About: http://data.cimple.eu/claim-review/333c87d1f7d553463bb7fc9196258c9f41151ec46f041ca07afa2860     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ಶಂಕರ್ ದಾದಾ ಎಂಬಿಬಿಎಸ್ ಸಿನಿಮಾದಲ್ಲಿ ನಟಿಸಿದ್ದು ವೈಷ್ಣವ್ ತೇಜ್, ವರುಣ್ ತೇಜ್ ಅಲ್ಲ. ಶಂಕರ್ ದಾದಾ ಎಂಬಿಬಿಎಸ್ ಸಿನಿಮಾದಲ್ಲಿ ನಟಿಸಿದ್ದು ವೈಷ್ಣವ್ ತೇಜ್, ವರುಣ್ ತೇಜ್ ಅಲ್ಲ. Claim :ವರುಣ್ ತೇಜ್ ಶಂಕರ್ ದಾದಾ ಎಂಬಿಬಿಎಸ್ ಸಿನಿಮಾದಲ್ಲಿ ಬಾಲ ಕಲಾವಿದನಾಗಿ ನಟಿಸಿದ್ದಾರೆ Fact :ಶಂಕರ್ ದಾದಾ ಎಂಬಿಬಿಎಸ್ ಚಿತ್ರದಲ್ಲಿ ಬಾಲ ಕಲಾವಿದನಾಗಿ ನಟಿಸಿದ್ದು ವೈಷ್ಣವ್ ತೇಜ್, ವರುಣ್ ತೇಜ್ ಅಲ್ಲ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಮೆಗಾ ಫ್ಯಾಮಿಲಿ ಹಾಗೂ ಅಭಿಮಾನಿಗಳ ಸಂತಸ ಗಗನಕ್ಕೇರಿದೆ. ಈ ನಡುವೆ ಮೆಗಾ ಅಭಿಮಾನಿಗಳು ಚಿರಂಜೀವಿ ಕುಟುಂಬದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಮೆಗಾ ಫ್ಯಾಮಿಲಿ ಎಲ್ಲರೂ ಒಟ್ಟಿಗೆ ಇರುವ ಫೋಟೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವೈರಲ್ ಆದ ಫೋಟೋವಿನಲ್ಲಿ ಪವನ್ ಕಲ್ಯಾಣ್ ಕೈಯಲ್ಲಿ ಒಂದು ಮಗುವನ್ನು ಎತ್ತಿಕೊಂಡಿರುವುದನ್ನು ನೋಡಬಹುದು. ಪವನ್ ಪಕ್ಕದಲ್ಲಿ ಮಾಜಿ ಪತ್ನಿ ರೇಣು ದೇಸಾಯಿ ಇರುವುದನ್ನು ನೋಡಬಹುದು. ಇದೇ ಫೋಟೋವನ್ನು ಮಾಧ್ಯಮಗಳಲ್ಲಿ ಶೇರ್ ಮಾಡಿ ಶೀರ್ಷಿಕೆಯಾಗಿ "ಕೆಳಗಿನ ಸಾಲಿನಲ್ಲಿ ಬಿಳಿ ಡ್ರೆಸ್ ತೊಟ್ಟಿರುವ ಹುಡುಗನನ್ನು ಕಂಡುಹಿಡಿದೆರಾ? ಶಂಕರ್ ದಾದಾ ಎಂಬಿಬಿಎಸ್ ಚಿತ್ರನಲ್ಲಿ ನಟಿಸಿದ್ದು ವರುಣ್ ತೇಜ್ ಎಂದು ಎಷ್ಟು ಜನರಿಗೆ ಗೊತ್ತು' ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ವಾಟ್ಸಾಪ್ನಲ್ಲಿ ಬಳಕೆದಾರರು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಫ್ಯಾಕ್ಟ್ಚೆಕ್ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆಗಿರುವ ಪೋಸ್ಟ್ನಲ್ಲಿ ಕಾಣುವ ನಟ ವರುಣ್ ತೇಜ್ ಅಲ್ಲ, ವೈಷ್ಣವ್ ತೇಜ್. ವೈರಲ್ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ನಾವು ಯೂಟ್ಯೂಬ್ನಲ್ಲಿ ಮೊದಲು ಶಂಕರ್ ದಾದಾ ಎಂಬಿಬಿಎಸ್ ಸಿನಿಮಾವನ್ನು ನೋಡಿದೆವು. ಅದರಲ್ಲಿ, ಬರುವ ಬಾಲನಟನನ್ನು ಸಬ್ಜೆಕ್ಟ್.. ಸಬ್ಜೆಕ್ಟ್..ಎಂದು ವೀಲ್ಚೇರ್ನಲ್ಲಿ ಕುಳಿತಿರುವ ನಟನ ದೃಶ್ಯವನ್ನು ನಾವು ಗಮನಿಸಿದೆವು. ಮೆಗಾ ಫ್ಯಾಮಿಲಿಯ ಫೋಟೋದಲ್ಲಿ ಬಿಳಿ ಡ್ರೆಸ್ ತೊಟ್ಟಿರುವ ಹುಡುಗ ಶಂಕರ್ ದಾದಾ ಎಂಬಿಬಿಎಸ್ ಚಿತ್ರದಲ್ಲಿ ಕಾಣುವ ಬಾಲನಟ ಎಂದು ನಾವು ಕಂಡುಕೊಂಡೆವು. ಅಷ್ಟೇ ಅಲ್ಲ, ಸಿನಿಮಾದ ಟೈಟಲ್ ಕಾರ್ಡ್ನಲ್ಲಿ ನಟರ ಹೆಸರನ್ನು ಗಮನಿಸಿದಾಗ ಅಲ್ಲಿ ‘ಮಾಸ್ಟರ್ ವೈಷ್ಣವ್’ ಎಂದು ಇರುವುದನ್ನು ಗಮನಿಸಬಹುದು. 'Vaishnav In Shankar dada MBBS' ಎಂಬ ಕೀವರ್ಡ್ನ ಮೂಲಕ ಹುಡುಕಿದಾಗ ವೈಷ್ಣವ್ ತೇಜ್ ಶಂಕರ್ ದಾದಾ ಎಂಬಿಬಿಎಸ್ ಸಿನಿಮಾದಲ್ಲಿ ಬಾಲ ಕಲಾವಿದನಾಗಿ ನಟಿಸಿದ್ದಾಗಿ ಹೇಳಿದ ವಿಡಿಯೋ ನಮಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಿತು. ‘ಉಪ್ಪೇನ’ ಚಿತ್ರದ ಮೂಲಕ ವೈಷ್ಣವ್ ತೇಜ್ ಸಿನಿಪ್ರಪಂಚಕ್ಕೆ ಪಾದಾರ್ಪಣೆ ಮಾಡಿ ಜನಪ್ರಿಯತೆ ಗಳಿಸಿದ್ದರು. ಆ ಚಿತ್ರದ ಪ್ರಚಾರದ ವೇಳೆ ನೀಡಿದ ಸಂದರ್ಶನದ ಲಿಂಕ್ ನಮಗೆ ಸಿಕ್ಕಿತು. "Uppena Hero Vaishnav Tej Interview | Krithi Shetty | Shankar Dada MBBS Movie | Pawan Kalyan Johnny" ಶೀರ್ಷಿಕೆಯೊಂದಿಗೆ ಸುಮನ್ ಟಿವಿ ವರ್ಲ್ಡ್ ಅಪ್ಲೋಡ್ ಮಾಡಿದ ವೀಡಿಯೊವನ್ನು ನಾವು ಕಂಡುಕೊಂಡೆವು. ಮೂಲ ವಿಡಿಯೋವಿನಲ್ಲಿ 4:47 ನಿಮಿಷಕ್ಕೆ ಶಂಕರ್ ದಾದಾ ನೀವು ಎಂಬಿಬಿಎಸ್ ಸಿನಿಮಾದಲ್ಲಿ ನಟಿಸಿದ್ದೀರಾ ಎಂದು ಕೇಳಿದಾಗ ನಟ ವೈಷ್ಣವ್ ತೇಜ್ ಹೌದು ನಾನು ಆ ಚಿತ್ರದಲ್ಲಿ ನಟಿಸಿದ್ದೇನೆ ಎಂದು ಹೇಳಿರುವ ವಿಡಿಯೋವನ್ನು ನೋಡಬಹುದು. ಅದಕ್ಕೆ ವೈಷ್ಣವ್, ʼಮಾವʼ (ಮೆಗಾಸ್ಟಾರ್ ಚಿರಂಜೀವಿ) ನಟಿಸಲು ಕೇಳಿದಾಗ ನಾವು ನಟಿಸಿದೆನು ಎಂದು ಹೇಳಿದ್ದಾರೆ. ಈ ಹಿಂದೆ ಪವನ್ ಕಲ್ಯಾಣ್ ಜೊತೆ ‘ಜಾನಿ’ ಸಿನಿಮಾದಲ್ಲೂ ನಟಿಸಿದ್ದೆ ಎಂದು ವೈಷ್ಣವ್ ಹೇಳಿದ್ದಾರೆ. ಹಾಗೆ, ಮೆಗಾಸ್ಟಾರ್ ಚಿರಂಜೀವಿ ಅವರು ಉಪ್ಪೇನ ಚಿತ್ರದ ಪ್ರೀ-ರಿಲೀಸ್ ಸಮಾರಂಭದಲ್ಲಿ ಶಂಕರ್ ದಾದಾ ಚಿತ್ರದಲ್ಲಿ ಬಾಲ ನಟನಾಗಿ ವೈಷ್ಣವ್ ನಟಿಸಿದ್ದಾರೆ ಎಂದು ಹೇಳಿರುವುದನ್ನು ನೋಡಬಹುದು. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ‘ವನಿತಾ ಟಿವಿ’ಯಲ್ಲಿ ಅಪ್ಲೋಡ್ ಮಾಡಲಾಗಿದೆ. 'Vaishnav Tej Fantastic Performance in Shankar Dada MBBS Movie : Megastar Chiranjeevi' ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಅಪ್ಲೋಡ್ ಮಾಡಲಾಗಿತ್ತು. ಈ ವಿವರಣೆಗಳ ಆಧಾರದ ಮೇಲೆ ಶಂಕರ್ ದಾದಾ ಎಂಬಿಬಿಎಸ್ ಸಿನಿಮಾದಲ್ಲಿ ನಟಿಸಿದ್ದು ವೈಷ್ಣವ್ ತೇಜ್ ಎಂದು ನಾವು ಖಚಿತಪಡಿಸಿಕೊಂಡೆವು ಹಾಗೆ ವೈರಲ್ ಫೋಟೋದಲ್ಲಿ ರಾಮ್ ಚರಣ್ ತೇಜ್ ಪಕ್ಕದಲ್ಲಿ ಕುಳಿತಿರುವ ಹುಡುಗ ವರುಣ್ ತೇಜ್.ರಾಮ್ ಚರಣ್ ಎದುರು ವೈಷ್ಣವ್ ತೇಜ್ ಕುಳಿತಿದ್ದಾರೆ. ಇಬ್ಬರು ಮೆಗಾ ಹೀರೋಗಳಿಗೆ ಸಂಬಂಧಿಸಿದಂತೆ ಅಂದಿನ ಫೋಟೋಗಳಿಗೂ ಈಗಿನ ಫೋಟೋಗಳಿಗೂ ಇರುವ ಸಾಮ್ಯತೆಯನ್ನು ನಾವಿಲ್ಲಿ ಗಮನಿಸಬಹುದು. ವರುಣ್ ತೇಜ್ ವೈಷ್ಣವ್ ತೇಜ್: ವೈಷ್ಣವ್ ತೇಜ್ ಶಂಕರ್ ದಾದಾ ಎಂಬಿಬಿಎಸ್ ಚಿತ್ರದಲ್ಲಿ ನಟಿಸಿದ್ದಾರೆ ಎಂಬ ಹಲವು ಮಾಧ್ಯಮ ವರದಿಗಳನ್ನು ನಾವು ಕಂಡುಕೊಂಡಿದ್ದೇವೆ. https://telugu.news18.com/photogallery/movies/megastar-chiranjeevi-shankar-dada-mbbs-child-artist-becomes-tollywood-big-hero-now-and-doing-films-ta-1777754.html https://tv9telugu.com/entertainment/tollywood/do-you-know-who-is-this-child-from-megastar-chiranjeevi-super-hit-shankar-dada-mmbs-movie-he-is-none-other-than-vaishnav-tej-au51-929960.html ಇದರಿಂದ ಸಾಭೀತಾಗಿದ್ದೇನೆಂದರೆ, ಶಂಕರ್ ದಾದಾ ಎಂಬಿಬಿಎಸ್ ಸಿನಿಮಾದಲ್ಲಿ ಬಾಲ ಕಲಾವಿದನಾಗಿ ನಟಿಸಿದ್ದು ವರುಣ್ ತೇಜ್ ಅಲ್ಲ ವೈಷ್ಣವ್ ತೇಜ್
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 6 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software