About: http://data.cimple.eu/claim-review/38979f941367e8fe1b391928880e8b629ea38dfe0e76d523177f33a5     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • Authors Claim ಕೇರಳದಲ್ಲಿ ಹಿಂದೂ ಐಎಎಸ್ ಅಧಿಕಾರಿ ನೇಮಕ ವಿರೋಧಿಸಿ ಪ್ರತಿಭಟನೆ ನಡೆದಿದೆ Fact ಹಿಂದೂ ಐಎಎಸ್ ಅಧಿಕಾರಿ ನೇಮಕ ವಿರೋಧಿಸಿ ಪ್ರತಿಭಟನೆ ನಡೆದಿದ್ದಲ್ಲ, ಅಪಘಾತ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಜಿಲ್ಲಾಧಿಕಾರಿ ನೇಮಕ ವಿರೋಧಿಸಿ ಮಲಪ್ಪುರಂನಲ್ಲಿ ನಡೆದ ಪ್ರತಿಭಟನೆ ಇದಾಗಿದೆ ಕೇರಳದಲ್ಲಿ ಹಿಂದೂ ಐಎಎಸ್ ಅಧಿಕಾರಿ ನೇಮಕ ವಿರೋಧಿಸಿ ಪ್ರತಿಭಟನೆ ನಡೆದಿದೆ ಎಂದು ಕ್ಲೇಮ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಫೇಸ್ಬುಕ್ನಲ್ಲಿ ಕಂಡುಬಂದ ಹೇಳಿಕೆಯಲ್ಲಿ, “ಕೇರಳದಲ್ಲಿ ಹಿಂದೂ ವ್ಯಕ್ತಿಯನ್ನು ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿರುವುದಕ್ಕೆ ವಿರೋಧಿಸಿ ನಡೆದ ಪ್ರತಿಭಟನೆ ಇದು… ಇದು ಹಿಂದೂಗಳಿಗೆ ಅಪಾಯದ ಮುನ್ಸೂಚನೆ ನೀಡಿದ ವಿಡಿಯೋ, ಹಿಂದೂಗಳು ಅರ್ಥ ಮಾಡಿಕೊಳ್ಳಬೇಕಷ್ಟೆ..!” ಎಂದು ಹೇಳಲಾಗಿದೆ. ಈ ಕುರಿತು ನಾವು ಸತ್ಯಶೋಧನೆಯನ್ನು ನಡೆಸಿದ್ದು, ಇದು ತಪ್ಪಾದ ಸಂದರ್ಭ ಎಂದು ಕಂಡುಕೊಳ್ಳಲಾಗಿದೆ. Fact Check/ Verification ಸತ್ಯಶೋಧನೆಗಾಗಿ ನಾವು ಈ ವೀಡಿಯೋದ ದೃಶ್ಯಗಳನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇವೆ. ವೈರಲ್ ವೀಡಿಯೋವನ್ನು ಪರಿಶೀಲಿಸಿದ ವೇಳೆ ಕಟ್ಟಡಗಳಲ್ಲಿರುವ ಹಲವು ಬೋರ್ಡ್ಗಳನ್ನು ನಾವು ಗಮನಿಸಿದ್ದೇವೆ. ಜೊತೆಗೆ ಒಂದೆಡೆ ‘ಪಾಲಿ ಡೆಂಟಲ್ ಕ್ಲಿನಿಕ್’ ಎಂದು ಬರೆಯಲಾಗಿದೆ. ಇದನ್ನು ನಾವು ಗಮನಿಸಿ, ‘ಪಾಲಿ ಡೆಂಟಲ್ ಕ್ಲಿನಿಕ್ ಮಲಪ್ಪುರಂ’ ಗಾಗಿ ಗೂಗಲ್ ಕೀವರ್ಡ್ ಸರ್ಚ್ ನಡೆಸಿದ್ದು, ಜಸ್ಟ್ ಡಯಲ್ನಲ್ಲಿ ಅಪ್ಲೋಡ್ ಮಾಡಲಾದ ಕ್ಲಿನಿಕ್ ಚಿತ್ರ ಕಂಡುಕೊಂಡಿದ್ದೇವೆ. ಇದರೊಂದಿಗೆ ಒಂದು ಬೋರ್ಡ್ ನಲ್ಲಿ ‘ಬ್ಯೂಟಿ ಸ್ಪಾಟ್ ಅಪ್ ಹಿಲ್ ಮಲಪ್ಪುರಮ್’ ಎಂದು ಬರೆದಿರುವುದನ್ನು ಗಮನಿಸಿದ್ದೇವೆ. ಇದರಿಂದ ಪ್ರತಿಭಟನೆ ಮಲಪ್ಪುರಂನದ್ದು ಎಂದು ನಾವು ತೀರ್ಮಾನಿಸಬಹುದು. ಆ ನಂತರ ನಾವು ವೀಡಿಯೋದಲ್ಲಿ ಕೇಳಿಬರುವ ಘೋಷಣೆಗಳನ್ನು ಗಮನಿಸಿದ್ದೇವೆ. ನ್ಯೂಸ್ಚೆಕರ್ ಮಲಯಾಳ ತಂಡ ನಮಗೆ ಘೋಷಣೆಗಳನ್ನು ಭಾಷಾಂತರಿಸಿದೆ. ವೀಡಿಯೋದಲ್ಲಿ ಹೇಳುವಂತೆ “ಕುಡಿದ ಅಮಲಿನಲ್ಲಿ ಕೊಲೆ ಮಾಡಿದ ವ್ಯಕ್ತಿಗೆ ಹಾಲು ಮತ್ತು ಜೇನುತುಪ್ಪವನ್ನು ನೀಡಲು ಸರ್ಕಾರಕ್ಕೆ ನಾಚಿಕೆಯಾಗುವುದಿಲ್ಲವೇ? ಅವರನ್ನು ಕಲೆಕ್ಟರ್ ಆಗಿ ನೇಮಕ ಮಾಡಿದ ಆದೇಶವನ್ನು ಹಿಂತೆಗೆದುಕೊಳ್ಳಿ” ಎಂದು ಮಲಯಾಳಂನಲ್ಲಿ ಹೇಳುತ್ತಿದ್ದಾರೆ. ಇದು ಹೊರತು ಬೇರಾವುದೇ ಘೋಷಣೆಗಳು ಕೇಳಿಸಿಲ್ಲ ಎಂಬುದನ್ನು ನ್ಯೂಸ್ಚೆಕರ್ ಮಲಯಾಳ ತಂಡ ದೃಢಪಡಿಸಿದೆ. ಪ್ರತಿಭಟನೆಗಳು ಯಾವುದರ ವಿರುದ್ಧ? ಪ್ರತಿಭಟನೆ ಕಾರಣ ತಿಳಿಯಲು ನಾವು ಗೂಗಲ್ ನಲ್ಲಿ “ಮಲಪ್ಪುರಂ ಕೇರಳ ಪ್ರತಿಭಟನೆಗಳು ಐಎಎಸ್” ಎಂಬ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಜುಲೈ 31, 2022 ರ ಒನ್ ಮನೋರಮಾ ವರದಿಯಲ್ಲಿ, “ಶ್ರೀರಾಮ್ ವೆಂಕಟರಾಮನ್ ಅವರನ್ನು ಅಲಪ್ಪುಳ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿರುವುದನ್ನು ವಿರೋಧಿಸಿ ತಿರುವನಂತಪುರಂದ ಸಚಿವಾಲಯದ ಎದುರು ಮತ್ತು ಇತರ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಲಾಯಿತು” ಎಂದಿದೆ. ಈ ವರದಿಯಲ್ಲಿ ಕೆಲವು ವರ್ಷಗಳ ಹಿಂದೆ ಪತ್ರಕರ್ತ ಕೆ.ಎಂ.ಬಶೀರ್ ಸಾವಿಗೆ ಕಾರಣವಾದ ಕುಡಿದು ವಾಹನ ಚಲಾಯಿಸಿದ ಪ್ರಕರಣದಲ್ಲಿ ಶ್ರೀರಾಮ್ ಆರೋಪಿಯಾಗಿದ್ದಾರೆ ಎಂದಿದೆ. “ಐಎಎಸ್ ಅಧಿಕಾರಿಗಳ ಹುದ್ದೆಗಳನ್ನು ನಿರ್ಧರಿಸುವುದು ಸರ್ಕಾರದ ನೀತಿ ನಿರ್ಧಾರವಾಗಿದೆ. ಅಂತಹ ವ್ಯಕ್ತಿಯನ್ನು ಈ ಹುದ್ದೆಗೆ ನೇಮಿಸುವ ಮೂಲಕ, ಸರ್ಕಾರವು ನ್ಯಾಯ ಮತ್ತು ಕಾನೂನನ್ನು ಬುಡಮೇಲು ಮಾಡಲು ಕುಮ್ಮಕ್ಕು ನೀಡುತ್ತಿದೆ” ಎಂದು ಕೇರಳ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ ವಂಡೂರ್ ಅಬ್ದುಲ್ ರಹಮಾನ್ ಫೈಝಿ ಮಲಪ್ಪುರಂನಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ಉದ್ಘಾಟಿಸುವಾಗ ಹೇಳಿದ್ದಾರೆ. ಅಲಪ್ಪುಳ ಜಿಲ್ಲಾಧಿಕಾರಿಯಾಗಿ ಶ್ರೀರಾಮ್ ವೆಂಕಟರಾಮನ್ ಅವರನ್ನು ನೇಮಕ ಮಾಡಿರುವುದನ್ನು ವಿರೋಧಿಸಿ ಕೇರಳ ರಾಜ್ಯದ ಹಲವಾರು ಸ್ಥಳಗಳಲ್ಲಿ ಪ್ರತಿಭಟನೆಗಳು ವರದಿಯಾಗಿವೆ. ಜುಲೈ 30, 2022ರಂದು ಕಣ್ಣೂರಿನಲ್ಲಿ ಮೆರವಣಿಗೆಯನ್ನು ಉದ್ಘಾಟಿಸಿದ ಮುಸ್ಲಿಂ ಜಮಾಅತ್ ರಾಜ್ಯ ಉಪಾಧ್ಯಕ್ಷ ಪಟ್ಟುವಂ ಕೆ.ಪಿ.ಅಬೂಬಕ್ಕರ್ ಮುಸ್ಲಿಯಾರ್, “ಕೊಲೆ ಪ್ರಕರಣದ ಆರೋಪಿಗೆ ಶಿಕ್ಷೆ ನೀಡುವ ಬದಲು ಬಡ್ತಿ ನೀಡುವ ಸರ್ಕಾರದ ನಿಲುವನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿದರು. ವೆಂಕಟರಾಮನ್ ಆರೋಪಿಯಾಗಿರುವ ಪ್ರಕರಣದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ನಾವು “ಕೆಎಂ ಬಶೀರ್ ಸಾವು” ಎಂದು ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಆಗಸ್ಟ್ 03, 2020 ರ ದಿ ನ್ಯೂಸ್ ಮಿನಿಟ್ ವರದಿ, ‘ಪತ್ರಕರ್ತ ಬಶೀರ್ ಸಾವಿನ ಒಂದು ವರ್ಷ: ಇನ್ನೂ ವಿಚಾರಣೆಯಿಲ್ಲ, ಆರೋಪಿ ಐಎಎಸ್ ಅಧಿಕಾರಿ ಮತ್ತೆ ಸೇವೆಗೆ ವಾಪಸ್’ ಎಂಬ ಶೀರ್ಷಿಕೆಯಿರುವ ವರದಿ ಲಭ್ಯವಾಗಿದೆ. ಪ್ರಾದೇಶಿಕ ದಿನಪತ್ರಿಕೆ ಸಿರಾಜ್ ಇದರ ತಿರುವನಂತಪುರಂ ಬ್ಯೂರೋ ಮುಖ್ಯಸ್ಥರಾಗಿದ್ದ ಕೆ.ಎಂ.ಬಶೀರ್ ಅವರು ಆಗಸ್ಟ್ 4, 2019 ರಂದು ಮುಂಜಾನೆ ವೆಂಕಟರಾಮನ್ ಚಲಾಯಿಸುತ್ತಿದ್ದ ಅತಿವೇಗದ ಕಾರು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ ಎನ್ನಲಾಗಿತ್ತು. ” ಶ್ರೀರಾಮ್ ಕಾರು ಚಲಾಯಿಸುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದರೂ, ತಕ್ಷಣದ ಕಾನೂನು ಕ್ರಮಗಳನ್ನು ಪ್ರಾರಂಭಿಸುವಲ್ಲಿ ಪ್ರಮುಖ ಲೋಪವಾಗಿದೆ, ಇದು ಅಂತಿಮವಾಗಿ ಪ್ರಕರಣವನ್ನು ದುರ್ಬಲಗೊಳಿಸಿತು” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಐಎಎಸ್ ಅಧಿಕಾರಿಯನ್ನು ಪ್ರಕರಣದಿಂದ ರಕ್ಷಿಸಲು ಪೊಲೀಸರು ಎಲ್ಲ ರೀತಿಯ ಬೆಂಬಲವನ್ನು ನೀಡಿದ್ದಾರೆ ಎಂಬ ಆರೋಪಗಳಿವೆ ಎಂದು ವರದಿಗಳು ಹೇಳಿವೆ. ವವೆಂಕಟರಾಮನ್ ಅವರ ರಕ್ತದ ಮಾದರಿಗಳನ್ನು ಎಂಟು ಗಂಟೆಗಳ ನಂತರ ಆಲ್ಕೋಹಾಲ್ ಪರೀಕ್ಷೆಗಾಗಿ ತೆಗೆದುಕೊಳ್ಳಲಾಯಿತು ಮತ್ತು ಈ ಪ್ರಕರಣದಲ್ಲಿ ಆರು ತಿಂಗಳ ನಂತರ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎನ್ನಲಾಗಿದೆ. ಸೆಪ್ಟೆಂಬರ್ 27, 2021 ರ ಮಾತೃಭೂಮಿಯ ವರದಿಯಲ್ಲಿ, ಈ ಪ್ರಕರಣವನ್ನು ಆರಂಭದಲ್ಲಿ ಮ್ಯೂಸಿಯಂ ಪೊಲೀಸರು ತನಿಖೆ ನಡೆಸಿದ್ದರು ಮತ್ತು ಪುರಾವೆಗಳನ್ನು ಸಂಗ್ರಹಿಸುವಲ್ಲಿ ಅವರ ಉದಾಸೀನತೆಯು ಪ್ರಕರಣವನ್ನು ದುರ್ಬಲಗೊಳಿಸಿತು ಎಂದು ಉಲ್ಲೇಖಿಸಿದೆ. ಸಂಪೂರ್ಣ ವರದಿ ಇಲ್ಲಿದೆ. ಈ ಪ್ರಕರಣದಲ್ಲಿ ಸಾಕ್ಷ್ಯಗಳನ್ನು ತಿರುಚಲಾಗಿದೆ ಎಂಬ ಆರೋಪವೂ ಅಧಿಕಾರಿಯ ಮೇಲಿದೆ. ಪ್ರತಿಭಟನೆಗಳ ಬಗ್ಗೆ ಇತರ ವರದಿಗಳನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈ ಪ್ರಕರಣದ ಬಳಿಕ ವೆಂಕಟರಾಮನ್ ಅವರನ್ನು ಕೇರಳ ಸರ್ಕಾರವು ಪುನಃ ನೇಮಿಸಿಕೊಂಡಿತ್ತು. ಕೆಲವು ತಿಂಗಳ ಅಮಾನತು ನಂತರ ಮಾರ್ಚ್ 2020 ರಲ್ಲಿ ಅವರನ್ನು ಆರೋಗ್ಯ ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಕಾಂಗ್ರೆಸ್ ಮತ್ತು ಇತರ ಸಂಘಟನೆಗಳಿಂದಲೂ ಪ್ರತಿಭಟನೆ ಕೆ.ಎಂ.ಬಶೀರ್ ಅವರು ಅಖಿಲ ಭಾರತ ಸುನ್ನಿ ಜಂಇಯ್ಯತುಲ್ ಉಲಮಾದ ಮುಖವಾಣಿ ಎಂದು ಪರಿಗಣಿಸಲಾದ ಸ್ಥಳೀಯ ಪತ್ರಿಕೆ ಸಿರಾಜ್ ಡೈಲಿಯಲ್ಲಿ ಕೆಲಸ ಮಾಡುತ್ತಿದ್ದರು. ಉಲಮಾದ ಪ್ರಧಾನ ಕಾರ್ಯದರ್ಶಿಯಾಗಿರುವ ಶೇಖ್ ಅಬೂಬಕರ್ ಅಹ್ಮದ್ ಅವರು ಸಿರಾಜ್ ಡೈಲಿಯ ಪ್ರಕಾಶಕರೂ ಆಗಿದ್ದು, ಶ್ರೀರಾಮ್ ಅವರ ನೇಮಕದ ವಿರುದ್ಧ ಜಮಾತ್ ನಂತಹ ಸುನ್ನಿ ಗುಂಪುಗಳು ನಡೆಸುತ್ತಿರುವ ಪ್ರತಿಭಟನೆಗಳನ್ನು ವಿವರಿಸಿದ್ದಾರೆ. ಜಮಾತ್ ಮಾತ್ರ ಈ ಪ್ರತಿಭಟನೆ ನಡೆಸಿದ್ದಲ್ಲ. ವೆಂಕಟರಾಮನ್ ಅವರನ್ನು ಅಲಪ್ಪುಳದ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿರುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ರಾಜ್ಯಾದ್ಯಂತ ಸರಣಿ ಪ್ರತಿಭಟನೆಗಳನ್ನು ನಡೆಸಿದ್ದವು. ಜುಲೈ 25, 2022 ರಂದು ಅಲಪ್ಪುಳ ಜಿಲ್ಲಾಧಿಕಾರಿಯಾಗಿ ಶ್ರೀರಾಮ್ ವೆಂಕಟರಾಮನ್ ಅವರನ್ನು ನೇಮಕ ಮಾಡಿರುವುದನ್ನು ವಿರೋಧಿಸಿ ಕಾಂಗ್ರೆಸ್ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿತ್ತು. ಜಿಲ್ಲಾ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಎ.ಶುಖೂರ್ ಅವರು, ವೆಂಕಟರಾಮನ್ ಕಳಂಕಿತ ಅಧಿಕಾರಿ. ಜಿಲ್ಲಾಧಿಕಾರಿಯಾಗಿ ಅವರ ನೇಮಕವನ್ನು ತಕ್ಷಣ ಹಿಂತೆಗೆದುಕೊಳ್ಳುವಂತೆ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದರು. ಜುಲೈ 26, 2022 ರಂದು ವೆಂಕಟರಾಮನ್ ಅಲಪ್ಪುಳ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಾಗ, ಅವರ ಕಾರು ಜಿಲ್ಲಾಧಿಕಾರಿ ಆವರಣವನ್ನು ಪ್ರವೇಶಿಸುತ್ತಿದ್ದಂತೆ ಯುವ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಬಾವುಟಗಳನ್ನು ಪ್ರದರ್ಶಿಸಿದ್ದರು. ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಕೂಡ ಈ ನೇಮಕವನ್ನು ಖಂಡಿಸಿದ್ದರು. ಸರ್ಕಾರದ ನಿರ್ಧಾರವು ಅನುಚಿತವಾಗಿದೆ ಮತ್ತು ವೆಂಕಟರಾಮನ್ ಕುಡಿದು ವಾಹನ ಚಲಾಯಿಸಿದ ಪ್ರಕರಣದಲ್ಲಿ ಸಿಲುಕಿದಾಗ ಸರ್ಕಾರವು ಆರಂಭದಿಂದಲೂ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದರು. ವೆಂಕಟರಾಮನ್ ಅವರನ್ನು ಅಲಪ್ಪುಳ ಜಿಲ್ಲಾಧಿಕಾರಿಯಾಗಿ ನೇಮಿಸಿದ ಸರ್ಕಾರದ ನಿರ್ಧಾರದ ವಿರುದ್ಧ ಪ್ರತಿಪಕ್ಷಗಳು ಮಾತ್ರವಲ್ಲ, ಪತ್ರಕರ್ತರು ಸಹ ಪ್ರತಿಭಟನೆ ನಡೆಸಿದ್ದರು. ಕೇರಳ ಕಾರ್ಯನಿರತ ಪತ್ರಕರ್ತರ ಒಕ್ಕೂಟ (ಕೆಯುಡಬ್ಲ್ಯೂಜೆ) ಜುಲೈ 27, 2022 ರಂದು ಅಲಪ್ಪುಳದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಹೊರಗೆ ಪ್ರತಿಭಟನಾ ಮೆರವಣಿಗೆ ನಡೆಸಿತ್ತು. ಈ ಬಗ್ಗೆ ನ್ಯೂಸ್ ಚೆಕರ್ ಕೆಯುಡಬ್ಲ್ಯೂಜೆ ನಿರ್ಗಮಿತ ಅಧ್ಯಕ್ಷ ಕೆ.ಪಿ.ರೆಜಿ ಅವರನ್ನು ಸಂಪರ್ಕಿಸಿದೆ. ಈ ವೇಳೆ ಅವರು ವೆಂಕಟರಾಮನ್ ನೇಮಕದ ವಿರುದ್ಧ ವಿವಿಧೆಡೆ ಒಕ್ಕೂಟ ವತಿಯಿಂದ ನಡೆದ ಪ್ರತಿಭಟನೆ ಬಗ್ಗೆ ತಿಳಿಸಿದ್ದಾರೆ. ನೇಮಕಾತಿ ವಿರುದ್ಧ ಮೊದಲ ದಿನಂದಿದಲೂ ಒಕ್ಕೂಟ ಪ್ರತಿಭಟನೆ ನಡೆಸಿತ್ತು. ಅಧಿಕಾರಿಯ ಅಮಾನತು ಹಿಂತೆಗೆದುಕೊಂಡಾಗ ಒಕ್ಕೂಟ ಹಲವು ಮನವಿಗಳನ್ನು ಸರ್ಕಾರಕ್ಕೆ ನೀಡಿತ್ತು. ಜೊತೆಗೆ ಸಾರ್ವಜನಿಕ ಹೇಳಿಕೆಗಳನ್ನು ನೀಡಿದೆ ಹಾಗೂ ಕೆಲವು ಸಾಮಾಜಿಕ ಮಾಧ್ಯಮ ಅಭಿಯಾನಗಳನ್ನು ನಡೆಸಿತು” ಎಂದು ರೆಜಿ ಹೇಳಿದರು. ಜೊತೆಗೆ ವಿರೋಧ ಪಕ್ಷವೂ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿತ್ತು ಎಂದು ಅವರು ಹೇಳಿದ್ದಾರೆ. ಇದರೊಂದಿಗೆ ಅವರು ಅವರು ರಾಜ್ಯಾದ್ಯಂತ ಕೆಯುಡಬ್ಲ್ಯೂಜೆ ನಡೆಸಿದ ಪ್ರತಿಭಟನೆಯ ಹಲವಾರು ಫೋಟೋಗಳು ಮತ್ತು ವೀಡಿಯೊಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಅದನ್ನು ಇಲ್ಲಿ ನೋಡಬಹುದು. ಶ್ರೀರಾಮ್ ಅವರ ನೇಮಕದ ವಿರುದ್ಧ ಇಂಡಿಯನ್ ಕಲ್ಚರಲ್ ಫೋರಂ (ಐಸಿಎಫ್) ಕೂಡ ಪ್ರತಿಭಟನೆ ರಾಲಿಗಳನ್ನು ನಡೆಸಿದೆ ಎಂದು ವರದಿಯಾಗಿದೆ. ಪ್ರತಿಭಟನೆಯ ನಂತರ ಏನಾಯಿತು? ರಾಜ್ಯವ್ಯಾಪಿ ಭಾರಿ ಪ್ರತಿಭಟನೆಯ ನಂತರ, ಕೇರಳ ಸರ್ಕಾರ ಆಗಸ್ಟ್ 1, 2022ರಂದು ಅಲಪ್ಪುಳ ಜಿಲ್ಲಾಧಿಕಾರಿಯಾಗಿ ಶ್ರೀರಾಮ್ ವೆಂಕಟರಾಮನ್ ಅವರ ನೇಮಕವನ್ನು ಹಿಂತೆಗೆದುಕೊಂಡಿತು ಮತ್ತು ಅವರನ್ನು ಕೇರಳ ನಾಗರಿಕ ಸರಬರಾಜು ನಿಗಮಕ್ಕೆ ಜನರಲ್ ಮ್ಯಾನೇಜರ್ ಆಗಿ ವರ್ಗಾಯಿಸಲಾಯಿತು. ಇನ್ನು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ್ ವೆಂಕಟರಾಮನ್ ವಿರುದ್ಧ ಉದ್ದೇಶಪೂರ್ವಕವಲ್ಲದ ಹತ್ಯೆ ಆರೋಪ ಹೊರಿಸಲು ಕೇರಳ ಹೈಕೋರ್ಟ್ ಹೇಳಿದೆ. ಎಪ್ರಿಲ್ 13, 2023ರಂದು ಹೈಕೋರ್ಟ್ ಈ ಕುರಿತು ತೀರ್ಪು ನೀಡಿತ್ತು. ಈ ಕುರಿತ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಇಲ್ಲಿದೆ. Conclusion ಕೇರಳದಲ್ಲಿ ಹಿಂದೂ ಐಎಎಸ್ ಅಧಿಕಾರಿಯ ನೇಮಕದ ವಿರುದ್ಧ ನಿರ್ದಿಷ್ಟ ಸಮುದಾಯದ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ ಎನ್ನುವುದು ತಪ್ಪಾದ ಸಂದರ್ಭವಾಗಿದೆ. ಅಪಘಾತ ಪ್ರಕರಣವೊಂದರಲ್ಲಿ ಪತ್ರಕರ್ತನ ಸಾವಿಗೆ ಕಾರಣವಾದ ಆರೋಪವನ್ನು ಜಿಲ್ಲಾಧಿಕಾರಿ ಹೊಂದಿದ್ದು ಅವರ ನೇಮಕದ ವಿರುದ್ಧ ನಡೆದ ಪ್ರತಿಭಟನೆ ಇದಾಗಿದೆ ಎಂದು ತಿಳಿದುಬಂದಿದೆ. ಜೊತೆಗೆ ಈ ಪ್ರತಿಭಟನೆಯ ದೃಶ್ಯಗಳನ್ನು ಕೋಮುಬಣ್ಣದೊಂದಿಗೆ ಹಂಚಿಕೊಳ್ಳಲಾಗುತ್ತಿದೆ. Result: Missing Context Our Sources Justdial Report By Onmanorama, Dated July 31, 2022 Report By The New Indian Express, Dated July 31, 2022 Report By The Hindu, Dated July 25, 2022 Report By The New Indian Express, Dated April 13, 2023 Telephonic Conversation With KUWJ Outgoing President K P Reji On August 3, 2022 (ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ) ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
schema:reviewRating
schema:author
schema:datePublished
schema:inLanguage
  • Hindi
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 2 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software