About: http://data.cimple.eu/claim-review/31766feeae57d67902d946c379d0e9c4d5dc303dc18729b1cf8cb285     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ವೈರಲ್ ಆದ ವಿಡಿಯೋದಲ್ಲಿ ಕಾಣಿಸುತ್ತಿರುವ ದೇವಸ್ಥಾನ ಕೇರಳದಲ್ಲಿರುವ ಸೀತಾ ರಾಮ ಮಂದಿರ ಎಂಬ ಹೇಳಿಕೆಯಲ್ಲಿ ನಿಜಾಂಶವಿದೆಯಾ? ವೈರಲ್ ಆದ ವಿಡಿಯೋದಲ್ಲಿ ಕಾಣಿಸುತ್ತಿರುವ ದೇವಸ್ಥಾನ ಕೇರಳದಲ್ಲಿರುವ ಸೀತಾ ರಾಮ ಮಂದಿರ ಎಂಬ ಹೇಳಿಕೆಯಲ್ಲಿ ನಿಜಾಂಶವಿದೆಯಾ? Claim :ನಾಲ್ಕು ವರ್ಷಗಳ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಕೇರಳದ ವಯನಾಡ್ನಲ್ಲಿರುವ ಸೀತಾ ರಾಮ ಮಂದಿರವನ್ನು ಮುಸ್ಲಿಮರ ಹೆಸರಿನಲ್ಲಿ ನೋಂದಾಯಿಸಿರುವ ವಿಡಿಯೋ ವೈರಲ್. Fact :ವೈರಲ್ ಆದ ವಿಡಿಯೋದಲ್ಲಿ ಕಾಣುವುದು ಪಾಕಿಸ್ತಾನದ ಅಹ್ಮದ್ಪುರ ಸಿಯಾಲ್ನಲ್ಲಿರುವ ಹಳೆಯ ದೇವಾಲಯ. ವಿಡಿಯೋವಿನಲ್ಲಿರುವ ದೇವಾಲಯಕ್ಕೂ ರಾಹುಲ್ ಗಾಂಧಿಗೂ ಯಾವುದೇ ಸಂಬಂಧವಿಲ್ಲ. ಏಪ್ರಿಲ್ 26, 2024 ರಂದು 20 ಕ್ಷೇತ್ರಗಳಲ್ಲಿ ಏಕ ಹಂತದ ಲೋಕಸಭೆ ಚುನಾವಣೆ ನಡೆಯಿತು. ಅದರಲ್ಲಿ ಕೇರಳ 70.35% ಮತದಾನವನ್ನು ದಾಖಲಿಸಿದೆ. ಕೇರಳದಲ್ಲಿ ಕಾಂಗ್ರೆಸ್ ಸರ್ಕಾರ ಪ್ರಬಲವಾಗಿರುವ ಕೆಲವೇ ರಾಜ್ಯಗಳಲ್ಲಿ ಒಂದಾಗಿದೆ, 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಹೆಚ್ಚಿನ ಸ್ಥಾನಗಳನ್ನು ಗಳಿಸಿದೆ. 2024ರ ಚುನಾವಣೆಯಲ್ಲಿ ಕೇರಳದ ವಯನಾಡ್ನಿಂದ ರಾಹುಲ್ ಗಾಂಧಿ ಸ್ಪರ್ಧಿಸಿದ್ದರು. ನಾಲ್ಕು ವರ್ಷಗಳ ಹಿಂದೆ ಕೇರಳದ ವಯನಾಡ್ನಲ್ಲಿರುವ ಶ್ರೀ ಸೀತಾ ರಾಮ ದೇವಾಲಯವನ್ನು ಮುಸ್ಲಿಮರ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂಬ ಹೇಳಿಕೆಯೊಂದಿಗೆ ದೇವಸ್ಥಾನವನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಹಿಂದಿಯಲ್ಲಿರುವ ಈ ವಿಡಿಯೋದಲ್ಲಿ 'ಇದು ಸೀತಾ ರಾಮಮಂದಿರ, ದೇವಸ್ಥಾನದ ಆವರಣದಲ್ಲಿ ಕೋಳಿ ಅಂಗಡಿ ಇದೆ ಮತ್ತು ಮಂದಿರದ ಕಟ್ಟಡದ ಮೇಲೆ ಕೆಲವು ಹಿಂದಿ ಅಕ್ಷರಗಳಿರುವುದನ್ನು ನಾವು ಕಾಣಬಹುದು' ಎಂದು ಹೇಳುತ್ತಿದ್ದಾರೆ. ವಿಡಿಯೋವನ್ನು ಹಂಚಿಕೊಂಡು ಹಿಂದಿಯಲ್ಲಿ ಶೀರ್ಷಿಕೆಯಾಗಿ “केरल के वायनाड में राहुल गांधी और प्रियंका वाड्राइन ने चार साल पहले हिंदुओं के बड़े मंदिर श्रीसीताराम मंदिर पर मुसलमानों का कब्जा रजिस्टर्ड करा दिया था अब तो कांग्रेसी ब्राह्मण क्षत्रिय बहुत खुश हो चुके होंगे, सब लोग भाजपा को ही वोट दें “, ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ, “ಕೇರಳದ ವಯನಾಡಿನಲ್ಲಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಅವರು ಶ್ರೀ ಸೀತಾ ರಾಮ ಮಂದಿರವನ್ನು ಸ್ವಾಧೀನಪಡಿಸಿಕೊಂಡು ನಾಲ್ಕು ವರ್ಷಗಳ ಹಿಂದೆ ಅದನ್ನು ಮುಸ್ಲಿಮರಿಗೆ ನೋಂದಾಯಿಸಿದ್ದಾರೆ. ಈಗ ಕಾಂಗ್ರೆಸ್ನಲ್ಲಿರುವ ಬ್ರಾಹ್ಮಣರು ಮತ್ತು ಕ್ಷತ್ರಿಯರು ತುಂಬಾ ಸಂತೋಷವಾಗಿರಬೇಕು. ಹಿಂದೂತ್ವ ಇರಬೇಕೆಂದರೆ, ಎಲ್ಲರೂ ಬಿಜೆಪಿಗೆ ಮಾತ್ರ ಮತ ಹಾಕಬೇಕು ಎಂದು ಬರೆದು ಪೊಸ್ಟ್ ಮಾಡಿದ್ದರು. केरल के वायनाड में राहुल गांधी और प्रियंका वाड्राइन ने चार साल पहले हिंदुओं के बड़े मंदिर श्रीसीताराम मंदिर पर मुसलमानों का कब्जा रजिस्टर्ड करा दिया था 😡— Dushyant Sharma - 100% Follow Back (@dushyantindia02) May 1, 2024 अब तो कांग्रेसी ब्राह्मण क्षत्रिय बहुत खुश हो चुके होंगे 😭😭 सब लोग भाजपा को ही वोट दें 🙏@INCIndia pic.twitter.com/baD3Zum86U केरल के वायनाड में राहुल गांधी और प्रियंका वाड्राइन ने चार साल पहले हिंदुओं के बड़े मंदिर श्रीसीताराम मंदिर पर मुसलमानों का कब्जा रजिस्टर्ड करा दिया था 😡— Swami Ramsarnacharya Pandey, मेलकोटे पीठाधीश्वर (@SwamiRamsarnac4) April 30, 2024 अब तो कांग्रेसी ब्राह्मण क्षत्रिय बहुत खुश हो चुके होंगे 😭😭 सब लोग भाजपा को ही वोट दें 🙏@INCIndia @SupriyaShrinate pic.twitter.com/67AD0aftWI ಫ್ಯಾಕ್ಟ್ಚೆಕ್ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ, ವೈರಲ್ ವಿಡಿಯೋದಲ್ಲಿ ಕಾಣಿಸುವ ದೇವಾಲಯ ಕೇರಳಾದಲ್ಲಿರುವ ಶ್ರೀರಾಮ ಮಂದಿರವಲ್ಲ ಅದು ಪಾಕಿಸ್ತಾನದಲ್ಲಿರುವ ಪ್ರಾಚೀನ ಮಂದಿರ. ಅಷ್ಟೇ ಅಲ್ಲ ದೇವಾಲಯಕ್ಕೂ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿಗೂ ಯಾವುದೇ ಸಂಬಂಧವಿಲ್ಲ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಯಾವ ದೇವಾಲಯವನ್ನೂ ಸಹ ಮುಸ್ಲೀಮರಿಗೆ ನೊಂದಾಯಿಸಲಿಲ್ಲ. ನಾವು ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಫ್ರೇಮ್ಗಳನ್ನು ತೆಗೆದುಕೊಂಡು ಗೂಗಲ್ನಲ್ಲಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಡಿಸೆಂಬರ್ 2023 ಸಾಮಾಜಿಕ ಮಾಧ್ಯಮದ ಬಳಕೆದಾರರೊಬ್ಬರು ಇದೇ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು. ಪಂಜಾಬ್ ಪಲ್ಸ್ ಹೆಸರಿನ ಫೇಸ್ಬುಕ್ ಖಾತೆದಾರ ತನ್ನ ಪೋಸ್ಟ್ನಲ್ಲಿ ʼಪಾಕಿಸ್ತಾನದಲ್ಲಿರುವ ಸೀತಾ ರಾಮ ಮಂದಿರ ಈಗ ಚಿಕನ್ ಶಾಪ್ ಆಗುತ್ತದೆ' ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದರು. ರಿಪಬ್ಲಿಕ್ ವರ್ಲ್ಡ್ ವರದಿಯ ಪ್ರಕಾರ , ʼಪಾಕಿಸ್ತಾನದ ಅಹ್ಮದ್ಪುರ ಸಿಯಾಲ್ನಲ್ಲಿರುವ ಐತಿಹಾಸಿಕ ಸೀತಾ ರಾಮ ದೇವಾಲಯದ ಆವರಣದವನ್ನು ಕೋಳಿ ಅಂಗಡಿಯನ್ನಾಗಿ ಪರಿವರ್ತಿಸಲಾಗಿದೆ" ಎಂದು ವೀಡಿಯೊವನ್ನು ಹಂಚಿಕೊಂಡಿರುವುದನ್ನು ಕಾಣಬಹುದು. ಸಾಮಾಜಿಕ ಜಾಲತಾಣವಾದ ʼಎಕ್ಸ್ʼನಲ್ಲಿ ಇದೀಗ ಈ ವಿಡಿಯೋ ವೈರಲ್ ಆಗಿದೆ. asianetnews.com ನ ವರದಿಯ ಪ್ರಕಾರ ವೈರಲ್ ವೀಡಿಯೊವಿಲ್ಲಿರುವ ಕೆಲವು ಸ್ಕ್ರೀನ್ಶಾಟ್ಗಳನ್ನು ಹಂಚಿಕೊಂಡು, ಅಹ್ಮದ್ಪುರ ಸಿಯಾಲ್ನಲ್ಲಿರುವ ಸೀತಾ ರಾಮ ದೇವಾಲಯವು ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಶತಮಾನದ ಹಿಂದೆ ನಿರ್ಮಿಸಲಾದ ಈ ದೇವಾಲಯವು ಹಿಂದೂ ಸಮುದಾಯದ ಆರಾಧನೆಯ ಸ್ಥಳವಾಗಿದೆ. ದೇವಸ್ಥಾನದ ವಾಸ್ತುಶಿಲ್ಪವು ಸಂಕೀರ್ಣವಾದ ಕೆತ್ತನೆಗಳು ಮತ್ತು ಪವಿತ್ರ ಚಿಹ್ನೆಗಳಿಂದ ಅಲಂಕರಿಸಲ್ಪಟ್ಟಿದೆ, ಅಷ್ಟೇ ಅಲ್ಲ ಧಾರ್ಮಿಕ ಗಡಿಗಳನ್ನು ಮೀರಿದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಕಥೆಯನ್ನು ಹೇಳುತ್ತದೆ ಎಂದು ವರದಿ ಮಾಡಿರುವುದನ್ನು ನಾವು ಕಾಣಬಹುದು. ಹೀಗಾಗಿ, ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ, ವೈರಲ್ ವಿಡಿಯೋದಲ್ಲಿ ಕಾಣಿಸುವ ದೇವಾಲಯ ಕೇರಳಾದಲ್ಲಿರುವ ಶ್ರೀರಾಮ ಮಂದಿರವಲ್ಲ ಅದು ಪಾಕಿಸ್ತಾನದಲ್ಲಿರುವ ಪ್ರಾಚೀನ ಮಂದಿರ. ಅಷ್ಟೇ ಅಲ್ಲ ದೇವಾಲಯಕ್ಕೂ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿಗೂ ಯಾವುದೇ ಸಂಬಂಧವಿಲ್ಲ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಯಾವ ದೇವಾಲಯವನ್ನೂ ಸಹ ಮುಸ್ಲೀಮರಿಗೆ ನೊಂದಾಯಿಸಲಿಲ್ಲ ಎಂದು ಖಚಿತವಾಗಿದೆ.
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 11 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software