About: http://data.cimple.eu/claim-review/416d48daec921a35e30cbc6a7faac443abb985772d49e0f3ec0358b8     Goto   Sponge   NotDistinct   Permalink

An Entity of Type : schema:ClaimReview, within Data Space : data.cimple.eu associated with source document(s)

AttributesValues
rdf:type
http://data.cimple...lizedReviewRating
schema:url
schema:text
  • ಫ್ಯಾಕ್ಟ್ಚೆಕ್: ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಭಾರತದ ಮಾಲ್ಗಳಲ್ಲಿ ಶ್ರೀರಾಮನ ವಿಗ್ರಹವನ್ನು ಸ್ಥಾಪಿಸಲಾಗಿತ್ತಾ? ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಭಾರತದ ಮಾಲ್ಗಳಲ್ಲಿ ಶ್ರೀರಾಮನ ವಿಗ್ರಹವನ್ನು ಸ್ಥಾಪಿಸಲಾಗಿತ್ತಾ? Claim :ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಭಾರತದ ಹಲವಾರು ಮಾಲ್ಗಳಲ್ಲಿ ಶ್ರೀರಾಮನ ವಿಗ್ರಹಗಳಿಂದ ಅಲಂಕರಿಸಲಾಗಿದೆ Fact :ದೀಪಾವಳಿ ಹಬ್ಬದ ಪ್ರಯುಕ್ತ ಶ್ರೀರಾಮನ ವಿಗ್ರಹಗಳನ್ನು ಮಾಲ್ಗಳಲ್ಲಿ ಸ್ಥಾಪಿಸಲಾಗಿತ್ತು. ಕ್ರಿಸ್ಮಸ್ನಿಂದಲ್ಲ. ಪ್ರತಿ ವರ್ಷ ಹಬ್ಬದ ಸಮಯದಲ್ಲಿ ಮಾಲ್ಗಳನ್ನು ಸುಂದರವಾಗಿ ಅಲಂಕರಿಸುತ್ತಾರೆ. ಬಹುತೇಕ ಮಾಲ್ಗಳ ಆವರಣದಲ್ಲಿ ಬ್ಯಾನರ್ಗಳು, ಹೋರ್ಡಿಂಗ್ಗಳು ಹಾಗೂ ಹಬ್ಬಕ್ಕೆ ಸಂಬಂಧಿಸಿದ ವಿಭಿನ್ನ ಥೀಮ್ಗಳೊಂದಿಗೆ ಮಾಲ್ಗಳು ಅಲಂಕೃತವಾಗಿರುತ್ತದೆ. ಮಾಲ್ನಲ್ಲಿರುವ ಖಾಲಿ ಜಾಗವನ್ನು ಹೇಗೆ ಪೂರ್ಣಗೊಳಿಸುವುದು ಎಂದು ಮಾಲೀಕರು ವಿಭಿನ್ನ ಆಲೋಚನೆಗಳೊಂದಿಗೆ ಬರುತ್ತಾರೆ. ಮಾಲ್ ಮಾಲೀಕರು ದಸರಾ, ದೀಪಾವಳಿ, ಕ್ರಿಸ್ಮಸ್ ಹೀಗೆ ಮುಂತಾದ ಹಬ್ಬಗಳಂದು ವಿಶೇಷ ಅಲಂಕಾರ ಮಾಡುತ್ತಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಶ್ರೀರಾಮನ ವಿಗ್ರಹವಿರುವ ಎರಡು ವಿಭಿನ್ನ ವಿಡಿಯೋಗಳು ವೈರಲ್ ಆಗುತ್ತದೆ. ಡಿಸಂಬರ್ನಲ್ಲಿ ಕ್ರಿಸ್ಮಸ್ ಮರದ ಅಲಂಕಾರದ ಬದಲು ಶ್ರೀರಾಮನ ವಿಗ್ರಹಗಳನ್ನು ಮಾಲ್ಗಳಲ್ಲಿ ಇರಿಸಲಾಗಿದೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. “अद्भुत बदलाव... जयतु सनातन 25 दिसंबर पर क्रिसमस ट्री से सजने वाले मॉल अब भगवान राम जी के भव्य प्रतिमा से सज रहे है, सच में हमारा देश बदल रहा है.. #नया_भारत #जय_श्री_राम” ಎಂಬ ಶೀರ್ಷಿಕೆಯನ್ನೀಡಿ ವಿಡಿಯೋವನ್ನು ವೈರಲ್ ಮಾಡಲಾಗುದೆ. "ಅದ್ಭುತವಾದ ಬದಲಾವಣೆಯಿದು, ಭಾರತ ದೇಶ ಈಗ ಬದಲಾಗುತ್ತಿದೆ.ಇದು ಸನಾತನ ಧರ್ಮದ ವಿಜಯದ ಸಂಕೇತ. ಇಷ್ಟು ವರ್ಷಗಳ ಕಾಲ ಮಾಲ್ಗಳಲ್ಲಿ ಕ್ರಿಸ್ಮಸ್ ದಿನದಂದು ಕ್ರಿಸ್ಮಸ್ ಟ್ರೀನ್ನು ಇರಿಸಿ ಅಲಂಕರಿಸುತ್ತಿದ್ದರು, ಆದರೆ ಈಗ ಮಾಲ್ಗಳಲ್ಲಿ ಶ್ರೀರಾಮನ ಮೂರ್ತಿಯನ್ನಿರಿಸಿ ಅಲಂಕರಿಸುತ್ತಿದ್ದಾರೆ" ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಒಂದೇ ಕ್ಲೈಮ್ನೊಂದಿಗೆ ಎರಡು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮೊದಲ ವಿಡಿಯೋದಲ್ಲಿ ಶ್ರೀರಾಮನ ಬಿಲ್ಲುಬಾಣ ಹಿಡಿದಿರುವ ಪ್ರತಿಮೆಯಿದ್ದರೆ, ಎರಡನೇ ವಿಡಿಯೋದಲ್ಲಿ ಹನುಮಂತನ ಜೊತೆ ಶ್ರೀರಾಮ, ಲಕ್ಷ್ಮಣ ಮತ್ತು ಸೀತೆಯ ವಿಗ್ರಹವನ್ನು ನೋಡಬಹುದು. ವಿಡಿಯೋ-01 ಮೊದಲ ವಿಡಿಯೋ ಲಿಂಕ್ನ್ನು ಇಲ್ಲಿ ನೋಡಬಹುದು. ವಿಡಿಯೋ-02 अद्भुत बदलाव... जय सनातन..!!🚩— Sandeep Kumar Yadav (@Sandy92_SKY) December 25, 2023 25 दिसंबर पर क्रिसमस ट्री से सजने वाले मॉल अब भगवान राम जी के भव्य प्रतिमा से सज रहे है, सच में हमारा देश बदल रहा है.. #नया_भारत 🇮🇳#हिंदू_राष्ट्रpic.twitter.com/M8kY5TQ68t अद्भुत बदलाव... जयतु सनातन— h. (@losttt_boi) December 25, 2023 25 दिसंबर पर क्रिसमस ट्री से सजने वाले मॉल अब भगवान राम जी के भव्य प्रतिमा से सज रहे है, सच में हमारा देश बदल रहा है.. #नया_भारत 🇮🇳https://t.co/vTAlqEkrNV… pic.twitter.com/PHOyM1qpTf ಫ್ಯಾಕ್ಟ್ಚೆಕ್ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋಗಳು ಜನರನ್ನು ದಾರಿ ತಪ್ಪಿಸುತ್ತಿದೆ. ವೈರಲ್ ಆಗಿರುವ ವಿಡಯೋಗಳು ಇತ್ತೀಚಿನದಲ್ಲ, ಹಳೆಯದ್ದು. ವಿಡಿಯೋ-01 ವೈರಲ್ ಆದ ವಿಡಿಯೋವಿನಲ್ಲಿನ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಉಪಯೋಗಿಸಿ ಗೂಗಲ್ನಲ್ಲಿ ರಿವರ್ಸ್ ಸರ್ಚ್ನಲ್ಲಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ನವಂಬರ್ 2023ರಲ್ಲಿ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿರುವಂತಹ ವಿಡಿಯೋವೊಂದು ಕಂಡುಬಂದಿತು. “Shree Ram Ji theme this Diwali in Ambience mall I Diwali celebration in Gurgaon” ಎಂಬ ಶೀರ್ಷಿಕೆಯಡಿಯಲ್ಲಿ ವಿಡಿಯೋ ಅಪ್ಲೋಡ್ ಮಾಡಲಾಗಿತ್ತು. ಈ ವಿಡಿಯೋ ಗುರ್ಗಾವ್ನ ಆಂಬಿಯನ್ಸ್ ಮಾಲ್ನಲ್ಲಿ ಚಿತ್ರೀಕರಿಸಿರುವುದು ಎಂದು ನಾವು ನೋಡಬಹುದು. ಗುರ್ಗಾಂವ್ನ ಆಂಬಿಯೆನ್ಸ್ ಮಾಲ್ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಮಾಲ್ನಲ್ಲಿ ಶ್ರೀರಾಮನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗಿದೆ. "ಗುರ್ಗಾಂವ್ನ ಆಂಬಿಯೆನ್ಸ್ ಮಾಲ್ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಒಂದೊಸಾ ಪ್ರಪಂಚಕ್ಕೆ ಪ್ರಯಾಣವನ್ನು ಪ್ರಾರಂಭಿಸೋಣ " ಎಂಬ ಶೀರಿಕೆಯೊಂದಿಗೆ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಕೊಲ್ಕತ್ತಾದಿಂದ ಬಂದಂತಹ ಪ್ರತಿಭಾವಂತ ಕಲಾವಿದರು ಇಲ್ಲಿನ 22 ಅಡಿಯ ರಾಮನ ವಿಗ್ರಹವನ್ನು ಸ್ಥಾಪಿಸಿದ್ದಾರೆ ಎಂದು ಬರೆದಿದ್ದರು.“Embark on a journey into the enchanting world of Diwali wonder at Ambience Mall Gurgaon. Behold the grandeur of a 22ft Lord Shri Ram figurine intricately fashioned by gifted artisans hailing from Kolkata.” ಎಂಬ ಶೀರ್ಷಿಕೆಯಡಿಯಲ್ಲಿ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿತ್ತು. ಅದೇ ವಿಡಿಯೋವಿಗೆ ಶೀರ್ಷಿಕೆಯಾಗಿ "ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಮಾಲ್ನಲ್ಲಿ ಶ್ರೀರಾಮನನ್ನು ಸ್ಥಾಪಿಸಿ ಅಲಂಕರಿಸಲಾಗಿದೆ " ಎಂದು ಪೋಸ್ಟ್ ಮಾಡಿದ್ದರು. ವಿಡಿಯೋ-02 ನಾವು ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಫ್ರೇಮ್ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದಾಗ ನಮಗೆ ಲಕ್ನೋದ ಫನ್ ರಿಪಬ್ಲಿಕ್ ಮಾಲ್ನಲ್ಲೂ ಶ್ರೀರಾಮನ ವಿಗ್ರಹವನ್ನು ಸ್ಥಾಪಿಸಲಾಗಿದೆ ಎಂದು ತಿಳಿದು ಬಂದಿತು. ಮಾಲ್ನಲ್ಲಿ ಶ್ರೀರಾಮ, ಲಕ್ಷ್ಮಣ, ಸೀತೆಯ ಜೊತೆಗೆ ಹನುಮಂತನೂ ಇರುವ ವಿಗ್ರಹವನ್ನು ನಾವು ನೋಡಬಹುದು. ದೀಪಾವಳಿಯ ಸಂದರ್ಭದಲ್ಲಿ ಮಾಲ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ನೋಡಬಹುದು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇತ್ತೀಚಿನ ಪೋಸ್ಟ್ಗಳನ್ನು ನೋಡಿದಾಗ ಕ್ರಿಸ್ಮಸ್ ಆಚರಣೆಯ ಭಾಗವಾಗಿ ಕ್ರಿಸ್ಮಸ್ ಟ್ರೀನ್ನು ಸ್ಥಾಪಿಸಿರುವುದು ನಾವು ನೋಡಬಹುದು. ಹೀಗಾಗಿ ವೈರಲ್ ಆದ ಎರಡೂ ವಿಡಿಯೋಗಳು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಆಚರಣೆಯದಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ದೀಪಾವಳಿ ಹಬ್ಬದ ಪ್ರಯುಕ್ತ ಶ್ರೀರಾಮನ ವಿಗ್ರಹಗಳನ್ನು ಮಾಲ್ಗಳಲ್ಲಿ ಸ್ಥಾಪಿಸಲಾಗಿತ್ತು. ಕ್ರಿಸ್ಮಸ್ನಿಂದಲ್ಲ.
schema:mentions
schema:reviewRating
schema:author
schema:datePublished
schema:inLanguage
  • Telugu
schema:itemReviewed
Faceted Search & Find service v1.16.115 as of Oct 09 2023


Alternative Linked Data Documents: ODE     Content Formats:   [cxml] [csv]     RDF   [text] [turtle] [ld+json] [rdf+json] [rdf+xml]     ODATA   [atom+xml] [odata+json]     Microdata   [microdata+json] [html]    About   
This material is Open Knowledge   W3C Semantic Web Technology [RDF Data] Valid XHTML + RDFa
OpenLink Virtuoso version 07.20.3238 as of Jul 16 2024, on Linux (x86_64-pc-linux-musl), Single-Server Edition (126 GB total memory, 11 GB memory in use)
Data on this page belongs to its respective rights holders.
Virtuoso Faceted Browser Copyright © 2009-2025 OpenLink Software