About: http://data.cimple.eu/claim-review/3543fc200275e93d138f1b9406a74b3f128c4708648ab8761dd66cdb     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • Authors ಸೌದಿ ದೊರೆಯ ಬಾಯಲ್ಲಿ ಜೈ ಶ್ರೀ ರಾಮ್ ಘೋಷಣೆ ಎಂಬ ರೀತಿ ವೈರಲ್ ವೀಡಿಯೋವೊಂದು ಫೇಸ್ಬುಕ್,ಇನ್ಸ್ಟಾಗ್ರಾಂಗಳಲ್ಲಿ ಹರಿದಾಡುತ್ತಿದೆ.“ಸೌದಿ ದೊರೆಯ ಬಾಯಲ್ಲಿ ಜೈ ಶ್ರೀ ರಾಮ್ ಘೋಷಣೆ ಇದು ಮೋದೀಜೀಯ ತಾಕತ್ತು; ಜೈ ಶ್ರೀರಾಮ” ಎಂದು ಕ್ಲೇಮಿನಲ್ಲಿ ಹೇಳಲಾಗಿದೆ. Fact Check ವೀಡಿಯೋದ ಅಸಲಿಯತ್ತು ಪರೀಕ್ಷೆಗೆ ಮೊದಲು ವೀಡಿಯೋವನ್ನು ಸಂಪೂರ್ಣ ಪರಿಶೀಲನೆಗೆ ಒಳಪಡಿಸಲಾಗಿದೆ. ಇದಕ್ಕಾಗಿ ಗೂಗಲ್ನಲ್ಲಿ ಕೀವರ್ಡ್ ಸರ್ಚ್ ನಡೆಸಿದಾಗ ಈ ಕಾರ್ಯಕ್ರಮದ್ದು ಎನ್ನಲಾದ ಯೂಟ್ಯೂಬ್ ವೀಡಿಯೋ ಲಭ್ಯವಾಗಿದ್ದು ಸುವೇಂದು ಅಧಿಕಾರಿ ಲೈವ್ ಎಂಬ ಚಾನೆಲ್ನಲ್ಲಿ ಈ ವೀಡಿಯೋ ಕ್ಲಿಪ್ಪಿಂಗ್ನ ಸಂಪೂರ್ಣ ಆವೃತ್ತಿ ಲಭ್ಯವಾಗಿರುತ್ತದೆ. ಆದರೆ ಇದರ ವಿವರಣೆಯಲ್ಲಿ ಸೌದಿ ಅರಸ ಜೈ ಶ್ರೀ ರಾಮ್ ಹೇಳಿದಾಗ ಎಂದಿದೆ. ಅದು ಇಲ್ಲಿದೆ. ಗಮನಿಸಬೇಕಾದ ಅಂಶವೆಂದರೆ, ಈ ವೀಡಿಯೋದಲ್ಲಿ ಇರುವಂತೆ ಇದರಲ್ಲಿ ಕಾರ್ಯಕ್ರಮ ನಿರೂಪಕರು ಆ ವ್ಯಕ್ತಿಯನ್ನು “ಸುಲ್ತಾನ್” ಎಂದು ಸಂಬೋಧಿಸುತ್ತಾರೆ. ಅನಂತರ ಆ ವ್ಯಕ್ತಿ ವೇದಿಕೆಗೆ ಬಂದು ಸಭಿಕರ ಎದುರು “ಜೈ ಸಿಯಾ ರಾಂ” ಎಂದು ಹೇಳುತ್ತಾರೆ. ಸತ್ಯಾನ್ವೇಷಣೆ ಭಾಗವಾಗಿ ವೀಡಿಯೋದ ಕೀ ಫ್ರೇಂ ಸರ್ಚ್ ಕೂಡ ನಡೆಸಲಾಗಿದ್ದು, ಈ ವೇಳೆ ವೀಡಿಯೋದಲ್ಲಿ ಕಾಣಿಸಿಕೊಂಡ ವ್ಯಕ್ತಿ ಸೌದಿ ದೊರೆಯಲ್ಲ. ಇವರು ಶಾರ್ಜಾ ಅರಸು ಮನೆತನಕ್ಕೆ ಸೇರಿದವರು. ಸೌದಿ ಎಂದು ಸಾಮಾನ್ಯವಾಗಿ ಹೇಳುವುದು ಸೌದಿ ಅರೇಬಿಯಾಕ್ಕೆ. ಸೌದಿ ಎಂದು ಹೇಳುವ ದೇಶದ ಅರಸರು ಮತ್ತು ಪ್ರಧಾನ ಮಂತ್ರಿ ಮೊಹಮ್ಮದ್ ಬಿನ್ ಸಲ್ಮಾನ್ ಆಗಿದ್ದಾರೆ. ಈ ವೈರಲ್ ವೀಡಿಯೋದಲ್ಲಿ ಕಾಣಿಸಿಕೊಂಡವರು ಸುಲ್ತಾನ್ ಸೌದ್ ಅಲ್ ಖಾಸಿಮಿ ಎಂದಾಗಿದೆ. ಇವರು ಅಂಕಣಕಾರರೂ ಆಗಿದ್ದು, ಅರಬ್ ವಿಚಾರಗಳ ಪರಿಣತರಾಗಿದ್ದಾರೆ. Also Read:ಭಾರತ-ಚೀನ ಸೈನಿಕರ ಮುಖಾಮುಖಿಯ ಹಳೆಯ ವೀಡಿಯೋ ತೋರಿಸಿ ಇತ್ತೀಚಿನದ್ದು ಎಂದು ಪ್ರಚಾರ ಇನ್ನು ಜೈ ಶ್ರೀ ರಾಮ್ ಘೋಷಣೆ ಮೊಳಗಿಸಿದ್ದಾರೆ ಎನ್ನಲಾದ ಕಾರ್ಯಕ್ರಮ 2018 ಫೆಬ್ರವರಿ ವೇಳೆ ನಡೆದಿದ್ದಾಗಿದೆ. ಪ್ರವಚನಕಾರ, ಮೊರಾರಿಬಾಪು ಅವರು ರಾಮಕಥೆ ಕಾರ್ಯಕ್ರಮ ನಡೆಸಿದ್ದು, ಈ ವೇಳೆ ಸುಲ್ತಾನ್ ಸೌದ್ ಅಲ್ ಖಾಸಿಮಿ ಅವರು ಸಭಿಕರನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ಕಾರ್ಯಕ್ರಮದ ಬಗ್ಗೆ ಸುಲ್ತಾನ್ ಸೌದ್ ಅಲ್ ಖಾಸಿಮಿ ಅವರು ತಮ್ಮ ಟ್ವಿಟರ್ ಖಾತೆಯಿಂದ ಟ್ವೀಟ್ ಕೂಡ ಮಾಡಿದ್ದಾರೆ. ಗೂಗಲ್ ಸರ್ಚ್ ಮೂಲಕ ತಿಳಿದುಬಂದಂತೆ, ಇದನ್ನು ಹಲವು ಮಾಧ್ಯಮ ಸಂಸ್ಥೆಗಳು ಸೌದಿ ದೊರೆ ಜೈ ಶ್ರೀ ರಾಮ್ ಎಂದು ಹೇಳಿದ್ದಾರೆ ಎಂಬಂತೆ ವರದಿ ಮಾಡಿದ್ದು ಗೊತ್ತಾಗಿದೆ. ಈ ವರದಿಗಳು ಸುಳ್ಳು ಎಂದು ಗಲ್ಫ್ನ ಮಾಧ್ಯಮಗಳು 2018 ಫೆಬ್ರವರಿ 18ರಂದು ವರದಿ ಮಾಡಿವೆ. ಅದರಲ್ಲಿ ಕ್ಯೂ ಸೌದಿ ಪ್ರಕಟಿಸಿದ ಲೇಖನದ ಲಿಂಕ್ ಇಲ್ಲಿದೆ. ಆದ್ದರಿಂದ ವೈರಲ್ ವೀಡಿಯೋದಲ್ಲಿ ಹೇಳಿರುವಂತೆ, ಜೈ ಶ್ರೀ ರಾಮ್ ಎಂದು ಹೇಳಿದ ವ್ಯಕ್ತಿ ಸೌದಿ ದೊರೆ ಅಲ್ಲ ಎನ್ನುವುದು ತಿಳಿದುಬಂದಿದೆ. Conclusion ಕ್ಲೇಮಿನಲ್ಲಿ ಹೇಳಿರುವಂತೆ ಸೌದಿ ದೊರೆಯ ಬಾಯಲ್ಲಿ ಜೈ ಶ್ರೀ ರಾಮ್ ಘೋಷಣೆ ಇದು ಮೋದೀಜೀಯ ತಾಕತ್ತು; ಜೈ ಶ್ರೀ ರಾಮ, ಎಂದಿರುವುದು ತಪ್ಪಾಗುತ್ತದೆ ಮತ್ತು ಹಾಗೆ ಹೇಳಿದ್ದು ಸೌದಿ ದೊರೆಯಲ್ಲ, ಅವರು ಯುಎಇನ ಶಾರ್ಜಾ ಅರಸು ಮನೆತನದ ಸದಸ್ಯ ಸುಲ್ತಾನ್ ಸೌದ್ ಮೀರ್ ಖಾಸಿಮ್ ಎಂಬವರಾಗಿದ್ದಾರೆ. ಆದ್ದರಿಂದ ಈ ಕ್ಲೇಮ್ ಸುಳ್ಳಾಗಿದೆ. Our Source Tweet by @SultanAlQassemi, Dated: September 17, 2016 Personal website of Sultan Al Qassemi Article published by Apollo the International Magazine on Sultan Al Qassemi, Dated: September 7, 2017 ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
schema:mentions
schema:reviewRating
schema:author
schema:datePublished
schema:inLanguage
  • Hindi
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 11 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software