About: http://data.cimple.eu/claim-review/3ccf833a68b77469073d0b17636e259618ec705403c6438333c84b1d     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ತಾಂಜೇನಿಯಾ ರಾಜನ ಚಿತ್ರವನ್ನು ಟಿಪ್ಪು ಸುಲ್ತಾನನ ನೈಜ ಚಿತ್ರ ಎಂದು ಹಂಚಿಕೊಳ್ಳಲಾಗುತ್ತಿದೆ ತಾಂಜೇನಿಯಾ ರಾಜನ ಚಿತ್ರವನ್ನು ಟಿಪ್ಪು ಸುಲ್ತಾನನ ನೈಜ ಚಿತ್ರ ಎಂದು ಹಂಚಿಕೊಳ್ಳಲಾಗುತ್ತಿದೆ Claim :ಲಂಡನ್ ಮ್ಯೂಸಿಯಂನಲ್ಲಿ ಕಾಣಿಸಿಕೊಂಡ ಟಿಪ್ಪು ಸುಲ್ತಾನನ ನೈಜ ಚಿತ್ರ Fact :ತಾಂಜೇನಿಯಾ ರಾಜ ಸುಲ್ತಾನ್ ಸೈಯ್ಯದ್ ಹಮೀದ್ ಬಿನ್ ತುವ್ವೈನ್ನ ಚಿತ್ರವದು ದಕ್ಷಿಣ ಭಾರತದ ಮೈಸೂರು ರಾಜ್ಯದ ಮುಸಲ್ಮಾನ ದೊರೆ. ಮೈಸೂರಿನ ಹುಲಿ ಎಂದೇ ಖ್ಯಾತಿಯಾಗಿರುವ ಟಿಪ್ಪು ಸುಲ್ತಾನ್, 1782 ರಿಂದ 1799 ರವರೆಗೆ ಮೈಸೂರು ರಾಜ್ಯವನ್ನು ಆಳಿದರು. ಟಿಪ್ಪು ರಾಕೆಟ್ ಫಿರಂಗಿಗಳ ಪ್ರವರ್ತಕ, ವಿದ್ವಾಂಸ, ಸೈನಿಕ ಮತ್ತು ಕವಿ ಕೂಡ ಆಗಿದ್ದರು. ಟಿಪ್ಪಿ ಮುಸ್ಲಿಂ ಕುಟುಂಬದಲ್ಲಿ ಜನಿಸಿದ್ದು, ಬ್ರಿಟಿಷರೊಂದಿಗೆ ಅನೇಕ ಯುದ್ಧಗಳನ್ನು ಮಾಡಿದರು. ಆರಂಭದಲ್ಲಿ ಫ್ರೆಂಚ್ ಬೆಂಬಲವನ್ನು ಪಡೆದಿದ್ದರು. ಟಿಪ್ಪು ಸುಲ್ತಾನ್ ತನ್ನ ದೇಶದ ಸ್ವಾತಂತ್ರ್ಯವನ್ನು ಸಂರಕ್ಷಿಸಲು ದೀರ್ಘಕಾಲ ಮತ್ತು ಕಠಿಣವಾಗಿ ಹೋರಾಡಿದರು, ಅಂತಿಮವಾಗಿ ವಿಫಲರಾದರು. ಟಿಪ್ಪುವನ್ನು ಭಾರತ ಮತ್ತು ಪಾಕಿಸ್ತಾನದಲ್ಲಿ ಅನೇಕರು ಅದ್ಭುತ ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಮರ್ಥ ಶಾಂತಿಕಾಲದ ಆಡಳಿತಗಾರ ಎಂದು ನೆನಪಿಸಿಕೊಳ್ಳುತ್ತಾರೆ. ಕಳೆದೊಂದು ದಶಕದಲ್ಲಿ “ಮೈಸೂರ ಹುಲಿ” ಟಿಪ್ಪು ಸುಲ್ತಾನ್ ಕುರಿತು, ಆತನ ಇತಿಹಾಸದ ಕುರಿತು ಸಾಕಷ್ಟು ರಾಜಕೀಯ ಪ್ರೇರಿತ ಚರ್ಚೆಗಳು, ವಾದ-ವಿವಾದಗಳು ನಡೆಯುತ್ತಿವೆ. ನೈಜ ಇತಿಹಾಸವನ್ನು ಕೆದಕುವ ಭರದಲ್ಲಿ ಸುಳ್ಳುಗಳನ್ನು, ಕಟ್ಟು ಕಥೆಗಳನ್ನೂ ಬಳಸಿಕೊಂಡು ಟಿಪ್ಪು ಸುಲ್ತಾನನ ಇತಿಹಾಸದ ಮೇಲೆ ಸಾಕಷ್ಟು ದಾಳಿ ನಡೆಸಲಾಗುತ್ತಿದೆ. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಟಿಪ್ಪುವಿನ ನೈಜ ಫೋಟೋ ಎಂಬ ಶೀರ್ಷಿಕೆಯೊಂದಿಗೆ ಒಂದು ಚಿತ್ರ ಹರಿದಾಡುತ್ತಿದೆ. ʼನೋಮನ್ ಅಕ್ಬರ್ ವರಾರ್ಚ್ʼ ಎಂಬ ಖಾತೆದಾರರು ಫೋಟೋವಿನ ಕ್ಯಾಪ್ಷನ್ನಲ್ಲಿ ʼReal photo of Mysore tiger Tipu Sultan 1789 found in London museum... Legend's are not created they are born...ʼ ಎಂದು ಬರೆದಿರುವುದನ್ನು ನೋಡಬಹುದು. ಶೀರ್ಷಿಕೆಯಾಗಿ ʼREAL Photo OF Mysore Tiger Tipu Sultan 1789 Found in London Museum. Legends Are Not Created. They Are Born.ʼ ಎಂಬ ಶೀರ್ಷಿಕೆಯೊಂದಿಗೆ ಫೋಟೋವನ್ನು ಹಂಚಿಕೊಂಡಿರುವುದನ್ನು ನೋಡಬಹುದು. ಕ್ಯಾಪ್ಷನ್ನನ್ನು ಕನ್ನಡಕ್ಕೆ ಅನುವಾದಿಸಿದಾಗ ʼಲಂಡನ್ ಮ್ಯೂಸಿಯಂನಲ್ಲಿ ಲಭ್ಯವಿರುವ ಟಿಪ್ಪು ಸುಲ್ತಾನ್ ಅವರ ನೈಜ ಫೋಟೋ ಎಂದು ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆʼ ಎಂಬ ಬರೆದಿರುವುನ್ನು ನೋಡಬಹುದು ವೈರಲ್ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು ಡಿಸಂಬರ್ 16, 2024ರಂದು ʼಇಝ್ʼ ಎಂಬ ಯೂಟ್ಯೂಬ್ ಖಾತೆಯಲ್ಲಿ ʼReal photo of Mysore tiger Tipu Sultan 1789 found in London museum. Legend́s are not created they are Bornʼ ಎಂಬ ಕ್ಯಾಪ್ಷನ್ನೊಂದಿಗೆ Izzuuu #nature # Tipu Sultan # Tiger of Hindʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ʼಇಸ್ಲಾಮಿಕ್ ವರ್ಡ್ʼ ಎಂಬ ಯೂಟ್ಯೂಬ್ ಖಾತೆಯಲ್ಲಿ #Tipu sultan #real photo Tipu Sultanʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ ಮತ್ತಷ್ಟು ವೈರಲ್ ಆದ ಚಿತ್ರಗಳು ಮತ್ತು ವಿಡಿಯೋವನ್ನು ನೀವಿಲ್ಲಿ ನೋಡಬಹುದು ಫ್ಯಾಕ್ಟ್ಚೆಕ್ ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್ ಆದ ಚಿತ್ರ ತಾಂಜೇನಿಯದ ದೊರೆ ಸುಲ್ತಾನ್ ಸೈಯ್ಯದ್ ಹಮೀದ್ ಬಿನ್ ತುವ್ವೈನ್ ಫೋಟೋ ಟಿಪ್ಪು ಸುಲ್ತಾನದಲ್ಲ. ನಾನು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ಗೂಗಲ್ ರಿವರ್ಸ್ ಇಮೇಜ್ ಸರ್ಚ್ನಲ್ಲಿ ವೈರಲ್ ಆದ ಚಿತ್ರವಿನ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ʼಗೆಟ್ಟಿ ಇಮೇಜ್ʼ ವೆಬ್ಸೈಟ್ನಲ್ಲಿ Sultan Seyyid Hamed bin Thuwain in Zanzibar (reign in 1893-1896), Tanzania. sultan Seyyid Hamed bin Thuwain in Zanzibar (reign in 1893-1896) ಎಂಬ ಶೀರ್ಷಿಕೆಯನ್ನೀಡಿ ಫೋಟೋವನ್ನು ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼತಾಂಜೇನಿಯದ ಜಂಜಿಬಾರ್ನ ದೊರೆ ʼಸುಲ್ತಾನ್ ಸೈಯ್ಯದ್ ಹಮೀದ್ ಬಿನ್ ತುವ್ವೈನ್ʼ 1893- 1896) ಎಂದು ಬರೆದಿರುವುದನ್ನು ನಾವು ಕಾಣಬಹುದು. ಮತ್ತಷ್ಟು ಸತ್ಯಾಂಶವನ್ನು ತಿಳಿಯಲು ನಾವು ಕೆಲವು ಪ್ರಮುಖ ಕೀವರ್ಡ್ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಓಮನ್ ಮತ್ತು ಜಂಜಿಬಾರ್ ವರ್ಚುವಲ್ ಮ್ಯೂಸಿಯಂ ವೆಬ್ಸೈಟ್ನಲ್ಲಿ ವೈರಲ್ ಆದ ಫೋಟೋವನ್ನು ನಾವು ಕಂಡುಕೊಂಡೆವು. ಈ ವರದಿಯ ಪ್ರಕಾರ ಚಿತ್ರದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ಸುಲ್ತಾನ್ ಸೈಯ್ಯದ್ ಹಮೀದ್ ಬಿನ್ ತುವ್ವೈನ್ ಅಲ್-ಬುಸೈದ್ ಎಂದು ಈ ವೆಬ್ಸೈಟ್ ದೃಢಪಡಿಸಿವೆ. ʼಅಲಾಮಿʼ ವರದಿಯ ಪ್ರಕಾರ ವೈರಲ್ ಆದ ಚಿತ್ರದಲ್ಲಿ ಕಾಣುವ ವ್ಯಕ್ತಿ ಜಂಜಿಬಾರ್ ಅನ್ನು ಆಳಿದ ದೊರೆ ʼಸಯ್ಯದ್ ಹಮದ್ ಬಿನ್ ಥುವಾಯಿನಿ ಅಲ್-ಬುಸೈದ್ʼ. ಜಂಜಿಬಾರ್ನ ಐದನೇ ಸುಲ್ತಾನ. ಈತ ಹುಟ್ಟಿದ್ದು ಮಾರ್ಚ್ 5, 1893, ಮರಣ ಹೊಂದಿದ್ದು ಆಗಸ್ಟ್ 25, 1896. ಅಂದರೆ, ಸಾಯುವವರೆಗೂ ಜಾಂಜಿಬಾರ್ನ್ನು ಆಳಿದರು. 'ನ್ಯಾಷನಲ್ ಜಿಯೋಗ್ರಾಫಿ' ವರದಿಯ ಪ್ರಕಾರ 1826ರಲ್ಲಿ ಫ್ರೆಂಚ್ ವಿಜ್ಞಾನಿ ʼಜೋಸೆಫ್ ನೈಸೆಫೋರ್ ನಿಪ್ಸೆʼ ತಮ್ಮ ಕುಟುಂಬದ ಹಳ್ಳಿಗಾಡಿನ ಮನೆಯಲ್ಲಿ ಲೆ ಗ್ರಾಸ್ನಲ್ಲಿರುವ ಕಿಟಕಿಯಿಂದ ಮೊಟ್ಟ ಮೊದಲ ಛಾಯಾಚಿತ್ರವನ್ನು ಕ್ಯಾಮೆರಾ ಅಬ್ಸ್ಕ್ಯೂರಾವನ್ನು ಉಪಯೋಗಿಸಿಕೊಂಡು ತೆಗೆದಿದ್ದಾರೆ. ಟಿಪ್ಪು ಸುಲ್ತಾನನ 1799ರಲ್ಲಿ ಮರಣ ಹೊಂದಿದ್ದಾರೆ. ಮೊಟ್ಟು ಮೊದಲ ಛಾಯಾಚಿತ್ರ 1826ರಲ್ಲಿ ತೆಗೆದಿರುವುದನ್ನು ನಾವಿಲ್ಲಿ ನೋಡಬಹುದು. ಅಂದರೆ, ಟಿಪ್ಪು ಸಾಯುವ ಮುನ್ನ ಯಾವುದೇ ಛಾಯಾಚಿತ್ರವನ್ನು ತೆಗೆದಿಲ್ಲವೆಂಬುದು ಸಾಭೀತಾಗಿದೆ. ವಾಸ್ತವಾಗಿ ನೋಡುವುದಾದರೆ, ಟಿಪ್ಪು ಸುಲ್ತಾನ ಬದುಕಿದ್ದ ಅವಧಿಯಲ್ಲಿ ಇನ್ನು ಕ್ಯಾಮರಾ ಅವಿಷ್ಕಾರಗೊಂಡಿರಲಿಲ್ಲ. ಎರಡನೇಯದು ವಿಶ್ವದ ಮೊದಲ ಛಾಯಾಚಿತ್ರವನ್ನು ಫ್ರೆಂಚ್ ವಿಜ್ಞಾನಿ ʼಜೋಸೆಫ್ ನೈಸೆಫೋರ್ ನಿಪ್ಸೆʼ 1826ರಲ್ಲಿ ತೆಗೆದಿದ್ದು. ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಚಿತ್ರ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್ ಆದ ಚಿತ್ರ ಟಿಪ್ಪು ಸುಲ್ತಾನದಲ್ಲ ತಾಂಜೇನಿಯದ ದೊರೆ ಸುಲ್ತಾನ್ ಸೈಯ್ಯದ್ ಹಮೀದ್ ಬಿನ್ ತುವ್ವೈನ್ ಫೋಟೋ. ఇప్పుడు Desh Telugu Keyboard యాప్ సహాయంతో మీ ప్రియమైన వారికి తెలుగులో సులభంగా మెసేజ్ చెయ్యండి. Desh Telugu Keyboard and Download The App Now
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 5 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software