schema:text
| - Authors
Claim
Fact Check: ಕುಂಭಮೇಳ ರೈಲುಗಳ ಮೇಲೆ ಕಲ್ಲು ತೂರಾಟ ನಡೆಸಿದವರನ್ನು ಪೊಲೀಸರು ಎಳೆದು ತಂದಿದ್ದಾರೆ
Fact
ವೈರಲ್ ವೀಡಿಯೋ ಪಶ್ಚಿಮ ಬಂಗಾಳದ ಸೂರಿಯಲ್ಲಿ ಎರಡು ಗುಂಪುಗಳ ನಡುವೆ ನಡೆದ ಆಸ್ತಿ ಕುರಿತ ಗಲಾಟೆಯದ್ದಾಗಿದೆ
ಕುಂಭಮೇಳಕ್ಕೆ ಹೋಗುವ ರೈಲುಗಳ ಮೇಲೆ ಕಲ್ಲು ತೂರಾಟ ನಡೆಸಿದವರನ್ನು ಪೊಲೀಸರು ಎಳೆದು ತುಂದಿದ್ದಾರೆ ಎಂಬಂತೆ ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ.
ಸಾಮಾಜಿಕ ಮಾಧ್ಯಮದ ಪೋಸ್ಟ್ ನಲ್ಲಿ “ಕುಂಭಮೇಳಕ್ಕೆ ಹೋಗುವ ರೈಲುಗಳ ಮೇಲೆ ಕಲ್ಲು ತೂರಾಟ ನಡೆಸಿದವರನ್ನು ಹಂದಿಗಳಂತೆ ಮನೆಗಳಿಂದ ಹೊರಗೆ ಎಳೆದು ತರಲಾಗುತ್ತಿದೆ ಯೋಗಿಜಿ ಎಂಬಂತೆ ಹೇಳಿಕೆಯೊಂದಿಗೆ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗಿದೆ.
ಇದರ ಆರ್ಕೈವ್ ಆವೃತ್ತಿ ಇಲ್ಲಿದೆ. ಇದೇ ರೀತಿಯ ಪೋಸ್ಟ್ ಇಲ್ಲಿ ನೋಡಬಹುದು.
Also Read: ಅಮೃತಸರದಲ್ಲಿ ಅಂಬೇಡ್ಕರ್ ಪ್ರತಿಮೆ ಧ್ವಂಸಗೊಳಿಸಿದ ವ್ಯಕ್ತಿಯನ್ನು ಥಳಿಸಿದ ವೀಡಿಯೋ ಇದಲ್ಲ!
Fact Check/Verification
ಸತ್ಯಶೋಧನೆಗಾಗಿ ನಾವು ವೀಡಿಯೋದ ಕೀಫ್ರೇಂಗಳನ್ನು ತೆಗೆದು ಗೂಗಲ್ ಲೆನ್ಸ್ ಮೂಲಕ ಹುಡುಕಿದ್ದೇವೆ.
ಈ ವೇಳೆ ಜನವರಿ 28, 2025ರ ಕೆಟಿಎನ್ ಪಂಚಗ್ರಾಮ್ ನ್ಯೂಸ್ ಹೆಸರಿನ ಯೂಟ್ಯೂಬ್ ವೀಡಿಯೋವನ್ನು “সিউড়িতে আই সির কলার ধরার অভিযোগ” ಶೀರ್ಷಿಕೆಯಲ್ಲಿ ಕೊಡಲಾಗಿದೆ. ಇದನ್ನು ಅನುವಾದಿಸಿದಾಗ, ‘ಸಿಯುರಿಯಲ್ಲಿ ಐಸಿಯ ಕಾಲರ್ ಹಿಡಿದವರನ್ನು ಬಂಧಿಸಿದ ಆರೋಪಗಳು’ ಎಂದಿದೆ. ಇದರ ವಿವರಣೆಯಲ್ಲಿ ‘ಸಿಯುರಿಯಲ್ಲಿ ಐಸಿಯ ಕಾಲರ್ ಅನ್ನು ಹಿಡಿದ ಆರೋಪಿಗಳನ್ನು ಬಂಧಿಸಲಾಯಿತು KTN ಪಂಚಗ್ರಾಮ್ ಸುದ್ದಿ ವಾಹಿನಿಯು ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಲಿಲ್ಲ.’ (ಅನುವಾದಿಸಲಾಗಿದೆ) ಎಂದಿತ್ತು.
ಬಳಿಕ ನಾವು ಯೂಟ್ಯೂಬ್ ನಲ್ಲಿ ಪುನಃ ಶೋಧ ನಡೆಸಿದಾಗ, ಜನವರಿ 28, 2025ರ ರಿಪಬ್ಲಿಕ್ ಬಾಂಗ್ಲಾ ಯೂಟ್ಯೂಬ್ ವೀಡಿಯೋ ಲಭ್ಯವಾಗಿದೆ. ಇದರ ವಿವರಣೆಯಲ್ಲಿ “ಬಂಗ್ಲಾರ್ ಖೋಬೋರ್ ಕಿ| ತೃಣಮೂಲ ಕಾಲದಲ್ಲಿ ಬಂಗಾಳವು ಇಬ್ಬರು ಕಲಾವಿದರಿಗೆ ಸ್ವರ್ಗವಿದ್ದಂತೆ ಸಿಯುರಿಯಲ್ಲಿ ಇಬ್ಬರು ಅಪರಾಧಿಗಳನ್ನು ಹಿಡಿಯುತ್ತಿರುವಾಗ ಕ್ರಾಂತ್ ಪೋಲೀಸರ ಐಸಿಯ ಕೊರಳಪಟ್ಟಿ ಕಿತ್ತುಕೊಂಡಿದ್ದಾರೆ ಎಂಬುದು ಸ್ಥಳೀಯರ ಆರೋಪ. ಇಷ್ಟೊಂದು ದುಸ್ಸಾಹಸಗಳು ಯಾರ ಪರವಾಗಿವೆ? ಪೊಲೀಸ್, ಸಚಿವರು ಎಲ್ಲಿಗೆ ಹೋದರು? ಅವರು ಯಾವಾಗ ಎಚ್ಚರಗೊಳ್ಳುತ್ತಾರೆ?’ ಎಂದಿದೆ.
ಜನವರಿ 28, 2025ರ ಕೋಲ್ಕತ್ತಾಟೆಲಿವಿಷನ್ ನೆಟ್ ವರ್ಕ್ ವೆಬ್ಸೈಟ್ ವರದಿಯ ಪ್ರಕಾರ, ಬಿರ್ಭುಮ್ನ ಸಿಯುರಿ ಭೂ ವಿವಾದದಲ್ಲಿ ಸಾರ್ವಜನಿಕವಾಗಿ ಬಂದೂಕನ್ನು ತೋರಿಸಿದ ಆರೋಪ ಕೇಳಿಬಂದಿದೆ. ಪರಿಸ್ಥಿತಿ ಉದ್ವಿಗ್ನತೆ ಹಿನ್ನೆಲೆಯಲ್ಲಿಸಿಯುರಿ ಪೊಲೀಸ್ ಠಾಣೆಯ ಐಸಿ ಸ್ಥಳಕ್ಕೆ ಧಾವಿಸಿದರು. ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಉದ್ವಿಗ್ನತೆ ಆಗಿದ್ದು, ನಿಯಂತ್ರಣಕ್ಕೆ ಯತ್ನಿಸಿದಾಗ, ಗ್ರಾಮಸ್ಥರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ಈ ಘಟನೆಯಲ್ಲಿ ಐಸಿ ಕಾಲರ್ ಸಹ ಎಳೆಯಲಾಗಿದೆ. ಘಟನೆಯಲ್ಲಿ ಇದುವರೆಗೆ ನಾಲ್ವರನ್ನು ಬಂಧಿಸಲಾಗಿದ್ದು, ಮೂರು ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ ಎಂದಿದೆ.
ಜನವರಿ 29, 2025ರ ಉತ್ತರಬಂಗಾಸಂಬ್ದಾದ್ ಹೆಸರಿನ ವೆಬ್ಸೈಟ್ ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಸಿಯುರಿಯಲ್ಲಿ ಭೂಮಿ ವಿವಾದಕ್ಕೆ ಸಂಬಂಧಿಸಿ ಸಾರ್ವಜನಿಕವಾಗಿ ಬಂದೂಕು ತೋರಿಸಿ ಬೆದರಿಸಲಾಗಿದ್ದು,ಇದರ ವಿಚಾರಣೆಗೆ ಐಸಿ (ಸ್ಟೇಷನ್ ಇನ್ ಚಾರ್ಜ್) ಹೋಗಿದ್ದು ಈ ವೇಳೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ ಅವರ ಕಾಲರ್ ಪಟ್ಟಿ ಹಿಡಿದು ಎಳೆಯಲಾಗಿದೆ. ಘಟನೆ ನಡೆದ ಸ್ಥಳವು ಬಿರ್ಭುಮ್ ಜಿಲ್ಲಾ ಕೇಂದ್ರವಾದ ಸೂರಿಯಿಂದ ಕೇವಲ 5 ಕಿಲೋಮೀಟರ್ ದೂರದಲ್ಲಿದೆ. ಆಪಾದಿತ ದುಷ್ಕರ್ಮಿಗಳು ತೃಣಮೂಲ ಕಾಂಗ್ರೆಸ್ನ ಎರಡು ಪ್ರತಿಸ್ಪರ್ಧಿ ಬಣಗಳಾಗಿವೆ. ಇನ್ನು ಘಟನೆಗೆ ಸಂಬಂಧಿಸಿ 20 ಮಂದಿಯನ್ನು ಬಂಧಿಸಲಾಗಿದೆ ಎಂದಿದೆ.
ಫೆಬ್ರವರಿ 3, 2025ರಂದು ಟೆಲಿಗ್ರಾಫ್ ಆನ್ ಲೈನ್ ಪ್ರಕಟಿಸಿದ ವರದಿಯಲ್ಲಿ, “ಬಿರ್ಭೂಮ್ನ ಸೂರಿ ಪೊಲೀಸ್ ಠಾಣೆಯ ಉಸ್ತುವಾರಿ ಇನ್ಸ್ಪೆಕ್ಟರ್ ಅವರನ್ನು ಮಂಗಳವಾರ ಜಿಲ್ಲಾ ಕೇಂದ್ರದ ಬಳಿ ಸರ್ಕಾರಿ ಭೂಮಿಗಾಗಿ ಆಡಳಿತ ಪಕ್ಷದ ಎರಡು ಬಣಗಳ ನಡುವೆ ನಡೆದ ಘರ್ಷಣೆಯ ಸಂದರ್ಭದಲ್ಲಿ ಎಳೆಯಲಾಗಿದೆ. ಟಿಎಂಸಿ ಯುವ ನಾಯಕನನ್ನು ಬಂಧಿಸಲು ಪ್ರಯತ್ನಿಸಿದಾಗ ತೃಣಮೂಲ ಕಾರ್ಯಕರ್ತನೊಬ್ಬ ಅವರ ಸಮವಸ್ತ್ರದ ಕಾಲರ್ ಎಳೆದಿದ್ದಾನೆ ಎಂದು ಆರೋಪಿಸಲಾಗಿದೆ.
ಸೂರಿ ಬಳಿ ಇಂದು (ಮಂಗಳವಾರ) ನಡೆದ ಘಟನೆಗೆ (ಪೊಲೀಸ್ ಮೇಲಿನ ದಾಳಿ) ಸಂಬಂಧಿಸಿದಂತೆ ನಾವು 20 ಜನರನ್ನು ಬಂಧಿಸಿದ್ದೇವೆ. ಆರು ಸುತ್ತು ಮದ್ದುಗುಂಡುಗಳೊಂದಿಗೆ ಮೂರು ಬಂದೂಕುಗಳನ್ನು ಸಹ ನಾವು ವಶಪಡಿಸಿಕೊಂಡಿದ್ದೇವೆ. ಘಟನೆಯಲ್ಲಿ ಭಾಗಿಯಾಗಿರುವ ಯಾರನ್ನೂ ಪೊಲೀಸರು ಬಿಡುವುದಿಲ್ಲ” ಎಂದು ಬಿರ್ಭೂಮ್ನ ಪೊಲೀಸ್ ವರಿಷ್ಠಾಧಿಕಾರಿ ಅಮನ್ದೀಪ್ ಹೇಳಿದರು. ಸೂರಿ ಪಟ್ಟಣದ ಬಳಿಯ ಮಿನಿ-ಸ್ಟೀಲ್ ಪ್ರದೇಶದಲ್ಲಿ ಟಿಎಂಸಿ ಬೆಂಬಲಿಗರ ಬಣವು ಕಳೆದ ಕೆಲವು ತಿಂಗಳುಗಳಿಂದ ಸರ್ಕಾರಿ ಭೂಮಿಯನ್ನು ಕಬಳಿಸಲು ಪ್ರಯತ್ನಿಸುತ್ತಿದೆ ಎಂದು ಮೂಲವೊಂದು ತಿಳಿಸಿದೆ.” ಎಂದಿದೆ.
ಆ ಬಳಿಕ ನಾವು ಮಹಾಕುಂಭ ಮೇಳಕ್ಕೆ ಹೋಗುವ ರೈಲುಗಳ ಮೇಲೆ ಕಲ್ಲು ತೂರಾಟ ನಡೆದಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಿದ್ದೇವೆ. ಈ ಜನವರಿ 28, 2025ರಂದು ವೇಳೆ ದಿ ಸ್ಟೇಟ್ಸ್ ಮನ್ ಪ್ರಕಟಿಸಿದ ವರದಿ ಲಭ್ಯವಾಗಿದ್ದು, ಅದರಲ್ಲಿ, ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆಯ ಹರ್ಪಾಲ್ಪುರ ರೈಲು ನಿಲ್ದಾಣದಲ್ಲಿ ರೈಲಿನ ಬಾಗಿಲು ತೆರೆಯದ್ದರಿಂದ ಪ್ರಯಾಗ್ರಾಜ್ನ ಮಹಾಕುಂಭಕ್ಕೆ ಹೋಗುವ ರೈಲನ್ನು ಬಲವಂತವಾಗಿ ಹತ್ತಿಸಲು ಪ್ರಯತ್ನಿಸುತ್ತಿರುವ ಜನರು ಕಲ್ಲು ತೂರಾಟ ನಡೆಸಿ ಹಲವಾರು ಕಿಟಕಿಗಳಿಗೆ ಹಾನಿ ಮಾಡಿದ್ದಾರೆ. ಮಂಗಳವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಇಂದೋರ್ ಬಳಿಯ ಮಹೌದಿಂದ ಮಹಾಕುಂಭಕ್ಕೆ ಹೋಗುವ ಡಾ. ಅಂಬೇಡ್ಕರ್ ನಗರ-ಪ್ರಯಾಗ್ರಾಜ್ ಎಕ್ಸ್ಪ್ರೆಸ್ ಹರ್ಪಾಲ್ಪುರ ರೈಲು ನಿಲ್ದಾಣದಲ್ಲಿ ನಿಂತಾಗ ಈ ಘಟನೆ ಸಂಭವಿಸಿದೆ.” ಎಂದಿದೆ. ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದಾಗಿತ್ತು.
ಇದೇ ರೀತಿಯ ವರದಿಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
Conclusion
ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ, ಭೂವಿವಾದವೊಂದಕ್ಕೆ ಸಂಬಂಧಿಸಿ ಎರಡು ತಂಡಗಳ, ಗ್ರಾಮಸ್ಥರ ನಡುವಿನ ಗಲಾಟೆಗೆ ವೈರಲ್ ವೀಡಿಯೋ ಸಂಬಂಧಿಸಿದ್ದಾಗಿದ್ದು, ಅದು ಪಶ್ಚಿಮ ಬಂಗಾಳದ ಸೂರಿಯಲ್ಲಿ ನಡೆದಿದೆ ಎಂದು ಗೊತ್ತಾಗಿದೆ.
Also Read: ನಟ ಪ್ರಕಾಶ್ ರಾಜ್ ಕುಂಭಮೇಳದಲ್ಲಿ ಸ್ನಾನ ಮಾಡುತ್ತಿರುವ ಫೋಟೋ ಎಐ ಸೃಷ್ಟಿ!
Result: False
Our Sources
YouTube Video By Republic Bangla, Dated: January 28, 2025
Report By calcuttatelevisionnetwork, Dated: January 28, 2025
Report By uttarbangasambad, Dated: January 29, 2025
Report By Telegraph India, Dated: February 3, 2025
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
|