About: http://data.cimple.eu/claim-review/330021ce88cf55d2b035931d07049b09e0eebbc8682dda81dc6da3bb     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ವಿದ್ಯಾರ್ಥಿಯೊಬ್ಬರು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ನ್ನು ವ್ಯಂಗ್ಯ ಮಾಡುತ್ತಿರುವ ವಿಡಿಯೋವಿನ ಅಸಲಿಯತ್ತೇನು? ವಿದ್ಯಾರ್ಥಿಯೊಬ್ಬರು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ನ್ನು ವ್ಯಂಗ್ಯ ಮಾಡುತ್ತಿರುವ ವಿಡಿಯೋವಿನ ಅಸಲಿಯತ್ತೇನು? Claim :ಸಾರ್ವಜನಿಕ ಸಭೆಯೊಂದರಲ್ಲಿ ಯುವತಿಯೊಬ್ಬರು ಪವನ್ ಕಲ್ಯಾಣ್ ವಿರುದ್ಧ ವ್ಯಂಗ್ಯವಾಡಿದ್ದಾರೆ. Fact :ವೈರಲ್ ಆದ ವಿಡಿಯೋವಿನಲ್ಲಿ ಕಾಣಿಸುವ ಯುವತಿ ಪವನ್ ಕಲ್ಯಾಣ್ ಅವರನ್ನು ಅವಮಾನಿಸಲಿಲ್ಲ. ವಿಡಿಯೋವನ್ನು ಮಾರ್ಫಿಂಗ್ ಮಾಡಿ ಆಡಿಯೋವನ್ನು ಎಡಿಟ್ ಮಾಡಲಾಗಿದೆ. ಜನಸೇನಾ ನಾಯಕ, ಪವರ್ ಸ್ಟಾರ್ ಪವನ್ ಕಲ್ಯಾಣ್ ಆಂಧ್ರಪ್ರದೇಶದ ಲೋಕಸಭಾ ಚುನಾವಣೆಯಲ್ಲಿ ಪಿಠಾಪುರಂ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಒಟ್ಟು 175 ವಿಧಾನಸಭಾ ಚುನಾವಣೆಯಲ್ಲಿ ಜನಸೇನಾ 21 ಸ್ಥಾನಗಳಲ್ಲಿ, ಬಿಜೆಪಿ 10 ಸ್ಥಾನಗಳಲ್ಲಿ ಮತ್ತು ಟಿಡಿಪಿ 144 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ಟಿಡಿಪಿ-ಬಿಜೆಪಿ ಮತ್ತು ಜನಸೇನೆ ನಡುವಿನ ಮೈತ್ರಿ ನಂತರ, ಸಾಮಾಜಿಕ ಮಾಧ್ಯಮದಲ್ಲಿ ಅನೇಕ ವೀಡಿಯೊಗಳು ಮತ್ತು ಫೋಟೋಗಳು ವೈರಲ್ ಆಗುತ್ತಿವೆ. ಹೀಗೆ ವೈರಲ್ ಆದ ವಿಡಿಯೋವಿನಲ್ಲಿ ಒಬ್ಬಳು ಕಾಲೇಜು ಯುವತಿ ಸಾರ್ವಜನಿಕ ಸಭೆಯೊಂದರಲ್ಲಿ ಪವನ್ ಕಲ್ಯಾಣ್ರನ್ನು ವ್ಯಂಗ್ಯವಾಗಿ ಕಮೆಂಟ್ ಮಾಡಿರುವ ವಿಡಿಯೋ ವಾಟ್ಸಾಪ್ ಹಾಗೂ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. 2 ಲಕ್ಷ ಪುಸ್ತಕಗಳನ್ನು ಓದಿದ್ದರೂ ಜಸ್ಟ್ ಪಾಸ್ ಅಂಕಗಳೊಂದಿಗೆ 10 ನೇ ತರಗತಿಯಲ್ಲಿ ಉತ್ತೀರ್ಣರಾದ ಸ್ಟಾರ್ ಪವನ್ ಕಲ್ಯಾಣ್, ತಮ್ಮ 12ನೇ ತರಗತಿಯಲ್ಲಿ ಫೇಲ್ ಆಗಿದ್ದಾರೆ ಎಂದು ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮ್ಯಾರೇಜ್ ಸ್ಟಾರ್ ಮತ್ತು ಪ್ಯಾಕೇಜ್ ಸ್ಟಾರ್ ಎಂದು ಪವರ್ರನ್ನು ಕರೆಯುವುದನ್ನು ನೀವು ಕೇಳಿರಬಹುದು. ಈ ವಿಡಿಯೋಗೆ ಜೈ ಜನಸೇನಾ ಎಂದು ಕಾಮೆಂಟ್ಗಳನ್ನು ನಾವು ಗಮನಿಸಬಹುದು. ಜನಸೇನೆಯ ಸದಸ್ಯರೇ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಮೇಲೆ ವ್ಯಂಗ್ಯಭರಿತ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಒಂದೊಂದು ಕಮೆಂಟ್ ವಜ್ರದಂತೆ ಬೆಲೆ ಬಾಳುವ ಹಾಗಿದೆ. ಫ್ಯಾಕ್ಟ್ಚೆಕ್ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವಿಡಿಯೋವಿನಲ್ಲಿ ಕಾಣಿಸುವ ಯುವತಿ ಪವನ್ ಕಲ್ಯಾಣ್ ಅವರನ್ನು ಅವಮಾನಿಸಲಿಲ್ಲ. ವಿಡಿಯೋವನ್ನು ಮಾರ್ಫಿಂಗ್ ಮಾಡಿ ಆಡಿಯೋವನ್ನು ಎಡಿಟ್ ಮಾಡಲಾಗಿದೆ. ವಿಡಿಯೋವಿನಲ್ಲಿರುವ ಸತ್ಯಾಂಶವಿನ್ನು ತಿಳಿಯಲು ನಾವು ವಿಡಿಯೋವಿನಲ್ಲಿರುವ ಕೆಲವು ಕೀಫ್ರೇಮ್ಗಳನ್ನು ಉಪಯೋಗಿಸಿಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಮೂಲ ವಿಡಿಯೋ 2019 ರಲ್ಲಿ ಆಂಧ್ರಪ್ರದೇಶ ರಾಜ್ಯದ ಪ್ರಕಾಶಂ ಜಿಲ್ಲೆಯಲ್ಲಿ ನಡೆದ ಸಭೆಯದ್ದು ಎಂದು ನಾವು ಕಂಡುಕೊಂಡೆವು. ಮಾರ್ಚ್ 5, 2019 ರಂದು ಫಿಲ್ಮಿ ಫೋಕಸ್ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ “Lady Fan powerful speech about Pawan Kalyan @Janasena Students Meet in Prakasam- Filmy focus.com” ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಅಪ್ಲೋಡ್ ಮಾಡಲಾಗಿತ್ತು. ಪ್ರಕಾಶಂ ಜಿಲ್ಲೆಯಲ್ಲಿ ನಡೆದ ಜನಸೇನಾ ವಿದ್ಯಾರ್ಥಿಗಳ ಸಮಾವೇಶದಲ್ಲಿ ಹಲವು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಮಾವೇಷದಲ್ಲಿ ವಿದ್ಯಾರ್ಥಿಗಳ ಭಾಷಣಗಳನ್ನೂ ನೋಡಬಹುದು. ಮೂಲ ವಿಡಿಯೋದಲ್ಲಿ ವಿದ್ಯಾರ್ಥಿನಿ, ಪ್ರಕಾಶಂ ಜಿಲ್ಲೆಯಲ್ಲಿ ಜನಿಸಿದ ಮಹಾನ್ ವ್ಯಕ್ತಿಗಳ ಬಗ್ಗೆ ಮಾತನಾಡಿದ್ದಾಳೆ. ಜಿಲ್ಲೆಯಲ್ಲಿ ಸರಿಯಾದ ಶೈಕ್ಷಣಿಕ ಸೌಲಭ್ಯವಿಲ್ಲ ಎಂದು ಹೇಳುವುದನ್ನು ಸಹ ನಾವು ಮೂಲ ವಿಡಿಯೋದಲ್ಲಿ ನೋಡಬಹುದು. ಆಕೆ ಪವನ್ ಕಲ್ಯಾಣ್ ಅವರನ್ನು ಭಗತ್ ಸಿಂಗ್ ಮತ್ತು ಸುಭಾಷ್ ಚಂದ್ರ ಬೋಸ್ರೊಂದಿಗೆ ಹೋಲಿಸಿ, ಜನಸೇನೆಯಲ್ಲಿರುವ ವಿದ್ಯಾರ್ಥಿಗಳೆಲ್ಲರೂ ಸೈನಿಕರು ಎಂದು ಹೇಳುವುದನ್ನು ನಾವು ನೋಡಬಹುದು. ಮಾರ್ಚ್ 6, 2019 ರಂದು ಮ್ಯಾಂಗೋ ನ್ಯೂಸ್ ಯೂಟ್ಯೂಬ್ ಚಾನೆಲ್ನಲ್ಲಿ ‘Pawan Kalyan Lady Fan Mind Blowing Speech At Prakasam | Pawan Kalyan Speech | Janasena Latest News’ ಎಂಬ ಶೀರ್ಷಿಕೆಯಡಿಯಲ್ಲಿ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ, ವಿಡಿಯೋವಿನಲ್ಲಿ ಕಾಣಿಸುವ ಯುವತಿ ಪವನ್ ಕಲ್ಯಾಣ್ ಅವರನ್ನು ಅವಮಾನಿಸಲಿಲ್ಲ. ವಿಡಿಯೋವನ್ನು ಮಾರ್ಫಿಂಗ್ ಮಾಡಿ ಆಡಿಯೋವನ್ನು ಎಡಿಟ್ ಮಾಡಲಾಗಿದೆ. ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರ ಮೇಲೆ ಕಾಲೇಜು ಯುವತಿಯೊಬ್ಬರು ವ್ಯಂಗ್ಯವಾಡುತ್ತಿರುವ ವೀಡಿಯೊವನ್ನು ಎಡಿಟ್ ಮಾಡಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಮೂಲ ಆಡಿಯೋದಲ್ಲಿ ಪವನ್ ಕಲ್ಯಾಣ್ ಅವರನ್ನು ಹೊಗಳಿದ್ದಾರೆ.
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 3 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software