About: http://data.cimple.eu/claim-review/4056989543104ff9efcc33e1c0fc3c38ad68795e07648741d5bac5eb     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check Contact Us: checkthis@newschecker.in Fact checks doneFOLLOW US Fact Check Claim ಈರುಳ್ಳಿ ರಸ ಮತ್ತು ಜೇನುತುಪ್ಪ ಮಿಶ್ರ ಮಾಡಿ ತಿಂದರೆ ಮೂಲವ್ಯಾಧಿ ಗುಣವಾಗುತ್ತದೆ Fact ಈರುಳ್ಳಿ ರಸ ಮತ್ತು ಜೇನುತುಪ್ಪ ಮಿಶ್ರ ಮಾಡಿ ತಿಂದರೆ ಮೂಲವ್ಯಾಧಿ ಗುಣವಾಗುತ್ತದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ ಈರುಳ್ಳಿ ರಸ ಮತ್ತು ಜೇನುತುಪ್ಪದೊಂದಿಗೆ ಮಿಶ್ರ ಮಾಡಿ ತಿಂದರೆ ಪೈಲ್ಸ್ ಗುಣವಾಗುತ್ತದೆ ಎಂಬ ಕ್ಲೇಮ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಫೇಸ್ಬುಕ್ನಲ್ಲಿ ಕಂಡುಬಂದ ಈ ಕ್ಲೇಮ್ ನಲ್ಲಿ, ಈರುಳ್ಳಿ ರಸದೊಂದಿಗೆ ಜೇನುತುಪ್ಪ ಮಿಕ್ಸ್ ಮಾಡಿ ದಿನಕ್ಕೆ 2 ಚಮಚ ತಿನ್ನಿ, ಮೂಲವ್ಯಾಧಿ (ಪೈಲ್ಸ್) ಮಾಯವಾಗುತ್ತದೆ” ಎಂದಿದೆ. Also Read: ಮೊಳಕೆ ಕಾಳುಗಳನ್ನು ತಿನ್ನುವುದರಿಂದ ದೇಹಕ್ಕೆ ಇಡೀ ದಿನ ಶಕ್ತಿ ಸಿಗುತ್ತದೆ ಎಂಬುದು ನಿಜವೇ? ಈ ಕ್ಲೇಮ್ ಬಗ್ಗೆ ನಾವು ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಎಂದು ಕಂಡುಬಂದಿದೆ. ಹೆಮೊರೊಯಿಡ್ಸ್ ಅನ್ನು ಸಾಮಾನ್ಯವಾಗಿ ಪೈಲ್ಸ್ ಅಥವಾ ಮೂಲವ್ಯಾಧಿ ಎಂದು ಹೇಳಲಾಗುತ್ತದೆ. ಗುದದ್ವಾರ ಮತ್ತು ಗುದನಾಳದಲ್ಲಿ ಊದಿಕೊಂಡ ರಕ್ತನಾಳದ ಸ್ಥಿತಿಯಿಂದ ಇದನ್ನು ಗುರುತಿಸಬಹುದು. ಇದು ಹತ್ತಿರದ ಅಂಗಾಶಗಳಲ್ಲಿ ಉರಿಯೂತಕ್ಕೆ ಕಾರಣವಾಗಿ ದೊಡ್ಡ ಇನ್ನಷ್ಟು ಪ್ರದೇಶದ ಮೇಲೆ ಪರಿಣಾಮ ಬೀರಲು ಕಾರಣವಾಗುತ್ತದೆ. ಗುದದಲ್ಲಿ ತುರಿಕೆ, ಗುದ ನೋವು, ಗುದದ್ವಾರದ ಬಳಿ ಉಂಡೆಗಳ ರೀತಿ ಸಂರಚನೆ, ಗುದನಾಳದಿಂದ ರಕ್ತಸ್ರಾವ ಅಥವಾ ಗುದದ್ವಾರದ ಮೂಲಕ ನಿರಂತರ ಭೇದಿ ಮೂಲವ್ಯಾಧಿಯ ರೋಗಲಕ್ಷಣಗಳಾಗಿವೆ. ಗುದನಾಳದಲ್ಲಿ ಹೆಚ್ಚಿನ ಒತ್ತಡದಿಂದಾಗಿ ಮೂಲವ್ಯಾಧಿ ಆಗುತ್ತದೆ. ತೀವ್ರ ಒತ್ತಡ ಗುದದ್ವಾರ ಮತ್ತು ಗುದನಾಳದ ಬಳಿ ರಕ್ತನಾಳಗಳನ್ನು ವಿಸ್ತರಿಸುವುದರಿಂದ ಮೂಲವ್ಯಾಧಿ ಆಗುತ್ತದೆ. ದೀರ್ಘಕಾಲದ ಮಲಬದ್ಧತೆ, ಹೆಚ್ಚಿನ ಭಾರ ಎತ್ತುವುದು, ದೀರ್ಘ ಕಾಲದ ಅತಿಸಾರ, ಮಲ ವಿಸರ್ಜನೆ ವೇಳೆ ಒತ್ತಡ ಕೊಡುವುದು ಮುಂತಾದ ಪರಿಸ್ಥಿತಿಗಳು ಮೂಲವ್ಯಾಧಿಗೆ ಕಾರಣವಾಗುವ ಅಂಶಗಳು. ಇದಲ್ಲದೆ ಗರ್ಭಾವಸ್ಥೆ, ವಯಸ್ಸು, ತೂಕ ಮತ್ತು ಆಹಾರ ಪದ್ಧತಿ ಗಳೂ ಮೂಲವ್ಯಾಧಿಗೆ ಕಾರಣವಾಗಬಹುದು. ಸಾಮಾನ್ಯವಾಗಿ ವೈದ್ಯರು ಮೂಲವ್ಯಾಧಿ ಗುಣಪಡಿಸಲು ಆಹಾರದಲ್ಲಿ ಬದಲಾವಣೆಗಳನ್ನು ಹೇಳುತ್ತಾರೆ. ಹೆಚ್ಚು ನಾರಿನಂಶ ಇರುವ ಆಹಾರವನ್ನು ಸೇವಿಸುವುದರಿಂದ ಮಲ ಮೃದುವಾಗುತ್ತದೆ ಮತ್ತು ಸುಲಭವಾಗಿ ಹೊರಹೋಗುತ್ತದೆ. ಅಲ್ಲದೆ, ಕುಡಿಯುವ ನೀರು ಮತ್ತು ದ್ರವಗಳು ಮಲ ವಿಸರ್ಜನೆ ಸರಾಗವಾಗಿ ಆಗಲು ಕಾರಣವಾಗುತ್ತದೆ. ಮೂಲವ್ಯಾಧಿ ಇರುವವರು, ದೇಹದ ತೂಕ, ಆರೋಗ್ಯ ಸ್ಥಿತಿ, ಚಟುವಟಿಕೆ, ಭೌಗೋಳಿಕತೆಯ ಆಧಾರದಲ್ಲಿ ಪ್ರತಿದಿನ ಎಷ್ಟು ನಾರಿನಂಶ ಮತ್ತು ನೀರು ಬೇಕು ಎಂಬುದನ್ನು ವೈದ್ಯರ ಬಳಿ ಕೇಳುವುದು ಅಗತ್ಯ. Also Read: ದಿನವೂ ಈರುಳ್ಳಿ ತಿನ್ನೋದ್ರಿಂದ ವೀರ್ಯದ ಗುಣಮಟ್ಟ ಹೆಚ್ಚುತ್ತದೆಯೇ, ಸತ್ಯ ಏನು? ಮೂಲವ್ಯಾಧಿಯನ್ನು ಗುಣಪಡಿಸುವಲ್ಲಿ ಆಹಾರದ ಪಾತ್ರವನ್ನು ವಿವರಿಸಲು ನಾವು ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ ಶರದ್ ಮಲ್ಹೋತ್ರಾ ಅವರನ್ನು ಸಂಪರ್ಕಿಸಿದ್ದೇವೆ. ಈ ವೇಳೆ ಅವರು, “ಪಥ್ಯವು ಮೂಲವ್ಯಾಧಿಯನ್ನು ಗುಣಪಡಿಸದೇ ಇರಬಹುದು. ಆದರೆ ರೋಗ ಲಕ್ಷಣದಿಂದ ಒಂದಿಷ್ಟು ಸುಧಾರಣೆಗೆ ಸಹಾಯ ಮಾಡುತ್ತದೆ. ಮಲಬದ್ಧತೆಯನ್ನು ತಪ್ಪಿಸಲು ಧಾನ್ಯಗಳು, ದ್ವಿದಳ ಧಾನ್ಯಗಳು, ಸಿಪ್ಪೆಯಿರುವ ಹಣ್ಣುಗಳು, ನಾರಿನಂಶದ ಆಹಾರ ಒಳಗೊಂಡಿರಬೇಕು. ಸಂಸ್ಕರಿಸಿದ ಆಹಾರ, ಕೊಬ್ಬು, ಕಾರ್ಬೋಹೈಡ್ರೇಟ್ ಇತ್ಯಾದಿಗಳು ಇರುವ ಆಹಾರವನ್ನು ತಪ್ಪಿಸಬೇಕು. ಏಕೆಂದರೆ ಅವುಗಳು ಕರುಳಿನ ಚಲನಶೀಲತೆಯನ್ನು ಕಡಿಮೆ ಮಾಡುತ್ತದೆ ಮತ್ತು ಮಲಬದ್ಧತೆಯನ್ನು ಉಲ್ಬಣಗೊಳಿಸುತ್ತದೆ. ಮೂಲವ್ಯಾಧಿ ಚಿಕಿತ್ಸೆಯಲ್ಲಿ ನಾರಿನಂಶ ಇರುವ ಆಹಾರ, ಮಲವನ್ನು ಮೆದುಗೊಳಿಸುವುದು, ಮಲಬದ್ಧತೆಗೆ ಕಾರಣವಾಗುವ ಆಹಾರ ತಪ್ಪಿಸುವುದು, ಇತರ ಔಷಧ, ಗುದನಾಳಗಳಲ್ಲಿನ ಒತ್ತಡವನ್ನು ಕಡಿಮೆ ಮಾಡುವ ಔಷಧಗಳು, ಎಂಡೋಸ್ಕೋಪಿ ಗೈಡೆಡ್ ಇಂಜೆಕ್ಷನ್ ಥೆರಪಿ ಅಥವಾ ಬ್ಯಾಂಡಿಂಗ್ ಮತ್ತು ಶಸ್ತ್ರಚಿಕಿತ್ಸೆ ಸೇರಿವೆ ಎಂದು ಡಾ. ಮಲ್ಹೋತ್ರಾ ತಿಳಿಸಿದ್ದಾರೆ. ಈರುಳ್ಳಿ ರಸ ಮತ್ತು ಜೇನುತುಪ್ಪವು ಪೈಲ್ಸ್ ಅನ್ನು ಗುಣಪಡಿಸುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಲಭ್ಯವಿರುವ ಪುರಾವೆಗಳು ಈರುಳ್ಳಿ ತಿನ್ನುವುದು ಮತ್ತು ಜೇನುತುಪ್ಪ ಕರುಳಿನ ಆರೋಗ್ಯಕ್ಕೆ ಒಳ್ಳೆಯದು ಎಂದು ತೋರಿಸುತ್ತವೆ. ಆದಾಗ್ಯೂ, ಲಭ್ಯವಿರುವ ಪುರಾವೆಗಳು ಜೇನುತುಪ್ಪ, ಈರುಳ್ಳಿ ರಸ ಮಿಶ್ರಣವನ್ನು ತಿನ್ನುವುದು ಮೂಲವ್ಯಾಧಿ ಗುಣಪಡಿಸುತ್ತದೆ ಎಂಬುದನ್ನು ಖಚಿತಪಡಿಸುವುದಿಲ್ಲ. ಇದರೊಂದಿಗೆ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಈ ಪದಾರ್ಥಗಳನ್ನು ಎಷ್ಟು ಅನುಪಾತದಲ್ಲಿ ಸೇವಿಸಬೇಕು ಎನ್ನುವುದಕ್ಕೆ ಯಾವುದೇ ಮಾಹಿತಿ ಇರುವುದಿಲ್ಲ. ಆಹಾರ ತಜ್ಞರಾದ ಕಾಮ್ನಾ ಟ್ಯಾಂಕ್ ಹೇಳುತ್ತಾರೆ “ಪಥ್ಯದಿಂದ ಮೂಲವ್ಯಾಧಿಯನ್ನು ಗುಣಪಡಿಸಲು ಸಾಧ್ಯವಿಲ್ಲ. ಆದರೆ ರೋಗಲಕ್ಷಣ ಕಡಿಮೆ ಮಾಡುತ್ತದೆ. ನಾರಿನಂಶವಿರುವ ಆಹಾರವನ್ನು ಸೇವಿಸುವುದರಿಂದ ಮಲವನ್ನು ಮೃದುವಾಗಿ ಮತ್ತು ಸುಲಭವಾಗಿ ಹೊರಹಾಕಲು ಸಾಧ್ಯವಾಗುತ್ತದೆ. ಇದು ಮೂಲವ್ಯಾಧಿ ಕಡಿಮೆ ನೋಯುವಂತೆ ಮಾಡಬಹುದು. ನೀರು ಮತ್ತು ಆಹಾರದಲ್ಲಿ ನಾರಿನಂಶ ಮೂಲವ್ಯಾಧಿಗೆ ಉತ್ತಮ” ಎಂದಿದ್ದಾರೆ. ಮನೆಮದ್ದುಗಳ ಮೂಲಕ ಮೂ ಅನ್ನು ಗುಣಪಡಿಸಲು ಪ್ರಯತ್ನಿಸುವ ಮತ್ತು ವೈದ್ಯಕೀಯ ಸಲಹೆಯನ್ನು ಪಡೆಯದಿರುವ ಅಪಾಯಗಳೇನು? ತುಲನಾತ್ಮಕವಾಗಿ ನೋಡುವುದಾದರೆ ಮೂಲವ್ಯಾಧಿ ವಯಸ್ಕರಲ್ಲಿ ಬರುವ ಸಾಮಾನ್ಯ ಕಾಯಿಲೆಯಾಗಿದೆ ಮತ್ತು ಹೆಚ್ಚಿನ ಸಮಯದಲ್ಲಿ ದೊಡ್ಡ ಸಮಸ್ಯೆಗೆ ಕಾರಣವಾಗುವುದಿಲ್ಲ. ಕೆಲವೊಮ್ಮೆ ಅವು ಸಿಡಿಯಬಹುದು ಅಥವಾ ರಕ್ತಸ್ರಾವಕ್ಕೆ ಕಾರಣವಾಗಬಹುದು. ಅಂತಹ ಸಂದರ್ಭಗಳಲ್ಲಿ, ವೈದ್ಯಕೀಯ ಆರೈಕೆಯನ್ನು ಪಡೆಯದೇ ಮನೆಮದ್ದುಗಳನ್ನು ಪ್ರಯತ್ನಿಸುವುದು ಅಪಾಯಕಾರಿ. ಮೂಲ ಕಾರಣವನ್ನು ಅರ್ಥಮಾಡಿಕೊಳ್ಳದೆ ಮನೆಮದ್ದುಗಳೊಂದಿಗೆ ಮೂಲವ್ಯಾಧಿಗೆ ಚಿಕಿತ್ಸೆ ನೀಡಲು ಪ್ರಯತ್ನಿಸುವುದು ರಕ್ತಹೀನತೆ ಮತ್ತು ಗುದದ ಸ್ನಾಯುಗಳಲ್ಲಿ ಗ್ಯಾಂಗ್ರಿನ್ ಆಗಿ ತೀವ್ರ ನೋವಿನ ಸ್ಥಿತಿಗೆ ಕಾರಣವಾಗುತ್ತದೆ. ಇದು ಅಂಗಾಂಶಗಳ ಸಾವಿಗೆ ಕಾರಣವಾಗುತ್ತದೆ. Also Read: ಮೋದಿ ಸರ್ಕಾರ ಸ್ತನ ಕ್ಯಾನ್ಸರ್ ಔಷಧ ಬೆಲೆಯನ್ನು ₹95 ಸಾವಿರದಿಂದ ₹5 ಸಾವಿರಕ್ಕೆ ಇಳಿಸಿದೆಯೇ? ಈ ಸತ್ಯಶೋಧನೆಯ ಪ್ರಕಾರ, ಈರುಳ್ಳಿ ರಸ ಮತ್ತು ಜೇನುತುಪ್ಪ ಮಿಶ್ರ ಮಾಡಿ ತಿಂದರೆ ಮೂಲವ್ಯಾಧಿ ಗುಣವಾಗುತ್ತದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ. Our Sources External Hemorrhoid – StatPearls – NCBI Bookshelf (nih.gov) Body changes and discomforts | Office on Women’s Health (womenshealth.gov) Definition & Facts of Hemorrhoids – NIDDK (nih.gov) Prevalence and associated factors of hemorrhoids among adult patients visiting the surgical outpatient department in the University of Gondar Comprehensive Specialized Hospital, Northwest Ethiopia – PMC (nih.gov) Symptoms & Causes of Hemorrhoids – NIDDK (nih.gov) Onions–a global benefit to health – PubMed (nih.gov) Onion (Allium cepa) and its Main Constituents as Antidotes or Protective Agents against Natural or Chemical Toxicities: A Comprehensive Review – PMC (nih.gov) Honey and Health: A Review of Recent Clinical Research – PMC (nih.gov) Anorectal Disease: Hemorrhoids – PMC (nih.gov) Evaluation of anemia caused by hemorrhoidal bleeding – PubMed (nih.gov) Conversation with Kamna Tank, Dietician Conversation with Dr Sharad Malhotra, Gastroenterologist (This article has been published in collaboration with THIP Media) ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು. Ishwarachandra B G June 29, 2024 Newschecker and THIP Media February 16, 2024 Ishwarachandra B G August 12, 2023
schema:mentions
schema:reviewRating
schema:author
schema:datePublished
schema:inLanguage
  • Hindi
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 5 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software