About: http://data.cimple.eu/claim-review/3afae8f82d502a6545b9061415610b717171792714bc444d2165e700     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದಾಗಿ ಚೆನ್ನೈನಲ್ಲಿ ಯಾವುದೇ ಕಾರು ಪಲ್ಟಿ ಹೊಡೆದಿಲ್ಲ ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದಾಗಿ ಚೆನ್ನೈನಲ್ಲಿ ಯಾವುದೇ ಕಾರು ಪಲ್ಟಿ ಹೊಡೆದಿಲ್ಲ Claim :ಇತ್ತೀಚಿಗೆ ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದಾಗಿ ಚೆನ್ನೈನಲ್ಲಿ ಕಾರೊಂದು ಪಲ್ಟಿ ಹೊಡೆದಿದೆ Fact :ಚೆನ್ನೈನಲ್ಲಿ ಮಳೆಯಿಂದಾಗಿ ಕಾರು ಪಲ್ಟಿಯಾದ ವಿಡಿಯೋ 2016ರದ್ದು ಬಂಗಾಳಕೊಲ್ಲಿಯ ನೈರುತ್ಯ ಭಾಗದಲ್ಲಿ ತೀವ್ರ ವಾಯುಭಾರ ಕುಸಿತದಿಂದಾಗಿ ʼಫೆಂಗಲ್ʼ ಚಂಡಮಾರುತ ರೂಪುಗೊಂಡಿದೆ. ಇದರಿಂದಾಗಿ ನೆರೆ ರಾಜ್ಯ ತಮಿಳುನಾಡಿನ ಹಲವು ಭಾಗಗಳಲ್ಲಿ ಧಾರಾಕಾರ ಮಳೆ ಹಾಗೂ ವೇಗಗೊಂಡ ಗಾಳಿಗೆ ತಮಿಳುನಾಡಿನ ಕರಾವಳಿ ಭಾಗದ ಜನ ತತ್ತರಿಸಿ ಹೋಗಿದ್ದಾರೆ. ತಮಿಳುನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ತಮಿಳುನಾಡು ಸೇರಿದಂತೆ ಕೆಲ ರಾಜ್ಯಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿತ್ತು ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಚಂಡಮಾರುತದಿಂದಾಗಿ ಚೆನ್ನೈ ನಗರದಲ್ಲಿ ಸಾಗುತ್ತಿದ್ದ ಕಾರೊಂದು ಪಲ್ಟಿಯಾಗುತ್ತಿರುವ ವೀಡಿಯೊವೊಂದು ವೈರಲ್ ಆಗಿದೆ. ಡಿಸಂಬರ್ 12, 2024ರಂದು ʼಎಸ್.ವಿ. ಶರವಣ ಸುಂದರ್ʼ ಎಂಬ ಎಕ್ಸ್ ಖಾತೆದಾರ ತನ್ನ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡು ʼHeavy rains near the coast are intensifying, signaling the likelihood of more downpours in the coming hours. Please stay alert, stay safe, and remain indoors unless absolutely necessary. Take care #ChennaiRainsUpdate #ChennaiRainʼ ಎಂಬ ಶೀರ್ಷಿಕೆ ಮತ್ತು ಹ್ಯಾಷ್ಟ್ಯಾಗ್ನೊಂದಿಗೆ ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಕರಾವಳಿ ತೀರದಲ್ಲಿ ಸಮೀಪ ಭಾರೀ ಮಳೆಯಾಗುತ್ತಿದ್ದು, ಮುಂದಿನ ಗಂಟೆಗಳಲ್ಲಿ ಮತ್ತಷ್ಟು ಮಳೆಯಾಗುವ ಸಾಧ್ಯತೆಯಿದೆ. ದಯವಿಟ್ಟು ಜಾಗರೂಕರಾಗಿರಿ, ಸುರಕ್ಷಿತವಾಗಿರಿ ಮತ್ತು ಸಂಪೂರ್ಣವಾಗಿ ಕಾಳಜಿ ಮಹಿಸಿ. ಅಗತ್ಯವಿಲ್ಲದಿದ್ದರೆ ಮಾತ್ರ ಮನೆಯಿಂದ ಹೊರಗೆ ಹೋಗಿ ಇಲ್ಲವಾದರೆ ಮನೆಯೊಳಗೆ ಇರಿ. #ChennaiRainsUpdate #ChennaiRainʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ನೋಡಬಹುದು. ವೈರಲ್ ಆದ ವಿಡಿಯೋವಿನ್ನು ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. ಫ್ಯಾಕ್ಟ್ಚೆಕ್ ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಡಿಸಂಬರ್ 2016ರ ವಿಡಿಯೋವನ್ನು ಇತ್ತೀಚಿಗೆ ಚೆನ್ನೈನಲ್ಲಿ ಬಂದಂತಹ ಚಂಡಮಾರುತ ಎಂಬ ಶೀರ್ಷಿಕೆಯನ್ನೀಡಿ ಹಂಚಿಕೊಳ್ಳಲಾಗುತ್ತಿದೆ. ನಾವು ವೈರಲ್ ಆದ ವಿಡಿಯೋವಿನಲ್ಲಿರುವ ನಿಜಾಂಶವನ್ನು ತಿಳಿಯಲು ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಫ್ರೇಮ್ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಡಿಸಂಬರ್ 13, 2016ರಲ್ಲಿ ʼಸಿಎನ್ಎನ್ ಇಂಟರ್ನ್ಯಾಷನಲ್ʼ ಎಕ್ಸ್ ಖಾತೆಯಲ್ಲಿ ವೈರಲ್ ಆದ ವಿಡಿಯೋವನ್ನು ಹಂಚಿಕೊಂಡು ʼCar overturns as intense winds and heavy rain from Tropical Cyclone #Vardah pound #Chennai, Indiaʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋವಿನ ಶೀರ್ಷಿಕೆಯಲ್ಲಿ ʼಸಿಎನ್ಎನ್ ವರ್ಡ್ʼ ವೆಬ್ಸೈಟ್ನಲ್ಲಿ ಹಂಚಿಕೊಂಡಿರುವ ವರದಿಯೊಂದು ಕಂಡುಬಂದಿತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಹಂಚಿಕೊಂಡಿರುವ ಮಾಹಿತಿ ಪ್ರಕಾರ ʼCyclone Vardah hits Indian city of Chennai, 10 deadʼ ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ಚಂಡಮಾರುತದ ಸಮಯದಲ್ಲಿ 10 ಜನರು ಸಾವನ್ನಪ್ಪಿದ್ದಾರೆ ಎಂಬ ಶೀರ್ಷಿಕೆಯೊಂದಿಗಿರುವ ವರದಿಯನ್ನು ಕಂಡುಕೊಂಡೆವು. ಡಿಸಂಬರ್ 12, 2016ರಂದು ʼಗೌರವ್ ಶ್ರೀವಾಸ್ತವʼ ಎಂಬ ಎಕ್ಸ್ ಖಾತೆದಾರ ʼcar turning over DLF Garden City #cyclonevardh #vardahcyclone #chennai" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋನ್ನು ಹಂಚಿಕೊಂಡಿದ್ದಾರೆʼ ಡಿಸಂಬರ್ 12, 2016ರಂದು ʼಟೈಮ್ಸ್ ಆಫ್ ಇಂಡಿಯಾʼ ವೆಬ್ಸೈಟ್ನಲ್ಲಿ ʼCyclone Vardah topples car, bus in Chennaiʼ ಎಂಬ ಹೆಡ್ಲೈನ್ನೊಂಡಿಗೆ ವರದಿ ಮಾಡಿರುವುದನ್ನು ನಾವು ಕಂಡುಕೊಂಡೆವು. ವರದಿಯ ಪ್ರಕಾರ ʼವರ್ದಾ ಚಂಡಮಾರುತದ ಕಾರಣದಿಂದ ತಮಿಳುನಾಡು ಮತ್ತು ಆಂಧ್ರಪ್ರದೇಶದ ಕರಾವಳಿಯ ವಿವಿಧ ಭಾಗಗಳಲ್ಲಿ ಭಾರೀ ಗಾಳಿ ಮತ್ತು ಮಳೆಯಾಗಿದೆ. ಮಳೆ ಮತ್ತು ಗಾಳಿಯಿಂದಾಗಿ ರಸ್ತೆಯಲ್ಲಿರುವ ವಾಹನಗಳು ಪಲ್ಟಿ ಹೊಡೆದಿದೆ. ಚಂಡಮಾರುತಕ್ಕೆ ಚೆನ್ನೈನ ಪಂಚತಾರಾ ಹಯಾತ್ ಹೋಟೆಲ್ನ ಮುಂಭಾಗದ ಗಾಜಿನ ಫಲಕಗಳು ಸಹ ಹೊಡೆದೋಗಿದೆ ಎಂದು ವರದಿಯಾಗಿದೆ. ಡಿಸಂಬರ್ 13, 2016ರಂದು ʼದಿ ಹಿಂದೂʼ ಫೇಸ್ಬುಕ್ ಪೇಜ್ನಲ್ಲಿ ʼThe worst of Cyclone Vardah is over. Here's a quick look at the trail of destruction it left behind in Chennaiʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುನದನ್ನು ನೋಡಬಹುದು. ತೆಲುಗು ಸುದ್ದಿ ವಾಹಿನಿಯಾದ ʼಟಿವಿ5 ನ್ಯೂಸ್ʼ ಯೂಟ್ಯೂಬ್ ಚಾನೆಲ್ನಲ್ಲಿ ʼCyclone Vardah Effect on Chennai: 10 Dead, Chennai Plunged into Darknessʼ ಎಂಬ ಶೀರ್ಷಿಕೆಯೊಂದಿಗೆ ಚೆನ್ನೈನಲ್ಲಿ ಚಂಡಮಾರುತದಿಂದಾಗಿ ಆದ ಅನಾಹುತಗಳನ್ನು ವರದಿ ಮಾಡಿರುವುದನ್ನು ನಾವಿಲ್ಲಿ ನೋಡಬಹುದು ಮತ್ತಷ್ಟು ವಿಡಿಯೋಗಳನ್ನು ನೀವಿಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು ಇದರಿಂದ ಸಾಭೀತಾಗಿರುವುದೇನೆಂದರೆ, ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಡಿಸಂಬರ್ 2016ರ ವಿಡಿಯೋವನ್ನು ಇತ್ತೀಚಿಗೆ ಚೆನ್ನೈನಲ್ಲಿ ಬಂದಂತಹ ಚಂಡಮಾರುತ ಎಂಬ ಶೀರ್ಷಿಕೆಯನ್ನೀಡಿ ಹಂಚಿಕೊಳ್ಳಲಾಗುತ್ತಿದೆ.
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 5 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software