About: http://data.cimple.eu/claim-review/365ff82a5ed6756bb2404e2c0b82888dffb98b48428ee401acf91f3d     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • Authors Claim ರಕ್ತ ಹೀನತೆ ಸಮಸ್ಯೆ ಇರುವವರು ಪ್ರತಿದಿನ ಬೆಲ್ಲ ಮತ್ತು ಕಡಲೆಯನ್ನು ತಿಂದರೆ, ಸಮಸ್ಯೆಯಿಂದ ಪರಿಹಾರ ಕಾಣಬಹುದು Fact ರಕ್ತಹೀನತೆ ಸಮಸ್ಯೆ ಇರುವವರು ಬೆಲ್ಲ ಮತ್ತು ಕಡಲೆಯನ್ನು ತಿಂದರೆ, ಸಮಸ್ಯೆಯಿಂದ ಪರಿಹಾರ ಎಂಬುದನ್ನು ಎಲ್ಲರಿಗೂ ಅನ್ವಯಿಸಲು ಸಾಧ್ಯವಿಲ್ಲ. ಯಾವ ಕಾರಣಕ್ಕೆ ರಕ್ತಹೀನತೆಯಿಂದ ಬಳಲುತ್ತಿದ್ದಾರೆ, ಗಂಭೀರ ಕಾಯಿಲೆಗಳ ಸೂಚನೆಯೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ ರಕ್ತಹೀನತೆ ಸಮಸ್ಯೆ ಇರುವವರು ಬೆಲ್ಲ ಮತ್ತು ಕಡಲೆಯನ್ನು ತಿಂದರೆ, ಸಮಸ್ಯೆಯಿಂದ ಪರಿಹಾರ ಕಾಣಬಹುದು ಎಂದು ಹೇಳಿಕೆಯೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಫೇಸ್ಬುಕ್ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆ ಇರುವ ಮಹಿಳೆಯರು ಪ್ರತಿದಿನ ಬೆಲ್ಲ ಮತ್ತು ಕಡಲೆಯನ್ನು ಸೇವಿಸುವುದರಿಂದ ಸಹಾಯವಾಗುತ್ತದೆ” ಎಂದಿದೆ. Also Read: ಆರೋಗ್ಯ ಸುಧಾರಣೆಗೆ ಬಿಯರ್ ಸಹಾಯ ಮಾಡುತ್ತದೆಯೇ, ನಿಜ ಏನು? ರಕ್ತಹೀನತೆ ಎಂದರೆ ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಕಡಿಮೆಯಿರುವ ಒಂದು ಸ್ಥಿತಿ. ಇದು ಆಯಾಸ, ದೌರ್ಬಲ್ಯ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ರಕ್ತಹೀನತೆ ಪ್ರಮುಖವಾದ ಕಾರಣ ಎಂದರೆ, ಕಬ್ಬಿಣಾಂಶದ ಕೊರತೆ. ಇದು ಸಾಮಾನ್ಯವಾಗಿ ಪೌಷ್ಟಿಕಾಂಶದ ಕೊರತೆಗಳಿಗೆ ಸಂಬಂಧಿಸಿದೆ. ಈ ಸಂದರ್ಭದಲ್ಲಿ, ಬೆಲ್ಲ ಮತ್ತು ಕಡಲೆಯನ್ನು ಸೇವಿಸುವುದರಿಂದ ರಕ್ತಹೀನತೆಯನ್ನು ಪರಿಣಾಮಕಾರಿಯಾಗಿ ಎದುರಿಸಬಹುದೇ ಎಂಬುದು ಪ್ರಶ್ನೆಯಾಗಿದೆ. ಈ ಕುರಿತು ಸತ್ಯಶೋಧನೆ ನಡೆಸಲಾಗಿದ್ದು, ಇದು ಭಾಗಶಃ ತಪ್ಪು ಎಂದು ಕಂಡುಬಂದಿದೆ. Fact Check/Verification ರಕ್ತಹೀನತೆ ಇರುವ ರೋಗಿಗಳಿಗೆ ಬೆಲ್ಲ ಮತ್ತು ಕಡಲೆ ಒಳ್ಳೆಯದೇ? ಹೌದು. ಬೆಲ್ಲ ಸಾಂಪ್ರದಾಯಿಕ ಸಿಹಿಕಾರಕ. ಇದನ್ನು ಕಬ್ಬು ಅಥವಾ ತಾಳೆ ರಸದಿಂದ ತಯಾರಿಸಲಾಗುತ್ತದೆ, ಇದರಲ್ಲಿ ಕಬ್ಬಿಣಾಂಶ ಹೆಚ್ಚಾಗಿದೆ. ವಿಶೇಷವಾಗಿ ಕಬ್ಬಿಣದ ಕೊರತೆ ಅಥವಾ ಅಪೌಷ್ಟಿಕತೆಯಿಂದಾಗಿ ಸಣ್ಣ ಪ್ರಮಾನದಲ್ಲಿ ರಕ್ತಹೀನತೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಆಹಾರದಲ್ಲಿ ಬೆಲ್ಲವನ್ನು ಸೇರಿಸುವುದು ಪ್ರಯೋಜನಕಾರಿಯಾಗಿದೆ, ಮತ್ತೊಂದೆಡೆ, ಹುರಿಗಡಲೆ ಒಂದು ಪೋಷಕಾಂಶ-ದಟ್ಟವಾದ ದ್ವಿದಳ ಧಾನ್ಯವಾಗಿದ್ದು, ಇದು ಕಬ್ಬಿಣವನ್ನು ಒಳಗೊಂಡಂತೆ ಪ್ರೋಟೀನ್, ಫೈಬರ್ ಮತ್ತು ಅಗತ್ಯ ಖನಿಜಗಳ ಉತ್ತಮ ಮೂಲವನ್ನು ಒದಗಿಸುತ್ತದೆ. ಒಟ್ಟಿನಲ್ಲಿ, ಬೆಲ್ಲ ಮತ್ತು ಕಡಲೆ ಒಂದು ಆರೋಗ್ಯಕರ ಸಂಯೋಜನೆಯನ್ನು ರೂಪಿಸುತ್ತದೆ, ಇದು ಸೌಮ್ಯವಾದ ರಕ್ತಹೀನತೆ ಹೊಂದಿರುವ ವ್ಯಕ್ತಿಗಳಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನೈಸರ್ಗಿಕವಾಗಿ ತಮ್ಮ ಕಬ್ಬಿಣಾಂಶ ಸೇವನೆ ಹೆಚ್ಚಿಸಲು ಬಯಸುವವರಿಗೆ ಉತ್ತಮ ಆಯ್ಕೆಯಾಗಿದೆ. ಬೆಲ್ಲ ಮತ್ತು ಕಡಲೆ ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಸಹಾಯ ಮಾಡಬಹುದೇ? ಒಂದು ಮಟ್ಟಿಗೆ ಹೌದು. ಬೆಲ್ಲ ಮತ್ತು ಕಡಲೆ ಆರೋಗ್ಯವನ್ನು ಬೆಂಬಲಿಸುತ್ತದೆ, ಆದರೆ ಅದು ರಕ್ತಹೀನತೆಗೆ ಎಲ್ಲ ರೀತಿಯ ಪರಿಹಾರವಲ್ಲ. ಈ ಆಹಾರ ಸಂಯೋಜನೆಯ ಪರಿಣಾಮಕಾರಿತ್ವವು ಹೆಚ್ಚಾಗಿ ರಕ್ತಹೀನತೆಗೆ ಮೂಲ ಕಾರಣವೇನು ಮತ್ತು ಅದು ಎಷ್ಟು ತೀವ್ರವಾಗಿದೆ ಎಂಬುದನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ ರಕ್ತಹೀನತೆ ಪೌಷ್ಠಿಕಾಂಶ ಕೊರತೆಯಿಂದ ಆಗಬಹುದು. ವಿಶೇಷವಾಗಿ ಕಬ್ಬಿಣದ ಕೊರತೆಯಿಂದ ರಕ್ತಹೀನತೆ ಉಂಟಾದರೆ, ಬೆಲ್ಲ-ಕಡಲೆ ಆಹಾರವು ಪ್ರಯೋಜನಕಾರಿಯಾಗಿದೆ. ಆದಾಗ್ಯೂ, ರಕ್ತಹೀನತೆಯ ಎಲ್ಲ ಕಾರಣಗಳು ಆಹಾರಕ್ರಮಕ್ಕೆ ಸಂಬಂಧಿಸಿಲ್ಲ ಎಂದು ಗುರುತಿಸುವುದು ಬಹಳ ಮುಖ್ಯ. ವಿಶ್ವ ಆರೋಗ್ಯ ಸಂಸ್ಥೆ (WHO), ಪ್ರಕಾರ ರಕ್ತಹೀನತೆಯು ಫೋಲೇಟ್, ವಿಟಮಿನ್ ಬಿ12, ಮತ್ತು ವಿಟಮಿನ್ ಎ, ಹಾಗೂ ಆನುವಂಶಿಕ ಅಸ್ವಸ್ಥತೆಗಳು (ಹಿಮೋಗ್ಲೋಬಿನೋಪತಿ ರೀತಿಯವು) ಮತ್ತು ಸೋಂಕುಗಳಾದ (ಮಲೇರಿಯಾ, ಕ್ಷಯರೋಗ, ಎಚ್ಐವಿ ಮತ್ತು ಪರಾವಲಂಬಿ ಸೋಂಕುಗಳು) ಸೇರಿದಂತೆ ವಿವಿಧ ಅಂಶಗಳಿಂದ ಉಂಟಾಗಬಹುದು. ಡಾ.ಅಂಬರೀಷ್ ಶ್ರೀವಾಸ್ತವ ಅವರ ಪ್ರಕಾರ ರಕ್ತಹೀನತೆಯ ಮೂಲ ಕಾರಣವನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಕಬ್ಬಿಣದ ಕೊರತೆ ಸಾಮಾನ್ಯವಾಗಿದ್ದರೂ, ಕರುಳಿನ ಹುಳುಗಳಂತಹ ಇತರ ಕಾರಣಗಳು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ರಕ್ತಹೀನತೆಗೆ ಕಾರಣವಾಗಬಹುದು ಎಂದು ಅವರು ಗಮನಿಸುತ್ತಾರೆ. ಅಂತಹ ಸಂದರ್ಭಗಳಲ್ಲಿ, ಆಹಾರದ ಬದಲಾವಣೆಗಳು ಮಾತ್ರ ಸಾಕಾಗುವುದಿಲ್ಲ ಮತ್ತು ವೈದ್ಯರ ಸಲಹೆ ಅತ್ಯಗತ್ಯ. Also Read: ನೇರಳೆ ಹಣ್ಣಿನ ಬೀಜ ಸೇವನೆಯು ಸಕ್ಕರೆ ಮಟ್ಟ, ಕ್ಯಾನ್ಸರ್, ಮೂತ್ರಪಿಂಡದ ಕಲ್ಲಿಗೆ ಪರಿಹಾರ ನೀಡುತ್ತದೆಯೇ, ಸತ್ಯ ಏನು? ಸೌಮ್ಯ ರಕ್ತಹೀನತೆಗೆ ಆಹಾರದ ವಿಧಾನ ಯಾವುದು? ಅಪೌಷ್ಟಿಕತೆ ಅಥವಾ ಕಬ್ಬಿಣದ ಕೊರತೆ ಕಾರಣಕ್ಕೆ ಸೌಮ್ಯವಾದ ರಕ್ತಹೀನತೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ, ಬೆಲ್ಲ ಮತ್ತು ಕಡಲೆಯನ್ನು ಸೇವಿಸುವುದು ಸ್ವಲ್ಪ ಪರಿಹಾರವನ್ನು ನೀಡುತ್ತದೆ. ಈ ಆಹಾರಗಳು ಕಬ್ಬಿಣದ ಮಟ್ಟವನ್ನು ಮತ್ತು ಒಟ್ಟಾರೆ ಪೋಷಣೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ದೇಹ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸಲು ಕೆಂಪು ಮಾಂಸ, ಬೀನ್ಸ್, ಎಲೆಗಳ ಸೊಪ್ಪು ಮತ್ತು ಕುಂಬಳಕಾಯಿಯಂತಹ ವಿವಿಧ ಕಬ್ಬಿಣಾಂಶ ಹೆಚ್ಚಿರುವ ಆಹಾರಗಳನ್ನು ಒಳಗೊಂಡಿರುವ ಸಮತೋಲಿತ ಆಹಾರವನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ. ಡಾ. ಎಸ್ ಕೃಷ್ಣ ಪ್ರಶಾಂತಿ ಅವರ ಪ್ರಕಾರ, ಹಿಮೋಗ್ಲೋಬಿನ್ ಮಟ್ಟವನ್ನು ನಿರ್ವಹಿಸುವಲ್ಲಿ ಆಹಾರವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ, ಆದರೆ ಆಹಾರದ ಮೂಲಗಳನ್ನು ಮಾತ್ರ ಅವಲಂಬಿಸುವುದು ಎಲ್ಲರಿಗೂ ಸಾಕಾಗುವುದಿಲ್ಲ. ವಿಶೇಷವಾಗಿ 10 ಕ್ಕಿಂತ ಕಡಿಮೆ ಹಿಮೋಗ್ಲೋಬಿನ್ ಮಟ್ಟದಿಂದ ಕಡಿಮೆ ಇರುವ, ತೀವ್ರ ರಕ್ತಹೀನತೆ ಅನುಭವಿಸುತ್ತಿರುವ ಗರ್ಭಿಣಿಯರು ಅಥವಾ ವ್ಯಕ್ತಿಗಳಿಗೆ ವೈದ್ಯಕೀಯ ನೆರವು ಅತ್ಯಗತ್ಯ. ವೈದ್ಯಕೀಯ ಸಹಾಯವನ್ನು ಯಾವಾಗ ಪಡೆಯಬೇಕು? ರಕ್ತಹೀನತೆ ಮಧ್ಯಮದಿಂದ ತೀವ್ರವಾಗಿದ್ದರೆ, ವೃತ್ತಿಪರ ವೈದ್ಯಕೀಯ ಸಲಹೆಯನ್ನು ಪಡೆಯುವುದು ಅತ್ಯಗತ್ಯ. ರಕ್ತಹೀನತೆಯು ಗಂಭೀರ ಆರೋಗ್ಯ ಸಮಸ್ಯೆಗಳ ಸಂಕೇತವಾಗಿರಬಹುದು ಮತ್ತು ಅಂತಹ ಸಂದರ್ಭಗಳಲ್ಲಿ ಬೆಲ್ಲ ಮತ್ತು ಕಡಲೆಯನ್ನು ಮಾತ್ರ ತಿನ್ನುವುದು ಅಪಾಯಕಾರಿ. ತೀವ್ರ ಆಯಾಸ, ಉಸಿರಾಟದ ತೊಂದರೆ ಅಥವಾ ತೆಳು ಚರ್ಮದಂತಹ ರೋಗಲಕ್ಷಣಗಳನ್ನು ಅನುಭವಿಸುವ ವ್ಯಕ್ತಿಗಳು ಸಮಗ್ರ ಮೌಲ್ಯಮಾಪನಕ್ಕಾಗಿ ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸಬೇಕು. ಸೋಂಕುಗಳು ಅಥವಾ ದೀರ್ಘಕಾಲದ ಕಾಯಿಲೆಗಳಿದ್ದು, ರಕ್ತಹೀನತೆ ಇದ್ದಾಗ ಅಂತಹ ಸಮಸ್ಯೆ ಪರಿಹರಿಸುವುದು ಅಗತ್ಯ. ವೈದ್ಯರು ಇದಕ್ಕಾಗಿ ಚಿಕಿತ್ಸೆಗಳನ್ನು ಶಿಫಾರಸು ಮಾಡಬಹುದು, ಇದು ಆಹಾರದ ಮಾರ್ಪಾಡುಗಳ ಜೊತೆಗೆ ಕಬ್ಬಿಣಾಂಶದ ಪೂರಕಗಳು ಅಥವಾ ಔಷಧಗಳನ್ನು ಒಳಗೊಂಡಿರುತ್ತದೆ. Conclusion ರಕ್ತಹೀನತೆ ಸಮಸ್ಯೆ ಇರುವವರು ಬೆಲ್ಲ ಮತ್ತು ಕಡಲೆಯನ್ನು ತಿಂದರೆ, ಸಮಸ್ಯೆಯಿಂದ ಪರಿಹಾರ ಎಂಬುದನ್ನು ಎಲ್ಲರಿಗೂ ಅನ್ವಯಿಸಲು ಸಾಧ್ಯವಿಲ್ಲ. ಯಾವ ಕಾರಣಕ್ಕೆ ರಕ್ತಹೀನತೆಯಿಂದ ಬಳಲುತ್ತಿದ್ದಾರೆ, ಗಂಭೀರ ಕಾಯಿಲೆಗಳ ಸೂಚನೆಯೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. Also Read: ಖಾಲಿ ಹೊಟ್ಟೆಯಲ್ಲಿ ಪ್ರತಿ ದಿನ ಬೆಳ್ಳುಳ್ಳಿ ತಿಂದರೆ ವೀರ್ಯಾಣು ಸಂಖ್ಯೆ ಹೆಚ್ಚಾಗುತ್ತದೆ ಎನ್ನುವುದು ನಿಜವೇ? Result: Partly False Our Sources Evaluation of Efficacy of Jaggery and Raisins as Supplements in Iron Deficiency Anemia among Medical Undergraduate Students in Meerut, India Evaluation of promotion of iron-rich foods for the prevention of nutritional anemia in India Anemia Conversation with Dr. Ambrish Srivastava Conversation with Dr. S Krishna Prasanthi (This article has been published in collaboration with THIP Media) ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
schema:mentions
schema:reviewRating
schema:author
schema:datePublished
schema:inLanguage
  • Hindi
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 11 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software