿಹಾಕಿಲ್ಲ. ವಾಸ್ತವದಲ್ಲಿ, ಈ ವಿಷಯದ ಬಗ್ಗೆ ನಂತರ ಮಾತನಾಡುವುದಾಗಿ ಹೇಳಿದ್ದಾರೆ. ಹೇಳಿಕೆ ಏನು? ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೋಲ್ಕತ್ತಾದ ಆರ್ಜಿ ಕರ್ ಆಸ್ಪತ್ರೆಯ ಕೊಲೆ ಮತ್ತು ಅತ್ಯಾಚಾರ ಪ್ರಕರಣವನ್ನು "ಮುಖ್ಯವಲ್ಲದ" ವಿಷಯ ಎಂದು ಉಲ್ಲೇಖಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುವ ವೀಡಿಯೋ ಹೇಳಿಕೊಂಡಿದೆ. ವೀಡಿಯೋದಲ್ಲಿ, ಕೋಲ್ಕತ್ತಾ ಪ್ರಕರಣದ ಕುರಿತು ಪ್ರತಿಕ್ರಿಯಿಸಲು ಯಾರೋ ಗಾಂಧಿಯನ್ನು ಕೇಳುತ್ತಾರೆ, ಅದಕ್ಕೆ ಅವರು, “ನಾನು ಈ ಘಟನೆಗಾಗಿ ಇಲ್ಲಿದ್ದೇನೆ. ನೀವು ಈ ವಿಷಯವನ್ನು ಪ್ರಸ್ತಾಪಿಸಲು ಬಯಸುವುದಿಲ್ಲ ಎಂದು ನನಗೆ ತಿಳಿದಿದೆ. ನೀವು ಅದರಿಂದ ವಿಚಲಿತರಾಗಲು ಬಯಸುತ್ತೀರಿ" ಎಂದು ಪ್ರತಿಕ್ರಿಯಿಸಿದರು. ಈ ವೀಡಿಯೋವನ್ನು ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ, ಕೆಲವು ಬಳಕೆದಾರರು ಕೋಲ್ಕತ್ತಾದ ಘಟನೆಯನ್ನು "ಕಡಿಮೆ ಪ್ರಾಮುಖ್ಯತೆ" ಎಂದು ತಳ್ಳಿಹಾಕಿದ್ದಾರೆ ಎಂದು ಕೆಲವು ಬಳಕೆದಾರರು ಹೇಳಿಕೊಂಡಿದ್ದಾರೆ. ತಪ್ಪು ಮಾಹಿತಿಯನ್ನು ಹರಡಿದ ಇತಿಹಾಸವನ್ನು ಹೊಂದಿರುವ ಎಕ್ಸ್ ಖಾತೆ, Mr. Sinha ಅವರು ವೀಡಿಯೋವನ್ನು ಈ ಶೀರ್ಷಿಕೆ ಜೊತೆಗೆ ಹಂಚಿಕೊಳ್ಳಲಾಗಿದೆ: “-ಪತ್ರಕರ್ತ: ಕೋಲ್ಕತ್ತಾದ ಅತ್ಯಾಚಾರ ಪ್ರಕರಣವನ್ನು ಎಸ್ಸಿ ವಿಚಾರಣೆ ನಡೆಸುತ್ತಿದೆ - ರಾಹುಲ್ ಗಾಂಧಿ: ನನ್ನ ಗಮನವನ್ನು ಬೇರೆಡೆಗೆ ಸೆಳೆಯಬೇಡಿ, ಹೆಚ್ಚು ಮುಖ್ಯವಾದ ಕೆಲಸಕ್ಕಾಗಿ ನಾನು ಇಲ್ಲಿದ್ದೇನೆ." ಈ ವ್ಯಕ್ತಿ ತಾನು ಮಹಿಳೆಯರಿಗಾಗಿ ಹೋರಾಡುತ್ತಿದ್ದೇನೆ ಎಂದು ಹತ್ರಾಸ್ಗೆ ಮೊದಲು ತಲುಪಿದನು ಮತ್ತು ಇಲ್ಲಿ ಅವನು ಕೋಲ್ಕತ್ತಾ ಭಯಾನಕ ಪ್ರಕರಣವನ್ನು ಒಂದು ಪ್ರಮುಖವಲ್ಲದ ವಿಷಯ ಎಂದು ಕರೆಯುತ್ತಿದ್ದಾನೆ. ಅಂತಹ ಪೋಷ್ಟ್ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿಮತ್ತು ಇಲ್ಲಿಕಾಣಬಹುದು. ಸಾಮಾಜಿಕ ಮಾಧ್ಯಮ ಪೋಷ್ಟ್ಗಳ ಸ್ಕ್ರೀನ್ಶಾಟ್ಗಳು. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್ನಿಂದ ಮಾರ್ಪಡಿಸಲಾಗಿದೆ) ಆದರೆ, ಹೇಳಿಕೆಯನ್ನು ಸಂದರ್ಭದಿಂದ ಹೊರಗಿಡಲಾಗಿದೆ. ಕೋಲ್ಕತ್ತಾ ಪ್ರಕರಣವನ್ನು ಗಾಂಧಿ ಅಮುಖ್ಯವೆಂದು ತಳ್ಳಿಹಾಕಲಿಲ್ಲ. ಬದಲಾಗಿ, ಅವರು ಬೇರೆ ಸಮಸ್ಯೆಯನ್ನು ಪರಿಹರಿಸಲು ರಾಯ್ಬರೇಲಿಯಲ್ಲಿದ್ದಾರೆ ಮತ್ತು ನಂತರದ ಸಮಯದಲ್ಲಿ ಕೋಲ್ಕತ್ತಾ ಘಟನೆಯ ಬಗ್ಗೆ ಪ್ರತಿಕ್ರಿಯಿಸುವುದಾಗಿ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಅವರ ಹೇಳಿಕೆಗಳನ್ನು ಸಂದರ್ಭಕ್ಕೆ ಮೀರಿ ಹಂಚಿಕೊಂಡಿದ್ದಾರೆ. ನಾವು ಸತ್ಯವನ್ನು ಹೇಗೆ ಕಂಡುಕೊಂಡೆವು? ವೈರಲ್ ವೀಡಿಯೋ, ಸುದ್ದಿ ಸಂಸ್ಥೆ ANI ಯ ಲೋಗೋವನ್ನು ಒಳಗೊಂಡಿದೆ. ಆಗಸ್ಟ್ ೨೦ ರಂದು ANI ನ ಎಕ್ಸ್ ಖಾತೆಯಲ್ಲಿ ವೈರಲ್ ವೀಡಿಯೋದ ವಿಸ್ತೃತ ಆವೃತ್ತಿಯನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ನಾವು ಕಂಡುಕೊಂಡಿದ್ದೇವೆ. ಮೂಲದಲ್ಲಿ, ಉತ್ತರ ಪ್ರದೇಶದ ರಾಯ್ಬರೇಲಿಯ ಸಲೂನ್ನಲ್ಲಿ ೨೨ ವರ್ಷದ ದಲಿತ ಯುವಕನ ಹತ್ಯೆಯ ಬಗ್ಗೆ ಗಾಂಧಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡುತ್ತಾರೆ. ಆಗಸ್ಟ್ ೧೧ ರಂದು ಸ್ಥಳೀಯರೊಂದಿಗಿನ ವಾಗ್ವಾದದ ನಂತರ ಸಂತ್ರಸ್ತೆಯನ್ನು ಗುಂಡಿಕ್ಕಿ ಕೊಲ್ಲಲಾಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ. ರಾಯ್ಬರೇಲಿಯ ಲೋಕಸಭಾ ಸದಸ್ಯರಾಗಿ, ಗಾಂಧಿ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಿ ನ್ಯಾಯಕ್ಕಾಗಿ ಒತ್ತಾಯಿಸಿದರು, “ದಲಿತ ಯುವಕನನ್ನು ಕೊಂದ ಕಾರಣಕ್ಕಾಗಿ ಇಲ್ಲಿ ನೆರೆದಿರುವ ಜನರು ನ್ಯಾಯವನ್ನು ಬಯಸುತ್ತಾರೆ ಮತ್ತು ಅವರ ಕುಟುಂಬವನ್ನು ಬ್ಲ್ಯಾಕ್ಮೇಲ್ ಮಾಡಲಾಗಿದೆ ಮತ್ತು ದುಷ್ಕರ್ಮಿಗಳ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಳ್ಳಲಿಲ್ಲ. ಎಸ್ಪಿ ಸೂತ್ರಧಾರನನ್ನು ಉದ್ದೇಶಿಸಿ ಮಾತನಾಡದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶದ ಪ್ರತಿಯೊಬ್ಬರೂ ಗೌರವ ಮತ್ತು ನ್ಯಾಯವನ್ನು ಪಡೆಯಬೇಕೆಂದು ನಾನು ಬಯಸುತ್ತೇನೆ, ಅದಕ್ಕಾಗಿಯೇ ನಾನು ಇಲ್ಲಿದ್ದೇನೆ" ಎಂದು ಹೇಳಿದರು. ನಂತರ ವೀಡಿಯೋದಲ್ಲಿ, ಆರ್ಜಿ ಕರ್ ಆಸ್ಪತ್ರೆಯ ಕೊಲೆಯ ಬಗ್ಗೆ ಕೇಳಿದಾಗ, ಗಾಂಧಿ ಹೇಳುತ್ತಾರೆ, “ನಾನು ಈ ಘಟನೆಗಾಗಿ ಇಲ್ಲಿಗೆ ಬಂದಿದ್ದೇನೆ. ನಾನು ಕೋಲ್ಕತ್ತಾ ಘಟನೆಯ ಬಗ್ಗೆ ನನ್ನ ಹೇಳಿಕೆ ಮತ್ತು ಅಭಿಪ್ರಾಯಗಳನ್ನು ನೀಡಿದ್ದೇನೆ ಮತ್ತು ಈ ವಿಷಯದಿಂದ ವಿಚಲಿತರಾಗಲು ಬಯಸುವುದಿಲ್ಲ. ಅದಕ್ಕಾಗಿಯೇ ನಾನು ಇಲ್ಲಿನ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುತ್ತಿದ್ದೇನೆ. ” ವೈದ್ಯರ ಮುಷ್ಕರವನ್ನು ಅಂತ್ಯಗೊಳಿಸಲು ಸುಪ್ರೀಂ ಕೋರ್ಟ್ನ ನಿರ್ದೇಶನದ ಕುರಿತು ಕೇಳಿದಾಗ, ಗಾಂಧಿ, "ನಾನು ಈ ಘಟನೆಗಾಗಿ ಇಲ್ಲಿದ್ದೇನೆ. ನೀವು ದಲಿತ ಸಮಸ್ಯೆಗಳನ್ನು ಪರಿಹರಿಸುವ ಬದಲು ಅದರಿಂದ ವಿಚಲಿತರಾಗಲು ಬಯಸುತ್ತೀರಿ. ದಲಿತರ ಕಾಳಜಿಯನ್ನು ರಕ್ಷಿಸಲು ನಾನು ಇಲ್ಲಿದ್ದೇನೆ ಮತ್ತು ಗೊಂದಲಕ್ಕೆ ಅವಕಾಶ ನೀಡುವುದಿಲ್ಲ." ವೈರಲ್ ಕ್ಲಿಪ್ ಅನ್ನು ಪೂರ್ಣ ವೀಡಿಯೋದ ೨:೪೨ ರಿಂದ ೨:೫೫ ರವರೆಗೆ ತೆಗೆದುಕೊಳ್ಳಲಾಗಿದೆ. ಸುದ್ದಿ ಸಂಸ್ಥೆ PTI (ಇಲ್ಲಿ ಆರ್ಕೈವ್ ಮಾಡಲಾಗಿದೆ) ಪ್ರಕಟಿಸಿದ ಮತ್ತೊಂದು ವೀಡಿಯೋವನ್ನು ಸಹ ನಾವು ಕಂಡುಕೊಂಡಿದ್ದೇವೆ, ಅಲ್ಲಿ ಗಾಂಧಿಯವರು, “ಈ ಘಟನೆಗಾಗಿ ನಾನು ಇಲ್ಲಿದ್ದೇನೆ ಮತ್ತು ನೀವು ಈ ವಿಷಯವನ್ನು ಪ್ರಸ್ತಾಪಿಸಲು ಬಯಸುವುದಿಲ್ಲ ಎಂದು ನನಗೆ ತಿಳಿದಿದೆ. ದಲಿತರ ಸಮಸ್ಯೆಗಳನ್ನು ಪರಿಹರಿಸಲು ನೀವು ಬಯಸದ ಕಾರಣ ನೀವು ಅದರಿಂದ ವಿಚಲಿತರಾಗಲು ಬಯಸುತ್ತೀರಿ. ದಲಿತರನ್ನು ರಕ್ಷಿಸಲು ಮತ್ತು ಅವರ ಕಾಳಜಿಯನ್ನು ತಿಳಿಸಲು ನಾನು ಇಲ್ಲಿದ್ದೇನೆ. ಕೋಲ್ಕತ್ತಾ ಘಟನೆಯ ಬಗ್ಗೆ ಮುಂದಿನ ದಿನಗಳಲ್ಲಿ ಪ್ರತಿಕ್ರಿಯೆ ನೀಡುತ್ತೇನೆ" ಎಂದು ಹೇಳಿದ್ದಾರೆ. VIDEO | "I have come here (Raebareli) to support the family of the victim (Dalit youth). I will not let you distract from this matter. I will speak on Kolkata doctor rape and murder case later," says Congress MP Rahul Gandhi (@RahulGandhi) as he reaches Uttar Pradesh's… pic.twitter.com/geidPmZJoV— Press Trust of India (@PTI_News) August 20, 2024 ಈ ವಿಸ್ತೃತ ಕ್ಲಿಪ್ಗಳು ಗಾಂಧಿಯವರು ಕೋಲ್ಕತ್ತಾ ಘಟನೆಯನ್ನು ನಂತರ ಮಾತನಾಡುವುದಾಗಿ ಹೇಳುವುದನ್ನು ತೋರಿಸುತ್ತವೆ, ಅದು ಕಡಿಮೆ ಪ್ರಾಮುಖ್ಯತೆಯನ್ನು ಹೊಂದಿಲ್ಲ ಎಂದು ಹೇಳಿಲ್ಲ. ವೈರಲ್ ವೀಡಿಯೋ ಕ್ಲಿಪ್ಗಳು ಅವರ ಕಾಮೆಂಟ್ಗಳನ್ನು ಎಡಿಟ್ ಮಾಡಲಾಗಿದೆ ಮತ್ತು ಸಂದರ್ಭವಿಲ್ಲದೆ ಅವುಗಳನ್ನು ಹಂಚಿಕೊಂಡಿವೆ. ಹಿಂದೂಸ್ತಾನ್ ಟೈಮ್ಸ್ ಕೂಡ ಗಾಂಧಿಯವರ ರಾಯ್ಬರೇಲಿ ಭೇಟಿಯ ಬಗ್ಗೆ ವರದಿ ಮಾಡಿತು, ಅವರ ಸಂಪೂರ್ಣ ಹೇಳಿಕೆಯನ್ನು ಹೊಂದಿದೆ. ಕೋಲ್ಕತ್ತಾದ ಆರ್ಜಿ ಕರ್ ಆಸ್ಪತ್ರೆ ಕೊಲೆ ಪ್ರಕರಣ ಕೋಲ್ಕತ್ತಾದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ೩೧ ವರ್ಷದ ಸ್ನಾತಕೋತ್ತರ ತರಬೇತಿ ವೈದ್ಯರೊಬ್ಬರು ಆಗಸ್ಟ್ ೯ ರಂದು ಆಸ್ಪತ್ರೆಯ ಸೆಮಿನಾರ್ ಹಾಲ್ನಲ್ಲಿ ಅತ್ಯಾಚಾರ ಮತ್ತು ಕೊಲೆಯಾದ ನಂತರ ಶವವಾಗಿ ಪತ್ತೆಯಾಗಿದ್ದಾರೆ. ಅಪರಾಧಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾ ಪೊಲೀಸರ ನಾಗರಿಕ ಸ್ವಯಂಸೇವಕ ಸಂಜಯ್ ರಾಯ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ಶವಪರೀಕ್ಷೆಯು ಲೈಂಗಿಕ ದೌರ್ಜನ್ಯದ ನಂತರ ಕೊಲೆ ಎಂದು ದೃಢಪಡಿಸಿದೆ. ಈ ಘಟನೆಯು ನ್ಯಾಯಕ್ಕಾಗಿ ರಾಜ್ಯಾದ್ಯಂತ ಪ್ರತಿಭಟನೆಗೆ ಕಾರಣವಾಗಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ಮುಂದಿನ ವಿಚಾರಣೆಯನ್ನು ಆಗಸ್ಟ್ ೨೨ ಕ್ಕೆ ನಿಗದಿಪಡಿಸಿದೆ ಮತ್ತು ತಮ್ಮ ವರದಿಯನ್ನು ಸಲ್ಲಿಸುವಂತೆ ಸಿಬಿಐಗೆ ಆದೇಶಿಸಿದೆ. ತೀರ್ಪು ಕೋಲ್ಕತ್ತಾ ಹತ್ಯೆಯ ಘಟನೆಯನ್ನು "ಕಡಿಮೆ ಪ್ರಾಮುಖ್ಯತೆ" ಎಂದು ಸೂಚಿಸಲು ರಾಹುಲ್ ಗಾಂಧಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡುತ್ತಿರುವ ವೀಡಿಯೋವನ್ನು ತಪ್ಪಾಗಿ ನಿರೂಪಿಸಲಾಗಿದೆ. ವಾಸ್ತವದಲ್ಲಿ, ರಾಯ್ಬರೇಲಿಯಲ್ಲಿ ತಕ್ಷಣದ ಸಮಸ್ಯೆಯನ್ನು ಕೇಂದ್ರೀಕರಿಸುವಾಗ ಅವರು ಕೋಲ್ಕತ್ತಾ ಪ್ರಕರಣವನ್ನು ನಂತರದ ಸಮಯದಲ್ಲಿ ಗಮನಿಸುವುದಾಗಿ ಗಾಂಧಿ ಸೂಚಿಸಿದರು. (ಅನುವಾದಿಸಿದವರು: ರಜಿನಿ ಕೆ.ಜಿ)
schema:mentions
schema:reviewRating
schema:author
schema:datePublished
schema:inLanguage
  • English
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 5 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software