schema:text
| - ಫ್ಯಾಕ್ಟ್ಚೆಕ್: ಜಾನಪದ ಕಲಾವಿದ ದರ್ಶನಂ ಮೊಗಿಲಯ್ಯರವರು ವಿಧಿವಶರಾಗಿದ್ದಾರೆ ಎಂದು ಸುಳ್ಳು ಸುದ್ದಿ ಹಂಚಿಕೆ
ಜಾನಪದ ಕಲಾವಿದ ದರ್ಶನಂ ಮೊಗಿಲಯ್ಯರವರು ವಿಧಿವಶರಾಗಿದ್ದಾರೆ ಎಂದು ಸುಳ್ಳು ಸುದ್ದಿ ಹಂಚಿಕೆ
Claim :ಪದ್ಮಶ್ರೀ ಪುರಸ್ಕೃತ ಜಾನಪದ ಕಲಾವಿದ ಮೊಗಿಲಯ್ಯ ವಿಧಿವಶ
Fact :ಪಾಸ್ತಮ್ ಮೊಗಿಲಯ್ಯ ಅವರ ನಿಧನವನ್ನು, ಕಿನ್ನೇರ ದರ್ಶನಂ ಮೊಗಿಲಯ್ಯ ನಿಧನರಾಗಿದ್ದಾರೆ ಎಂದು ಹಂಚಿಕೊಳ್ಳುತ್ತಿದ್ದಾರೆ
ಪದ್ಮಶ್ರೀ ಪುರಸ್ಕೃತರಾದ ದರ್ಶನಂ ಮೊಗಿಲಯ್ಯ ಅವರು ಅಪರೂಪದ ಸಂಗೀತ ವಾದ್ಯ 'ಕಿನ್ನೆರ'ಕ್ಕೆ ಮರುಜೀವ ಕೊಟ್ಟವರು. ಕಿನ್ನೆರಗೆ ರಾಷ್ಟ್ರೀಯ ಸ್ಥಾನಮಾನ ಸಿಗುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಪದ್ಮಶ್ರೀ ಪುರಸ್ಕೃತರಾದ ಕಿನ್ನರ ಮೊಗಿಲಯ್ಯ ಎಂದೇ ಖ್ಯಾತರಾದ ದರ್ಶನಂ ಮೊಗಿಲಯ್ಯ ಅವರು ಬುಡಕಟ್ಟು ಸಂಗೀತ ವಾದ್ಯಗಾರರಲ್ಲಿ ಒಬ್ಬರು. ಜನಪದ ಕಲಾವಿದ, ಗಾಯಕ 2022 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು. ಹಾಸ್ಯನಟ ಮತ್ತು ನಿರ್ದೇಶಕ ವೇಣು ಯೆಲ್ದಂಡಿ ಅವರ ನಿರ್ದೇಶನದಲ್ಲಿ ದಿಲ್ ರಾಜು ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಬಲಗಂ ಚಿತ್ರದಲ್ಲಿ ಮೊಗಿಲಯ್ಯ ದಂಪತಿ ನಟಿಸಿದ್ದಾರೆ. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ದರ್ಶನಂ ಮೊಗಿಲಯ್ಯರವರಿಗೆ ಸಂಬಂಧಿಸಿದ ಸುದ್ದಿಯೊಂದು ಹರಿದಾಡುತ್ತಿದೆ.
ʼಕನ್ನಡ ಆಂದೋಳನʼ ವೆಬ್ಸೈಟ್ನಲ್ಲಿ ʼಪದ್ಮಶ್ರೀ ಪುರಸ್ಕೃತ ಜಾನಪದ ಕಲಾವಿದ ಮೊಗಿಲಯ್ಯ ವಿಧಿವಶʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿದ್ದಾರೆ. ವರದಿಯಲ್ಲಿ ʼಟಾಲಿವುಡ್ ಚಲನಚಿತ್ರ ಒಲಗಂ ಮೂಲಕ ಪ್ರಖ್ಯಾತಿ ಗಳಿಸಿದ್ದ ಜಾನಪದ ಕಲಾವಿದ ದರ್ಶನಂ ಮೊಗಿಲಯ್ಯರವರು ಒಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ. ಮೊಗಿಲಯ್ಯ ವರಂಗಲ್ನ ಖಾಸಗಿ ಆಸ್ಪತ್ರೆಯಲ್ಲಿ ಮೂತ್ರಪಿಂಡದ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ವಿಧಿವಶರಾಗಿದ್ದಾರೆʼ ಎಂದು ವರದಿ ಮಾಡಿದ್ದಾರೆ. ವೈರಲ್ ಆದ ಸುದ್ದಿಯ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು.
ನ್ಯೂಸ್ 18 ವೆಬ್ಸೈಟ್ನಲ್ಲಿ ʼPadma Shri Folk Artist Darshanam Mogilaiah Passes Away After Prolonged Illnessʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನಾವಿಲ್ಲಿ ನೋಡಬಹುದು. ವರದಿಯಲ್ಲಿ ಪದ್ಮಶ್ರೀ ಪುರಸ್ಕೃತ ಹಾಗೂ ಖ್ಯಾತ ವಾದ್ಯ ವಾದಕ ದರ್ಶನಂ ಮೊಗಿಲಯ್ಯ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಅವರು ವರಂಗಲ್ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರು ಮೂತ್ರಪಿಂಡದ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ದುರದೃಷ್ಟವಶಾತ್ ತಮ್ಮ 73ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಮೊಗಿಲಯ್ಯ ಅವರು 'ಕಿನ್ನೆರ' ಎಂಬ ತಂತಿಯ ಬುಡಕಟ್ಟು ಸಂಗೀತ ವಾದ್ಯದ ಕೊನೆಯ ಕೆಲವು ವಾದಕರಲ್ಲಿ ಒಬ್ಬರು. ಅವರ ಕೌಶಲ್ಯದ ಕಾರಣದಿಂದಾಗಿ, ಅವರನ್ನು ಕಿನ್ನೇರ ಮೊಗಿಲಯ್ಯ ಎಂದೂ ಕರೆಯುತ್ತಾರೆ. ಸಾಂಪ್ರದಾಯಿಕ ಜಾನಪದ ಸಂಗೀತಕ್ಕೆ ಅವರ ಮಹತ್ವದ ಕೊಡುಗೆಗಳಿಗೆ ಹೆಸರುವಾಸಿಯಾದ ಅವರಿಗೆ 2022 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು. ಈ ಪ್ರಶಸ್ತಿಯು ಬುಡಕಟ್ಟು ಕಿನ್ನೇರ ವಾದಕರಾಗಿ ಮತ್ತು ನಾಗರಕರ್ನೂಲ್ನ ಜಾನಪದ ಗಾಯಕರಾಗಿ ಕಳೆದ ಬಾರಿ ವಾದ್ಯದಲ್ಲಿ 12 ಹೆಜ್ಜೆಗಳನ್ನು ಕರಗತ ಮಾಡಿಕೊಂಡಿರುವ ಅವರ ಸೇವೆಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗಿತು. ದರ್ಶನಂ ಮೊಗಿಲಯ್ಯ ಅವರು ಜಾನಪದ ಕಲಾವಿದೆಯೂ ಆದ ಪತ್ನಿ ಕೊಮುರಮ್ಮ, ಓರ್ವ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಅವರ ಎರಡೂ ಮೂತ್ರಪಿಂಡಗಳು ಹಾನಿಗೊಳಗಾದ ನಂತರ ಅವರು ಗಂಭೀರ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಎಂದು ವರದಿಯಾಗಿದೆ. ಬಳಗಂ ನಿರ್ಮಾಪಕ ದಿಲ್ ರಾಜು ಮತ್ತು ನಿರ್ದೇಶಕ ಯೆಲ್ದಂಡಿ ವೇಣು ಅವರಿಗೆ ಆರ್ಥಿಕ ಸಹಾಯ ಮಾಡಿದ್ದರುʼ ಎಂದು ವರದಿಯಾಗಿರುವುದನ್ನು ನಾವಿಲ್ಲಿ ನೋಡಬಹುದು.
ʼಪಿಂಕ್ವಿಲ್ಲʼ ವೆಬ್ಸೈಟ್ನಲ್ಲಿ ʼPadma Shri recipient Darshanam Mogilaiah; last remaining player of string instrument Kinnera, passes away at 73ʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನಾವು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದೆವು ʼಪದ್ಮಶ್ರೀ ಪುರಸ್ಕೃತ ದರ್ಶನಂ ಮೊಗಿಲಯ್ಯ; ಸ್ಟ್ರಿಂಗ್ ಇನ್ಸ್ಟ್ರುಮೆಂಟ್ ಕಿನ್ನೇರ ತಮ್ಮ 73ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆʼ ಎಂದಿತ್ತು ಹಾಗೆ ವೆಬ್ಸೈಟ್ನ ವರದಿಯಲ್ಲಿ ʼಪದ್ಮಶ್ರೀ ಪುರಸ್ಕೃತರು ಮತ್ತು ಖ್ಯಾತ ವಾದ್ಯ ವಾದಕರಾದ ದರ್ಶನಂ ಮೊಗಿಲಯ್ಯ ಮೂತ್ರಪಿಂಡದ ಕಾಯಿಲೆಯಿಂದ ಹೋರಾಡುತ್ತಿದ್ದ ಅವರು ಡಿಸೆಂಬರ್ 19, 2024 ರಂದು ವರಂಗಲ್ನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆʼ ಎಂದು ವರದಿ ಮಾಡಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ, ಮನಿ ಕಂಟ್ರೋಲ್, ಫ್ರೀ ಪ್ರೆಸ್ಜರ್ನಲ್ ವೆಬ್ಸೈಟ್ಗಳಲ್ಲಿ ಬಂದಿರುವಂತಹ ವರದಿಗಳನ್ನು ನೋಡಬಹುದು.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವಾಗಿ ಪಾಸ್ತಮ್ ಮೊಗಿಲಯ್ಯ ಅವರ ನಿಧನವನ್ನು, ಕಿನ್ನೇರ ದರ್ಶನಂ ಮೊಗಿಲಯ್ಯ ನಿಧನರಾಗಿದ್ದಾರೆ ಎಂಬ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ಕೆಲವು ಕೀವರ್ಡ್ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಡಿಸಂಬರ್ 18, 2024ರಂದು ನಿಧನರಾದ ವರದಿಗಳಲ್ಲಿ ʼಬಲಗಂ ಮೊಗಿಲಯ್ಯʼ ಎಂದು ಖ್ಯಾತಿಯಾಗಿದ್ದ ಪಾಸ್ತಮ್ ಮೊಗಿಲಯ್ಯ ಎಂದು ತಿಳಿದುಬಂದಿತು.
ʼತೆಲಂಗಾಣ ಸಿಎಂಒʼನ ಅಧಿಕೃತ ಎಕ್ಸ್ ಖಾತೆಯಲ್ಲಿ ಪಾಸ್ತಮ್ ಮೊಗಿಲಯ್ಯರವರ ಚಿತ್ರವನ್ನು ಹಂಚಿಕೊಂಡು ʼతెలంగాణ జానపద కళాకారుడు పస్తం మొగిలయ్య గారి మృతి పట్ల ముఖ్యమంత్రి ఎ.రేవంత్ రెడ్డి గారు తీవ్ర సంతాపం వ్యక్తం చేశారు. బేడ బుడగ జంగాల జానపద కళారూపం 'శారద కథల'కు బహుళ ప్రాచుర్యం కల్పించి, ఆ కళకే గొప్ప బలగంగా నిలిచిన మొగిలయ్య గారి మరణం బడుగుల సంగీత సాహిత్య రంగానికి తీరని లోటు అని ముఖ్యమంత్రి గారు పేర్కొన్నారు. వరంగల్ జిల్లా దుగ్గొండి మండల కేంద్రానికి చెందిన పస్తం మొగిలయ్య గారు శారద తంబుర మీటుతూ, పక్కనే బుర్ర (డక్కీ) వాయిస్తూ వారి సతీమణి కొమురమ్మ గారు పలు చోట్ల ఇచ్చిన అనేక ప్రదర్శనలు వెలకట్టలేనివని, తెలంగాణ ఆత్మను ఒడిసిపట్టిన "బలగం" సినిమా చివర్లో వచ్చే మొగిలయ్య గారి పాట ప్రజల హృదయాల్లో చిరస్థాయిగా నిలిచిపోయిందని గుర్తుచేశారు. ఈ బాధాకర సమయంలో పస్తం మొగిలయ్య గారి సతీమణి కొమురమ్మ గారితో పాటు వారి కుటుంబ సభ్యులకు ముఖ్యమంత్రి గారు ప్రగాఢ సానుభూతి తెలిపారు. #BalagamMogilaiahʼ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿರುವುದನ್ನು ನಾವಿಲ್ಲಿ ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼ ತೆಲಂಗಾಣ ಜಾನಪದ ಕಲಾವಿದ ಪಾಸ್ತಮ್ ಮೊಗಿಲಿಯಾ ಅವರ ನಿಧನಕ್ಕೆ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಬೇಡ ಬುಡಗ ಜಂಗಲ ಜಾನಪದ ಕಲಾ ಪ್ರಕಾರವಾದ ‘ಶಾರದ ಕಥೆ’ಯನ್ನು ಜನಪ್ರಿಯಗೊಳಿಸಿ, ಆ ಕಲೆಯಲ್ಲಿ ದೊಡ್ಡ ಶಕ್ತಿಯಾಗಿದ್ದ ಮೊಗಿಲಯ್ಯನವರ ನಿಧನ ಬಡಗು ಸಂಗೀತ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ವರಂಗಲ್ ಜಿಲ್ಲೆಯ ದುಗ್ಗೊಂದಿ ಮಂಡಲ ಕೇಂದ್ರದ ಪಸ್ತಂ ಮೊಗಿಲಯ್ಯ ಶಾರದ ತಂಬೂರ ನುಡಿಸುತ್ತಾ, ಅವರ ಪತ್ನಿ ಕೊಮುರಮ್ಮ ಅವರ ಪಕ್ಕದಲ್ಲಿ ಬುರ್ರಾ ನುಡಿಸುತ್ತಾ ಹಲವೆಡೆ ನೀಡಿದ ಹಲವು ಪ್ರದರ್ಶನಗಳು ಬೆಲೆಕಟ್ಟಲಾಗದು ಎಂಬುದನ್ನು ನೆನಪಿಸಿ, ಬಳಗಂ ಚಿತ್ರದ ಕೊನೆಯಲ್ಲಿ ಮೊಗಿಲಯ್ಯನವರ ಹಾಡು ಸೆರೆಯಾಗಿದೆ. ತೆಲಂಗಾಣದ ಚೇತನ ಜನರ ಹೃದಯದಲ್ಲಿ ಶಾಶ್ವತವಾಗಿ ಉಳಿದಿದೆ. ಈ ದುಃಖದ ಸಮಯದಲ್ಲಿ ಪಸ್ತಮ್ಮ ಮೊಗಿಲಯ್ಯ ಅವರ ಪತ್ನಿ ಕೊಮುರಮ್ಮ ಮತ್ತು ಅವರ ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿಗಳು ತಮ್ಮ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದರು. #ಬಳಗಂ ಮೊಗಿಲಯ್ಯʼ ಎಂದು ಟ್ವಿಟ್ ಮಾಡಿರುವುದನ್ನು ನೋಡಬಹುದು.
ಬಿಆರ್ಎಸ್ ಕಾರ್ಯಧ್ಯಕ್ಷರಾದ ಕೆಟಿ ರಾಮಾರಾವ್ರವರೂ ಸಹ ಪಾಸ್ತಮ್ ಮೊಗಿಲಯ್ಯರವರ ನಿಧನಕ್ಕೆ ಸಂತಾಪವನ್ನು ವ್ಯಕ್ತಪಡಿಸಿದ್ದರು.
ಇನ್ನು ಕೆಲವು ಮಾಧ್ಯಮ ವೆಬ್ಸೈಟ್ಗಳಾದ ಸಾಕ್ಷಿ, ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್, ಟೈಮ್ಸ್ ನೌ, ಸಿಯಾಸತ್ ವೆಬ್ಸೈಟ್ನಲ್ಲಿ ಮೊಗಿಲಯ್ಯರವರ ಸಾವಿನ ಬಗ್ಗೆ ವರದಿಯಾಗಿರುವುದನ್ನು ನೋಡಬಹುದು.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವಾಗಿ ಪಾಸ್ತಮ್ ಮೊಗಿಲಯ್ಯ ಅವರ ನಿಧನವನ್ನು, ಕಿನ್ನೇರ ದರ್ಶನಂ ಮೊಗಿಲಯ್ಯ ನಿಧನರಾಗಿದ್ದಾರೆ ಎಂಬ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
|